- Get link
- X
- Other Apps
ಪ್ರೀತಿ ನಿಂಗೆಷ್ಟು ಮುಖ
ಎದುರುಗಡೆ ಸಮುದ್ರ, ಸೂರ್ಯ ಆಗತಾನೆ ಅಸ್ತಮಿಸಿ ಮೋಡ ಕಡಲು ಕೆಂಪಾಗಿದ್ದವು, ಹಾಗೆ ತಂಪಾಗಿ ತೂರಿ ಬರುತ್ತಿದ್ದ ಗಾಳಿಗೆ ಮೈಯೊಡ್ಡಿ ಕೂತಿದ್ದಳು ಅನೂಹ್ಯ. ಗುಂಗುರು ಕೂದಲು ಮುಖ ತೀಡಿ ನಾಟ್ಯವಾಡುತ್ತಿತ್ತು. ಎಸಿಯಿಂದ ಸ್ವಲ್ಪ ಕಾಲ ಮುಕ್ತಿ ಸಿಕ್ಕಿತ್ತು. ಎಲ್ಲರೂ ಸಮುದ್ರಕ್ಕೆ ಮುಗಿಬಿದ್ದಿದ್ದರೆ, ಇವಳು ಶಾಂತವಾಗಿ ಕುಳಿತು ಲೆಮನ್ ಟೀ ಹೀರುತ್ತಿದ್ದಳು. ಸಮುದ್ರದಿಂದ ಮುಖ ತಿರುಗಿಸಿ ಎಷ್ಟು ಕಾಲಗಳೇ ಆಗಿತ್ತು. ಅಲೆಗಳೆಂದರೆ ಒಂದುರೀತಿ ಹಳೆನೆನಪುಗಳ ಖಜಾನೆ. ಜನರ ಗುಂಪು ನೋಡಿದರೆ, ತೀರದಲ್ಲಿ ಬಹಳ ಗದ್ದಲವಿದ್ದಂತೆ ಕಾಣುತ್ತಿತ್ತು.
‘ ಹೇ ಅನು!! ಇಲ್ಲಿದಿಯಾ?, ನಾನು ಎಲ್ಲಾ ಕಡೆ ಹುಡುಕಿದೆ ’ ನವಿರಾಗಿ ತಲೆ ಸವರಿ ಅವಳ ಪಕ್ಕಾ ಕುಳಿತ ಮನಿಷ್. ಒಂದು ಕ್ಷಣ ಬೆಚ್ಚಿದರೂ, ಮನಿಷ್ ನೋಡಿ ಮುಗುಳ್ನಕ್ಕು ‘ ಟೀ??’
‘ಯೆಸ್ ಪ್ಲೀಸ್! ಸ್ವಲ್ಪ ಶುಗರ್ ಹೆಚ್ಚಗೆ’ ಕಂಗಳಲ್ಲಿ ವಿನಂತಿ ಇತ್ತು.
‘ ಹೇಳ್ಬೇಕಂತಿಲ್ಲಾ, ನೆನಪಿರತ್ತೆ’
‘ಅದು ಗೊತ್ತು, ಮೇಡಮ್ ಎಲ್ಲೊ ಕಳೆದು ಹೋಗಿದ್ದರಲ್ಲಾ, ಅದಕ್ಕೆ ಅಂದೆ. ಅಪ್ಪಾ ಕಾಲ್ ಮಾಡಿದ್ದರು, ನಿಂಗೆ ಮಾಡಿದ್ದರಂತೆ, ಸ್ವಿಚ್ ಆಫ್ ಬಂತಂದ್ರು.’
‘ಹೌದಾ!, ನಾ ಬ್ಯಾಟರಿ ಲೋ ಇದೆ ಅಂತಾ ಸ್ವಿಚ್ ಆಫ್ ಮಾಡಿ ಚಾರ್ಜಗೆ ಇಟ್ಟಿದ್ದೆ, ಮಾಡ್ತೀನಿ, anything important ? ಇವತ್ತಿನ busy schedule ಮರತಿದ್ದೆ ಕಾಲ್ ಮಾಡಕ್ಕೆ, ಅತ್ತೆ ಹುಷಾರಂತಾ’
‘ ಸುಮ್ನೆ ಮಾಡಿದ್ರು ಅನ್ಸತ್ತೆ, ಎಲ್ಲಾ ಚೆನ್ನಾಗಿದಾರೆ, ನನ್ನ ಬಗ್ಗೆ ಕಂಪ್ಲೆಂಟ್ ಕೇಳೋಕೆ ಮಾಡಿರ್ತಾರೆ, ಇನ್ನೇನಕ್ಕೆ’ ನಕ್ಕ. ಈ ನಗುವಿಗೆ ಇವಳು ಬಿದ್ದಿದ್ದು, ಅದೊಂತರಾ ನಿಷ್ಕಲ್ಮಷ ನಗು, ಮಗು ತರಾ.
‘ಟೀ ತಗೊ.., ಸಿಹಿ ಸಾಕಾ ನೋಡು’
‘ಥ್ಯಾಂಕ್ಸ್...’ ಕೈಗೆತ್ತಿಕೊಂಡ, ಹೀರುತ್ತಾ ‘ಮ್.. ಪೆರಫೆಕ್ಟ್!, ಬೀಚ್ ಗೆ ಹೋಗೋಣ, ಗೆಟ ರೆಡಿ’ ಟೀ ಕಪ್ ಇಡುತ್ತಾ ಎಂದ.
‘ I am tired baby.. ಡಿನ್ನರ್ ಗೆ ಹೋಗೋಣ್ವಾ.. ಪ್ಲೀಸ್ ಡೋಂಟ್ ಮೈಂಡ್ ’ ಅವನ ಕಣ್ಣಲ್ಲಿ ಕಣ್ಣಿಟ್ಟು ಬೇಡಿಕೆ ಇಟ್ಟಳು.
‘OK mam,!! Take rest, I have to attend few calls' ಒಳಗೆ ಹೋದ.
ಇದು ಮೊದಲ ಬಾರಿ ಮದುವೆ ಆದ ಮೇಲೆ ಅವನ ಜೊತೆ ಒಂಟಿಯಾಗಿ ಬಂದಿದ್ದು. ಈ ಮೂರು ತಿಂಗಳಲ್ಲಿ ಮದುವೆ ಹೊಸತಾಗಿ ಆಗಿದ್ದು ಅಂತಾ ನೆನಪು ಬರದ ಹಾಗೆ ಕಳೆದಿದ್ದರು. ಹಾಗಂತಾ ಇದು ಹನಿಮೂನ್ ಅಲ್ಲಾ. ಮುಂಬೈ ಬ್ರಾಂಚ್‍ಲಿ ಮೀಟ್ ಇತ್ತು, ಆಫೀಶಿಯಲ್ ಟ್ರಿಪ್ ಅನ್ನಬಹುದು. ಮಾವ ಕೆಲಸದಲ್ಲಿ ಪಕ್ಕಾ ಕಮ್ಮಿಟ್‍ಮೆಂಟ್, ಆ ಅರವತ್ತೈದರ ಉತ್ಸಾಹ, ಮನೆಯಲ್ಲಿ ಸುಮ್ಮನೆ ಇರಬಿಡಲಿಲ್ಲ. ಮನೀಷ್‍ಗಿಂತ ಮಾವನಿಗೆ ಅನೂಹ್ಯ ಮೇಲೆ ತುಸು ನಂಬಿಕೆ ಜಾಸ್ತಿ. ಇಬ್ಬರದೂ ಗುರಿ ಬೇರೆಯೆ ಇತ್ತು, ಮನಿಷ್ ಎಲೆಕ್ಟ್ರಿಕ್ ಇಂಜಿನೀಯರ್ ಆಗಿ ಕೆಲಸ ಮಾಡಿದ್ದನಲ್ಲದೆ, ಉನ್ನತ ವ್ಯಾಸಾಂಗ ಮಾಡಿದ್ದ. ಅಪ್ಪನ ಈ ತಲೆಬಿಸಿಯ ಜವಾಬ್ದಾರಿ ಬೇಡವಾಗಿತ್ತು. ಅನೂಹ್ಯ ಮೆಡಿಕಲ್ ಮುಗಿಸಿದ್ದಳು, ಆಂಕಾಲಜಿಯಲ್ಲಿ ಎವiಂ ಎಸ್ ಮಾಡಲು ತಯಾರಿ ನಡೆಸುತ್ತಿದ್ದಳು,. ಬಂಗಾಳದಲ್ಲಿ ಪಿಜಿ ಸಿಕ್ಕಿತ್ತು,. ಅಪ್ಪ ಹೃದಯಾಗತದಿಂದ ತೀರಿಕೊಂಡ ಸುದ್ದಿ ಅವಳ ದಿಕ್ಕೆ ಬದಲಿಸಿತು. ಅನಿವಾರ್ಯವಾಗಿ ಮರಳಿ ಊರಿಗೆ ಬಂದಳು. ಬೆಂಗಳೂರಲ್ಲಿ ಮತ್ತೆ ಜಾಬ್ ಗೆ ಸೇರಿದಳು.ಬೆಂಗಳೂರು ಮೆಡಿಕಲ್ ಕಾಲೇಜ್‍ಲ್ಲಿ ಕೆಲಸ ಮಾಡುತ್ತಲೇ ಮತ್ತೆ ಬರೆದಿದ್ದಳು. ಆದರೆ ನಡೆದಿದ್ದೆ ಬೇರೆ, ಮನಿಷ್‍ಗೆ ವಿಧಿ ಇಲ್ಲವಾದರೆ, ಅನೂಹ್ಯಳದು ಭಾವನಾತ್ಕಕ ಸಂಘರ್ಷಕ್ಕೆ ಒಳಗಾಗಿದ್ದಳು. ಒಮ್ಮೊಮ್ಮೆ ಜೀವನದಲ್ಲಿ ಯಾವುದು ಸರಿ ಎಂದು ಗುರುತಿಸುವುದು ಕಷ್ಟವಾಗುತ್ತದೆ. ಪ್ರೀತಿ? ವಿದ್ಯೆ? ಕನಸು? ಹಣ? ಸಂಬಂಧ??. ಇಲ್ಲಿ ಆಯ್ಕೆ ಮಾಡುವುದಕ್ಕಿಂತ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವಂತಿದ್ದರೆ ಬದುಕು ಎಷ್ಟು ಚೆಂದವಾಗಿತ್ತೇನೊ. ಆದರೆ ಎಲ್ಲಾ ಅಂದುಕೊಂಡಂತೆ ಆದರೆ ಜೀವನ ಬೇಸರವಾಗಿ ಬಿಡಬಹುದು. ಇಬ್ಬರು ಎಷ್ಟು ಪರಿಚಿತರೊ ಒಬ್ಬರಿಗೊಬ್ಬರು ಗೊತ್ತಿಲ್ಲಾ, ಆದರೆ ಜಾತಕದಲ್ಲಿ ಇಬ್ಬರ ಹೊಂದಾಣಿಕೆ ಚೆನ್ನಾಗಿ ಆಗಿತ್ತು, 24 ಗುಣಗಳು!!!. ಕಾಕತಾಳೀಯವೊ, ಜಾತಕ ನಿಜವೋ, ಇಬ್ಬರೂ ಅರ್ಥ ಮಾಡಿಕೊಳ್ಳುವ ಸ್ವಭಾವದವರು, ಯಾರೊಬ್ಬರು ವಯಕ್ತಿಕ ವಿಚಾರದಲ್ಲಿ ತಲೆದೂರಿಸುತ್ತಿರಲಿಲ್ಲ.
ರೂಮಿಗೆ ಹೋಗಿ ಮೊಬೈಲ್ ಸ್ವಿಚ್ ಆನ್ ಮಾಡಿದ್ದಳು. ಮಿಸ್ಸಡ್ ಕಾಲ್ ಮೆಸೇಜ್ ಬಂತು. ಅಮ್ಮಂಗೆ ಫೋನ್ ಮಾಡಿ ಆರೋಗ್ಯ ವಿಚಾರಿಸಿದಳು. ಮಗುವಿನ ಕುರಿತಾಗಿ ಮಾತನಾಡ ತೊಡಗಿದಳು. ಅಮ್ಮ ಆಫೀಸ್ ಕಾಲ್ ಎಂದು ಕಟ್ ಮಾಡಿದಳು. ಇವರ ಕನಸುಗಳ ಮುಂದೆ ನಾವುಗಳು ಏನು?. they could have given birth to robot!!. ಒಮ್ಮೆ ಸಮುದ್ರದೆಡೆ ದಿಟ್ಟಿಸಿದಳು., ಇದಾಗಿತ್ತಾ ನಾ ಬಯಸಿದ ಜೀವನ? ಆದರೆ ಸ್ವೀಕರಿಸಿ ಆಗಿದೆ, ತಿರುಗಿ ನೋಡೋದ್ರಲ್ಲಿ ಅರ್ಥ ಇಲ್ಲಾ.
‘ಹಲೋ ಮಾವ, ಚೆನ್ನಾಗಿದ್ದಿರಾ? ಅದು ನಾನು ಮೊಬೈಲ್ ನಾ ಚಾರ್ಜಗೆ ಇಟ್ಟಿದ್ದೆ’
‘ ನಾವಿಲ್ಲಿ ಹುಷಾರಮ್ಮ, ಮೀಟಿಂಗ್ ಡಿಟೇಲ್ಸ್ ಕೇಳಕ್ಕೆ ಕಾಲ್ ಮಾಡಿದ್ದೆ,’
‘ ಡಿಟೇಲ್ಸ ಎಲ್ಲಾ ಆಗಲೆ ಶ್ರೀನಿಧಿ ಗೆ ಮೇಲ್ ಮಾಡದೆ ಮಾವಾ. ಹಾಗೆ ಶ್ರೀಕರ್ ಅವರು ರಿಸೈನ್ ಮಾಡ್ತೀನಿ ಅಂದರು, ನಿಮ್ಮನ್ನ ಕೇಳಿ, ಹೈಕ್ ಕೊಡ್ತೀವಿ ಎಂದಾಗಿದೆ, 20% ಕೊಡಬಹುದೇನೋ ಅನ್ನಿಸುತ್ತೆ, he is responsible person I think!! ’
‘ ಶ್ರೀಕರ್ ನಾ?!! ಮನೀಷ್ ಹೇಳೇ ಇಲ್ಲಾ!! why!! what is the matter!?’
‘ ಬೇರೆ ಕಡೆಂದಾ ಆಫರ್ ಬಂದಿದೆ ಅಂತಾ ಕೇಳಪಟ್ಟೆ,..’
‘ even 25 % also ok!! we cant loose him, !! I am tension free about Mumbai branch only because of him !! ’
‘ ಖಂಡಿತಾ ನಾಳೆ, ಈ ವಿಷಯ ಇತ್ಯರ್ಥ ಮಾಡ್ತೀನಿ, ನಿಮ್ಮ ಆರೋಗ್ಯ ಹುಷಾರಿ, ಅತ್ತೆಗೆ ಕೇಳ್ದೆ ಅಂತಾ ಹೇಳಿ.’
‘ ಹೋ... ಆಯ್ತಮ್ಮಾ.. ಮಹಾರಾಷ್ಟ್ರ ಜೋರ ಮಳೆ ಅಂದರು, ಹೇಗಿದೆ?’
‘ ಅಯ್ಯೋ ಆ ನ್ಯೂಸ್ ಚಾನಲ್, ಹವಾಮಾನ ಇಲಾಕೆ!! ಇಲ್ಲೇನು ಅಷ್ಟು ಮಳೆ ಇಲ್ಲಾ ಮಾವ’ ನಕ್ಕಳು.
‘ ಮನೀಷ್ ಎಲ್ಲಿ?’
‘ ಅವರಿಲ್ಲೆ ಕೆಳಗಿದಾರೆ, ಆನ್ ಕಾಲ್...’
‘ ಏನು ತೊಂದರೆ ಆಗಿಲ್ಲಾ ಅಲ್ವಾ, ‘
‘ಏನಿಲ್ಲಾ ಮಾವಾ.. ಎಲ್ಲಾ ಚೆನ್ನಾಗಿದೆ.’
‘ ನೀನು ಬಿಡು!! ಹುಷಾರಿ’ ಅದೊಂತರಾ ನಂಬಿಕೆ ಅನೂಹ್ಯ ಮೇಲೆ. ‘ಒಕೆ ಮಾವಾ, ನೀವು ಕೂಡ’ ಫೋನ್ ಇಟ್ಟಳು. ಇಂತಹ ನಂಬಿಕೆ, ಪ್ರೀತಿಯನ್ನ ಬೆಲೆ ಕಟ್ಟಲಾಗದು ಅಲ್ವಾ..
ಹಾಗೆ ಮಂಚಕ್ಕೆ ಒರಗಿದಳು. ಎಚ್ಚರಾದಾಗ, 8.30. ಮನೀಷ್ ವೆಬ್ ಸಿರೀಸ್ ಏನೋ ನೋಡ್ತಾ ಇದ್ದ. ಬಹುಶಃ ಏಳಿಸಲು ಮನಸಾಗದೆ ಹಾಗೆ ಮಾಡಿರಬಹುದು. ‘ ಹೇ ಸಾರಿ!!! ಎಮ್ ಐ ಟೂ ಲೇಟ್?? ವಿಲ್ ಗೆಟ್ ರೆಡಿ ಇನ್ 5 ಮಿನಿಟ್ಸ್??’
‘ ನೋ ಇಟ್ಸ ಒಕೆ.. ಯು ಲುಕ್ಸ ಸೋ ಟೈರಡ್!! ನಾಳೆ ಹೋಗೋಣ, ಐ ವಿಲ್ ಆರ್ಡರ್ ಹಿಯರ್ ಒನ್ಲಿ.. ನಿಂಗೆ ವೇಟ್ ಮಾಡ್ತಿದ್ದೆ ’
‘ ಸಾರಿ’ ಮನೀಷ್ ಬೆನ್ನಿಗೆ ಕೂಸುಮರಿ ಮಾಡುತ್ತಾ ಕೇಳಿದಳು, ಇನ್ನೂ ನಿದ್ದೆ ಮೂಡ್ ಲೆ ಇದ್ದಳು. ‘ಒ ಕೆ ಮಾ.. ಏನು ತಿಂತಿಯಾ?’
‘ ಏನು ಬೇಡ’ ‘ ಹಂಗಂದರೆ ಹೇಗೆ, ಆಲರೆಡಿ ಟೈಮ್ ಆಯ್ತು, ಬೇಗ ಹೇಳು.. ದಾಲ್ ಕಿಚಡಿ, ಫ್ರೈಡ್ ರೈಸ್, ಕರ್ಡ ರೈಸ್,..’ ‘ದಾಲ್ ಕಿಚಡಿ, ಬಿ ರೆಡಿ ಟು ಶೇರ್...’ ‘ ಅದಕ್ಕೆ ಅಲ್ವಾ ಮದುವೆ ಆಗಿದ್ದು…’ ‘ ಏನಕ್ಕೆ ದಾಲ್ ಕಿಚಡಿ ತಿನ್ನಕ್ಕಾ?’ ‘ ನಂಗು ಹಂಗೆ ಅನ್ನಿಸ್ತಿದೆ, ಮುಖಾ ತೊಳಿದು ಬಾ ಪುಟ್ಟಾ!!’ ಕೆಳಗಿಳಿಸಿ ಆರ್ಡರ್ ಮಾಡತೊಡಗಿದ. ಸುಮ್ಮನೆ ಸ್ಕ್ರೀನ್ ನೋಡತೊಡಗಿದಳು, ಅವಳಿಗೆ ಇಂಗ್ಲೀಷ್ ವೆಬ ಸಿರೀಸ್ ಅಷ್ಟಕ್ಕಷ್ಟೆ. ಅಲ್ಲೆ ಅವನ ಕಾಲಮೇಲೆ ಮಲಗಿದಳು. ‘ಎದ್ದೇಳಿ ರಾಜಕುಮಾರಿ, ಭೋಜನ ಸಿದ್ದವಾಗಿದೆ’ ಮತ್ತೆ ಏಳಿಸಿದ. ಅವಳು ಹೀಗೆ ಮಧ್ಯೆ ಮಲಗೆದ್ದರೆ ಅವಳ ಪಾಡು ದೇವರಿಗೆ ಪ್ರೀತಿ. ಮನೀಷ್ ಚಿಕ್ಕಮಗುವಿಗೆ ತಿನ್ನಿಸುವಂತೆ ತಿನ್ನಿಸಿ, ಒತ್ತಾಯ ಮಾಡಿ ಮಿಲ್ಕ ಶೇಕ್ ಕುಡಿಸಿದ. ಅಷ್ಟರಲ್ಲಿ ಎಚ್ಚರಾಗತೊಡಗಿದಳು. ಊಟ ಮುಗಿಸಿ, ಸಿಟ ಔಟ್‍ಲಿ ವಾಕ್ ಮಾಡತೊಡಗಿದರು. ‘ ಮನೀ.. ಬೀಚ್ ಗೆ ಹೋಗೋಣ್ವಾ?’ ‘ ಇಷ್ಟೊತ್ತಲ್ಲಾ? ನಾಳೆ ಹೋಗೋಣ್ವಾ? ಐ ಎಮ್ ಸ್ಲೀಪಿ ನವ್..’ ‘ ಯಾಹ್!! ಶ್ಯುರ್!’ ಮನೀಷ ಮಲಗಲು ಹೋದ, ‘ಅನು ಲೇಟಿದ್ಯಾ’ ‘ಹುಂ, ನೀನು ಮಲಗು,’ ಸಿಟ್ ಔಟ್ ಲಿ ಕೂತು ಹೊರಗೆ ನೋಡತೊಡಗಿದಳು. ಮಬ್ಬು ಬೆಳಕಲಿ ಒಂದಿಷ್ಟು ಜನ ಕೈ ಕೈ ಹಿಡಿದು ಸುತ್ತುತ್ತಿದ್ದರು. ಬಿಳಿ ತೆರೆಗಳು ದಡಕ್ಕೆ ಅಪ್ಪಳಿಸಿ ಹಿಂತಿರುಗುತ್ತಿದ್ದವು.
ಏನು ನೆನಪಾಯ್ತು... ಸಮುದ್ರ, ಅದಕ್ಕೆ ಸಂಬಂಧಿಸಿದ ಏನೇ ಕೇಳಿದರು, ನೋಡಿದರು ಅವನೇ ನೆನಪಾಗುವವ. ರಾತ್ರಿ ಆ ಅಲೆಗಳ ಮಧ್ಯೆ ಕಳೆದ ರಾತ್ರಿ ಎಂದು ಮರೆಯಲಾರಳು. ನಾಲ್ಕು ವರ್ಷಗಳ ಹಿಂದಿನ ಮಾತು, ದಿನಾಂಕ, ವಾರ, ಸಮಯ ಎಲ್ಲಾ ನೆನಪಿದೆ. ಆ ಕ್ಷಣಗಳು ಈಗಷ್ಟೆ ಜರುಗಿದಂತೆ ಹಸಿ-ಹಸಿ ನೆನಪಿನ ಪಟಲದಲ್ಲಿ. ಅಮಿತ ನಿಟ್ಟೆ ಕಾಲೇಜಲ್ಲಿ ಎಮ್‍ಂ ಟೆಕ್ ಮಾಡುತ್ತಿದ್ದ ಸಮಯ. ಇವಳು ಮಂಗಳೂರಲ್ಲಿ ಹೌಸ್ ಸರ್ಜನಿಂಗ ಮಾಡುತ್ತಿದ್ದಳು. ಆಗ ತಾನೆ ಸೋಷಿಯಲ್ ಮೀಡಿಯಾ ಮೂಲಕ ಅಮಿತ 8 ವರ್ಷಗಳ ಬಳಿಕ ಮತ್ತೆ ಸಿಕ್ಕಿದ್ದ. ಆರು ವರ್ಷ ಅಲ್ಲಿದ್ದರೂ ಸಿಗದವ, ಬಿಡುವ ಕಾಲಕ್ಕೆ ಪರಿಚಯವಾಗಿದ್ದ. ಅವನ ಪರಿಚಯ ಆದಾಗಿಂದ, ಆಸ್ಪತ್ರೆ ಕೆಲಸ ಭಾರ ಎನ್ನಿಸ ತೊಡಗಿತ್ತು. ಎಷ್ಟು ಬಾರಿ ಸಿಗುವ ಪ್ಲಾನ್ ಮಾಡಿದರೂ ಏನಾದರು ಕೆಲಸ ಬಂದು ಮುಂದೆ ಹೋಗುತ್ತಲೇ ಇತ್ತು. ಇವಳು ಗುಜರಾತನಲ್ಲಿ ಮೆಡಿಕಲ್ conference ಒಂದಕ್ಕೆ, ಹೋಗಿದ್ದಳು. ಅವತ್ತು, conference ಕೊನೆಯ ದಿನ, ಮುಗಿಸಿ, ಮಾತನಾಡುತ್ತ ಹೊರಗೆ ಕಾಲಿಟ್ಟಿದ್ದಳು, ಮೊಬೈಲ್ ಗೆ ಸಂದೇಶಗಳ ಮೇಲೆ ಸಂದೇಶ ಬರುತ್ತಲೇ ಇತ್ತು. ರೂಮ್ ಗೆ ಹೋಗಿ ನೋಡಿದರಾಯಿತು ಎಂದು, ಮಾತಲ್ಲೇ ಮುಳುಗಿದ್ದಳು.
‘ಎಕ್ಸಕ್ಯೂಸ್ ಮಿ ಮಿಸ್ ಅನು!!’ ಅವಳ ಪಕ್ಕದಲ್ಲೆ ಕೇಳಿದ ಧ್ವನಿಗೆ ತಲೆ ಹೊರಳಿಸಿದಳು.
‘ಅಮಿತ್!!!!’ ಶಾಕ್ ಆಗಿತ್ತು.. ‘ನೀನಿಲ್ಲಿ?? ಯಾವಾಗ ಬಂದೆ? ಹೇಗೆ?’ಎರಡು ದಿನದ ಹಿಂದೆ ಅಮಿತ ಕೇಳಿದ್ದಕ್ಕೆ, ವಿಷಯ ತಿಳಿಸಿದ್ದಳು ಹಾಗೆ ಚಾಟ್ ಮಾಡುವಾಗ.
‘ ಯೆಸ್!! ಅಮಿತ್ ಹಿಯರ್!!, ಬೈ ಎರ್...’
‘ ಐ ಕಾಂಟ್ ಬಿಲಿವ್!! ನಿಜಾನಾ!??’
‘ ಹುಂ... ಮುಗಿತಲ್ವಾ, ಏನಾದ್ರು ಫೋರ್ಮಾಲಿಟೀಸ್ ಇದ್ರೆ ನಿನ್ನ colleages ಗೆ ಕಂಪ್ಲೀಟ್ ಮಾಡಕ್ಕೆ ಹೇಳು, ಲಗೇಜ್ ತಗೋ, ಕಛ್ ಗೆ ಹೋಗ್ತಿದೀವಿ, ಕ್ವಿಕ್..’
‘ ರಿಯಲಿ!!! ಇವಾಗಾ ಹೊರಟ್ರೆ ಲೇಟ್ ಆಗಲ್ವಾ? ನಾಳೆ ಇವನಿಂಗ್ ಫ್ಲೈಟ್ ಇದೆ 7 ಗೆ’
‘ಇವಾಗಾ 3.30 ಗೆ ಬಿಟ್ರೆ, ಎರೌಂಡ್ 10-11 ಗೆ ಇರ್ತೀವಿ, ಬೈಕ್ ಹೈರ್ ಮಾಡಿದಿನಿ,’
‘ಮೋರ್ ಒವರ್ ನೀ ಅಲ್ಲಿಂದ ಬಂದಿದೀಯಾ, ಐ ಹ್ಯಾವ್ ಟು ರೆಸ್ಪೆಕ್ಟ್. ಗಿವ್ ಮಿ 20 ಮಿನಿಟ್ಸ್!! ಗೇಟ್ ಹತ್ರಾ ಇರು, ಅಲ್ಲಿ ಒಬ್ಬರನ್ನ ಮೀಟ್ ಮಾಡಿ ಬರಬೇಕು’ ರೂಮ್ ಗೆ ಓಡಿದಳು. ಎಲ್ಲಾ ಬ್ಯಾಗ್ ಲೆ ಇದ್ದಿದ್ದಕ್ಕೆ ಅಷ್ಟೇನು ಸಮಯ ಹಿಡಿಲಿಲ್ಲಾ. ಮತ್ತೆ ರೂಮನ್ನೊಮ್ಮೆ ಬಾತ್ ರೂಮ್‍ನ್ನೊಮ್ಮೆ ನೋಡಿ, ಲ್ಹಾನ್ಸಿ ರೂಮಿಗೆ ಹೋದಳು. ‘ hey I am leaving, catch you tomorrow at airport, my friend is here.. he planned to visit Kutch. I have to go.. sorry, you people enjoy shopping'
'ohh that handsome!! even I can give company to you people!!!' ಕಣ್ಣೊಡೆದು ಕಾಡಿಸಿದಳು
‘ Yahh!! but we are going on bike babe!!
Its ok.., just kidding!! enjoy.. finally .. someone is in your life.. happy for you baby!! be safe..ha.. btw you need something?' ಅವಳ ಪೊಕೆಟ್ ತಡವ ತೊಡಗಿದಳು
‘ shut up Lansi!! no. Thanx!!! he is just friend yar!! see ya tomorrow..' ಅವಳ ಕೆನ್ನೆ ಹಿಂಡಿ ಮುತ್ತಿಟ್ಟು ಹೊರ ಬಂದಳು.
‘ I can understand baby, keep rest for him!!!' ಕೂಗುತ್ತಿದ್ದಳು. ಅವಳು ಕೇರಳದವಳು. ಒಂದೊರ್ಷ ದಿಂದ ಜೊತೆ ಇದ್ದವರು.
ಬಿಲ್ಡಿಂಗ ನಿಂದ ಹೊರ ಬೀಳುತ್ತಿದ್ದಂತೆ ಡಾ. ಶ್ಯಾಮ್ ಸೆಹಘಲ್ ಸಿಕ್ಕರು. ‘ Dr. Shyam.. I was to meet you, lucky me .. met here only!! I need your suggestions for my PGs, planning to take oncology!! sorry.. forgot to ask, are you busy? on some work??'
Its ok pretty woman, I have sufficient time for you.. its a good choice.. you can join me in Kolkatta. Take my number. Contact any time, any suggestion. Concentrate on exams, competition is too high!!!' ಓದಬೇಕಾದ ಪುಸ್ತಕ, ಜರ್ನಲ್ ಗಳ ಹೇಳ ತೊಡಗಿದರು, ಮೊಬೈಲ್ ಲಿ ರೆಕಾರ್ಡ ಆಗುತ್ತಿತ್ತು. ಒಂದೆ ಸಮನೆ ಮೊಬೈಲ್ ವೈಬ್ರೇಟ್ ಆಗ ತೊಡಗಿತು. ‘Btw your presentation was fantastic. I think you need to attend important call. go ahead'
'No, its ok, Thank you, ..’ ಸೈಲೆಂಟ್ ಮೋಡ್ ಮಾಡಿದಳು. ಸ್ಕೋಪ್, ಆಪೊರ್ಚುನಿಟಿ, ಫುಚರ್ ಲೈನ್ ಆಫ್ ವರ್ಕ ಹೇಳಿದರು.
'Thanx alot sir!! I try my best. I am very kind of you'
' Its my duty. Lets meet then!! good luck young lady!!' ವಿದಾಯ ಹೇಳಿದರು. ವಯಸ್ಸು 60+, ಮನಸ್ಸು 20+!!. ಕಾಲಿಗೆ ಬೀಳ ಬೇಕು ಅಂತಾ ಅನ್ನಿಸಿತ್ತು, ಆದರೆ ಕೈ ಕುಲುಕಿ ಹೊರಟು ಹೋದರು. ನೋಡುತ್ತಾ ನಿಂತಳು. ಪಕ್ಕನೆ ಅಮಿತ ನೆನಪಾದ. ‘ಒಹ್ ಶಿಟ್!! ಎಷ್ಟೊಂದು ಮಿಸ್ಸಡ್ ಕಾಲ್!! ಟೈಮ್ ಬಾಪರೆ!! 4.’ ಕೊಲ್ಲಬಹುದಾ ಎನ್ನುತ್ತಾ ಫೋನ್ ಮಾಡಿದಳು
‘ ಡಾಕ್ಟ್ರೆ, ಪೇಶಂಟ್ ಆಗಿದಿನಿ, ಬೇಗ ಬನ್ನಿ’ ಶಾಂತವಾಗೆ ಹೇಳಿದ.
‘sorry, sorry ಬಂದೆ’ ಬೇಗ ಬೇಗ ಹೆಜ್ಜೆ ಹಾಕಿದಳು.
ನೋಡುತ್ತ ನಿಂತಿದ್ದವ, ‘ looking very hot’ ಅಂದ
‘weather!! not me!! ಹೊರಡೋಣ್ವಾ?’ ಬೈಕ ನಗರದಿಂದ ದೂರ ಸಾಗಿತು. ಸುತ್ತಲಿನ ಜಾಗ ನೋಡುತ್ತಾ, ಕೂತಳು. ಸೂರ್ಯ ಮುಳುಗುತ್ತಿದ್ದ, ಆಕಾಶ ಕೆಂಪಾಗಿತ್ತು, ಮೊದಲ ಬಾರಿ ಹುಡುಗನ ಹಿಂದೆ, ಲೊಂಗ ಡ್ರೈವ್, ಅದು ಪ್ರೀತಿಯ ಎನ್‍ಫೀಲ್ಡ ಮೇಲೆ. ಕನಸೋ ನಿಜಾನೋ ಗೊತ್ತಾಗದಂತಿತ್ತು. ಏನು ಮಾತಾಡಬೇಕೆಂದು ಅರಿಯದೆ ಆ ಕಡೆ ಈ ಕಡೆ, ನೋಡತೊಡಗಿದಳು. ‘ಹೇಗಿದೆ, ಫಸ್ಟ ಟೈಮ್ ಹೀಗೆ ಬರ್ತಿರೋದಾ?’
‘ಹುಂ’
‘ ಬಾಯ್ ಫ್ರೆಂಡ್?’
‘ನೋ’
‘ ಡ್ರಿಂಕ್ಸ್/ ಸ್ಮೋಕ್’
‘ ಐ ಎಮ್ ಡಾಕ್ಟರ್’
‘ಉಫ್!!! ನನ್ನ ಮೆಡಿಕಲ ಫ್ರೆಂಡ್ಸೆ ಚೈನ ಸ್ಮೋಕರ್ಸ್ ಎಂಡ ವ್ಹಾಟ್ ನಾಟ್!!’ ನಕ್ಕ.
‘ಮೆ ಬಿ, ಇವಾಗಾ ಅದು ಒಂತರಾ ಟ್ರೆಂಡ್ ಅಲ್ವಾ!!, ಡು ಯು?’
'ಯೆಸ್ ಐ ಡು, ಸ್ಮೋಕ್, ಡ್ರಿಂಕ್ಸ ಎಂಡ ವೀಡ್, ಆಗಾಗ ಕಂಪನಿ ಸಿಕ್ಕಾಗ ಮಾತ್ರ, ರೆಗ್ಯುಲರ್ ಅಲ್ಲಾ.’
‘ಗರ್ಲ ಫ್ರೆಂಡ್’
‘ಹಾ ಹಾ ಹ್ಹಾ, not now !!’ ಕತ್ತಲಾವರಿಸ ತೊಡಗಿತು. ಯಾಕೊ ವಿಚಿತ್ರ ಭಯ ಕಾಣಿಸಿತು. ಅಮಿತ ಅಷ್ಟು ಪರಿಚಿತನು ಆಗಿರಲಿಲ್ಲಾ, ಮನೆಯಲ್ಲೂ ಹೇಳಿಲ್ಲಾ, ಕತ್ತಲಾಗ್ತಿದೆ ಬೇರೆ. ಬಂದು ತಪ್ಪು ಮಾಡಿದ್ನಾ, ಎಂಬ ಭಯ ಕಾಡತೊಡಗಿತು. ಅಮ್ಮ ಕಾಲ್ ಬಂತು. ಅಮಿತ ಗಾಡಿ ನಿಲ್ಲಿಸಿದ. ಹಾಗೆ ತುಸು ದೂರ ಹೋದ. ಅಮ್ಮಂಗೆ ತಿರುಗಿ ಕಾಲ್ ಮಾಡಿದಳು. ಹಾಗೆ ವಿಷಯ ಸುತ್ತಿಸಿ ಮಾತಾಡಿದಳು. ಪುಣ್ಯಕ್ಕೆ ಎಲ್ಲಿದ್ದಿಯಾ ಎಂದು ಕೇಳಿ ಧರ್ಮ ಸಂಕಟಕ್ಕೆ ಸಿಕ್ಕಿಸಲಿಲ್ಲಾ, ಲ್ಹಾನ್ಸಿ ಬಗ್ಗೆ ಕೇಳಿ ಫೋನಿಟ್ಟರು. ‘ಅಮಿತ್..’ ‘ ಹಾ ಬಂದೆ’ ಸಿಗರೇಟ ಕೆಳಗೆ ಹಾಕಿ ಬೂಟಲ್ಲಿ ಹೊಸಕಿ, ಮೌತ್ ಫ್ರೆಶನರ್ ಹಾಕಿಕೊಂಡು ಬಂದ. ಅಷ್ಟೆಲ್ಲಾ ಕಷ್ಟ ಪಡೊ ಸುಖ ಅದರಲ್ಲಿ ಏನಿರತ್ತಪ್ಪಾ ಎಂದು ಕೊಂಡಳು. ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ಆ ಕತ್ತಲಲ್ಲಿ ಮುಖ ಕಾಣುವಂತೆ ಇರಲಿಲ್ಲ. ಅದಕ್ಕೆ ಇವಳ ಭಯ ಕಂಡಿರಲಿಲ್ಲ. ಹೊರಟರು, ಗೂಗಲ್ ಮ್ಯಾಪ್ ನೋಡುತ್ತ ಕುಳಿತಳು. ‘ಆರಾಮಿದಿಯಲ್ವಾ ಅನು? ಏನಾದ್ರು ಬೇಕಿದ್ರೆ ಹೇಳು’ ಎಂದ.
‘ಹಸಿವಾಗ್ತಿದೆ, ಮುಂದೆ 10 ಕಿ. ಮೀ ಗೆ ಪ್ಯೂರ್ ವೆಜ್ ಹೊಟೆಲ್ ಇದೆ, ನೀನು ಪ್ಯೂರ್ ವೆಜ್ ಅಲ್ವಾ?’ ಎಂದಳು.
‘ಆಗಿದ್ದೆ, ಒನ್ಸ ಅಪೊನೆ ಟೈಮ್.. ಇವಾಗಲ್ಲಾ. ಬೀಫ್, ಪೋರ್ಕ ತಿನ್ನಲ್ಲಾ ಅಷ್ಟೆ,’
‘ohh you changed lot , ಅದೆರಡು ಯಾಕೆ ಬಿಟ್ಟೆ..!!’ ಹೊಗಳಿಕೆನೋ ತೆಗಳಿಕೆನೋ ಇಬ್ಬರಿಗು ತಿಳಿಯದಾಗಿತ್ತು, ಕಾರಣ ಅವಳದು ಸ್ಟ್ರಿಕ್ಟ ನಿಯಮಗಳಿದ್ದವು, ಗಾಂಧಿ ಅನುಯಾಯಿ ಅಲ್ಲದಿದ್ದರೂ ಈಗ ಅಮಿತ ಹೇಳಿದ ಎಲ್ಲವೂ ಅವಳಿಂದ ದೂರ. ಅಂತವರಿಂದ ಅಂತರ ಕಾಯ್ದು ಕೊಂಡವಳಿಗೆ ಇವನ ಒಂದೊಂದು ಮಾತು ಬಿಸಿ ತುಪ್ಪವಾಗಿತ್ತು.
‘ha.. this change made lot to me, I started meeting new people, new culture..I never felt felt unhappy after this change !!'
ಈ ಎಲ್ಲಾ ಥಿಯರಿಗಳು ಅವಳ ಆಸು ಪಾಸು ಸುಳಿವಂತದ್ದಲ್ಲಾಗತ್ತು. ಆದರೂ ಸುಮ್ಮನೆ ‘ ಒಹ್ ನೈಸ್,’ ಎಂದಳು. ಡ್ರಗ್ಸ್ ತೆಗಿದುಕೊಳ್ಳುತ್ತಿರ ಬಹುದಾ? ಕೇಳಲಾ.. ಧೈರ್ಯ ಸಾಲದೆ ಸುಮ್ಮನಾದಳು.
‘ do you think this is bad? my parents do think, ಪಕ್ಕದ ಮನೆವ್ರಿಗೆ ತಾಜಾ ಸುದ್ದಿ..’
‘ not bad, ಅವರ ಕಂಟ್ರೋಲ್ ಲಿ ಇದ್ರೆ, ತಪ್ಪಿದ್ರೆ ಕಷ್ಟ, parents only care about your health '
‘ ನೋ ವಿಷಯ ಅದಲ್ಲಾ.. ಅವ್ರಿಗೆ ಹುಡುಗಿ ಹುಡಕಕ್ಕೆ ಕಷ್ಟ ಆಗತ್ತೆ ಅಂತಾ..’ ಕುಹಕವಿತ್ತು.
ಸುಮ್ಮನೆ ನಕ್ಕು ಬಿಟ್ಟಳು. ತಿಕ್ಕಾಡುವ ಮನಸಿರಲಿಲ್ಲಾ. ಅರ್ಥ ಮಾಡಿಕೊಳ್ಳುವವರಿಗೆ ಸ್ವಲ್ಪ ತಿಕ್ಕಾಡಿಯಾದರು ಅರುಹ ಬಹುದು. ತಮ್ಮದೆ ಸಿದ್ದಾಂತ ರೂಪಿಸಿಕೊಂಡವರಿಗೆ ತಿಳಿ ಹೇಳುವುದು ಕಷ್ಟ, ಅಷ್ಟಕ್ಕೂ ಇವನು ಇವಳ ಪೇಶಂಟ್ ಅಲ್ಲಾ. ‘ತಪ್ಪು ಮಾಡಿದೆ, ಯಾಕೆ ಬರಲೊಪ್ಪಿದೆ, ಅಮ್ಮಂಗೆ , ಏನು ಹೇಳದೆ ಬಂದಿರುವೆ, ಅಪ್ಪನಿಗೆ ತಿಳಿದರೆ?!! ನನಗೆ ಏನಾದರು ಆದರೆ, ಅದು ಬೇರೆ ರಾಜ್ಯದಲ್ಲಿ, ಈ ಹುಚ್ಚು ಧೈರ್ಯ ಎಲ್ಲಿಗೆ ಕೊಂಡೈವುದೊ’ ಎಂದು ಮೈ ಬೆವರತೊಡಗಿತು. ಚಿಲ್!! ಎಷ್ಟು ಅಂದರು, ಕೆಟ್ಟದ್ದನ್ನೆ ಮನಸು ಯೋಚಿಸುತ್ತಿತ್ತು. ಅಷ್ಟರಲ್ಲಿ ಹೊಟೆಲ್ ಬಂತು. ರೋಟಿ ಕಡಾಯಿ, ಗೆ ಹೇಳಿದರು. ಅಷ್ಟರಲ್ಲಿ ಅವನ ಅಮ್ಮನ ಕರೆ ಬಂತು, ಎಷ್ಟು ಶಾಂತವಾಗಿದ್ದ. ಅವನನ್ನೆ ದಿಟ್ಟಿಸುತ್ತ ಕುಳಿತಳು. ‘ ಅಮ್ಮ, ಚೆನ್ನಾಗಿದಿಯಾ?... ಫ್ರೆಂಡ್ ಜೊತೆ ಹೊರಗೆ ಊಟಕ್ಕೆ ಬಂದಿದಿನಿ, ನಾನು ಆರಾಮ್, ಹುಂ... ಹುಂ... ಹುಂ... ... ... ಸರಿ ಆಯ್ತಮ್ಮ, ಒಕೆ ಅಂದ್ನಲ್ಲಾ... ನಾಳೆ ಮಾತಾಡ್ತೀನಿ’ ಕಣ್ಣಲ್ಲಿ ಏನೋ ಹೇಳಲಾರದ ನೋವಿತ್ತು. ಆ ಕಡೆ ಮಾತು ಕೇಳುತ್ತಿರಲಿಲ್ಲ. ಸ್ವಲ್ಪ ಹೊತ್ತು ಮೌನವಾಗಿ ಎಲ್ಲೊ ಕಳೆದು ಹೋದ. ಏನು ಮಾತು ಹೊರಡಲಿಲ್ಲ. ಹಾಗೆ ಮೊಬೈಲ್ ಸ್ಕ್ರೋಲ್ ಮಾಡತೊಡಗಿದಳು. ಅವಳಿಗೆ ಅಮ್ಮಂದಿರ ಸಂಕಟ ಅರ್ಥವಾಗದೆ ಇರಲಿಲ್ಲ. ಆದರೆ ಏನು ತಿಳಿ ಹೇಳುವುದು ಇವನಿಗೆ.. ಅವನ ಈ ಬದಲಾವಣೆ ತನಗೆ ಸಹಿಸುವುದು ಕಷ್ಟವಾಗಿತ್ತು, ಅದು ಹೆತ್ತ ಕರುಳು.. ಜೊತೆಗೆ ಅಪ್ಪ, ಸಂಬಂಧಿಕರ ಉರಿ ಮಾತುಗಳು ಇರುತ್ತವೆ, ಉತ್ತರಿಸಲು ಆಗದೆ, ಕೇಳಲು ಆಗದೆ ಪಡುವ ಸಂಕಷ್ಟ ಯಾರ ಬಳಿ ತಾನೆ ಹೇಳಿಯಾರು. ‘sorry Amith all ok??!’
‘ ಗೊತ್ತಲ್ವಾ, ಅಮ್ಮಂಗೆ ಮಗಾ ಹಾಳಾದ, ದಾರಿ ತಪ್ಪಿದ, ಇನ್ನು ಏನೇನೊ ಚಿಂತೆ, ತಂಗಿ ಭವಿಷ್ಯ, ಎಲ್ಲಕ್ಕೂ ನಾನೇ ಕಾರಣ ಆಗಬೇಕಿದೆ. ಸೋಷಿಯಲ್ ನೆಟವರ್ಕ ಲಿ ಇರೋ ಪೋಸ್ಟ ತೆಗಿ ಬೇಕಂತೆ, ಹುಡುಗಿ ಹುಡುಕ್ತಿದಾರಂತೆ’ ಅವನ ಮುಖ ಸುಮ್ಮನೆ ನೋಡುತ್ತ ಕುಳಿತಿದ್ದಳು. ಏನು ತಾನೆ ಹೇಳಿಯಾಳು, ಅವನ ಅಮ್ಮ ಹೇಳುವುದು ತಪ್ಪಿಲ್ಲಾ, ಆದರೆ ನೀನು ಮಾಡ್ತಿರೋದು ತಪ್ಪು ಎನ್ನಲಾಗದ ಸ್ಥತಿ. ಖುಷಿಯಾಗಿ ಇರೋಕೆ ಬೇರೆನು ಮಾರ್ಗ ಇಲ್ಲವೇ? ಅರ್ಥವಾಗದ ಅನಕ್ಷರಸ್ಥನೇನಲ್ಲಾ. ಅದರಲ್ಲೂ ಪ್ರತಿಭಾವಂತ, ಇದುವರೆಗೆ ವಿದ್ಯಾರ್ಥಿವೇತನದಲ್ಲೇ ಓದಿದವ.
‘ಐ ಎಮ್ ಜಸ್ಟ 26 ಯಾರ್!! ನಂಗೆ ಈ ಮದುವೆ-ಗಿದವೆಲಿ ನಂಬಿಕೆ ನೆ ಇಲ್ಲಾ, ಅಷ್ಟಕ್ಕೂ ಇಷ್ಟ ಬೇಗಾ ನಾನ ರೆಡಿ ಇಲ್ಲಾ. ನಿಮ್ಮಲ್ಲಿ ಪ್ರೆಶ್ಶರ್ ಇಲ್ವಾ?’
‘ ಮನೆಗಿಂತ ಸಂಬಂಧಿಕರದೆ ಹೆಚ್ಚು, ಪಿಜಿ ಪ್ಲಾನ್ ಇದೆ ಅಲ್ವಾ... ಅಮ್ಮ ಸಿಕ್ರೇಟ್ ಆಗಿ ಸಪೋರ್ಟ ಮಾಡ್ತಿದಾರೆ, ಸೀಟ್ ಸಿಗಬೇಕಲ್ವಾ ವಿತ್ ಫೆಲೋಶಿಪ್?’
‘ನಿಂಗೆ ಸಿಗದೆ ಏನು!! ಮುಂದೆನು ಪ್ಲಾನ್?’
‘ತುಂಬಾ ಇದೆ, ಕ್ಯಾನ್ಸರ್ ರಿಸರ್ಚಲಿ ಮುಂದೆ ಹೋಗಬೇಕು, ಜೆರ್ಮನ್ ಲಿ ಹೈಯರ್ ಸ್ಟಡಿ, ವರ್ಡ ಟೂರ್... ಹೀಗೆ ಒಂದಿಷ್ಟಿದೆ.. ನಿಂದು?’
‘ ಗ್ರೇಟ್! ಗುಡ್ ಹಾ.. ಹುಡುಗಿರಲ್ಲಿ ಈ ಅಟಿಟ್ಯೂಡ್ ತುಂಬಾ ಕಡಿಮೆ, ಜಾಬ್, ಮದುವೆ, ಮಕ್ಕಳು ಅಂತಾ ಬೇಗ ಸೆಟ್ಲ ಆಗೋಕೆ ಟ್ರೈ ಮಾಡ್ತಾರೆ’
‘ ಹಾ ನಾಟ್ ಸೋ ಈಸಿ, ಮನೆ, ಸಮಾಜ ಎಲ್ಲರನ್ನ ಒಂತರಾ ಎದರು ಹಾಕ್ಕೊಂಡಂಗೆ. ಮದುವೆ ಆಕ್ಕೊಂಡು ಮಾಡು, ಎಷ್ಟು ಓದ್ತೀಯಾ ಓದಕೊ, ಆಮೇಲೆ, ಒಂದು ಮಗು ಆದ ಮೇಲೆ ಓದಕೊ ಅಲಾ ಅರಾಮಾಗಿ, ಮತ್ತೆ 2 ವರ್ಷಕ್ಕೆ, ಇನ್ನೊಂದು ಮಗು ಬೇಡ್ವಾ? ಒಂಟಿ ಆಗ ಬಿಡತ್ತೆ... ಮುಗಿಯೋದೆ ಇಲ್ಲಾ’ ಅಮಿತ ಜೋರಾಗಿ ನಕ್ಕ.
‘ದಿನ ಫೈಟ್ ನಡಿತಿರತ್ತೆ, ಮನಸಲ್ಲೆ, ಯಾರು ಸರಿ, ಯಾರು ತಪ್ಪು? ಸ್ವಲ್ಪ ಗಟ್ಟಿ ನಿಂತಿದಿನಿ. ನೋಡೊಣ ಇನ್ನೆಷ್ಟು ದಿನ ಸಾದ್ಯ ಎಂದು’.
‘ಹೌದು, ಹುಡುಗಿಯರಿಗೆ ವಯಸ್ಸಾಗತ್ತಲ್ವಾ...?’
‘ಹುಂ... ಹುಡುಗರಿಗೆ ಆಗಲ್ವೇನೊ...’
‘ ಆಗತ್ತೆ, ನಮ್ಮನ್ನ ನೋಡೋದೆ ಬೇರೆ ರೀತಿ, ವೆಲ್ ಸೆಟ್ಲಡ್, ಗುಡ್ ಸ್ಯಾಲರಿ, ಲಕ್ಷುರಿ ಲೈಫ್, ಹಾಗೆ ಹುಡುಗಿರಲ್ಲಿ ಮುಖ್ಯವಾಗಿ ನೊಡೋದು ಸೌಂದರ್ಯ, ವಯಸ್ಸು ’
‘ ಒಹೋ ಹಾಗಾ’ ಮನಸ್ಸಿಗೆ ಒಂದು ರೀತಿ ಚುಚ್ಚಿದಂತಾಯಿತು.
‘ಇದು ನನ್ನ ಒಪಿನಿಯನ್ ಅಲ್ಲಾ, ಜೆನರಲ್ ಆಗಿ ಸೊಸೈಟಿ ಏನ್ ಹೇಳತ್ತೆ ಅನ್ನೋದು ನಾ ಹೇಳಿದ್ದು. ನಾ ಮುಗಿಸಿ ಅಬ್ರೊಡ್ ಹೋಗ್ತೀನಿ. ಪಿಎಚ್‍ಡಿ ಗೆ. ಮದುವೆ ಆಗೋದು ಡೌಟು,’
‘ ಒಹ್ ಗುಡ್, ಆದರೆ ಏನು ಗೊತ್ತಾ, ಪರೆಂಟ್ಸ್ ಹೇಳೋದು ತಪ್ಪಿಲ್ಲಾ, ಅವರ ಜೆನರೆಷನ್ ತಿಂಕಿಂಗ ಹಾಗೆ ಇದೆ ಅಲ್ವಾ.. ಬ್ಯಾಲೆನ್ಸ ಮಾಡಬೇಕಾಗತ್ತೆ. ಹಾಗಂತ ನಂಗೂ ಸರಿಯಾಗಿ ಗೊತ್ತಿಲ್ಲಾ ಹೇಗೆ ಅಂತಾ. ಯಾಕೆಂದ್ರೆ ನನ್ನ ಕನಸುಗಳು ಅವರ ವಿಶ್ ಅಗೇನಸ್ಟೇ ಇದೆ. ಆದರೆ ಒಂದು ಹೇಳಲಾ? ಈ ಸ್ಮೋಕಿಂಗ, ಡ್ರಿಂಕ್ಸ ಲಿ ನೀನೇನು ಖುಷಿ ಸಿಗತ್ತೆ ಅಂತಿದಿಯಲ್ಲಾ, ಅದು ನಿಜಾ ಅಲ್ಲಾ, ನಿನ್ನ ಹೆಲ್ತ್ ಹಾಳಾಗತ್ತೆ. ನಿಂದು ರೆಸ್ಪೊನ್ಸಿಬಿಲಿಟಿ ಇರತ್ತಲ್ವಾ, ಅವರ ಬಗ್ಗೆ, ಅಮ್ಮ ಹೇಳೋದು ಯೋಚಿಸು?’ ಸಮಾಧಾನವಾಗಿ ಹೇಳಿದಳು. ತುಸು ಹೆಚ್ಚಿಗೆ ಮಾತನಾಡಿದೆನಾ ಎಂದು ಕೊಂಡಳು. ಏನೋ ಮೊದಲ ಬೇಟಿಯಿಂದಲೇ ಅವನ ಮೇಲೆ ಒಂದು ರೀತಿ ಅಭಿಮಾನ. ಅವನ ಕಣ್ಣಲ್ಲಿ 10 ವರ್ಷದ ಹಿಂದೆ ನೋಡಿದ ಹಠವೇ ಇಂದು ಇದೆ, ಏನಾದರೂ ಸಾಧಿಸಬಲ್ಲೇ ಎಂಬ ಹುಚ್ಚು. ದೇವರಲ್ಲಿ ಬೇಡಿದಳು, ಮತ್ತೆ ಮೊದಲಿನಂತೆ ಮಾಡು ಇವನನ್ನ ಎಂದು.
‘ ನಾನೀಗ ಕಡಿಮೆ ಮಾಡಿದಿನಿ, ನಂಗೆ ಚಟ ಇಲ್ಲಾ, ಇಲ್ದೆ ಇರಬಲ್ಲೆ. ಆದರೆ ಬಿಡು.. ಇವಾಗಾ ಬೇಡ..’
‘ನಾ ಆ ಅರ್ಥದಲ್ಲಿ ಹೆಳಿಲ್ಲಾ, ಇರಬಲ್ಲೆ ಅಂತಾದರೆ, ಮತ್ಯಾಕೆ ಅಂತಾ.’
‘ಆಗಾಗ ಫ್ರೆಂಡ್ಸ್ ಜೊತೆ ಅಷ್ಟೆ, ಸ್ಲೋಲಿ ಬಿಡ್ತಿನಿ.’
ಮತ್ತೆ ಹೇಳುವುದರಲ್ಲಿ ಅರ್ಥವಿಲ್ಲ ಎನಿಸಿತು. ‘ ದೆನ್ ಒಕೆ. ಐ ಲವ್ ಯುವರ್ ಗಿಟಾರ್, ಒಮ್ಮೆ ನಮಗೂ ಕೇಳಿಸೋ ಸೌಭಾಗ್ಯ ಕರುಣಿಸಿ.’
‘ಯಾ ಶ್ಯುರ್!! ಮಂಗಳೂರಿಗೆ ಹೋದ ಮೇಲೆ. ಬಂದೆ ಇರು’ ಪೊಕೆಟ್ ಗೆ ಕೈ ಹಾಕಿ ಹೊರಟ..
‘ಅಮಿತ್ ಇವಾಗಾ ಬೇಕಾ?’ ಮುಖ ಸೊಪ್ಪಗೆ ಮಾಡಿದಳು.
ನಗು ಬೀರಿ ಹೊರಟು ಹೋದ. ತನಗೆಲ್ಲಿ ಹುಚ್ಚು ಎನ್ನಿಸಿತು. ಮೌತ್ ಫ್ರೆಶನರ್ ಹಾಕಿ ಕೊಳ್ಳುತ್ತಾ 5 ನಿಮಿಷಕ್ಕೆ ಮರಳಿಬಂದ.
‘ಅಮಿತ್ ಹೊಟೆಲ್ ಬುಕ್ ಆಗಿದ್ಯಾ, ಮಾಡ್ಲಾ?’
‘ಆಗಿದೆ. ಹೊರಡೋಣ್ವಾ..’ ನಗುತ್ತಾ ಹೇಳಿದ. ಮತ್ತೆ ಕತ್ತಲೆ ಸೀಳುತ್ತಾ ಬೈಕ್ ಹೊರಟಿತು. ಸ್ವಲ್ಪ ಮನಸ್ಸು ಹತೋಟಿಗೆ ಬಂದಿತ್ತು, ಕಾರಣ ಗೊತ್ತಿಲ್ಲಾ. ಹೌದು.., ಒಮ್ಮೆ ಯೋಚಿಸಿದ್ದು ಹೌದು.. ಇದೆಲ್ಲಾ ತನ್ನ ಸಿಕ್ರೆಟ್ ವಿಶ್ ಲಿ ಇತ್ತು, ಅಷ್ಟು ಪರಿಚಿತನಲ್ಲದ ಹುಡುಗನ ಜೊತೆ ರಾತ್ರಿ ಕಳೆಯುವುದು, ನಾಟ್ ಫಾರ್ ಸೆಕ್ಸ್, ಜಸ್ಟ್ ಫಾರ್ ಚೇಂಜ್. ರಾತ್ರಿ ಲೋಂಗಡ್ರೈವ್, ಮಧ್ಯರಾತ್ರಿ, ಸಮುದ್ರದೆದುರು ಕುಳಿತು ಅಲೆಗಳ ಎಣಿಸುವುದು, ಅಪರಿಚಿತರ ಮದುವೆಯಲ್ಲಿ ಊಟ ಮಾಡುವುದು, ಹೀಗೆ ಇನ್ನು ಏನೇನೋ.. ಆದರೆ ಎಂದೂ ಧೈರ್ಯ ಬಂದಿರಲಿಲ್ಲ. ಕೂದಲು ಬಿಚ್ಚಿ, ಕೈ ಅಗಲಿಸಿ ಆಕಾಶ ದಿಟ್ಟಿಸಿದಳು, ಯಾವುದೋ ಲೋಕಕ್ಕೆ ಹೋದವಳಂತೆ, ತೇಲುತ್ತಿದ್ದಳು.
‘ಅಮಿತ್ ಗಾಡಿ ಓಡಸಕ್ಕೆ ತೊಂದರೆ ಆಗುತ್ತಾ’
‘ಆಫ್ ಕೋರ್ಸ ಎಸ್!!! ನನ್ನ ಬಿಟ್ಟು, ಆ ಅರುಣಂಗೆ ಹಗ್ ಮಾಡಿದಿಯಾ ಅಂದರೆ..’
‘ಓಹ್ ಮೊದಲೆ ಹೇಳೊದಲ್ವಾ, ಮನಸಲ್ಲೆ ಮಂಡಿಗೆ ತಿಂದರೆ ಹೇಗೆ ಗೊತ್ತಾಗತ್ತೆ? ಗಟ್ಟಿಯಾಗಿ ಹಿಡಕೊಂಡೆ ಕೂರ್ತಿದ್ದೆ’
‘ ಇದು ಫಸ್ಟ್ ಟೈಮ್? ಹೀಗೆ ಬರ್ತಿರೋದು?’
‘ಹುಂ, ಯು ಡ್ರೈವ್ ಟೂ ಗುಡ್’ ಅವನ ಡ್ರೈವಿಂಗ ತುಂಬಾ ಇಷ್ಟ ಆಗಿತ್ತು.
‘ಥ್ಯಾಂಕ್ಸ್, ಫಾಸ್ಟ ಅನ್ನಿಸ್ತಿಲ್ವಾ?’
‘ಇಲ್ಲಾ, ಇಷ್ಟೊತ್ತಲ್ಲಿ ನಿನ್ನ ಡ್ರೈವಿಂಗ ಮೇಲೆ ನಂಬಿಕೆ ಬಂದಿದೆ, ಇಟ್ ಬೀನ್ 350 ಕಿ ಮೀ. ಎಂಡ್, 4 ಆವರ್ಸ ವಿತ್ ಯು, ಐ ಕ್ಯಾನ್ ಡು ದಿಸ್ ನಾ’
‘Yes you can... and thanx again.. if you feel sleepy, let me know.. hold me properly’
‘Yess I am ’ ಬೈಕ್ ನಿಧಾನಿಸಿದ.
‘ಪುಟ್ ದಿಸ್’ ಎಂದು, ಬೆಲ್ಟ್ ಕೊಟ್ಟ.
‘I am not kid!!’
‘Yup! , if you were, i could hold you, but you are not !!!!..' ಅವನಿಗೆ ಗಟ್ಟಿಯಾಗಿ ಕಟ್ಟಿಕೊಂಡ. ಅವನ ಹಿಡಿದು ಕೊಳ್ಳಲು ಮುಜುಗರವಾಯಿತು. ಬುಜ ಹಿಡಿದು, ಬೆನ್ನಿಗೆ ಆತು ಮಲಗಿದಳು. ಕಣ್ಣು ಬಿಟ್ಟಾಗ, ಅವನ ಒಂದು ಕೈ ಇವಳ ತಲೆ ಹಿಡಿದಿದ್ದ, ಒಂದೇ ಕೈಲಿ ಗಾಡಿ ಬ್ಯಾಲೆನ್ಸ್ ಮಾಡಿದ್ದ. ‘ಅಮಿತ್. I got up!! sorry I troubled you lot!! .., ಅಯ್ಯೋ ಕೈ ನೋವಾಗಿಲ್ವಾ?’
‘ಇಲ್ಲಾ’ ಅಷ್ಟೆ ಅಂದ. ಮಾತು ಮುಂದುವರಿಸಲು ತಿಳಿಯಲಿಲ್ಲ. ಸಮಯ ನೋಡಿದಳು, 10.10 ಆಗಿತ್ತು. ಇನ್ನೇನು 15 ಕಿ ಮೀ. ಇತ್ತು.
‘ ಎಬೋಟ್ ಟು ರೀಚ್ ಅಲ್ವಾ?’
‘ಹುಂ, 20 ಮಿನಿಟ್ಸ ಟು ಗೊ’ ಅಂದ. ಯಾಕೊ ತುಂಬ ಅಪರಿಚಿತ ಎನ್ನಿಸತೊಡಗಿದ. ಈಗ ಸ್ವಲ್ಪ ಸಮಯದ ಮುಂಚೆ ಅಷ್ಟೆ ಒಂದಿಷ್ಟು ಹತ್ತಿರಾಗಿದ್ದ, ಮತ್ತೆ ಏನೋ ಲಯ ತಪ್ಪಿದ ಅನುಭವ. ಬಹುಶಃ ನಿದ್ದೆ ಗಣ್ಣಿನ ಪರಿಣಾಮ ಇರಬೇಕೆಂದು ಕೊಂಡು ಆಕಾಶ ನೋಡ ತೊಡಗಿದಳು. ಜನ ವಸತಿ ಇರುವ ಜಾಗ ಸನಿಹ ಬಂತು. ಎಲ್ಲಾ ನಿದ್ದೆಯಲ್ಲಿದ್ದಂತೆ ಇತ್ತು. ಭಯ ಎನ್ನಿಸಲಿಲ್ಲ. ಬ್ಲಾಗ್ ಲಿ ಓದಿದ್ದಳು. ಶಾಂತ ಸ್ಥಳ ಎಂದು. 10.30 ಬೈಕ್ ನಿಂತಿತು, ಸಮುದ್ರದ ಎದುರು, ಶಾಂತವಾಗಿತ್ತು. ಇವಳು ಬೆಲ್ಟ್ ತೆಗೆದು ಇಳಿದಳು. ಅಲ್ಲಿ ಹೊಟೆಲ್ ಕಾಣಲಿಲ್ಲ.
‘ಉಳಿಯೋದು ಎಲ್ಲಿ? ಹೊಟೆಲ್ ಎಲ್ಲೂ ಕಾಣ್ತಿಲ್ಲಾ.. ಮತ್ತೆ ವಾಪಸ್ ಹೋಗಬೇಕಾ?’
‘ಇಲ್ಲಾ, ಇಲ್ಲೆ. ಟೆಂಟ ಹಾಕ್ಕೊಂಡು. ರೆಂಟ್ ಗೆ ಸಿಗತ್ತೆ.’
‘ಆಂ.. ನಂಗೆ ಹೀಗೆಲ್ಲಾ ಒಬ್ಳೆ ಮಲಗಕ್ಕೆ ಭಯ ಆಗತ್ತೆ. ನಾನ ಹೊಟೆಲ್ ಗೆ ಹೋಗ್ತೀನಿ’ ಭಯದಿಂದ ಹೇಳಿದಳು. ದೇವರೆ ಇವತ್ತು ಯಾರ ಮುಖ ನೋಡಿ ಎದ್ದೆ? ಬೇಕಿತ್ತಾ ಇದೆಲ್ಲಾ?? ಮಲುಗಿದಳು.
‘ ಒಬ್ಳೆ ಹೇಗೆ ನಾನಿರ್ತಿನಲ್ಲಾ. ನಿಂಗೆ ಟ್ರಾವೆಲ್ ಮಾಡಿ ಅಭ್ಯಾಸ ಇದೆ ಅಂದುಕೊಂಡಿದ್ದೆ. ಟೆಂಟಲು ಉಳಿದಿದ್ದೆ ಅಲ್ವಾ? ಮತ್ತೇಕೆ ಭಯ?’
ಅಲ್ಲಿ ನಾ ಹುಡುಗರ ಜೊತೆ ಯಾವತ್ತು ಶೇರ್ ಮಾಡಿರಲಿಲ್ಲ. ಎಷ್ಟ ಕೂಲ್ ಆಗಿ ಹೇಳ್ತಿದಾನೆ. ನಾನು ಒಂದು ರಾತ್ರಿ ಒಬ್ಬ ಹುಡುಗನ ಜೊತೆ ಕಳದೆ ಅಂದರೆ, ಏನೇನೊ ಆಡ್ಕೋತಾರೆ. ಯಾರಿಗಾದ್ರು ಗೊತ್ತಾದರೆ, ಅದರಲ್ಲೂ ಅಪ್ಪಾ ಅಮ್ಮ ರಿಯಾಕ್ಷನ್ ಹೇಗಿರತ್ತೆ.. ಮೈಯೆಲ್ಲಾ ತಣ್ಣಗಾದ ಅನುಭವ.. ತಾನು ಈ ಭಯದ ಕೊಂಡಿಗಳನ್ನ ಕಳಚಿ, ಸ್ವತಂತ್ರವಾಗೋಕೆ ಬಯಸ್ತಾ ಇದ್ದಿದ್ದು ಹೌದು, ಹಾಗಾದ್ರೆ ಯಾರು ಏನು ಅಂದಕೊತಾರೆ ಅನ್ನೋದು ತನಗೆ ಮುಖ್ಯ ಆಗ ಬಾರದು. ಕನಸಿತ್ತು ನಿಜಾ, ನನಸಾಗಬೇಕಂದ್ರೆ ಅದರ ಪ್ರತಿಫಲ ಎದುರಿಸೋಕು ತಾನೆ ಸಿದ್ದ ಆಗಿರಬೇಕು. ಆದರೆ ತನ್ನ ಮನಸ್ಸು, ಮುಂದೆ ಜರುಗಬಹುದಾದ ಎಲ್ಲಾ ಸಂಗತಿಗಳನ್ನ ಜೀವನದಲ್ಲಿ ಗುಣಾತ್ಮಕವಾಗಿ ತೆಗೆದುಕೊಳ್ಳುವಷ್ಟು ಪರಿಪಕ್ವವಾಗಿದೆಯೆ?
‘ಹೇ.. ಎಲ್ಲಿ ಕಳೆದು ಹೋದೆ. ಯಾವ ಕಾಲದಲ್ಲಿದಿಯಾ. ಡೊಂಟ ವರಿ, ಇಲ್ಲಿ ಯಾರು ಹುಡುಗಾ ಹುಡುಗಿ ಟೆಂಟ ಹಾಕಿ ಮಲಗಿದಾರೆ, ಮದವೆ ಆಗ್ದೆ ಅಂತಾ ರೈಡ್ ಮಾಡಿ, ನಿನ್ನ ಡಾಕ್ಟರಶಿಪ್ ಕ್ಯಾನ್ಸಲ್ ಮಾಡ್ಸಿ ಜೈಲ್ಗೆ ಹಾಕಲ್ಲಾ. ಟ್ರಸ್ಟ ಮಿ, ಇಟ್ ಇಸ್ ಒನ್ ಆಫ್ ದ ಕೂಲೆಸ್ಟ್, ಸೇಫೆಸ್ಟ್ ಬೀಚ್ ಇನ್ ಇಂಡಿಯಾ.. ಇಲ್ಲಿವರೆಗೆ ಬಂದಿದಿಯಾ, ನನ್ನನ್ನೂ ನಂಬತೀಯಾ ಅಂದಕೊತೀನಿ.’
ಅವನಿಗೆ ಹೇಗೆ ಅರ್ಥ ಮಾಡಿಸೋದು, ತನಗೆ ತನ್ನ ಮನಸ್ಸಿಗೆ ವಿರುದ್ಧವಾಗಿ ನಡೆದು, ಮನಸ್ಸು ನೋಯಿಸುವುದು ಇಷ್ಟ ಇಲ್ಲ ಎಂದು. ಯಾಕೆಂದರೆ ಅದು ತೋರಿಕೆಗೆ ಪ್ರಾಕ್ಟಿಕಲ್ ಎನ್ನಿಸಿದರು, ತುಂಬಾ ಭಾವುಕ ಜೀವಿ. ಏನಾದರೂ ಆಗಿ ಇವನ ಮೇಲೆ ಪ್ರೀತಿ ಆದರೆ, ಯಾರು ಹೊಣೆ. ಇವನು ಮದುವೆ ಆಗಲಾರೆ ಎಂದು ಜಾರಿಕೊಳ್ಳುವ, ತನ್ನ ಪಾಡು. ಯಾಕೆ ಬೇಕಿತ್ತು, ಹೋಗುವ ಮಾರಿ ಮನೆ ತುಂಬಿಸಿಕೊಂಡು ಚೆಂದ ನೋಡುವ ಪರಿ.
‘ ಬೇಡ್ವಾ? ಹೊಟೆಲ್ ಗೆ ಹೋಗೊದಾ? ಟ್ರಸ್ಟ ಮಿ ಇಟ್ ವಿಲ್ ಬಿ ಮೆಮೊರೆಬಲ್ ನೈಟ್ ಎವರ್.. ಫೊರ್ಗೆಟ್ ಎವೆರಿತಿಂಗ್, ಒನ್ಸ ಲೀವ್ ಯುವರ್ ಲೈಫ್.. ಯುವರ್ ಡಿಸಿಷನ್ ಇಸ್ ಫೈನಲ್..’
ಧೈರ್ಯ ಮಾಡಿ ಇದ್ದು ಬಿಡಲಾ..? ನನ್ನ ಮನಸ್ಸು ನನ್ನ ಹಿಡಿತದಲ್ಲಿದ್ದರೆ, ಯಾರು ಏನು ಮಾಡಲಾರರು, ಸಮಾಜ... ಎಲ್ಲ ತೊರೆವ ಮನಸ್ಸಿಗೆ ಇದು ಆಹುತಿಯಾದರೆ ಆಗಲಿ. ನೀರಿಗೆ ಇಳಿದಾಗಿದೆ. ರುಚಿಯೂ ನೋಡಬೇಕು, ಈಜಲೂ ಬೇಕು, ಮುಂದಿನದು ಕಂಡವರಾರು. ಈ ದಿನ ಮತ್ತೆ ಬರದು, ನನ್ನ ಮನಸ್ಸಿಗೆ ತಪ್ಪೆನಿಸುತ್ತಿಲ್ಲಾ, ಸಮಾಜದ ದೃಷ್ಟಿ ಏನೆ ಆಗಲಿ, ನಾನು ಹೇಳಿದರೆ ತಾನೆ ತಿಳಿವುದು.
‘ಒಕೆ..’ ಸಮುದ್ರ ನೋಡುತ್ತಾ ಹೇಳಿದಳು. ಅಲ್ಲಿಯ ವಿಶೇಷತೆಯೆ ಅದು, ಸಮುದ್ರ ಆರ್ಭಟಿಸುವುದಿಲ್ಲಾ, ನದಿಯಂತೆ ಶಾಂತ. ಸಣ್ಣ ಅಲೆಗಳು, ರಭಸವಿಲ್ಲ. ಟೆಂಟ ತಂದ, ಅಲ್ಲೆ ಕಣ್ಣಳತೆ ದೂರದಲ್ಲಿ ಇಟ್ಟುಕೊಂಡಿರುತ್ತಾರೆ. ನಾಲ್ಕೈದು ಟೆಂಟಗಳಿದ್ದವು ಪಕ್ಕದಲ್ಲಿ, ಒಬ್ಬಳು ವಿದೇಶಿ ಮಹಿಳೆ, ಹೊರ ಬಂದು ಕುಡಿಯುತ್ತಾ ಕುಳಿತಿದ್ದಳು, ‘ಹಾಯ್, ನವ್ ಯು ಕೇಮ್’ ಎಂದಳು. ಡ್ರಿಂಕ್ಸ ಕೇಳಿದಳು. ‘ ಯಾ!! ನೊ ಥ್ಯಾಂಕ್ಸ್, ವಿಚ್ ಕಂಟ್ರಿ?’
‘ಫ್ರಾನ್ಸ್.. ಯುವರ್ ಬೊಯ್ ಫ್ರೆಂಡ್?’ ಅಮಿತ್ ಕಡೆ ತೋರಿ ಕೇಳಿದಳು.
‘ನೋ.. ವಿ ಆರ್ ಜಸ್ಟ ಫ್ರೆಂಡ್ಸ್’ ಸಮುದ್ರ ನೋಡುತ್ತ ನಕ್ಕಳು.
‘ಅನು, ಇಟ್ಸ ರೆಡಿ, ಲಗೇಜ್ ಇಡು.’
‘ಹಾಂ, ವಾವ್ ಅಮೇಜಿಂಗ್, ಲೈಟ್ ಇದೆ!! ವೇಟ್ ಅ ಮಿನಿಟ್, ಐ ಎಮ್ ಚೇಂಗಿಂಗ’ ಅವನಾಗಲೆ ಆ ಮಹಿಳೆ ಹತ್ತಿರ ಮಾತಿಗೆ ಇಳಿದಿದ್ದ. ಬಹುಶಃ ಡ್ರಿಂಕ್ಸ ತಗೋತಿರಲು ಬಹುದು, ಎಲ್ಲಾ ಜೋಡಿಸಿ, ನೈಟ್ ಡ್ರೆಸ್‍ಲಿ ಹೊರ ಬಂದಳು. ಅವರಿಬ್ಬರು ಜೋರ್ ಪಾರ್ಟಿ ಮಾಡಿತ್ತಿದ್ದರು.
‘ ಅಮಿತ್, ವಾಶ್ ರೂಮ್ ಗೆ ಹೋಗಿ ಬರ್ತೀನಿ, ಟಿಲ್ ಎಂಜೊಯ್ ಯುವರ್ ಕಂಪನಿ’ ಎಂದು ಹೊರಟಳು.
‘ ವೇಟ್, ಐ ವಿಲ್ ಕಮ್’ ಜೊತೆ ಬಂದ. ಟೂರಿಸ್ಟ ಜಾಗದಲ್ಲಿ ಇಷ್ಟು ಚೊಕ್ಕದಾದ ವಾಶ್ ರೂಮ್ ಮೊದಲಬಾರಿ ನೋಡಿದ್ದು, ವಾಪಸ್ಸಾದಾಗ ಹೊರಗೆ ಇದ್ದ ಕಲ್ಲು ಬೆಂಚಲಿ ಕೂತಿದ್ದ.
‘ ಅಮಿತ, ನಮ್ಮ ದೇಶದಲ್ಲೆ ಇದೀನಾ ಅನ್ನಿಸ್ತು, ನೀಟ್ ಇಡಕ್ಕು ಬರತ್ತೆ ಅಂತಾ ಆಯ್ತು ಟೊಯಲೆಟ್ ಗಳನ್ನಾ.’ ನಗುತ್ತಾ ಹೊರಬಂದಳು.
‘ಹೌದು, ಜನ ಬದಲಾಗಿದಾರೆ’
‘ ಹೌವ್ ಮಚ್ ಯು ಹ್ಯಾಡ್?’ ನಗುತ್ತಾ ಕೇಳಿದಳು. ಅವಳನ್ನೊಮ್ಮೆ ಅಡಿಯಿಂದ ಮುಡಿವರೆಗೆ ದಿಟ್ಟಿಸಿ
‘ ಡೋಂಟ್ ವರಿ, ಐ ಎಮ್ ಅಂಡರ್ ಕಂಟ್ರೋಲ್, ಒನ್ಲಿ ಫ್ಯು ಸಿಪ್ಸ್..’ ಟೆಂಟ ಇರುವ ಜಾಗಕ್ಕೆ ಬಂದರು.
‘ಗುಡ್ ನೈಟ್ ಲಾರಾ, ನೈಸ್ ಟೈಮ್ ವಿತ್ ಯು’ ಎಂದು ಕೈ ಮಾಡಿದ.
‘ ಹ್ಯಾವ್ ಫನ್ ಡಿಯರ್ಸ್, ಗುಡ್ ನೈಟ್’ ಅವಳು ಟೆಂಟ ಒಳಗೆ ಹೋದಳು.
‘ಫುಲ್ ಮೂನ್ ಡೇ, ಮೊದಲೆ ಪ್ಲಾನ್ ಮಾಡಿದ್ದಾ?’
‘ಪ್ಲಾನ್ ಮಾಡಿ ಮಾಡಕ್ಕೆ ಇದೇನು ನಮ್ಮ ಹನಿಮೂನಾ, ಅಕ್ಸಿಡೆಂಟ್, ಮೆ ಬಿ ಅವರ್ ಲಕ್’ ಮಾತು ಅಲ್ಲಿಗೆ ನಿಂತಿತು. ದಡಕ್ಕೆ ಹೋದರು.
‘ನೀರಿಗೆ ಇವಾಗಾ ಬೇಡ.. ಮತ್ತೆ ಕಾಲು ತೊಳೆಯಕ್ಕೆ ಅಲ್ಲೆ ಹೋಗ ಬೇಕಾಗತ್ತೆ. ಇಲ್ಲೆ ದಡದಲ್ಲೆ ಕೂರೋಣಾ,’ ಅಲ್ಲೆ ಕುಳಿತರು.
‘ಏನಾದರು ತಿಂತಿಯಾ?’
‘ಇಲ್ಲಾ, ನಿಂಗೆ ಬೇಕಾ, ಕುಕೀಸ್ ಇದೆ.. ನಿಂಗೆ ನಿದ್ದೆ ಬರ್ತಿಲ್ವಾ, ಸುಸ್ತಾಗಿರತ್ತೆ’
‘ಬೇಡಾ, ಹಸಿವಿಲ್ಲಾ... ಇದೆಲ್ಲಾ ಸುಸ್ತಾಗೊ ಡ್ರೈವಾ?’ ಇಬ್ಬರೂ ಅಲೆ ನೋಡುತ್ತಾ ಕೂತರು. ಅಲೆಗಳು ಬೆಳದಿಂಗಳಿಗೆ ಸುಂದರವಾಗಿ ಕಾಣುತ್ತಿದ್ದವು. ‘ ನಿನ್ನ ಇನ್ಸಟಾ ಪೋಸ್ಟ್‍ಲಿ ಟೆಂಟ್ ಪಿಕ್ ನೋಡಿದ್ ನೆನಪು, ನಾರ್ಥ ಇಂಡಿಯಾ ಅನ್ನಿಸುತ್ತೆ ಅಲ್ವಾ?’
‘ಓ ಹ್.. ಅದಾ.. ಲಾಸ್ಟ ಟೈಮ್ ಕಾನ್ಫರೆನ್ಸ್ ಗೆ ಮೇಘಾಲಯ ಹೋಗಿದ್ದೆ, ಅಲ್ಲಿ ನನ್ನ ಫ್ರೆಂಡ ಪಿಜಿ ಮಾಡ್ತಿದಾಳೆ. ಅಲ್ಲಿ ಟ್ರೆಕ್ಕಿಂಗ್ ಹೋಗಿದ್ವಿ, 4 ಡೆಸ್!! ಇಟ್ ವಾಸ್ ವಂಡರಫುಲ್ ಎಕ್ಸಪಿರಿಯನ್ಸ್.. ಮತ್ತೆ ಹೋಗಬೇಕು, ಅವಳು ಅಲ್ಲಿಂದ ಬರೊದ್ರೊಳಗೆ... ನೀ ಬೇಕಿದ್ರೆ ಬಾ, ಹಾ.. ನಿಂಗೆ ವೈನ್ ಗೆ ಕಂಪನಿ ಸಿಗತ್ತೆ..’
‘ ಹಾ ಹಾ ಹಾ.. ಅಲ್ಲಿ ವೈನ್!! ನೊಡೋಣ, ಆದರೆ ಬರ್ತಿನಿ..’ ಅವಳ ಕಾಲ ಮೇಲೆ ಮಲಗಿದ. ಆಕಾಶ ನೋಡುತ್ತಾ
‘ ಯು ಆರ್ ರಿಯಲಿ ಸ್ವೀಟ್ ’ ಎಂದ, ಕೆನ್ನೆ ಹಿಂಡಿ.
‘ ಯಾಕೆ? ’
‘ ಎಲ್ಲದರ ಉತ್ತರ ಕೇಳಲು ಬಾರದು, ಹುಡುಕಲು ಬಾರದು ’
‘ ಹುಂ ಸರಿ ’ ಅವನ ತಲೆ ಸವರುತ್ತ ಅಲೆಗಳ ಎಣಿಸುತ್ತಿದ್ದಳು.
‘ ಅಮಿತ್, ನಿದ್ದೆ ಬರ್ತಿದೆ, ಒಳಗೆ ಹೋಗೋಣ್ವಾ ’ ಯಾವುದೆ ಉತ್ತರ ಬರಲಿಲ್ಲ.
‘ ಅಮಿತ್ ........’ ತಲೆ ಅಲುಗಾಡಿಸಿದಳು. ಕಣ್ಣು ಬಿಟ್ಟ.
‘ಒಹ್, ನಿದ್ದೆ ಹತ್ತಿತ್ತಾ... ಹುಂ, ಒಳಗೆ ಹೋಗೋಣಾ,’ ಎದ್ದು ಒಳ ಹೋದರು. ಏರ್ ಬ್ಯಾಗ್ ಬೆಡ್ ಇತ್ತು. ಬೆಡ್ ಶೀಟ್ ಫ್ರೆಶ್ ಇದ್ದಂಗೆ ಇತ್ತು, ಆದರೂ ಬ್ಯಾಗಲಿದ್ದ ಚಾದರ ತೆಗೆದಳು. ಹಲವು ದ್ವಂದ್ವಗಳು ತಲೆಯಲ್ಲಿ ತಿರುಗುತ್ತಿತ್ತು. ಏನಾದ್ರು ಮಾಡಿದ್ರೆ, ಏನಾದ್ರು ಅಂದ್ರೆ... ಅದೇ... ಇಲ್ಲಾ ನನ್ನ ವಿರುದ್ಧ ನಡೆದುಕೊಳ್ಳಲಾರ, ಇಲ್ಲ ನಾನು ಬಿಡಲಾರೆ. ಬೆಡ್‍ನ ಒಂದು ಮೂಲೆ ಹಿಡಿದು ಮಲಗಿದಳು. ಏನೋ ಹೇಳಲಾಗದ ತಳಮಳ. ಅವನು ಹಾಯಾಗಿದ್ದ. ಸುಖಪುರುಷ. ‘ರಗ್ ಬೇಕಾ,’ ಕೇಳಿದ. ‘ ಹಾಂ.. ಬೇಡಾ..’ ಎಂದಳು. ‘ ಹೇ ಫೀಲ್ ಫ್ರೀ, ನಾನೇನು ತಿನ್ನಲ್ಲಾ ನಿನ್ನಾ, ಆರಾಮ್ ಮಲಗು’ ಎನ್ನುತ್ತಾ ಪ್ಯಾಂಟ್ ಕಳಚಿ ನೈಟ್ ಡ್ರೆಸ್ ಹಾಕತೊಡಗಿದ. ಈ ಹುಡುಗರಿಗೆ ಮರ್ಯಾದೆ, ನಾಚಿಕೆ ಯಾಕೆ ಇರುವುದಿಲ್ಲವೋ, ಎಲ್ಲಾ ಹುಡುಗಿಯರಿಗಷ್ಟೇನಾ, ಸೌಜನ್ಯಕ್ಕಾದರು ಹೇಳಬಹುದಿತ್ತು, ಎಂದು ಕೊಳ್ಳುತ್ತಾ, ‘ ಹುಂ ‘ ಎನ್ನುತ್ತಾ ಆ ಕಡೆ ತಿರುಗಿ ಮಲಗಿದಳು. ಲೈಟ್ ಆರಿಸಿದ, ಆದರೂ, ಬೆಳದಿಂಗಳು ಅಲ್ಪ ಸ್ವಲ್ಪ ತೂರಿ ಬರುತ್ತಿತ್ತು. ‘ನಿದ್ದೆ ಬಂತಾ’ ಇವಳ ಕಣ್ಣು ಮೇಲೆ ಕೈ ಆಡಿಸುತ್ತಾ ಕೇಳಿದ. ‘ ದಾರಿಲಿದೆ.’ ಕೈ ತಪ್ಪಿಸಿಕೊಂಡು ಕೆಳಗಿರಿಸಿದಳು. ಮೊದಲೇ ಒಬ್ಬಳೆ ಮಲಗಿ ರೂಢಿ, ಮೈಗೆ ಬೆರೊಬ್ಬರ ಉಸಿರು ತಾಗಿದರು ಮಲಗುವುದು ಕಷ್ಟವಾಗಿತ್ತು ಅಂತಹುದರಲ್ಲಿ, ಹುಡುಗ ಜೊತೆಗೆ !!. ಅವಳ ಕೈ ತೆಗೆದುಕೊಂಡು ತುಟಿಗೆ ತಾಗಿಸಿಕೊಂಡ. ಕೈ ಎಳೆದು ಕೊಂಡಳು. ತಲೆ ನೇವರಿಸಿದ, ‘ ನಿನ್ನ ಕೂದಲು ಎಷ್ಟು ಚೆನ್ನಾಗಿದೆ, ಎಷ್ಟು ಸೊಫ್ಟ್!!’ ಮುಖದ ಮೇಲೆ ಇದ್ದ ಹೆರಳು ತೆಗೆದು, ಹಣೆ ತೀಡತೊಡಗಿದ. ತಲೆ ನೋವಿತ್ತೊ ಎನೋ ಹಾಯ್ ಎನ್ನಿಸತೊಡಗಿತು. ‘ಐ ಲವ್ ಯು ಅನು’ ಕಿವಿಯಲ್ಲಿ ಹೇಳಿ ಚುಂಬಿಸಿದ. ಮೈಯಲ್ಲಿ ಒಮ್ಮೆ ವಿದ್ಯುತ್ ಸಂಚಾರದ ಅನುಭವ. ನಿಜವಾ!!, ತಾನೇನು ಹೇಳಲಿ, ಸುಮ್ಮನೆ ತನ್ನ ಕೆರಳಿಸಲು ಹೇಳಿರಬಹುದೆ. ತಿರುಗಿ ಅವನ ಮುಖನೋಡಿದಳು. ಅವಳನ್ನೇ ದಿಟ್ಟಿಸುತ್ತಿದ್ದ. ಹಣೆಯ ಮೇಲೆ ಚುಂಬಿಸಿದ. ‘ಸ್ಟೊಪಿಟ್ ಅಮಿತ್’ ಅವನನ್ನೇ ದಿಟ್ಟಿಸಿದಳು. ‘ ಜಸ್ಟ ಕಿಸ್ಸಿಂಗ್, ಇಸ್ ಇಟ್ ಕ್ರೈಮ್?’ ‘ಐ ಡೋಂಟ ನೊ.. ಬಟ್ ಐ ಡೋಂಟ್ ವಾಂಟ್!! ಎಂಡ್ ಐ ನೆವರ್ ಡಿಡ್ ಬಿಫೊರ್’ ‘ ಓಹ್ ಕಮಾನ್, ಚಿಲ್, ಲೆಟ್ ಮಿ ಟೀಚ್ ಯು’
ತುಟಿ ಬಿಗಿ ಹಿಡಿದಿದ್ದರು, ಮೇಲ್ದುಟಿಯನ್ನ ತನ್ನ ಬಾಯಳಗೆ ತೆಗೆದುಕೊಂಡ. ಅವನ ನಾಲಿಗೆ ಅವಳ ನಾಲಿಗೆ ಜೊತೆ ಆಡ ತೊಡಗಿತು. ಮೈಲಿ ಏನೊ ಹೊಸ ಸಂಚಾರದ ಅನುಭವ, ಆದರೆ ದುಖಃ ಉಮ್ಮಳಿಸಿ ಬಂತು. ಅವಳ ಮೊದಲ ಮುತ್ತು ಕಾದಿಟ್ಟಿದ್ದಳು, ಬರುವ ರಾಜಕುಮಾರನಿಗೆಂದು, ಒಪ್ಪಿಗೆಯಿಲ್ಲದೆ ಕೊಟ್ಟಿದ್ದಕ್ಕೆ ಸಿಟ್ಟು ಬರುತ್ತಿತ್ತು. ದೇಹ ಮನಸ್ಸಿನ ಹತೋಟಿ ತಪ್ಪಿದ ಅನುಭವ, ತಕ್ಷಣ ತಿರುಗಿ ಅವನ ಎದೆಯಲ್ಲಿ ಮುಖ ಹುದುಗಿಕೊಂಡಳು. ತಿರುಗಿ ಅವನ ಹಣೆಗೆ ಚುಂಬಿಸ ಬಯಸಿದಳು. ಮತ್ತೆ ಅವನನ್ನ ಬಡಿದೆಬ್ಬಿಸಿದರೆ, ಬೇಡ ಎಂದು ಸುಮ್ಮನಾದಳು. ಪ್ರೀತಿ ಬಲವಂತಕ್ಕೆ ಆಗಲಾರದು ಎಂದು ಕೂಗಿ ಹೇಳಬಯಸಿದಳು. ಅವನು ಅವಳ ಬೆನ್ನು ತಲೆ ಸವರಿದ, ಮಗುವಂತೆ, ಮಲಗಿದಳು ಹಾಗೆ, ಎದೆ ಬಡಿತ ನಿಧಾನಿಸಿತು. ಮೊದಲ ಬಾರಿಗೆ ಬೆರೊಬ್ಬರ ಬೆವರು, ಎಂಜಲು ಅಸಹ್ಯ ಎನಿಸಲಿಲ.್ಲ ಹಾಗೆ ತಟ್ಟುತ್ತ ನಿದ್ದೆ ಹೋದ. ಇವಳು ಕೈಬಿಡಿಸಿಕೊಂಡು ಸರಿಯಾಗಿ ಮಲಗಿದಳು. ಮತ್ತೆ ಹಿಂದಿನಿಂದ ಹಿಡಿದು ಕತ್ತಲ್ಲಿ ಮುಖವೂರಿ ಚುಂಬಿಸಿದ. ದೇಹವೊಮ್ಮೆ ಬಲವಾಗಿ ಕಂಪಿಸಿತು. ‘ ಪ್ಲೀಸ್ ಅಮಿತ್ ಮಲಗು’ ಎಂದು ಕಣ್ಮುಚ್ಚಿದಳು. ಬಳಿಕ ಯಾವಾಗ ನಿದ್ದೆ ಹತ್ತಿತೊ ತಿಳಿಲಿಲ್ಲ. ಮೊಬೈಲ್ ಅಲಾರಾಂ ಆದ್ದÀಕ್ಕೆ ಎಚ್ಚರಾಗಿತ್ತು. ಕಣ್ಣು ಬಿಟ್ಟರೆ, ಅವನ ತೋಳುಗಳನ್ನಾ ದಿಂಬಾಗಿಸಿಕೊಂಡಿದ್ದಳು. ಅವನಿಗೆ ಎಚ್ಚರಾಗುವ ಮುನ್ನ ಮೊಬೈಲ್ ಸೈಲೆಂಟ್ ಮಾಡಿ ಸೈಲೆಂಟ್ ಮೋಡ್ ಗೆ ಹಾಕಿದಳು. ಸಮಯ 6.30 ಆಗಿತ್ತು. ಮಗುವಂತೆ ಮಲಗಿದ್ದ ಅವನ ಹಣೆಗೆ ಮೆಲುವಾಗಿ ಮುತ್ತಿಟ್ಟಳು.
‘ಇಷ್ಟು ಬೇಗ ಎದ್ರಾ ಡಾಕ್ಟ್ರೆ..’ ಅವನು ಬಳಸಿದ ಹೊಡೆತಕ್ಕೆ, ಅವನ ಮೇಲೆ ಬಿದ್ದಳು.
‘ ಬಿಡು ಅಮಿತ,.. ಹುಂ.. ಸನ್ ರೈಸ್ ನೋಡೋಣಾ ಅಂತಾ. ನೀನು ಏಳು’
‘ ನೀನು ಒಂದು ಕಿಸ್ ಕೊಡು, ಬಿಡ್ತೀನಿ ಕೂಡ, ಏಳ್ತೀನಿ ಕೂಡ.’
‘ಬ್ರಷ್ ಕೂಡ ಮಾಡಿಲ್ಲಾ, ಬಿಡು’ ತಪ್ಪಿಸಿಕೊಳ್ಳ ನೋಡಿದಳು, ಆದರೆ ಅಲುಗಾಡಲು ಆಗಲಿಲ್ಲ. ಅವನ ಬಿಗಿತ ಇಷ್ಟು ಗಟ್ಟಿಯಾ, ಎಂದು ಕೊಂಡಳು.
‘ಬಿಟ್ರೆ ಕಂಡಿತಾ ಕೊಡ್ತೀನಿ, ಪ್ರೊಮಿಸ್’ ಎಂದಳು. ಕಣ್ಣು ಬಿಟ್ಟ. ಅಷ್ಟು ಹತ್ತಿರದಿಂದ ನೋಡಿದಾಗ, ಅವನ ಕಂಗಳಲ್ಲಿ ಪ್ರೀತಿ ಹರಿವಂತೆ ಕಂಡಿತು.
ಹಣೆಗೆ ಚುಂಬಿಸಿದಳು. ‘ಉಹುಂ’ ಎಡ ಕೆನ್ನೆಗೆ ಕೊಟ್ಟಳು, ಮತ್ತೆ ‘ಉಹುಂ’ ಬಲಗೆನ್ನೆಗೆ ಇಟ್ಟಳು. ‘ಉಹುಂ’
‘ಇಲ್ಲೇ ಮಲಗಿರು ಕಂದಾ ನಾನು ಹೋಗ್ತೀನಿ’ ಬಟ್ಟೆ, ಕೂದಲು ಸರಿ ಮಾಡಿಕೊಂಡು ಬಾಗಿಲು ಎತ್ತಿ ಅಲ್ಲೇ ಕೂತಳು. ಮೊಬೈಲ್ ಲಿ ಫೋಟೊ ತೆಗೆದುಕೊಂಡಳು. ನೋಟ ಅದ್ಭುತವಾಗಿತ್ತು. ಬಿಳಿಯ ಮರಳು ಬಂಗಾರದಂತೆ, ಕೆಂಪು ಹರಳಂತೆ ಹೊಳೆಯುತ್ತಿತ್ತು. ಬಂಗಾರದ ಪಕ್ಷಿಗಳ ಹಾರಾಟ, ಅಲೆಗಳಿಗೂ ಬಂಗಾರದ ಎರಕಹೊಯ್ಯಲಾಗಿತ್ತು. ‘ಅಮಿತ್! ಒಮ್ಮೆ ನೋಡು ಬಾ.. ಆಮೇಲೆ ಮಲಗು’ ಎಂದು, ಅವನ ರಗ್ ಎಳೆದಳು. ಎದ್ದು ಬಂದು ಇವಳ ಕಾಲ ಮೇಲೆ ಮಲಗಿದ. ‘ವಾವ್ ಸುಪರ್.. ವೇಟ್’ ಎಂದು ಎದ್ದು ಹೋಗಿ ತನ್ನ ಬ್ಯಾಗಿಂದ ಬೊಟಲ್ ತೆಗೆದ. ‘ಅಮಿತ್!!! ಯು ಆರ್!!!! ಇಷ್ಟು ಚೆನ್ನಾಗಿದೆ ವೀವ್!!, ಅದಕ್ಕೆ ಇದು ಬೇಕಾ, ಯಾವಾಗ ತಂದೆ??’ ‘ ವಾಂಟು ಹ್ಯಾವ್? ಎಷ್ಟು ಚೆನ್ನಾಗಿರತ್ತೆ ಗೊತ್ತಾ’ ‘ ಬೇಡಾ, ತಾವ ತಗೊಳ್ಳಿ ಸಾಕು.’ ಕೈ ಮುಗಿದಳು. ‘ಹೊರಡೊವಾಗ ನಿನ್ನ ಪಾದದ ಜೆರೊಕ್ಸ್ ಕೊಡು’ ಎಂದು ಹೊರಹೋದಳು. ಕನಸಾ ನನಸಾ, ಇಷ್ಟು ಸುಂದರ ಬೆಳಗ್ಗು ಕಲ್ಪನೆಯಲ್ಲೂ ಇರಲಿಲ್ಲ. ಕಪ್ಪೆ ಚಿಪ್ಪು, ಕಲ್ಲು ಆರಿಸಿ ಒಂದೆಡೆ ಕೂತಳು. ಹಿಂದಿಂದ ಅವಳ ಕೂದಲು ಕ್ಲಿಪ್ ಬಿಚ್ಚಿ ಪಕ್ಕ ಬಂದು ಕುಳಿತ. ನಕ್ಕಳು ತಿರುಗಿ. ಅಲೆಗೆ ಅವನ ಸುತ್ತಲಿದ್ದ ಕಲ್ಲೊಗೆಯತೊಡಗಿದ. ಅವನ ಬುಜಕ್ಕೆ ಆತು ಕೂತು ಆ ಕಲ್ಲುಗಳನ್ನೆ ನೋಡುತ್ತಿದ್ದಳು. ಅವಳ ಕೂದಲು ಅವನ ಮುಖ ತೀಡುತ್ತಿತ್ತು. ನಿಜವಾಗಿಯೂ ತನ್ನ ಪ್ರೀತಿಸುತ್ತಿರ ಬಹುದೆ, ಅಥವಾ ಈ ಕ್ಷಣವನ್ನ ಪ್ರೀತಿಸುವವನೆ, ಅವನ ಆಗಿನ ನೋಟಕ್ಕೆ ಬಂದಿಯಾದಂತೆ ಭಾಸವಾಯಿತು. ಇನ್ನು ಅವನ ಪರೀಕ್ಷೆ ಮಾಡಿವುದು ಅಸಾಧ್ಯ ಎನ್ನಿಸುತು. ಹುಚ್ಚಾದ ನಂಬಿಕೆ ಬಂದಾಗ ಎಲ್ಲವು ಸತ್ಯ ಎನ್ನಿಸ ತೊಡಗುವುದು. ಬಹುಶಃ ಹಾಗೆ ಯಾರನ್ನ ನೋಡಿದರು ಪ್ರೀತಿ ಹುಟ್ಟಬಹುದೆ?.. ಗೊತ್ತಿಲ್ಲಾ. ಆದರೆ ಅವನು ಏನೋ ಕಳೆದದ್ದನ್ನ ಹುಡುಕುತ್ತಿರುವಂತಿತ್ತು. ಜೊತೆಗೆ ಎಲ್ಲದರಿಂದ ದೂರ ಓಡ ಬಯಸಿದಂತೆ. ಹೌದು ಹಾಗಿದ್ದವ ಹೀಗೆ ಬದಲಾಗಲು ಕಾರಣ ಇರಲೇಬೇಕಲ್ವಾ, ಅಪ್ಪನ ಬಗ್ಗೆ ತಾತ್ಸಾರ ನೋಡಿದ್ದಳು, ಅಮ್ಮನ ಬಗ್ಗೆ ಕಾಳಜಿ ಇತ್ತು. ಲವ್ ಫೇಲ್ಯುರ್ ಇರಬಹುದಾ, ತಾನೇಕೆ ಅವನ ಕುರಿತು ಒಂದು ಪ್ರಶ್ನೆ ಕೇಳಲಿಲ್ಲ. ಇಲ್ಲಾ ತನ್ನ ಮನಸ್ಸು ಅವನ ಕಡೆ ವಾಲುತ್ತಿರುವುದಕ್ಕೆ, ಭ್ರಮೆಯಾ.. ತಾನೇಕೆ ಅಷ್ಟು ಅವನ ಕುರಿತು ಯೋಚಿಸುವುದು?.. ಸುಮ್ಮನೆ ಶಾಂತವಾದ ಮನಸ್ಸಲ್ಲಿ, ತಾನೆ ಕಲ್ಲೆಸದು ರೊಚ್ಚೆ ಎಬ್ಬಿಸಿಕೊಂಡಿದ್ದು. ‘ ಇದು ನೀ ತಂದು ಇಟ್ಕೊಂಡಿದ್ದ ಕಲ್ಲಾ?’ ‘ಆಂ.. ಹುಂ’ ‘ ಎಲ್ಲಿದಿರಾ ಡಾಕ್ಟರೆ?!!’ ಅವಳ ಹಿಡಿದು ಕೇಳಿದ. ಯಾಕೋ ಅರಿವಿಲ್ಲದೆ ಕಣ್ಣಿರು ಜಾರಿತು. ‘ಏನಾಯ್ತು, ಅನು, ಏನಾದ್ರು ಹರ್ಟ ಮಾಡಿದ್ನಾ?’ ‘ಉಹೂಂ’ ಅವನೆದೆಯಲ್ಲಿ ಹುದುಗಿಕೊಂಡಳು. ಅವನು ಗೊಂದಲಕ್ಕೀಡಾದ, ‘ಕೂಲ್’ ಎನ್ನುತ್ತಾ ತಲೆ ಸವರಿದ. ಈ ಕ್ಷಣ ಹೀಗೆ ಫ್ರೀಜ್ ಆಗಿದ್ದರೆ ದೇವರೆ ಎಂದು ಕೊಂಡಳು. ಸ್ವಲ್ಪ ಹೊತ್ತು ಬಿಟ್ಟು ಒಳ ಹೋದಳು. ಅಮ್ಮನ ಮಿಸ್ಸಡ್ ಕಾಲ್ ಇತ್ತು.
‘ ಹಾ ಅಮ್ಮ, ಗುಡ್ ಮೊರ್ನಿಂಗ್... ಹಾ.. ಮೊಬೈಲ್ ಸೈಲೆಂಟ ಇತ್ತು, ಗೊತ್ತಾಗಿಲ್ಲಾ. ಚೆನ್ನಾಗಿದಿಯಾ?, ಹಾ.. ನಾನು ಆರಾಮ್.. ಇನ್ನು ಏಳ್ತಾ ಇದಿನಿ.. ಹಾ.. ಮುಗಿತು. ಸಂಜೆ ಹೊರಡೋದು. ಮತ್ತೆ ಏನಿಲ್ಲಾ ಅಮ್ಮಾ, ಎಲ್ಲಾ ಚೆನ್ನಾಗಿ ಆಯ್ತು. ಹಾ.. ಓಕೆ ಬಾಯ್..’ ಪೋನಿಟ್ಟಳು. ಅಷ್ಟರಲ್ಲಿ ಅಮಿತ್ ಅಲ್ಲಿಗೆ ಬಂದ. ‘ಇನ್ನೂ 7.30 ನು ಆಗಿಲ್ಲಾ, ನಾನು ಮತ್ತೆ ಮಲಗ್ತೀನಿ.’ ಎಂದು ಅಡ್ಡಬಿದ್ದ. ಫ್ರೆಶಪ್ ಆಗಲು ಹೋದಳು. ವಾಪಸ್ ಬಂದರು ಇವನು ಮಲಗೆ ಇದ್ದ. ಬ್ಯಾಗ ಎಲ್ಲಾ ತುಂಬಿ, ಅದಕ್ಕೊರಗಿ ಪುಸ್ತಕ ಓದುತ್ತಾ ಕುಳಿತಳು. ‘ಮೊರ್ನಿಂಗ್’ ಎನ್ನುತ್ತಾ ಎದ್ದು ಕುಳಿತ. ‘ಗುಡ್ ಮೊರ್ನಿಂಗ್’ ಮುಗುಳ್ನಗೆ ಬೀರಿದಳು. ‘ ಸ್ನಾನಾನು ಆಗೋಯ್ತಾ? ಗುಡ್ ಗರ್ಲ್!!’
‘ಐ ಎಮ್ ಆಲ್ವೇಸ್’ ‘ ನೊ ಡೌಟ್ ಎಟಾಲ್!!! ಹಸಿವಯ್ತಾ, ಬೇಗ ಬರ್ತೀನಿ’ ಎಂದು ಹೊರಟ. ‘ ಪೇಸ್ಟ್, ಬೊಡಿ ವಾಶ್ ಏನಾದ್ರು ಬೇಕಾ?’
‘ ಸ್ನಾನ ಮಾಡಸಿ ಕೊಡಕ್ಕೆ ಒಬ್ಬರು ಬೇಕಿತ್ತು ಬರ್ತೀಯಾ’ ತನ್ನ ಕಿಟ್ ತೋರಿಸುತ್ತಾ ಹೋದ. ತಿರುಗಿ ಬಂದಾಗ 9.30.
‘ತಿಂಡಿಗೆ ಹೋಗೋಣಾ, ಹಸಿವಾಗ್ತಿದೆ. ಇಲ್ಲೆ ಮಾಡೋದಾ ಬೇರೆ ಕಡೆ ಹೋಗೊದಾ?’
‘ಇಲ್ಲೆ ಮಾಡೋಣಾ, ನಿನಗೆ 6 ಗೆ ಏರಪೋರ್ಟಲಿ ಇರಬೇಕಲ್ವಾ. 11 ಗೆ ಬಿಡಬೇಕು.’
‘ ನಿನಗೆ ಎಷ್ಟೊತ್ತಿಗೆ ಇರೊದು ಫ್ಲೈಟ್?’
‘ ನಾನಿನ್ನು ಬುಕ್ ಮಾಡಿಲ್ಲಾ. ನಿನ್ನ ಫ್ಲೈಟ್ ಗೆ ಬರ್ತಿನಿ, ಡಿಟೇಲ್ಸ ಕಳಸು ‘
ಸೆಕ್ಯೂರಿಟಿ ಇರ್ತಾನೆ, ನೊ ಪ್ರೊಬ್ಲಮ್, ಎಂದು ತಿಂಡಿಗೆ ಹೋ ದರು. ಡೋಕ್ಲಾ, ಪೋಹಾ, ಸಮೋಸಾ.. ನನ್ ಆಫ ದ ಎಬೊವ್ ಆದರೂ, ಪೋಹಾ ತಗೊಂಡಳು. ಅಮಿತ ಡೋಕ್ಲಾ ತಗೊಂಡಾ. ಅಲ್ಲೆ ಫ್ಲೈಟ್ ಟಿಕೆಟ್ ಚೆಕ್ ಮಾಡಿದ. ‘ ನಿನ್ನಾ ಪಕ್ಕಾ ಯಾರಿದಾರೆ?’ ‘ನನ್ನ ಫ್ರೆಂಡ್..’ ‘ಎಕ್ಸಚೇಂಜ್ ಮಾಡ್ಕೊತಾಳಾ?’ ‘ ವಿಂಡೊ ಸೀಟ್ ಆದರೆ ಯೆಸ್!!’ ‘ಒಕೆ ಡನ್’ ಬುಕ್ ಮಾಡಿದ. ಮತ್ತೆಲ್ಲು ಹೋಗುವ ಮನಸಾಲಿಲ್ಲ. ಬೀಚ್ ಲೆ ಅಡ್ಡಾಡಿದರು. ಅವನ ಮಲೇಷಿಯಾ ಟ್ರಿಪ್ ಬಗ್ಗೆ ಹೇಳಿದ. ಒಂಟಿ ತಿರುಗಿ ಬಂದಿದ್ದ. ಬೇಸರ ಆಗಲ್ವಾ ಕೇಳಿದ್ದಕ್ಕೆ, ನಾನು ಹೋದಲ್ಲಿ ಹೊಸ ಫ್ರೆಂಡ್ಸ್ ಮಾಡ್ಕೊತೀನಿ, ಇನ್ನು ಎಕ್ಸೈಟಿಂಗ ಇರತ್ತೆ. ಎಂದ. ಒಳ್ಳೆ ಸಮಯ ಬೇಗ ಕಳೆಯುವುದು, ಈಗಷ್ಟೆ ಸಿಕ್ಕಂತೆ, ನಿನ್ನೆ ಇದ್ದ ಗೊಂದಲಗಳು ಸದ್ಯಕ್ಕೆ ಕಾಣೆಯಾಗಿದ್ದವು. ಟಿಕೆಟ್ ಕ್ಯಾನ್ಸಲ್ ಮಾಡುವ ಯೋಚನೆಯೂ ಮನಸ್ಸಿಗೆ ಬಂತು. ಆದರೆ, ಮಾವಿನ ಸ್ವಾದ ನೆನಪಿರಬೇಕಾದರೆ, ಒರಟೆ ಸಿಹಿ ಇದ್ದಾಗಲೆ ಎಸೆಯಬೇಕು. ಟೆಂಟ್ ತಿರುಗಿಸಿ ಕೊಟ್ಟು ಹೊರಡಲು ಸರಿಯಾಯಿತು. ಇವಾಗ ಬೈಕಲ್ಲಿ ಕೂರುವಾಗ ಯಾವುದೆ ಅಪರಿಚಿತ ಭಾವ ಇರಲಿಲ್ಲ. ಅವನ ಬಳಸಿ, ಬೆನ್ನಿಗೆ ಆತು ಕುಳಿತಳು. ಮನಸ್ಸು ಒಂತರಾ, ಅಮ್ಮನ ಬಿಡಲೊಲ್ಲದ ಮಗುವಿನಂತೆ. ಬಹುಶಃ ಇವಳನ್ನು ಯಾರೂ ಇವನಷ್ಟು ಹತ್ತಿರದಿಂದ ಕಾಡಿರಲಿಲ್ಲ. ಅಮಿತ್ ಪ್ರಾಕ್ಟಿಕಲ್ ಆಗಿದ್ದ. ಹಿಂದೆ ಒಬ್ಬಳು ಸುಂದರ ಹುಡುಗಿ ಬೇಕಿತ್ತು, ಫ್ರೀ ಯಾಗಿ ಸಿಕ್ಕಂತೆ, ಹಾಯಾಗಿ ಗಾಡಿ ಓಡಿಸುತ್ತಿದ್ದ. ರಾತ್ರಿ ಆದ ಘಟನೆಗೆ ಅವನ ಈಗಿನ ವರ್ತನೆಗೆ ಮೈ ಉರಿದಂತಾದರು, ಸಕಾರಾತ್ಮಕವಾಗಿ ಯೋಚಿಸಲು ಸಂಗತಿ ಹುಡುಕ ತೊಡಗಿದಳು. ಊಟಕ್ಕೆ ಇಳಿದಾಗ ‘ ದೋಸೆ ತಿನ್ನದೆ ವರ್ಷ ಕಳೆದ ಅನುಭವ ಆಗ್ತಿದೆ’ ಎಂದಳು. ‘ ನಿಂಗೆ ಅಡುಗೆ ಮಾಡಕ್ಕೆ ಬರತ್ತಾ?’ ‘ ಹುಂ, ನಂಗೆ ಬೇಕಾದ್ದನ್ನೆಲ್ಲಾ ಮಾಡಬಲ್ಲೆ. ಆದರೆ ಟ್ರೆಡಿಶನಲ್ ಫುಡ್ ಅಷ್ಟೆ.’ ‘ಗುಡ್, ನಿಮ್ಮ ಹುಡುಗ ಪುಣ್ಯಾ ಮಾಡಿದಾನೆ’ ನೀನು ಮಾಡಿಲ್ವಾ ಕೇಳ ಬೇಕೆನಿಸಿತು. ಸುಮ್ಮನಾದಳು. ಅಗಲಿಕೆಯ ಹೊತ್ತು ಮಾತು ಮೌನವಾಗಿ, ಮೌನವೇ ಮಾತಾಗುತ್ತಂತೆ. ಮತ್ತೇನು ಮಾತು ನಡೆಯಲಿಲ್ಲ ಅಷ್ಟಾಗಿ. 5.30 ಹಾಗೆ, ಅಹಮದಾಬಾದ್ ತಲುಪಿದರು. ಬೈಕ್ ತಿರುಗಿ ಕೊಟ್ಟು, ಕ್ಯಾಬ್‍ಲ್ಲಿ ಏರಪೋರ್ಟಗೆ ಬಂದರು. ಲ್ಯಾನ್ಸಿ ಹೊರಗೆ ಕಾಯುತ್ತಿದ್ದಳು. ಚೆಕಿಂಗ ಮುಗಿಸಿ, ಲಾಂಚ್ ಗೆ ಬಂದಾಗ, ಫ್ಲೈಟ್ ಸಿದ್ದವಾಗಿತ್ತು. ‘ ಲ್ಯಾನ್ಸಿ, I am offering you window seat’ ಎಂದು ಪಿಸು ಗುಟ್ಟಳು. ‘ಒಹ್ ರಿಯಲಿ!! ಸೋ ಸ್ವೀಟ್ ಆಫ್ ಯು’ 'not mine, his seat' ಎಂದಳು. ‘ಬೈ ದ ವೇ, ವಾಟ್ ಯು ಸೀ ಇನ್ ದ ವಿಂಡೊ?, ಗಾರ್ಡೆನ್? ಶಾಪ್? ಒರ ಮೈಲ್ ಸ್ಟೋನ್ಸ್?’ ‘ಮೇ ಐ ಆಸ್ಕ ಯು ದ ಸೇಮ್ ಮ್ಯಾಮ್?’ ಸುಮ್ಮನಾದಳು. ‘ಅಮಿತ್ ಹೋಗಿ ಕೂರೋಣಾ ಅಲ್ವಾ, ಶಲ್ ವಿ ಲ್ಯಾನ್ಸಿ?’ ‘ ಹಾ ಯೆಸ್’ ಎಂದು ಲ್ಯಾನ್ಸಿ ಹೊರಟಳು. ‘ ಮೈ ಫ್ಲೈಟ್ ಎಟ್ 9, ಯು ಪೀಪಲ್ ಹ್ಯಾವ್ ಸೇಫ್ ಜರ್ನಿ’ ಎಂದು ಹಗ್ ಮಾಡಲು ಬಂದಾಗ ಶಾಕ್ ಆದಳು. ‘ಏನೇಳ್ತಿದಿಯಾ?, ಇದಕ್ಕೆ ಬುಕ್ ಮಾಡ್ದೆ ಅಂದೆಲ್ಲಾ, ಮತ್ತೆ?’ ಹಗ್ ಮಾಡಿದಳು. ಅವನೆ ದೂರ ಸರಿಸಿ ನಿಲ್ಲಬೇಕಾಯಿತು. ತಲೆ ಎತ್ತದೆ, ಹಾಗೆ ಬ್ಯಾಗ ಹಿಡಿದು ಹೊರಟಳು. ‘ ಬಾಯ್, ಸೇಫ್ ಜರ್ನಿ ಅನು’ ಎಂದ. ‘ಥ್ಯಾಂಕ್ಸ್’ ಎಂದು ತಿರುಗೂ ನೋಡದೆ ಹೊರಟಳು. ಎಷ್ಟೋ ಬಾರಿ, ವಿದಾಯ ಅಪೂರ್ಣವಾಗುತ್ತದೆ, ಮನಸ್ಸಿನಲ್ಲಿರುವುದ ಹೇಳದೆ, ಸರಿಯಾಗಿ ಬೀಳ್ಕೊಡದೆ ಹಾಗೆ ಬಂದು, ಯಾವಾಗಲೂ ಕಾಡುವಂತೆ ಮಾಡುವುದು. ಯಾರಿಗೆ ಗೊತ್ತು ಕೊನೆಯ ಬೇಟಿಯು ಇರಬಹುದು. ವಾಪಸ್ ಬಂದು, ‘ಹ್ಯಾಡ್ ನೈಸ್ ರೈಡ್, ವೆರಿ ಗುಡ್ ಟೈಮ್ ವಿತ್ ಯು.. ಥ್ಯಾಂಕ್ಸ್ ಫಾರ್ ಎವೆರಿತಿಂಗ, ಅಮಿತ್!! ಸಿ ಯಾ’ ಹಗ್ ಮಾಡಿ ಹಣೆಗೆ ಮುತ್ತಿಟ್ಟು ಅವನನ್ನು ದಿಟ್ಟಿಸಿದಳು. ಮೋಹಕವಾಗಿ ನಗುತ್ತಿದ್ದ, ಮುಗುಳ್ನಕ್ಕು ಹೊರಟು ಬಂದಳು. ‘ ಲ್ಯಾನ್ಸಿ you sit in the window side'
'ohh really?? where is his seat?'
'no take mine only, he is sitting in the bck' ಮತ್ತೇನು ಮಾತಡದೆ ಕೂತಳು. ಇಯರ್ ಫೋನ್ ಕಿವಿಗೆ ತುರುಕಿದಳು, ಯಾವುದೆ ಹಾಡು ಕೇಳುವ ಮನಸ್ಸಿರಲಿಲ್ಲ, ಹಾಕಲು ಇಲ್ಲ. ‘how was yesterday? it seems something something happened?!! I am ready to go back, call him here only, I dont wanna see this dull face baby!!' non stop ಕೇಳುತ್ತಲೆ ಇದ್ದಳು.
'nothing happened, it was good time with him... that much I can say!!'
'no tell me, is he really hot?? I continue in Mangalore if you are not interested!!'
'what nonsense Lansi!! he is good guy.. dont say like this..'
'I got you baby, so posessive you are!'
'Yess I am ... please leave me alone' ಲ್ಯಾನ್ಸಿ ಜೋರಾಗಿ ನಕ್ಕು ಸುಮ್ಮನಾದಳು.
ಸುತ್ತ ಕಣ್ಣಾಯಿಸಿದಳು. ಎಲ್ಲಾ ಅವರವರ ಕೆಲಸದಲ್ಲಿ ನಿರತರಾಗಿದ್ದರು. ಕಣ್ಮುಚ್ಚಿ ಮಲಗಿದಳು. ಸ್ವಲ್ಪ ಹೊತ್ತಿಗೆ ಹೊಟ್ಟೆ ತೊಳೆಸಿದ ಅನುಭವ. ಟೊಯಲೆಟ್ ಗೆ ಹೋದಳು. ವಾಂತಿಯಾಯಿತು. ಬಹುಶಃ ಬಿಸಿಲಲ್ಲಿ ಪ್ರಯಾಣ, ಇಲ್ಲಿಯ ಓಯಲಿ ಫುಡ್ ಅಂದುಕೊಂಡಳು. ಮತ್ತೆರಡು ಬಾರಿ, ಮಾಡಿದಳು ಮಂಗಳೂರು ತಲುಪುವಷ್ಟರಲ್ಲಿ. ಸುಸ್ತಾಗಿತ್ತು. ಮೆಡಿಕಲ್ ಶಾಪ್ ಲಿ ಮಾತ್ರೆ ತೆಗೆದುಕೊಂಡು ರೂಮ್ ಸೇರಿದಾಗ 12 ಗಂಟೆ. ಬೆಳಗ್ಗೆ ಅಮ್ಮನ ಕಾಲ್ ಬಂದಾಗಲೇ ಎಚ್ಚರ. ಅವತ್ತು ಲೀವ್ ಹಾಕಿ ಮಲಗಿದಳು. ಅಮಿತ್‍ಗೆ ಮೆಸೇಜ್‍ಆಗಲಿ ಕಾಲ್‍ಆಗಲಿ ಮಾಡುವ ಮನಸ್ಸಾಗಲಿಲ್ಲ. ತಿಂಡಿ ಮಾಡಿ ಮತ್ತೆ ಮಲಗಿದಳು. 3 ಗಂಟೆಗೆ ಹಾಗೆ ಎದ್ದು ಸ್ನಾನ ಊಟ ಮಾಡಿ ಕೂತಳು. ಬೇಕಂತಲೆ ಹಾಗೆ ಮಾಡಿದ್ದನಾ? ಇಲ್ಲಾ ತನಗೆ ಬೇಸರವಾಗುವುದೆಂದು ಹೇಳಿರಲಿಲ್ಲವೇ? ಅವನ ಎದೆಯಲ್ಲಿ ಮುಖವಿಟ್ಟು ಮಲಗಬೇಕೆನಿಸಿತು. ಮತ್ತೆ ದಿಂಬ ಮೇಲೆ ತಲೆಯೂರಿ ಬಿದ್ದಳು. ತುಟಿಯ ಮೇಲೆ ಸಣ್ಣ ಗಾಯವಾಗಿತ್ತು. ಅವನ ಬಿಗಿ ಹಿಡಿತ್ಕೆಸಿಕ್ಕು, ಮತ್ತೆ ಅದರ ತೀಡಿಸಿಕೊಂಡಂತೆ ಕೆಂಪಾದಳು. ಹೃದಯ ಬಡಿತ ಕೇಳುತ್ತಿತ್ತು. ಇವನು ಮತ್ತೆ ಬರಬಹುದೆ ತನ್ನ ಜೀವನದಲ್ಲಿ, ವಿನಂತಿಸಿ ಕೊಂಡರೆ ಬಹುಶಃ ಬರಬಹುದು, ಆದರೆ ಅವನ ಇನ್ನೊಂದು ಮುಖ ಸಹಿಸಿಕೊಳ್ಳ ಬಲ್ಲನೇ? ಗೊಂದಲಕ್ಕೊಳಗಾದಳು. ಆದರೆ ಪ್ರೀತಿಗೆ ಎಲ್ಲ ಮರೆಸುವ ಶಕ್ತಿ ಇರುವುದಲ್ಲವೇ?, ಇದು ಕೇವಲ ತನ್ನ ಅಭಿಪ್ರಾಯ, ನಂಬಿಕೆ ಇಲ್ಲವಾದರೆ, ಏನನ್ನು ಮಾಡುವುದು. ಶಹ್!!! ಡಾ. ಸೆಹಘಲ್!!! ಓದಲು ಕುಳಿತಳು. ದಿನಗಳು ಕಳೆಯುತ್ತಿದ್ದವು, ಆಗಾಗ ಸಣ್ಣ ಪುಟ್ಟ ಚಾಟ್ ಗಳನ್ನು ಬಿಟ್ಟರೆ ಮತ್ತೇನು ವಿಷೇಶ ಇರಲಿಲ್ಲ. ನಡುವೆ ಮನಿಷ್ ಮದುವೆ ಪ್ರಸ್ತಾಪ ಮನೆಯಲ್ಲಿ ತಂದಿಟ್ಟರು. ಮದುವೆಯ ಮನಸ್ಸೆ ಇರಲಿಲ್ಲ, ಯಾವುದೋ ಕಾಣದ ಮಾಯೆ ಶಕ್ತಿಯಾಗಿ ಕಾಡುತ್ತಿತ್ತು, ಪಿಜಿಯ ಕನಸು, ಅಮಿತ್‍ನ ಮೇಲಿನ ಮೋಹ. ಯಾಕೋ ಅವನ ನಿರೀಕ್ಷೆಯಲ್ಲೆ ದಿನ ಕಳೆಯುತ್ತಿರುವಂತೆ ಭಾಸವಾಯಿತು. ಬಂಗಾಳದಲ್ಲಿ ಪಿಜಿ ಸಿಕ್ಕಿತು. ಜಾಗದ ಬದಲಾವಣೆ ಮನಸ್ಸಿನ ಬದಲಾವಣೆ ತರಬಹುದೆಂದು ಮಂಗಳೂರು ಬಿಟ್ಟಳು. ಎಷ್ಟೋ ಬಾರಿ ರಸ್ತೆಯಲ್ಲಿ ಯಾರನ್ನೋ ನೋಡಿ ಅಮಿತ ಎಂಬಂತೆ ದಂಗಾಗಿ ನಿತ್ತಿದ್ದಳು. ಮೈಯಲ್ಲಿ ಆ ಕ್ಷಣವಾದ ರೋಮಾಂಚನ ಇನ್ನೂ ಪರಿಚಿತ. 6 ತಿಂಗಳು ಕಳೆದಿತ್ತು, ಅಪ್ಪ ಹೃದಯಾಗತದಿಂದ ತೀರಿಕೊಂಡ ಸುದ್ದಿ ಅವಳ ದಿಕ್ಕೆ ಬದಲಿಸಿತು. ಅನಿವಾರ್ಯವಾಗಿ ಮರಳಿ ಊರಿಗೆ ಬಂದಳು. ಬೆಂಗಳೂರಲ್ಲಿ ಮತ್ತೆ ಜಾಬ್ ಗೆ ಸೇರಿದಳು. ಅಮ್ಮನು ಬೆಂಗಳೂರಿಗೆ ಬಂದಳು. ಮದುವೆಯ ಪ್ರಸ್ತಾಪ ಮತ್ತೆ ಶುರುವಿಟ್ಟುಕೊಂಡರು. ಈ ಬಾರಿ ಜಾರಿ ಕೊಳ್ಳುವ ಯಾವ ಲಕ್ಷಣವಿರಲಿಲ್ಲ. ಮತ್ತೆ ಮನಿಷನ ಸಂಬಂಧದ ಪ್ರಸ್ತಾಪ ಎತ್ತಿದಾಗ, ಭೂಮಿಯ ಮೇಲೆ ಬೇರಾವ ಹುಡುಗರಿಲ್ಲವೇ ಎನ್ನಿಸಿತ್ತು. ‘ಏನಾಗಿದೆ, ಒಳ್ಳೆ ಜನ, ಕುಟುಂಬ, ಹುಡುಗನಿಗು ಎಷ್ಟು ನಯ ನಾಜೂಕು’ ಅಂದು ನೋಡಲು ಬಂದಾಗ ಸ್ವಲ್ಪ ಹೆಚ್ಚೇ ನಯ ನಾಜೂಕು ತೋರಿಸಿದ್ದ. ಓವರ್ ಆಕ್ಷನ್ ಅನ್ನಿಸಿತ್ತು. ಇತ್ತ ನಾಪತ್ತೆ ಆಗಿದ್ದ ಅಮಿತ್ ಎಂಗೇಜಡ್ ಎಂದು ಸ್ಟೇಟಸ್ ಇಟ್ಟುಕೊಂಡು ಹನಿಮೂನ್ ಮಾಡ್ತಿದ.್ದ ತನ್ನ ಪೆದ್ದುತನಕ್ಕೆ ತಾನೇ ಹೊಡೆದುಕೊಳ್ಳಬೇಕೆಂದುಕೊಂಡಳು.
ಅನು ಇನ್ನು ಮಲಗಿಲ್ವಾ? ಟೈಮ್ ನೋಡಿದ್ಯಾ?!!! ಬಾ ಮಲಗು, ಬೆಳಗ್ಗೆ ಬೇರೆ ಬೇಗ ಏಳಬೇಕು. ನಿದ್ದೆಗಣ್ಣಲ್ಲಿ ತೇಲಾಡುತ್ತ ಅನು ಬಳಸಿ ಕೂತ ಮನಿಷ್. ಅನು ಬೆಚ್ಚಿ, ‘ಹಾ, ಬಂದೆ, ನೀ ಏನಕ್ಕೆ ಎದ್ದಿದ್ದು’ ಭುಜಕ್ಕೆ ಒರಗಿದಳು. ಬಾ ಸಾಕು ಸಮುದ್ರ ನೋಡಿದ್ದು, ಎನ್ನುತ್ತಾ ಎತ್ತಿಕೊಂಡು ಹೋದ. ಅವನ ಮುಖವನ್ನೇ ದಿಟ್ಟಿಸುತ್ತಿದ್ದಳು.
ರಾಧೆ...🎶
- Get link
- X
- Other Apps
Comments
Post a Comment