ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Posts
Showing posts from 2023
- Get link
- X
- Other Apps
ಬಹಳ ದಿನಗಳ ನಂತರ ಪ್ರಯಾಣ ಬೆಳೆಸಿದ್ದೆ, ಎಷ್ಟು ದಿನ, ಎಲ್ಲಿ ಏನು ಎತ್ತ ಎಂಬ ತಯಾರಿ ಇರಲಿಲ್ಲ... ಹಾಗೆ ಇಷ್ಟು ದಿನದಲ್ಲಿ ಇಷ್ಟು ಸ್ಥಳ ನೋಡಿ ಮುಗಿಸಬೇಕೆಂಬ ಒಡಂಬಡಿಕೆ ಇರಲಿಲ್ಲ. ಪಿ ಎಚ್ ಡಿ ಮುಗಿದ ಮೇಲೆ ತಲೆ ಕೊಡವಿ ಕೊಳ್ಳಲು, ತಲೆ ಭಾರ ಇಳಿಸಲು, ನನ್ನೊಂದಿಗೆ ನಾನು ಕಳೆಯಲು ಒಂದಿಷ್ಟು ಸುತ್ತ ಬೇಕಿತ್ತು... ಸುಮಾರು ೪ ವರ್ಷ ನಾನು ನನ್ನ ಓದು ಎಂದು ಕಳೆದಿದ್ದೆ. ಸಮಯ ಇತ್ತು, ಅದಕ್ಕೆ ಹಗಲು ಪ್ರಯಾಣ ಆರಂಭಿಸಿದ್ದು, ಹುಬ್ಬಳ್ಳಿಯಿಂದ ಪುಣೆಯ ವರೆಗೆ, ಒಂದೊಂದು ಜಿಲ್ಲೆ ದಾಟುವಾಗಲೂ ಬದಲಾಗುವ ಜೀವನ ಶೈಲಿ, ಅಲ್ಲಿಯ ಮನೆ, ವಠಾರ, ಜನರ ಹಾವ ಭಾವದಿಂದ ತಿಳಿಯುತ್ತಿತ್ತು. ಒಂದಿಷ್ಟು ನೆಲ ಹಸಿರು ಹೊದ್ದಿದ್ದರೆ, ನಡುನಡುವೆ ನೀರ ಹೊದಿಕೆ. ಪುಣೆಯ ಕಡೆ ಸಾಗಿದಂತೆ ಸುಂದರವಾಗಿ ಕಲ್ಲು ಗುಡ್ಡದ ನಡುವೆ ಎದ್ದು ನಿಂತ ಪಟ್ಟಣಗಳು. ಸುಮಾರು ಸತಾರ ದಾಟುವವರೆಗೂ ಬೆಳಕಿತ್ತು, ಸೂರ್ಯಾಸ್ತ, ಅವನ ಬೆಳಕಲ್ಲಿ ಮಿಂದೇಳುವ ನದಿ ಕಾಲುವೆ, ಕೆರೆ, ಗದ್ದೆಯ ಫೋಟೋ ತೆಗೆಯುತ್ತಾ ಸಾಗುವಾಗ ಸಮಯ ಸಾಗಿದ್ದೆ ತಿಳಿಯಲಿಲ್ಲ. ತುಸುಬೆಳಕಲ್ಲಿ ಕಾಣುವ ದೊಡ್ಡ ದೊಡ್ಡ ಕಲ್ಲು ಬಂಡೆಗಳ ಗುಡ್ಡಗಳ ಸಾಲು. ನಂತರ ಜಗಮಗ ಲೋಕ, ನಕ್ಷತ್ರ ಪುಂಜ ಹೀಗೆ ನೋಡ ನೋಡುತ್ತಾ ಮಹಾನಗರಿಗೆ ಕಾಲಿಟ್ಟೆ. ಬಾಗಲಕೋಟೆ ಯಲ್ಲಿ ಇರಲು ಪ್ರಾರಂಭಿಸಿದ ಮೇಲೆ, ಜನರು, ಪ್ರದೂಷಣೆ, ಗಲಾಟೆ ಎಲ್ಲದರಿಂದ...