Posts

Showing posts from 2022
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ಪ್ರೀತಿ ನಿಂಗೆಷ್ಟು ಮುಖ ಎದುರುಗಡೆ ಸಮುದ್ರ, ಸೂರ್ಯ ಆಗತಾನೆ ಅಸ್ತಮಿಸಿ ಮೋಡ ಕಡಲು ಕೆಂಪಾಗಿದ್ದವು, ಹಾಗೆ ತಂಪಾಗಿ ತೂರಿ ಬರುತ್ತಿದ್ದ ಗಾಳಿಗೆ ಮೈಯೊಡ್ಡಿ ಕೂತಿದ್ದಳು ಅನೂಹ್ಯ. ಗುಂಗುರು ಕೂದಲು ಮುಖ ತೀಡಿ ನಾಟ್ಯವಾಡುತ್ತಿತ್ತು. ಎಸಿಯಿಂದ ಸ್ವಲ್ಪ ಕಾಲ ಮುಕ್ತಿ ಸಿಕ್ಕಿತ್ತು. ಎಲ್ಲರೂ ಸಮುದ್ರಕ್ಕೆ ಮುಗಿಬಿದ್ದಿದ್ದರೆ, ಇವಳು ಶಾಂತವಾಗಿ ಕುಳಿತು ಲೆಮನ್ ಟೀ ಹೀರುತ್ತಿದ್ದಳು. ಸಮುದ್ರದಿಂದ ಮುಖ ತಿರುಗಿಸಿ ಎಷ್ಟು ಕಾಲಗಳೇ ಆಗಿತ್ತು. ಅಲೆಗಳೆಂದರೆ ಒಂದುರೀತಿ ಹಳೆನೆನಪುಗಳ ಖಜಾನೆ. ಜನರ ಗುಂಪು ನೋಡಿದರೆ, ತೀರದಲ್ಲಿ ಬಹಳ ಗದ್ದಲವಿದ್ದಂತೆ ಕಾಣುತ್ತಿತ್ತು. ‘ ಹೇ ಅನು!! ಇಲ್ಲಿದಿಯಾ?, ನಾನು ಎಲ್ಲಾ ಕಡೆ ಹುಡುಕಿದೆ ’ ನವಿರಾಗಿ ತಲೆ ಸವರಿ ಅವಳ ಪಕ್ಕಾ ಕುಳಿತ ಮನಿಷ್. ಒಂದು ಕ್ಷಣ ಬೆಚ್ಚಿದರೂ, ಮನಿಷ್ ನೋಡಿ ಮುಗುಳ್ನಕ್ಕು ‘ ಟೀ??’ ‘ಯೆಸ್ ಪ್ಲೀಸ್! ಸ್ವಲ್ಪ ಶುಗರ್ ಹೆಚ್ಚಗೆ’ ಕಂಗಳಲ್ಲಿ ವಿನಂತಿ ಇತ್ತು. ‘ ಹೇಳ್ಬೇಕಂತಿಲ್ಲಾ, ನೆನಪಿರತ್ತೆ’ ‘ಅದು ಗೊತ್ತು, ಮೇಡಮ್ ಎಲ್ಲೊ ಕಳೆದು ಹೋಗಿದ್ದರಲ್ಲಾ, ಅದಕ್ಕೆ ಅಂದೆ. ಅಪ್ಪಾ ಕಾಲ್ ಮಾಡಿದ್ದರು, ನಿಂಗೆ ಮಾಡಿದ್ದರಂತೆ, ಸ್ವಿಚ್ ಆಫ್ ಬಂತಂದ್ರು.’ ‘ಹೌದಾ!, ನಾ ಬ್ಯಾಟರಿ ಲೋ ಇದೆ ಅಂತಾ ಸ್ವಿಚ್ ಆಫ್ ಮಾಡಿ ಚಾರ್ಜಗೆ ಇಟ್ಟಿದ್ದೆ, ಮಾಡ್ತೀನಿ, anything important ? ಇವತ್ತಿನ busy schedule ಮರತಿದ್ದೆ ಕಾಲ್ ಮಾಡಕ್ಕೆ, ಅತ್ತೆ ಹುಷಾರಂತಾ’ ‘ ಸುಮ್ನೆ ಮಾಡಿದ್ರು ಅನ್ಸತ್ತೆ, ಎಲ್ಲಾ ಚೆನ್ನಾಗಿ...