Posts

Showing posts from March, 2017
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Image
ವಯ್ನಾಡ ಯಾನ: ೨ ರಾತ್ರಿ ನಾವು ಬಸ್ ಏರಿದಾಗ ೧೧ ದಾಟಿತ್ತು, ನನಗೆ ಸುಮಾರಾಗಿ ಬಸ್ ಪ್ರಯಾಣ ಮಾಡುವಾಗ ನಿದ್ದೆ ದೂರ, ಅಂತಹುದರಲ್ಲಿ ಈ ಪ್ರಾಣಿಗಳ ಕಾಟಕ್ಕೆ ನಿದ್ರಾದೇವಿ ಓಡಿಹೋಗಿದ್ದಳು. ಇನ್ನೇನು ನಿದ್ರಿಸಬೇಕೆನ್ನುವಷ್ಟರಲ್ಲಿ ಒಬ್ಬೊಬ್ಬರಾಗಿ ಇಳಿಯ ತೊಡಗಿದರು. ೫.೩೦ರ ಸುಮಾರಿಗೆ ಕಲ್ಪೇಟ ತಲುಪಿದೆವು. ನಿದ್ದೆಕಣ್ಣು, ತಲುಪಬೇಕಾದ ಜಾಗವನ್ನು ಮತ್ತೆ ಮತ್ತೆ ಓದಿಕೊಂಡು ನಮಗೆ ವರದಿ ವಪ್ಪಿಸಿದ 'ಅಂಬಾಲವಯ್ಯಾಲ'.. ಅಲ್ಲಿ ನಿಂತಿರುವವರ ಬಳಿ, ಹತ್ತಬೇಕಾದ ಬಸ್ಸು ಕೇಳಿ ಬಸ್ ನಿಲ್ದಾಣದಲ್ಲಿ ನಿಂತೆವು. ಚುಮುಚುಮು ಚಳಿ, ಇಬ್ಬನಿ ಕಟ್ಟಿದ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿತ್ತು ಎ.ಸಿ. ಬಸ್. ನಾವು ತಲುಪ ಬೇಕಾದ ಜಾಗ conductorಗೆ ಹೇಳಿದೆವು. ಅವನು ಯಾವುದೋ ಸಹ ಪ್ರಯಾಣಿಕನನ್ನು ಹಿಂಬಾಲಿಸಲು ಹೇಳದ. ಅಲ್ಲಿ ಇಳಿದಾಗ ಇನ್ನು ಬೆಳಕು ಹರಿದಿರಲಿಲ್ಲ. ಕಡುಕಪ್ಪು ಡಾಂಬರು ರಸ್ತೆ, ನಿಶ್ಯಬ್ದವಾಗಿ ಮಲಗಿತ್ತು. ಅಲ್ಲಿ ನಿಂತಿದ್ದವರ ಬಳಿ ಕೈಸನ್ನೆಯ ಮೂಲಕ ಬಸ್ ಬರುವ ದಾರಿ, ಸಮಯ ತಿಳಿದು ಆ ಕಡೆ ನಿಂತೆವು, ಬಸ್ ಬರಲು ಸಮಯವಿದ್ದ ಕಾರಣ ಮುಂದಿನ ನಿಲ್ದಾಣದವರೆಗೆ ನಡೆಯೋಣ ಎಂದುಕೊಂಡು ಹಜ್ಜೆಹಾಕಿದೆವು. ಅಪ್ಪಿ ತಪ್ಪಿ ಬರುವ ಎಲೆಕ್ಷನ್ ನಲ್ಲಿ ಸರಿಯಾದ ಎಮ್ ಎಲ್ ಎ, ಎಮ್ ಪಿ ಗಳನ್ನು ಆರಿಸಿದ್ರೆ ಶಿರಸಿ-ಸಿದ್ದಾಪುರ ಹೇಗೆ ಕಾಣಬಹುದೋ ಹಾಗೆ ಇತ್ತು ಇದು. ಎಲ್ಲೂ ಹೊಂಡಕಾಣದ ಡಾಂಬರು ರಸ್ತೆ, ಅಡಿಕೆ, ಕಾಫಿ ತೋಟ, ಸುಂದರವಾದ ಮನೆಗಳು. ಅಷ್ಟರಲ್ಲೇ ...
Image
ವಯ್ನಾಡ ಯಾನ:೧ ಅಂದು ಬುಧವಾರ, ಮಧ್ಯಾಹ್ನ ಊಟ ಮುಗಿಸಿ ಎನೋ ಮಾಡುತ್ತ ಕೂತಿದ್ದೆ. ಅಷ್ಟರಲ್ಲಿ WhatsApp ಸಂದೇಶ ಸಹನಕ್ಕಾ ಕಳುಹಿಸಿದಳು, '೧೧, ೧೨ free ಇದ್ಯನೆ ಕೂಸೆ' ಅಂತಾ, ಏನು ಹೇಳ್ಲಿ?? Bangalore ಬರ್ತಾ ಇರ್ಬೋದಾ? ನನ್ನ official birthday, DBT exam ಗೆ ಓದಬೇಕು..... ಏನೆ ಇರ್ಲಿ, ಅಂದುಕೊಂಡು, 'not for you' ಅಂದೆ. 'ವಯ್ನಾಡ' ಬರ್ತೀಯಾ ಕೇಳಿದಳು. ನಂಗೆ ಎಲ್ಲಾ ಮರ್ತೋಯ್ತು. ಇದು ೨ನೇ ಸಲ ಹೋಗೋಕೆ ಕೇಳ್ತಿರೊದು. ಜನವರಿಯಲ್ಲಿ ಹೀಗೆ ಒಮ್ಮೆ ಪ್ಲಾನ ಮಾಡಿ ಗಾಳಿಗೆ ಹಾರಿಸಿದ್ವಿ. 'ಈ ಬಾರಿ ಯಾರೂ ಬರಲು ಸಿದ್ದವಾಗದಿದ್ದರೆ ನಾವಿಬ್ಬರೆ ಹೋಗೋಣಾ ಪಕ್ಕಾ' ಪದೆ ಪದೇ ಹೇಳಿಕೊಂಡು ಜೊತೆಗೆ ಯಾರು ಯಾರು ಬರಬಹುದು ಎಂದು ಇಬ್ಬರೂ ಶುರು ಹಚ್ಚಿಕೊಂಡೆವು. ನನ್ನ ಅಣ್ಣ, relatives, close friends, ಎಲ್ಲರಿಗೂ ಒಂದೊಂದು ಸಂದೇಶ ಎಸೆದಿದ್ದಾಯಿತು. ಎಲ್ಲರಿಂದ ಒಂದೆ ಪ್ರಶ್ನೆ, ಉತ್ತರ,' ಯಾರ್ ಯಾರು ಹೋಗ್ತಿದೀರಾ? ಹೇಗೆ ಹೋಗೋದು, ನಾನು ಸ್ವಲ್ಪ busy, may be next time!!!!'. ನಾನು ಮತ್ತು ಕೆಲವು fb frnds ಕೇಳಿದೆ, ಹುಡುಗರು ಇದ್ದರು. ಬಹುಶಃ ವಿಚಿತ್ರ ಎನಿಸಿರ ಬಹುದು!! ಮೊದಲು ಮುಜುಗರ ಎನಿಸಿದ್ದು ನಿಜ. ಏನೆ ಆಗಲಿ ಎಂದು ಸಹನಕ್ಕನ ಒಮ್ಮೆ ಕೇಳಿದೆ. 'Ok, ಆದ್ರೆ, ಹುಡುಗಿಯರ ಜೊತೆ ಬರಲು ಒಪ್ಪುವುದು ಏನೋ,' ಎಂದಳು. ಸರಿ-ತಪ್ಪು ಯೋಚಿಸಲು ಸಮಯ ಇರಲಿಲ್ಲ. ನಾ ಕೇಳ...