Posts

Showing posts from December, 2016
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ನಾ ನ ಗ ಬೇ ಕಿ ತ್ತು... ಕತ್ತಲಲ್ಲಾದರು ಬೆತ್ತಲಾಗುವ ಜೀವ ನಾನಾಗ ಬೇಕಿತ್ತು ಜಗದ ಎಲ್ಲ ಆಡಂಬರವ ಕಳಚಿಡುತ್ತಿದ್ದೆ ನನ್ನ ಜಗದ ಸುಖ ದುಃಖವನ್ನೆಲ್ಲಾ ಮುಡಿಯಲ್ಲಿ ಕಟ್ಟಿಡುತ್ತಿದ್ದೆ ನನ್ನ ಬತ್ತಿದ ದನಿಗಳಿಗೆ ಮರು ಜೀವ ಕೊಡುತ್ತಿದ್ದೆ ಕಮರಿದ ಕನಸುಗಳ ನೆನೆದು ಗೋರಿ ಕಟ್ಟುತ್ತಿದ್ದೆ ನಗು- ಅಳುವಿನ ವ್ಯತ್ಯಾಸ ಮತ್ತಷ್ಟು ಕಿರಿದಾಗಿಸುತ್ತಿದ್ದೆ ಯಾರ ನೋವಿಗೋ ನೋವಾಗಿ ಯಾರ ನಲಿವಿಗೋ ನಲಿವಾಗಿ ಯಾರಲ್ಲೋ ವಿಲೀನವಾಗುವಾಗ ನನ್ನೆಲ್ಲೆ ಮರೆಯುತ್ತಿದ್ದೆ ರಾಧೆ...🎶
Image
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ.  ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
Image
ಭೂತ ಭವಿಷ್ಯಗಳ ನಡುವೆ  ಕಾಲಕ್ಕೆ ಸಡ್ಡೊಡೆದು  ಹಿಂತಿರುಗಿ ನಡೆವಾಗ ನಾನೆಡವಿ ಬಿದ್ದೆ ಪೆಟ್ಟಿನ ಬಲ  ಲಘುವಿತ್ತು ಗಮನಕ್ಕೆ ಮತ್ತೆ ಎಡವಿದೆ ತಿರುಗಿ ಬೀಳದಂತೆ ಗಾಯದ ಆಳ ಕೆದಕಿತ್ತು ತನ್ನತನ ಪುನಃ ಎಚ್ಚರಿಸಿತು ಕನಸಿನ ಮನೆಗೆ ಸಾಗುವ ದಾರಿಯ ಬೆಳಕನ್ನ ಪಡೆದುಕೊ ಸವೆದ ಹಾದಿಯ  ಕತ್ತಲನ್ನು ಅಲ್ಲ ರಾಧೆ...
Image
 ನಾನು ರಾಧೆ ಎಲ್ಲ ಬಂಧನಗಳ ಎಲ್ಲೆ ಮೀರಿ ಬಂದೆ ನಿನ್ನ ಸಾನಿಧ್ಯಕೆ ಹೆಸರಿಡುವ ಅನಿವಾರ್ಯ  ನಮಗಿರಲಿಲ್ಲ ನಾ ಕೇಳಲಿಲ್ಲ, ನೀ ಹೇಳಲಿಲ್ಲ ಉಸಿರಾಯಿತು ಮರ-ಗಿಡ ಝರಿ-ತೊರೆ ಕೊಳಲು ಜಗದ ಸಂತೆಯಲಿ ಕಿತ್ತಾಡುವರು ಸದಾ ನಮ್ಮ ಕುರಿತೆ ಮನಬಂದಂತೆ ಹಚ್ಚುವರು ಬಂಧನದ ಬಣ್ಣ ಉತ್ತರ ಎಲ್ಲದಕ್ಕೂ ಕೊಟ್ಟೆ, ಎಲ್ಲರಿಗೂ ಕೊಟ್ಟೆ ನೀನು ನನ್ನ ಹೆಸರಿಗೆ ಮಾತ್ರ, ಒಮ್ಮೆ ಮುಗುಳ್ನಗೆ, ದೀರ್ಘ ಮೌನ ನಾ ಬಲ್ಲೆ ನಿನ್ನ ಅಂತರಂಗದಾಳ ನನಗೆ ಕಾರಣ ಎಂದೂ ಬೇಕಿಲ್ಲ ಲೋಕದ ಕಣ್ಣಿಗೆ ನಾನೆಂದೋ ಮರುಳೆಯಾಗಿಹೆ ಸವೆಸಿಬಿಡುವೆ ಜೀವ ನಿನ್ನ ಕೊಳಲದನಿಯಿಂಪಲ್ಲೆ ಯಾರಿಗೂ ಸೋಲದಿರು, ನ್ಯಾಯಕ್ಕೆ ತಲೆಬಾಗು ನನ್ನ ನೆನಪು ಎಂದೂ ಕಾಡದಿರಲಿ ಉಸಿರಿರುವ ತನಕ ಇಲ್ಲಿಯೇ ಕಾಯುವೆ ನಿನ್ನ ಭೂತದಲ್ಲೆ ನಾ ಕಾಲ ಕಳೆವೆ ಪ್ರಶ್ನೆಯೇ ಇರಲಿ ಇವರಿಗೆಲ್ಲಾ... ರಾಧೆ...
Image
ಒಮ್ಮೆ ಹೆಗಲಾಗು   ಆ ಸೂರ್ಯನಿಳಿವ ಹೊತ್ತು ಬೆಳ್ಳಿ ಬಾನಾಡಿ ಜೊತೆಗೂಡಿ,  ಬಾನೆಲ್ಲ ತಮದೆಂದು ನಲಿಯುತ್ತ ಸಾಗುವಾಗ ನಿನ್ನ ಮೊಗ ಚಂದ್ರನಿಗೆ ಮೆಲ್ಲನುಲಿವೆ ಪಿಸುಮಾತು ಇನ್ನಾರು ಕೇಳದಿರಲೆಂದು ಅಲೆಗಳಬ್ಬರ ಹೆಚ್ಚಿಸಿದೆ ಗಾಳಿಯೂ ನಿಡುಸೊಯ್ಯುತಿದೆ ಇನ್ನೇನು ಬೇಕಿನಿಯ... ಮನದ ಮೂಲೆಯಲಿರುವ  ಭಾವನೆಗೆ ಕಿವಿಯಾಗು ಅಲೆಗಳಲಿ ತೇಲಿ ಬಿಡುವೆ ಕನಸುಗಳ ದೋಣಿ ಸಾಕ್ಷಿಯಾಗಲಿ ಪಂಚಭೂತಗಳು ಇಲ್ಲಿ ನಾವಿಕನು ನೀನಾಗು ಜೊತೆಗೂಡಿ ಹುಟ್ಟಾಕುವಾ ದಡ ಸೇರೊ ತನಕಾ ಒಮ್ಮೆ ಹೆಗಲಾಗು,.. ರಾಧೆ...
Image
ಸಾವೆಂಬ ಒಂಟಿ ಮನೆ  ಹುಟ್ಟಿನೊಡನೆ ಅಂಟಿ ಬಂದ  ಸಾವೆಂಬ ಭಯದ ಭೂತ ಬೇಡವೆಂದರು ತೊರೆಯದು ನೀ ನಿನ್ನ ತೊರೆವ ತನಕ ಕಿತ್ತಿಡುವ ಪ್ರತಿ ಹೆಜ್ಜೆಗೂ ಹೆಚ್ಚು ಗಮನ ನಾಳೆಗಳ ಕನಸಬಿತ್ತಿ  ದೂರ ತಳ್ಳುವ ಹುನ್ನಾರ  ಎಲ್ಲಿ ಹೇಗೆ ಅವಿತಿಹುದೋ ಬಲ್ಲವರು ಇಲ್ಲ ಬಂದಾಗ ಇದರ ಕೈಗೊಂಬೆ ಎಲ್ಲ ಬಿಗಿದಪ್ಪಿಕೊಳ್ಳುವರು ತಿರುಗಿ ಬಾರದಂತೆ ರಾಧೆ...
Image
 ಅಯತ ಮೌನ ಆಡದ ಮಾತಿಗೆ ಎಷ್ಟೊಂದು ರೂಪ ಹುಣ್ಣಿಮೆಯ ಬಾನು, ನಕ್ಷತ್ರ ಸಾಲು ಸೂತಕದ ಛಾಯೆ, ಮನೆಯೊಳಗೆ ಮಡುಗಟ್ಟಿದ ನೋವು, ಹೇಳಲಾರದ ರೋಷ ಯಾರ ಮೇಲೊ.. ಸೆರಗು ಬಾಯ್ಗಿಟ್ಟು, ಬಿಕ್ಕುದರ ತಡೆದರೂ ಕಣ್ಣೆಲ್ಲಿ ಸಮ್ಮನಾದೀತು ಕೇಳಿದ್ದು ನಿಜವೇ, ಕಣ್ಣಲ್ಲೆ ಮಾತಾನಾಡುತ್ತಿತ್ತು ಕರುಳ ಕುಡಿ ನೋಟ ದಿನಗಳುರುಳಿ, ಮರ ಹಸಿರಾಗಿತ್ತು ರೋಗ ಗ್ರಸ್ತ ಬೇರು ಅಂಟಿತ್ತು ಹಾಗೆ ದಿನದಿಂದ ದಿನಕೂ ವ್ಯಾಪಿಸಿದ ಜಾಡ್ಯ ನೆಲ ಕಂಡಿತು, ಸಣ್ಣ ಸುಳಿಗಾಳಿಗೆ ರಾಧೆ... 🎶