ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
- Get link
- X
- Other Apps
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....??
ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮುರುಗಲ ಶರಬತ್ತ ಮಾಡಲಾ? ಹಣ್ಣಿದೆ ಅಲ್ವಾ'
'ಹುಂ ಹಿತ್ತಲಕಡೆ ನೋಡು, ನಿನ್ನೆ ಕೊಯ್ದಿದ್ದು ಬುಟ್ಟಿಯಲ್ಲೆ ಇರಬೇಕು. ಬೆಲ್ಲಾ ಹಾಕು, ಸಕ್ಕರೆ ಹಾಕ ಬೇಡ. ಸ್ವಲ್ಪ ಹೆಚ್ಚಿಗೆನೆ ಮಾಡು ಪೇಂಟ್ ಮಾಡೋರ್ಗು ಆಯ್ತು.' 'ಹುಂ, ಪುಕ್ಷಟೆ ಮಾಡೊರು ಸಿಕ್ಕರೆ ಗುತ್ತಿಗೆನೆ ಕೊಡ್ತಾರೆ!! ಮತ್ಯಾರ್ಯಾರಿಗೆ ಮಾಡ್ಬೇಕು??' ಕೆಲಸದ ಒತ್ತಡದಲ್ಲಿದ್ದ ವಸುದಾ ತುಸು ಕಠಿಣವಾಗೆ ಎಂದಳು, ' ಇವರಿಗೂ ನಾನೆ ಮಾಡ್ಕೊಡ್ತೀನಿ, ಆರಾಮವಾಗಿ ಕೂತ್ಕೊ ನೀನು!!' '
'ವಸು ಡಾರ್ಲಿಂಗ್ ಕೂಲ್... ಬಿಸಿಲು ಹೆಚ್ಚಾಗ್ತಿದೆ ಅಲ್ವಾ'
' ಮತ್ತೆ ಎಲ್ಲಾ ಕೆಲಸ ನಿನಗೆ ಹೇಳ್ದಂಗೆ ಆಡ್ತೀಯಾ!!!'
' ತಪ್ಪಾಯ್ತಮ್ಮ ಕಾಲಿಗೆ ಬೀಳ್ಲಾ???' ಒಳಗೆ ಬಂದಳು. ಚಂದ್ರಶೇಖರ 'ವಸು ಯಾಕೆ ತಮಾಷೆನಾ ಅಷ್ಟು ಏನಕ್ಕೆ ತಗೊತಿಯಾ? ಎಂದು ಮೆಲ್ಲಗೆ ಗದರುತ್ತಿದ್ದ. 'ದೇವರೆ ಕಾಪಾಡು, ಇವತ್ತು ಯಾಕೊ ನಾನು ಮಾತನ್ನ ಆಡಬಾರದು, ಮಾತಿನಿಂದ ಮಾನಸಿಕ ಶಾಂತಿ ನಾಶ ಅಂತೇನಾದರು ದಿನ ಭವಿಷ್ಯ ಇರಬೇಕು!? ಮನದಲ್ಲೇ ಗೊಣಗಿಕೊಂಡಳು. ಪಾನಕ ಮಾಡುತ್ತಾ 'ಅಪ್ಪಾ ದಿನ ಭವಿಷ್ಯ ನೋಡು ನಂದು, ಪೇಪರಲ್ಲಿ' 'ಜಾನು ಸಾಕು ತಮಾಷೆ, ಬೇಗ ತಗೊ ಬಾ' ಎಂದರು ಚಂದ್ರಶೇಖರ. 'ವಸು ಡಾರ್ಲಿಂಗ್ ನೀನು ಬಾ, ರೆಡಿಯಾಗಿದೆ' ಎನ್ನುತ್ತಾ ಹಲಸಿನ ಕಾಯಿ ಚಿಪ್ಸು ಶರಬತ್ತು ಹಿಡಿದು ಬಂದಳು. 'ಎಷ್ಟು ವರ್ಷಾ ಆಗಿತ್ತು, ಈ ಫ್ರೆಶ್ ಶರಬತ್ತು ಕುಡಿಯದೆ!! ಅಮೃತ...' ಗೊಟಗೊಟ ಹೀರತೊಡಗಿದಳು. 'ಅರೆ!! ಕಾಳು ಮೆಣಸು ಹಾಕಿದ್ಯಾ? ಹೇಳಬೇಕು ಅಂತಿದ್ದೆ', ಅಪ್ಪನು ಚಪ್ಪರಿಸಿ ಕುಡಿಯ ತೊಡಗಿದರು. 'ವಸು ಕಾಲಿ ಮಾಡುವ ಮೊದಲು ಬಾರೆ... ' 'ಹು ನಿಮಗೆ ಸಾಕು, ಬೆಲ್ಲ ಹಾಕಿದ್ದು ಅಂತಾ ಅದನ್ನ ೩ ಲೋಟ ಕುಡಿದ್ರೆ!!' ನೋಡು ಮಗಾ, ನನಗೆ ಶುಗರ ಬಾರ್ಡರ್ ಲಿ ಇತ್ತು, ಈ ಬಾರಿ ಚೆಕ್ ಮಾಡಿದಾಗ normal ಅಂದಿದಾರೆ, ಇವಳು ದಿನ ಹೇಳಿ ಹೇಳೆ ಬರಸ್ತಾಳೆ... ದಿನಾ ಹೀಗೆ, ನೀನು ಬಂದಿದಕ್ಕೆ ಮೂರು ಹೊತ್ತು ಊಟ ಆರಾಮವಾಗಿ ಸಿಗ್ತಿದೆ, ಇಲ್ಲಾ ಅಂದರೆ ನಿನಗೆ ಗೊತ್ತಿಲ್ಲಾ,' ಮುಖ ಸಣ್ಣಗೆ ಮಾಡಿದರು. 'ಹೌದೌದು, ಒಂದು ಹೊತ್ತು ಊಟಾ ಹಾಕಲ್ಲಾ ನಿಮ್ಮಪ್ಪಂಗೆ, ಅದಕ್ಕೆ ನೋಡು ಹೇಗೆ ಆಗಿದಾರೆ, ಮಾಡೋದು ನೋಡು!! ಯಾರಾದ್ರು ಹೊಸಬ್ರತ್ರ ಹಿಂಗೆ ಹೇಳಿದ್ರೆ ಹೌದೆನೊ ಪಾಪ ಚಂದ್ರಣ್ಣಂಗೆ ಒಂದೊಪ್ಪತ್ತು ಸುಖದ ಕೂಳಿಲ್ಲಾ ಅಂದ್ಕೊತಾರೆ.!!' ಕಿತ್ತಾಟ ಮಜಾ ನೋಡುತ್ತಾ ಬಟ್ಟಲು ಚಿಪ್ಸು ಖಾಲಿಯಾಯಿತು.'ಸಾಕು ನಿಲ್ಸಿ ಪೇಂಟ್ ಮಾಡೊರು ಬಂದರು' ಜಾನ್ಹವಿ ಎಚ್ಚರಿಸಿದಳು. ಅರೇ ಮೇಡಂ ಮನೆಗೆ ಯಾವಾಗ ಬಂದಿದ್ದು? ಗುರು ಅಣ್ಣ ಕೇಳಿದ, ಮತ್ತೆ ಯಾರು ಪರಿಚಯವಿರಲಿಲ್ಲ. ಅವೆರೆಲ್ಲರನ್ನು ಉಪಚರಿಸಿ, ಅಡುಗೆ ತಯಾರಿಯಲ್ಲಿ ತೊಡಗಿದಳು. ವಸುಧಾ ಹೊರಗಡೆ ಕೊಟ್ಟಿಗೆ, ಹಿತ್ತಲು, ತೋಟ ಎಂದು ಓಡಾಡಿಕೊಂಡಿದ್ದರು. ಇವಳು ಮನೆಗೆ ಬಂದಾಗ ಅಡುಗೆ ಮನೆ ಕಡೆ ಅಷ್ಟು ಲಕ್ಷ್ಯ ಕೊಡಬೇಕಾಗಿಲ್ಲಾ, ಜಾನ್ಹವಿ ಮನಸಿಗೆ ಬಂದಿದ್ದನ್ನ ಮಾಡುವಳು, ಅವಳಪ್ಪನಿಗೆ ಅವಳು ಮಾಡುವ ಅಡುಗೆಯೆಂದರೆ ಮುಗಿಯಿತು. ಕೆಲವೊಮ್ಮೆ ವಸುಧಾ ಮಾಡಿದ ಅಡುಗೆ ಎಡವಟ್ಟಾಗಿ, ಜಾನ್ಹವಿ ಮಾಡಿದ್ದು ಎಂದರೆ, ಅಮೃತ ಅಮೃತ!! ಇಂತಹದು ಒಂದು ಇದ್ದರೆ ಸಾಕು ಎಂದು ಎರಡು ಬಾರಿ ಹಾಕಿಕೊಂಡು ಉಣ್ಣುವರು. ಚಂದ್ರಕಾಂತ ಊಟ ಮುಗಿಸಿ ಹೋದ ನಂತರ ತಾಯಿ ಮಗಳು ಇಬ್ಬರು ಬಿದ್ದು ಬಿದ್ದು ನಗುವರು. 'ನೋಡು ನಿನ್ನಪ್ಪನ್ನ, ನನಗೆ ಮಂತ್ರಾಕ್ಷತೆ ಇದೆ ಎಂದು ಕೊಂಡಿದ್ದೆ. ಏನು ಅಪ್ಪಾ ಮಗಳೋ...'
'ಹುಂ ಹೊಟ್ಟೆಕಿಚ್ಚು ಪಡ್ಬೇಡ!!' ಹೆಮ್ಮೆಯಿಂದ ಹೇಳುವಳು. 'ನಾನೇಕೆ ಹೊಟ್ಟೆಕಿಚ್ಚು ಪಡಲಿ, ನಿನ್ನ ಅಜ್ಜನು ಹೀಗೆ ಆಗಿದ್ದರು' ಎನ್ನುವಳು.
ಸಂಜೆ ಏಳರ ಸುಮಾರು ಪೇಂಟ್ ಮಾಡುವವರು ಮನೆಗೆ ಹೋದರು. ಅಪ್ಪಾ ತಪ್ಪಿಸಿಟ್ಟ ಟಿವಿ ವೈರ್ ಗಳನ್ನು ಹೊಂದಿಸ ತೊಡಗಿದರು. ಜಾನ್ಹವಿ ಮಾಳಿಗೆ ಜಾರಿದಳು. Light switch ತಡಕಾಡಿದಳು. ಬೆಳಕು ಹೊತ್ತಿಕೊಂಡಿತು.
ಬಹಳ ವರ್ಷಗಳ ನಂತರ ಆ ಗಂಟು ನೋಡಿದ್ದಳು ಜಾನ್ಹವಿ, ಏನೋ ಒಂದು ಬಗೆಯ ಆಪ್ತತೆ ನೋಡಲು.
ಅರೆ ನಿನಗೂ ವಯಸ್ಸಾಗಿದೆ ಎಂದು ಪುಸ್ತಕದ ಮುಖಪುಟ ತಡವಿದಳು. ಎಷ್ಟು ವರ್ಷ ನಿನಗೆ??? ನಾ ೫ ಓದುತ್ತಿದ್ದಾಗ ಎಂಟ್ರಿ ಕೊಟ್ಟಿದ್ದಲ್ವ?? ೧೨ ವರ್ಷ!!! ಆದರೆ ವಯಸ್ಸಾದಷ್ಟು ಪಕ್ವವಾಗುವುದು. ಮೊದಲು ರಾಮನ ಕುರಿತು ಪ್ರಶ್ನಿಸಿದ್ದು ಅಣ್ಣನ ಕನ್ನಡ ಪುಸ್ತಕದ ರಾಮಾಯಣ ದರ್ಶನಂ ದ ಒಂದು ಭಾಗ ಓದಿ. ಸಮಯ ಸಿಕ್ಕಾಗೆಲ್ಲ ಅಮ್ಮನ ತಲೆ ತಿನ್ನುತ್ತಿದ್ದೆ 'ಅಮ್ಮಾ ರಾಮ ಹೇಗೆ ದೇವರು?? ಅವನನ್ನು ಏಕೆ ಪೂಜಿಸಬೇಕು??' ಅಡುಗೆ ಮಾಡುವಾಗ ತಲೆತಿನ್ನುತ್ತಿದ್ದೆ. 'ಅವನು ಮಹಾನ್ ದೇವ ಪುರುಷ, ಪಿತೃ ವಾಕ್ಯ ಪರಿಪಾಲನೆಗೆ ಸೀತಾ ಲಕ್ಷ್ಮಣ ಸಮೇತರಾಗಿ ಹದಿನಾಲ್ಕು ವರ್ಷಗಳ ವನವಾಸ ಮಾಡಿದ, ಆ ಸಮಯದಲ್ಲಿ ಅವನ ಜೊತೆಗಿದ್ದ ಸೀತೆಯನ್ನು ರಾವಣ ಮಾಯಾ ರೂಪದಲ್ಲಿ ಬಂದು ಅಪಹರಿಸುತ್ತಾನೆ. ಬಳಿಕ ಜಟಾಯು ಪಕ್ಷಿ ರಾಮನಿಗೆ ಲಂಕಾದಿಪತಿಯ ಕುರಿತು ಹೇಳುತ್ತಾನೆ. ಹನುಮಂತನ ಸಹಾಯದಿಂದ ಲಂಕೆಗೆ ಹೋಗಿ ರಾವಣನೊಡನೆ ಯುದ್ಧ ಮಾಡಿ, ಅವನನ್ನು ಕೊಂದು, ಸೀತೆಯನ್ನು ಕರೆತರುತ್ತಾನೆ. ಅಲ್ಲಿ ಸೀತೆ ಪರಿಶುದ್ಧಳು ಎಂದು ತೋರಿಸಲು ಅಗ್ನಿ ಪರೀಕ್ಷೆ ಮಾಡಿಸಿ ಅಯೋಧ್ಯೆ ಕರೆತಂದು ನ್ಯಾಯಯುತವಾಗಿ ರಾಜ್ಯ ಭಾರ ಮಾಡುತ್ತಾನೆ. ಒಬ್ಬ ಅಗಸ್ತ್ಯನ ಮಾತು ಕೇಳಿ ಸ್ವಂತ ಪತ್ನಿಯನ್ನೇ ಕಾಡಿಗೆ ಅಟ್ಟುವನು, ರಾಜ್ಯದ ಹಿತ, ಕರ್ತವ್ಯ ಪರಿಪಾಲನೆಗೆ ತನ್ನ ಸರ್ವ ಸುಖವನ್ನೇ ಧಾರೆ ಎರೆದ ಮಹಾತ್ಮ. ಅದಕ್ಕೆ ಅವನ ಆದರ್ಶಗಳನ್ನು ಮತ್ತು ಅವ ವಿಷ್ಣುವಿನ ಒಂದು ರೂಪ ಎಂದು ಪರಿಗಣಿಸಿ ಪೂಜಿಸುವುದು'.
'ಆದರೆ ಅದ್ಯಾರದ್ದೋ ಮಾತು ಕೇಳಿ ತನ್ನ ಸ್ವಂತ ಪತ್ನಿಯನ್ನೇ ಕಾಡಿಗಟ್ಟಿದ, ಅದೂ ಬಸಿರು ಹೆಣ್ಣನ್ನು, ಅದ್ಹೇಗೆ ಮಹಾತ್ಮ, ಹೆಂಡತಿ ಬಿಟ್ಟವರೆಲ್ಲ ಮಹಾತ್ಮರೇ??' 'ಅವನ ರಾಜ್ಯದ ನ್ಯಾಯ ಪರಿಪಾಲನೆಗೆ ಮಾಡಿದ್ದು ಹಾಗೆ, ಅವನು ರಾಜ ಕರ್ತವ್ಯ ಮೆರೆದಿದ್ದಾನೆ.' 'ಅದು ಅವನ ಪ್ರತೀಷ್ಠೆ ಅಲ್ಲವೇ,?? ಅವನ ಹೆಂಡತಿ ಬಗ್ಗೆ ಅವನು ಅನುಮಾನ ಪಟ್ಟಿದ್ದು ತಪ್ಪಲ್ಲವೇ?'
'ನೋಡು ಜಾನು, ಈ ಮುಸ್ಸಂಜೆ ಹೊತ್ತಲ್ಲಿ ನನ್ನ ಬಾಯಿಯಲ್ಲಿ ಏನೇನೋ ಹೇಳಿಸ ಬೇಡ, ಹೋಗಿ ದೇವರ ದೀಪ ಹಚ್ಚಿ, ಭಜನೆ ಶುರು ಮಾಡು, ಹಾಲೊಂದು ಕಾಸಿ ನಾನು ಬರ್ತೀನಿ' ಎಂದಾಗ ಕೋಪ ಬಂದಿತ್ತು, ನಾನೇನು ಕೇಳಬಾರದ್ದು ಕೇಳಿದ್ದು!!! ಮುಸ್ಸಂಜೆ ಹೊತ್ತಂತೆ, ಈ ದೊಡ್ಡವರು ಯಾವಾಗಲು ಹೀಗೆ, ನಾವು ಕೇಳುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಏನಾದರೊಂದು ನೆಪ ಹೇಳುತ್ತಾರೆ. ಯಾಕೆ ಎಂದು ಸರಿ ಹೇಳಿದರೆ ನಾನು ರಾಮ ಮಹಾಪುರುಷ ಎಂದು ಒಪ್ಪಿಕೊಳ್ಳುತ್ತಿರಲಿಲ್ಲವೇ?' ಗೊಣಗಿಕೊಳ್ಳುತ್ತ ತುಪ್ಪದ ದೀಪ ಹಚ್ಚಿ, ರೂಢಿಯಂತೆ ರಾಮತಾರಕ ಜಪದಲ್ಲಿ ಮುಳುಗಿದ್ದೆ. ಅಮ್ಮ ಒಳಗೆ ಬರುವಷ್ಟರಲ್ಲಿ ಶಾಂತವಾಗಿದ್ದೆ. ' ಜಾನು ಈ ಬಾರಿ ಮೇ ರಜೆಯಲ್ಲಿ ಯಾವ ನೆಂಟರಿಷ್ಟರ ಮನೆ ಬೇಡ, ಮನೆಯಲ್ಲಿ ಕೂತು ಮೊನ್ನೆ ನಿಮ್ಮಪ್ಪ ವಿದ್ಯಾದಶಮಿಗೆ ವಾಲ್ಮೀಕಿ ರಾಮಾಯಣ ತಂದರಲ್ಲಾ, ಕೂತು ಓದು, ನಿನ್ನ ಪ್ರಶ್ನೆಗೆ ಉತ್ತರ ನಿನಗೆ ಸಿಗುತ್ತದೆ,' ಹುಂ, ಎಲ್ಲಿದೆ ಈಗ ಅದು?? ' ' ಕಪಾಟಿನಲ್ಲಿ, ಮೇಲೆ... ' 'ಒಮ್ಮೆ ನೋಡಲಾ??' ಅಲ್ಲೆ ಮೇಲೆ ಕೀಲಿ ಕೈ ಇದೆ ತೆಕ್ಕೊ' ಎಂದಳು. 'ಹುಂ, ಸ್ಟೂಲು ಕಾಣ್ತಿಲ್ಲಾ, ತೆಕ್ಕೊಡು ಸ್ವಲ್ಪ!!' ಅಮ್ಮ ಬಂದು ಪುಸ್ತಕದ ಗಂಟು ಕೆಳಗಿಳಿಸಿದಳು. ಆ ಪುಸ್ತಕ ನೋಡಿ ಅಚ್ಚರಿಯಾಯಿತು. 'ಅಮ್ಮಾ ಇಷ್ಟು ದೊಡ್ಡ ಪುಸ್ತಕಾನ??? ನಂಗೆ ಎತ್ತಕ್ಕೆ ಆಗಲ್ಲ!!! ನನ್ನ ರಜೆ ಪೂರ್ತಿ ಇದರಲ್ಲೇ ಕಳೆದೊಗತ್ತೆ, ಅಜ್ಜನ ಮನೆಗೆ ಹೋಗಕ್ಕು ಆಗಲ್ಲಾ, ನೀನೆ ಓದಿ ಹೇಳು ಸಾಕು' ಪುಸ್ತಕ ತಡಕಾಡುತ್ತ ಹೇಳಿದ್ದೆ. ' ನಾನು ಇಷ್ಟು ದೊಡ್ಡ ಪುಸ್ತಕ ಓದಿ ಹೇಳಿದಂಗೆ!! ನೋಡೆ ಬಿಡೋಣ ನಿನ್ನ ಕೈಲಿ ಆಗುತ್ತೋ ಇಲ್ವೋ ಅಂತಾ!!'
'ನೀನು ಹೀಗೆಲ್ಲಾ ಹೇಳಬೇಡ!! ಓದ್ತೀನಿ, ಆದರೆ ಶಾಲೆ ಶುರುವಾಗೊ ಒಂದು ವಾರ ಮುಂಚೆ ಅಜ್ಜನ ಮನೆಗೆ ಹೋಗ್ತಿನಿ, ಅಪ್ಪನ ಹತ್ರ permission ಕೊಡ್ಸು' 'ಹುಂ ಸರಿ' ಎಂದಳು ಅಮ್ಮ. ಮೇ ರಜೆ ಬರುವವರೆಗು ನೆನಪಾದಾಗಲೆಲ್ಲ ಪುಸ್ತಕ ತೆಗೆಸಿ ಕಣ್ಣಾಡಿಸುತ್ತಿದ್ದೆ. ಅಂತೂ ರಜೆ ಪ್ರಾರಂಭವಾಯಿತು. ನಿತ್ಯವೂ ಬೆಳಗೆ ಬೇಗ ಎದ್ದು ಸ್ನಾನ ಮಾಡಿ ಪುಸ್ತಕವನ್ನು ಮಣೆಯ ಮೇಲೆ ಇಟ್ಟು ಕುಳಿತರೆ, ಅಮ್ಮನೇ ನೆನಪಿಸ ಬೇಕಿತ್ತು ಊಟ ತಿಂಡಿ, ಆ ವಯಸ್ಸಿಗೆ ನನಗೆ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆದರೆ ಮನಸ್ಸು ಈಗಿನಷ್ಟು ಕಪಟವಿರಲಿಲ್ಲ, ಬೇಗ ಮುಗಿಸುವ ಬರದಲ್ಲಿ ಪುಟಗಳನ್ನು ಹಾರಿಸುತ್ತಿರಲಿಲ್ಲ. ಅರ್ಥವಾಗದ್ದನ್ನು ಪುನಃ ಓದಿ, ಅರ್ಥ ನೋಡಿ, ಇಲ್ಲವೇ ಅಮ್ಮನಿಗೆ ಕೇಳಿ ಮುಂದೆ ಸಾಗುತ್ತಿದ್ದೆ. ಬಾಲಕಾಂಡ ಮುಗಿಸುವುದರಲ್ಲಿ ರಾಮನ ಮೇಲೆ ಗೌರವ ಮೂಡಿತ್ತು.
ಅವನ ಗುರು ಹಿರಿಯರ ಮೇಲಿನ ಭಕ್ತಿ ನಿಷ್ಠೆ, ಸಹೋದರರ ಮೇಲಿನ ಪ್ರೀತಿ, ತಂದೆ ತಾಯಿಯರ ಮೇಲೆ ಗೌರವ, ದುರ್ಜನ ಸಂಹಾರ, ನ್ಯಾಯ ನೀತಿ ಪರಿಪಾಲನೆ, ಆ ಸಣ್ಣ ವಯಸ್ಸಿನಲ್ಲಿ, ನಿಜಕ್ಕೂ ಮುಚ್ಚುವಂತೆ ಮಾಡುತ್ತಿತ್ತು. ಜೊತಗೆ ಆ ಕಾಡುಗಳ ವರ್ಣನೆ, ತಾನೆ ಅಲ್ಲಿರುವಂತೆ ಭಾಸ ಮಾಡುತ್ತಿತ್ತು, ಪ್ರಕೃತಿಯಲ್ಲಿ ದೇವರನ್ನು ಕಾಣುವುದು,ಅದರ ಸಂರಕ್ಷಣೆ ದೇವರ ಪೂಜೆಯಂತೆ ಕಾಣುವುದು, ಎಷ್ಟೋ ಬಾರಿ ಓದಿದ್ದು ಕನಸಾಗಿ ರಾತ್ರಿ ಪೂರ್ತಿ ಕಾಡು ಮೇಡು ಅಲೆಯುತ್ತಿದ್ದೆ. ಅಮ್ಮ ಎಚ್ಚರಿಸಿದಾಗ ಗೊತ್ತಾಗುತ್ತಿತ್ತು, ತಾನು ತ್ರೇತಾಯುಗದಲ್ಲಿಲ್ಲವೆಂದು. ಸೀತೆ ಸ್ವಯಂ ವರ, ಅಯೋಧ್ಯಗೆ ಆಗಮನ, ಮಧ್ಯ ಪರಶುರಾಮನ ಆಕ್ರಮಣ, ಅವನೆಲ್ಲಿಂದ ಬಂದ ಎಂಬ ದ್ವಂದ್ವ, ಹೀಗೆ ಸಾಗುತ್ತಿತ್ತು. ನಂತರ ಪಟ್ಟಾಭಿಷೇಕದ ತಯಾರಿಯಲ್ಲಿ ಇಡೀ ಅಯೋಧ್ಯೆ ಮುಳುಗಿರುವಾಗ ಮಂಥರೆಗೆ ಮನಸ್ಸು ಕೊಟ್ಟ ಕೈಕೆ ತನ್ನ ಪ್ರೀತಿ ಪಾತ್ರ ರಾಮನನ್ನೇ ಕಾಡಿಗಟ್ಟುವುದು, ಯಾವ ಕಹಿ ಮಾತನಾಡದೆ ಸೀತೆ ರಾಮನ ಹಿಂಬಾಲಿಸುವುದು, ದಶರಥನ ರೋದನ, ಮರಣ, ಭರತನ ಭಕ್ತಿ, ಸುಮಾರು ಒಂದು ವಾರ ಅಳಿಸಿತ್ತು. ಅದರ ವರ್ಣನೆ. ಚಿತ್ರಕೂಟದ ಚಿತ್ರವಂತು ಕಣ್ಮುಂದೆ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು, ಅಲ್ಲಿಂದ ಕಷ್ಕಿಂದಾ ಕಾಂಡ, ರಕ್ಕಸರ ತಾಂಡವದ ಆರಂಭ, ಭಯಾನಕತೆಯ ಮೆರಗು, ಶೂರ್ಪಣಕಿಯ ಆಗಮನ, ಹಾಸ್ಯದ ಅತಿರೇಕ, ವಿರೂಪ ಹೊಂದಿ ಲಂಕೆಗೆ ಓಡಿ ಲಂಕಾದೀಶನಲ್ಲಿ ತನ್ನ ಪ್ರಲಾಪ, ಸೀತೆಯ ಸೌಂದರ್ಯ ವರ್ಣನೆಗೆ ಮರುಳಾದ ರಾವಣ, ಯುದ್ದ, ಮಾಯಾ ಜಿಂಕೆ, ಸೀತಾಪಹರಣ, ಸೀತಾ ರೋದನ, ರಾಮನ ಹುಡುಕಾಟ, ವಾಲಿ ಸುಗ್ರೀವರ ಕಾಳಗ, ಲಂಕಾ ದಹನ, ಯುದ್ಧ, ಪುಷ್ಪಕವಿಮಾನ, ಅಯೋಧ್ಯೆಗೆ ಆಗಮನ, ಪಟ್ಟಾಭಿಷೇಕ... ಮುಗಿಯಿತು ವಾಲ್ಮೀಕಿ ರಾಮಾಯಣ. ಎಲ್ಲಾ ಒಮ್ಮೆ ಮನಃ ಪಟಲದಲ್ಲಿ ಸರಿದು ಹೋಯಿತು. ಇದರ ಮುಂದಿನ ಕತೆ ?? ಉತ್ತರಾಕಂಡ. ಇದರ ಜೊತೆಗೆ ಏಕಿಲ್ಲ ಎಂಬ ಪ್ರಶ್ನೆಗೆ ಈಗ ಉತ್ತರ ದೊರಕಿತ್ತು. ದೊಡ್ಡಾಟದಲ್ಲಿ ಕೇಳಿದ್ದಳು ಮುಂದಿನ ಕಥೆ. ಯಾಕೆ ರಾಮ ಎಲ್ಲರಿಂದ ದೂರವಾದ, ಅರ್ಧ ಪ್ರಾಣ ಎಂದು ಕರೆಯಲ್ಪಟ್ಟ ಲಕ್ಷ್ಮಣನನ್ನು ಗಡಿಪಾರು ಮಾಡಿದ, ಇದು ಯಾವ ರೀತಿಯ ನ್ಯಾಯ ಎಂಬ ಪ್ರಶ್ನೆಗೆ ಉತ್ತರ ತನ್ನ ದೃಷ್ಟಿಯಿಂದ ನೋಡಿದರೆ ಸಿಗದು ಎಂಬ ಅರಿವು ಮೂಡುವಾಗ ಬಹಳ ವರ್ಷ ಕಳೆದಿತ್ತು. ಮತ್ತೆ ರಾಮನನ್ನು ವಿರೋಧಿಸಿ ಅಪ್ಪನಲ್ಲಿ ಮಧ್ಯ ರಾತ್ರಿಯವರೆಗೂ ಕಾದಾಡಿದ್ದು ಇನ್ನೂ ನೆನಪಿತ್ತು. ತರಗತಿಯಲ್ಲಿ ಕನ್ನಡ ಗುರುಗಳ ಎದುರು ವಾದಿಸಿ ಬಂದಿದ್ದೆ, ಅವರು ಉತ್ತರಕ್ಕೆ ಮೊಂಡು ವಾದ ಮಾಡಿದ್ದು ನೆನಪಿಸಿ ಕೊಂಡರೆ ಒಂದು ರೀತಿ ಖುಷಿ. ಅಂದಿನ ವಾದವನ್ನು ಅರ್ಥ ಮಾಡಿಕೊಳ್ಳುವಷ್ಟು ಮನಸ್ಸು ಪಕ್ವವಿರಲಿಲ್ಲ. ಆದರೆ ನಿಜ. ಸೀತೆ- ರಾಮ ನನ್ನಂತೆ ಸಾಮಾನ್ಯ ಮನುಷ್ಯರು ಎಂದು ಬಗೆದಿದ್ದೆ. ಸೀತೆ ತನ್ನಂತೆ ಒಬ್ಬ ಹೆಣ್ಣು, ಅವಳ ಆಸೆ ಆಕಾಂಕ್ಷೆಗಳು ರಾಮನಿಂದಾಗಿ ಚಿತೆ ಏರಿದವು ಎಂದು ಯೋಚಿಸಿದರೆ ರಾಮನ ಕುರಿತು ಸಾವಿರ ನಕಾರಾತ್ಮಕ ಚಿಂತನೆಗಳು ಹರಿಹಾಯುವವು. ಆದರೆ ಅವಳು ಅಸಾಮಾನ್ಯಳು, ಅವಳ ಶಕ್ತಿ ಸಾಮರ್ಥ್ಯ ಏನೆಂಬುದು ರಾಮನಿಗೆ ಅರಿವಿತ್ತು.ಅದೇ ರೀತಿ ತನ್ನ ಪತಿಯನ್ನು ಯಾವುದೇ ಕಾರಣಕ್ಕೆ ಕರ್ತವ್ಯ ಭ್ರಷ್ಟನಾಗಿಸಬಾರದೆಂಬ ಸತಿ ಧರ್ಮ ಅರಿತ ಮಹಾತ್ಮೆಯೂ ಸೀತೆಯಾಗಿದ್ದಳು. ಅವರಿಬ್ಬರೂ ತಮ್ಮ ತಮ್ಮ ಸಾಮರ್ಥ್ಯ ಅರಿತಿದ್ದರು... ಅಂದ ಹಾಗೆ
ರಾಮಾಯಣ ಅಸ್ತಿತ್ವದಲ್ಲಿತ್ತೆ? ಬೇರೆ ಧರ್ಮಗಳಲ್ಲೂ ರಾಮಾಯಣ ಇದೆ, ಪಾತ್ರಗಳು, ಕಥೆಯ ಮೂಲ ರೂಪ ಬೇರೆಯೆ ಇದೆಯಂತೆ, ಒಮ್ಮೆ ಓದಬೇಕು, ಇರುವಿಕೆಯನ್ನು ಸುಮ್ಮನೆ ವಾದಿಸುವ ಬದಲು ಅದನ್ನು ಕಾವ್ಯ ರೂಪಕ್ಕೆ ತಂದು ನಮ್ಮ ಮುಂದಿಟ್ಟ ಎಲ್ಲರಿಗೂ ಒಮ್ಮೆ ನಮಿಸುವೆ,...
ಎಷ್ಟೊತ್ತಾಗಿತ್ತೋ... ಹಾಗೆ ತಲೆಕೊಟ್ಟು. ಏನೋ ಸದ್ದಾಯಿತು. ತಲೆ ಎತ್ತಿದಳು. 'ಅರೇ current ಯಾವಾಗ ಹೋಯ್ತು..' ವಸುಧಾ ಮಿಣುಕು ದೀಪ ಹಿಡಿದಿದ್ದಳು. 'ಎಷ್ಟು ಗಂಟೆ ಗೊತ್ತಾ ?? ೨.೨೦ ನೀನೇನು ಈ ಪುಸ್ತಕದ ರಾಶಿ ಮೇಲೆ ಬಿದ್ದೀದಿಯಾ?? ನಾನು ನೀ ಮಲ್ಕೊಂಡಿದಿಯಾ ಅಂದುಕೊಂಡೆ, ಊಟಕ್ಕೂ ಬಂದಿಲ್ಲಾ, ಹಾಲು ಇಟ್ಟಿದ್ದು ಕುಡದಿಲ್ಲ....'
'ಹುಂ.. ಬೈಬೇಡ, ಹಾಲು ಕುಡಿದು ಮಲಗ್ತೀನಿ' ಕಣ್ಣುಜ್ಜುತ್ತಾ ಜಾನ್ಹವಿ ಎದ್ದಳು. 'ದೇವರೆ ಇವ್ರಿಗೆಲ್ಲಾ ಹೊತ್ತು ಗೊತ್ತಿಲ್ಲ!! ಎಷ್ಟೊತ್ತಿಗಾದರು ಮಲ್ಗೋದು, ಎಷ್ಟೊತ್ತಿಗಾದರು ಏಳೊದು' ಎಂದು ವಸುಧಾ ಗೊಣಗುತ್ತಾ ಲೈಟ್ ಸ್ವಿಚ್ ತೆಗೆದು ಮಿಣಕು ದೀಪ ಜಾನ್ಹವಿಗೆ ಇಟ್ಟು ಹೋದರು.
ರಾಧೆ...🎶

Popular posts from this blog
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
ಕಸದ ಬುಟ್ಟಿ ಸೇರುವ ಮುನ್ನ...... ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ. ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...
Comments
Post a Comment