ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Posts
Showing posts from September, 2017
- Get link
- X
- Other Apps
ನಿನ್ನ ಬಿಂಬ ... ಯಾಕೊ ತುಂಬಾನೇ ನೆನಪು ಆಗ್ತಿದೀಯ. ಒಮ್ಮೆ ಅಮ್ಮನ ಮಾತು ಕೇಳಿ ಎದೆ ಬಡಿತ ನಿಂತಂತಾಯಿತು. ಅಮ್ಮ ಫೋನ್ ಲಿ ಹೇಳಿದ್ದಕ್ಕೆ ಬಚಾವ್! ಎದುರೇ ಇದ್ದರೆ ನನ್ನ ವರ್ತನೆ ಅವಳಿಗೆ ಅವಳ ಹಳೆಯ ಪ್ರಶ್ನೆಗಳಿಗೆ ಮರುಜೀವ ಬಂದು ಹುಬ್ಬುಗಳ ಮಧ್ಯೆ ನಿಲ್ಲುತ್ತಿತ್ತು. ಅಮ್ಮ ಮತ್ತಿನ್ನೇನೋ ಹೇಳುತ್ತಿದ್ದಳು. ನಾನು ನೆಪ ಮಾತ್ರಕೆ ಹಾಹುಂ ಎನ್ನುತ್ತಿದ್ದೆ. ಒಮ್ಮೆ ಮೈ ಎಲ್ಲಾ ಬೆವರಿತು. ಕಣ್ಣಂಚು ಒದ್ದೆಯಾಯಿತು. ನಾನು ಅಷ್ಟೊಂದು ಅವನನ್ನು ಹಚ್ಚಿ ಕೊಂಡಿದ್ದೆನೆ.. ನನಗೆ ಅಚ್ಚರಿ, ಎಲ್ಲಾ ಕಳೆದುಕೊಂಡ ಅನುಭವ. ಮೊನ್ನೆ ಅವನು ಹೇಳಿದ್ದು ತಮಾಷೆಯಲ್ಲಾ ಹಾಗಾದರೆ... 'ಮಳೆ ಜೋರು ಸುರಿತಿದೆ, ನೀರಿನ ಶಬ್ದ, ನೀ ಹೇಳೊದು ಏನು ಕೇಳಿಸ್ತಿಲ್ಲಾ, ಗುಡ್ ನೈಟ್', ಎಂದು ಅಮ್ಮ ಫೋನಿಟ್ಟರು. ನಾನು ಅದಕ್ಕೇ ಕಾದಿದ್ದೆ.ನಾನು ನೆನಪುಗಳ ಮೊರೆತಕ್ಕೆ ಸಿಕ್ಕಿದ್ದೆ, ಏನೂ ಕೇಳದಾಗಿತ್ತು. ನಮ್ಮದು ಅದು ಮೊದಲ ಹಾಗೂ ಕೊನೆಯ ಮುಖತಃ ಭೇಟಿ ಅಲ್ಲವಾ?? ನಾನಾಗ ಚಿಕ್ಕ ಮಗುವೇನಾಗಿರಲಿಲ್ಲ. ಹದಿನೆಂಟರಲ್ಲಿದ್ದೆ. ಜಗತ್ತೇ ಬಲು ಸುಂದರವಾಗಿ ಕಾಣುವ ಕಾಲ. ಜೊತೆಗೆ ಯಾವಾಗಲೂ ಕಾಡುವ ಅತ್ತೆಯ ಮಾತು ನನ್ನನ್ನು ಸ್ವಪ್ನ ನಗರಿಯಲ್ಲಿ ಸುತ್ತುವಂತೆ ಮಾಡಿತು. ನೀ ನನ್ನನ್ನ ಮೊದಲ ಬಾರಿಗೆ ನೋಡಿದ ನೋಟ ಇನ್ನೂ ಎದೆಯಲ್ಲಿ ಲಘು ಕಂಪನ ಹುಟ್ಟಿಸುತ್ತದೆ. ಅಲ್ಲಿ ನಡೆದ ಪ್ರತಿ ಘಟನೆ ಕಾಕತಾಳೀಯವೋ ನನ್ನ ಕಲ್ಪನೆಯೋ ಇನ್ನೂ ಉತ್ತರ ಸಿಗಲಿಲ್ಲ. ನೀ ನನ್ನನ್ನೇ cameraದಲ್ಲಿ ಸ...
- Get link
- X
- Other Apps
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...