Posts

Showing posts from May, 2017
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ಅವಳೊಂತರಾ ... ಚೈತ್ರ ಮಾಸ ಕಾಲಿಟ್ಟು ತಿಂಗಳು ಕಳೆದಿತ್ತು. ಪ್ರತಿ ಬಾರಿ ಮಕ್ಕಳಿಗೆ ರಜೆ ಇದ್ದರೂ ರಜೆಯಲ್ಲ. ಆ class ಈ class ಅಂತಾ ಬಾಲ್ಯದ ನೆನಪುಗಳನ್ನೆಲ್ಲಾ ಈ ಹೊಗೆ ಚಕ್ರಕ್ಕೆ ಹಾಕಿ ತಿರುಗಿಸುತ್ತಾರೆ. ಈ ಬಾರಿ ರಜೆಯಲ್ಲಿ  ಮಕ್ಕಳನ್ನ ಊರಿಗೆ ಕೊಂಡೊಯ್ಯುವ ಉಪಾಯವೇನೋ ಹಾಕಿಕೊಂಡೆ, ಇವರಪ್ಪ ಒಪ್ಪಬೇಕು, ಶಶಿ ಕಂಪ್ಯೂಟರ್‌ ಬಿಟ್ಟು ಕದಲಬೇಕು!! ಅಮ್ಮಳಿಂದ ನೂರು ಬಾರಿ ಕರೆ ಬಂದಿತ್ತು. ಎಂದು ಬರುವೆ, ಹೇಗೆ ಬರುವೆ??.. ಆದಿಯನ್ನ ಒಪ್ಪಿಸಿದೆ. ಅವನಿ ತುದಿಗಾಲಲ್ಲಿ ಇದ್ದಳು ಅಲ್ಲಿ ಮಣ್ಣಿನ ಅಡುಗೆ ಮನೆ ಆಡಲು, ಬೆಟ್ಟ, ಗುಡ್ಡ, ತೋಟ ತಿರುಗಲು. ಊರ ಮಕ್ಕಳ ಹೆಸರನ್ನ, ಅವರು ಯಾವ class ಲಿ ಓದುತ್ತಿದ್ದಾರೆ ಎನ್ನುವುದನ್ನ ಅಜ್ಜಿ ಹತ್ತಿರ ಕೇಳಿ, ಕೇಳಿ ಉರು ಹಾಕುತ್ತಿದ್ದಾಳೆ. ಶಶಿಗೆ ಬಸ್ ಬುಕ್ ಮಾಡುವಾಗ ಕೊನೆಯದಾಗಿ ಕೇಳಿದೆ. 'ನೋಡು ನಾವು ಹೋಗ್ತಿರೊದು ಪಕ್ಕಾ.. ಬರೊದಿದ್ರೆ ಬಾ ಇಲ್ಲಾ ರಜಾ ಪೂರ್ತಿ ನಿನ್ನ ಕಂಪ್ಯೂಟರ್‌ ಮುಂದೆ ಇರು, ಹಸಿವಾದಾಗ ಏನ್ ಬೇಕೊ ಮಾಡಿಕೊಂಡು ತಿನ್ನು. ನಾವು ಅಜ್ಜಿ ಕೈ ರುಚಿಯನ್ನ ಸವಿತಿವಿ.' ಸುಮಾರು ಹೊಟ್ಟೆ ಉರಿಸಿ ಬಸ್ ಬುಕ್ ಮಾಡಿ ಬ್ಯಾಗ ಪ್ಯಾಕ್ ಮಾಡತೊಡಗಿದೆ. ಈ ಅವನಿಯ ಸಾಮಾನುಗಳು ಸುಮಾರಿಗೆ ಸಾಕಾಗಲ್ಲ. 'ಅಮ್ಮ ಇದು ಶ್ರೀ ಗೆ, ಇದು ಇಶಾಗೆ,....' ಅವಳ ಉಡುಗೊರೆ ಸಾಮಾನು ಉದ್ದಕೆ ಬೆಳೆಯುತ್ತಲೆ ಇತ್ತು. ಸಾಕು ಮಾರಾಯ್ತಿ ಅಂದರೂ ಇಲ್ಲಾ, ಕಳೆದ ಬಾರಿ ಸಿಕ್ಕಾಗ ಅವಳ ಗ್ಯಾಂಗ್ ನವ...