ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Posts
Showing posts from October, 2016
- Get link
- X
- Other Apps
ಕಾರಣ ಹುಡುಕ ಬೇಡ.... ಎಂದೋ ಹುಟ್ಟಿಹೆ, ಕಾರಣ ನಾನಲ್ಲ, ಎಂದೋ ಸಾಯುವೆ ಕೂಡ, ಕಾರಣ ತಿಳಿದಿಲ್ಲ, ನಿಮ್ಮ ಹರಕೆ, ಹಾರೈಕೆ ಎಲ್ಲಾ ನನಗೆ, ಕಾರಣ ಗೊತ್ತಿಲ್ಲ ನಿಮ್ಮ ಸೈರಣೆ, ತಿರಸ್ಕಾರ ಎಲ್ಲಾ ನನಗೆ, ಕಾರಣ ಗೊತ್ತಿಲ್ಲ. ಕಂಡಾಗ ಮುಗುಳ್ನಗುವೆ, ಕಾರಣವಿಲ್ಲದೆ, ಮಾತನಾಡಿಸಿದರೆ, ಮಾತನಾಡುವೆ, ಕಾರಣ ಬೇಕಿಲ್ಲದೆ, ಒದ್ದೆ ಚಾದರ ಹೊದ್ದೂ ನಗುವ ತಿರುಕನಿಗೆ ಕಣ್ಣೀರಿಡುವೆ, ಕಾರಣವಿಲ್ಲದೆ, ನಿತ್ಯ ಬಾಲವಾಡಿಸಿ ಬರುವ ಮುದ್ದು ಮರಿಗೆ, ಹಲ್ಲು ಕಿರಿವೆ, ಕಾರಣ ಗೊತ್ತಿಲ್ಲ ಬಿಟ್ಟಿಹೆ ಎಲ್ಲ ಹುಡುಕಾಟ, ಮಾಡುವ ಮಾಟಕ್ಕೆ, ನೋಡುವ ನೋಟಕ್ಕೆ, ಕಾರಣ ಬೇಕಿಲ್ಲ.... ಖುಷಿಯ ಹೊರತಾಗಿ... ರಾಧೆ... 🎶
- Get link
- X
- Other Apps
ನಮ್ಮದಲ್ಲದ ಊರಲ್ಲಿ, ನಾನು ನಮ್ಮವರೆಂದು, ಅಲೆದಾಡುತ, ಹುಡುಕಾಟ ಮುಗಿಸುವುದರೊಳಗೆ, ಬರದೂರಿಗೆ ಕರೆ ಬರುವುದು, ಜೀವನ.... ಎಲ್ಲ ತಿಳಿದಿದ್ದರೂ ನಾಟಕದ ಸರಮಾಲೆ, ಬಾಲ್ಯ ಯವ್ವನ ಮುಪ್ಪು ಚಕ್ರವ್ಯೂಹ, ವಿಧ ವಿಧ ಬಾಣಸಿಗರ ಕೈ ಅಡುಗೆಯಂತೆ, ಎಲ್ಲರಲ್ಲೂ ಬಗೆ ಬಗೆಯ ತಿರುವು ಪ್ರತಿ ಘಟ್ಟಕೆ... ಇದೇ ಸರಿ ಎಂಬುದಕ್ಕೆ ಈಗಷ್ಟೆ ಸಹಮತ, ನಾಳೆಯ ಸತ್ಯದೆಡೆಗೆ ನಿತ್ಯ ಪಯಣ, ನಿರಂತರ... ರಾಧೆ... 🎶 Show more reactions ನೆನಪುಗಳ ಹಂದರದಿ ನಿನ್ನದೇ ಅಗ್ರ ಸ್ಥಾನ, ನಗುವಲ್ಲು ನೀನೆ, ಅಳುವಲ್ಲು ನೀನೆ, ಹುಚ್ಚಿಯಾಗುವ ಮುನ್ನ, ಹಚ್ಚಿಕೊಂಡಿಹದ ಅರುಹಲೇ, ಹುಚ್ಚಿ ನಾನು... ದೂರ ಸರಿದಷ್ಟು ಹತ್ತಿರವಾಗುತಿಹೆ ಈ ಮನಕೆ, ಬಾರಿ ಬಾರಿಗೂ ಕಾಡಲು ಮನಸಾದೀತು ಹೇಗೆ ನಿನಗೆ, ತಿಳಿದು ತಿಳಿದು ಆಡುವ ಆಟಕ್ಕೆ ನಾನೇಕೆ ಆಟಿಗೆ, ಸಾವಿರ ಪ್ರಶ್ನೆಗಳಿಗೂ ಸಾವೇ ಇಲ್ಲ, ಕಾರಣ ಉತ್ತರವೇ ಇಲ್ಲ... ಬಹುಶಃ ಹುಚ್ಚಿ ನಾನು... ಭಾವನೆಯ ತೋಟದಲಿ ನಿನ್ನದೇ ಕಂಪು, ಹೂ ಬಿರಿದಾಗಲೆಲ್ಲ ಕಾಲವೇ ನಿಲ್ಲಬಾರದಿತ್ತೇ ಎಂಬ ಸ್ವರ, ಸಮಯದ ಜೊತೆಯಲ್ಲಿ ಬಾಡಿಹುದು ತಾನಾಗಿ, ಗಿಡವಿನ್ನು ಹಸಿರಿಹುದು ಎಂಬುದೇ ಖುಷಿ, ಹುಚ್ಚಿ ನಾನು... ರಾಧೆ... 🎶 ಸಾಯಬೇಕೆಂದುಕೊಂಡಾಗಲೆಲ್ಲ ಕಾಡುವ ನೆನಪುಗಳು, ಒಂದಿಷ್ಟಾದರೆ ಹೇಗೊ ಹೊತ್ತೊಯ್ಯ ಬಹುದಿತ್ತು, ಹೆಚ್ಚಾದ್ದನ್ನು ಮಗೆದಷ್ಟು...
- Get link
- X
- Other Apps
ಹೀಗೊಂದು ಯೋಚನೆ ನಿನ್ನೆ ಬಸ್ಸಲ್ಲಿ ಕೂತಿದ್ದೆ, ಹೊರಗೆ ಮಳೆ ಜಿಟಿ ಜಿಟಿ ಸುರಿಯುತ್ತಿತ್ತು. ಮಳೆಗಾಲದ ಸಮಯದಲ್ಲಿ ಕಿಟಕಿ ಪಕ್ಕ ಕೂರುವುದೆಂದರೆ ಏನೋ ಅಲರ್ಜಿ, ಅದಕ್ಕೆ ಬಳಿಕ ಬಂದವಳಿಗೆ ಕಿಟಕಿಯ ಬಳಿ ಬಿಟ್ಟು ನಾ ಆರಾಮವಾಗಿ ಕುಳಿತೆ. ಕಿಟಕಿಯ ಗಾಜು ತೆರದಿದ್ದ ಕಾರಣ ಮಳೆಯ ಜುಮುರು ಮುಖಕ್ಕೆ ರಾಚುತ್ತಿತ್ತು. ಒಮ್ಮೆ ಎದ್ದು ಮುಚ್ಚುವ ಮನಸಾಯಿತು. ಆದರೆ ಕೆಲವೇ ಕ್ಷಣಕ್ಕೆ ನಾ ತಲುಪುವ ಜಾಗ ಬರಲಿದ್ದ ಕಾರಣ ಹಾಗೇ ಕುಳಿತೆ. ಅಲ್ಲಿ ತಲುಪುವ ತನಕವೂ ಇವಳು ಯಾಕೆ ಹಾಕುತ್ತಿಲ್ಲ, ಮುಂದೆ ಪ್ರಯಾಣಿಸ ಬೇಕಿರುವುದು ಇವಳೇ ಅಲ್ಲವೇ, ಬೇಕಿದ್ದರೆ ಹಾಕಿಕೊಳ್ಳಲಿ, ಎಂದುಕೊಂಡು ಚಡಪಡಿಸುತ್ತ ಕೂತಿದ್ದೆ. ಏನೋ ಬೇಡವೆಂದರು ಅದರ ಬಗೆ ಗೆ ಗಮನ... ಅಷ್ಟರಲ್ಲಿ ನಾ ಬಸ್ಸಿಳಿವ ಜಾಗ ಬಂತು. ಮತ್ತೊಂದು ಬಸ್ಸನ್ನು ಏರಿದೆ. ಕೂರಲು ಜಾಗವಿರಲಿಲ್ಲ, ಹಾಗೆ ತೂಗಾಡುತ್ತಾ ಸಾಗಿತ್ತು ಪಯಣ. ಹತ್ತು-ಹದಿನೈದು ನಿಮಿಷಗಳ ಬಳಿಕ ಯಾರೊ ಇಳಿದರು, ಅಂತೂ ಕೂತೆ. ಅಬ್ಬ!! ಎಂದು ಉಸಿರುಬಿಟ್ಟೆ, ಯಾಕೋ ಚಾಲಕ ಜಟಕಾ ಬಂಡಿ ತರ ಬಸ್ಸನ್ನ ಓಡಿಸುತ್ತಿದ್ದ. ಅಷ್ಟರಲ್ಲಿ ಒಬ್ಬ ಅರವತ್ತರ ಆಸುಪಾಸಿನ ಹೆಂಗಸು ಬಸ್ಸನ್ನೇರಿದರು. ಮುಖ ದಣಿದಂತೆ ಇತ್ತು, ಕೂತ್ಕೊಳಿ ಎಂದು, ನಾನು ಎದ್ದೆ. ಕೂರುವಾಗ ಅವರು ಬೇಡವೆಂದರು ನನ್ನ ಕೈಲಿದ್ದ ಚೀಲವನ್ನ ಹಿಡಿದುಕೊಂಡರು, ಧನ್ಯವಾದ ಅರ್ಪಿಸಿದರು. ಬಳಿಕ ಆಂಟಿ ಒಬ್ಬರು ಕೆಮ್ಮುತ್ತದ್ದರು, ನೀರು ಕೊಡಲು ಏನೋ ಹಿಂಜರಿತ, ಸ್ವಲ್ಪ ...
- Get link
- X
- Other Apps
ಖುಷಿಯನರಸಿ ಹೊರಟಿತ್ತಾಗ ಮನ ನೆರೆಮನೆಯ ಇಣುಕಿ ಉಪ್ಪರಿಗೆ ಮನೆ, ಕಾಲಿಗೆ ನಾಲ್ಕಾಳು ಸ್ವರ್ಗದಾ ಬಾಗಿಲೇ ಬೀದಿಗೆಲ್ಲಾ ದಾಟುವ ದಾರಿಯಲಿ ಕೋಳೆತ್ತರಕೆ ಹೊಲಸು ಚಿಂದಿ ಆಯುವಾ ಹೆಂಗಸು ಬಿಸಿಲಲ್ಲಿ ಅರಳಿದ ತಾವರೆಯಂತೆ ನಗುವ ಬೀರುವ ಕಂಕುಳಲಿಹ ಕಂದ ಪ್ರಶ್ನೆಗಳ ಸುಳಿಯಲ್ಲೆ ಸಾಗಿತ್ತು ಹಾದಿ ಹಿಂದಿಟ್ಟೆ ಅಡಿ ಭಯಭೀತಳಾಗಿ ಮುಗಿಲ ಮುಟ್ಟಿದ ಅಟ್ಟಹಾಸದ ನಗುವಿಗೆ ಅಪ್ಯಾಯಮಾನವೆನಿಸಿತು ತಿರುಕನ ಮಂದಹಾಸ... ರಾಧೆ... 🎶