ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
- Get link
- X
- Other Apps
ವಯ್ನಾಡ ಯಾನ: ೨ ರಾತ್ರಿ ನಾವು ಬಸ್ ಏರಿದಾಗ ೧೧ ದಾಟಿತ್ತು, ನನಗೆ ಸುಮಾರಾಗಿ ಬಸ್ ಪ್ರಯಾಣ ಮಾಡುವಾಗ ನಿದ್ದೆ ದೂರ, ಅಂತಹುದರಲ್ಲಿ ಈ ಪ್ರಾಣಿಗಳ ಕಾಟಕ್ಕೆ ನಿದ್ರಾದೇವಿ ಓಡಿಹೋಗಿದ್ದಳು. ಇನ್ನೇನು ನಿದ್ರಿಸಬೇಕೆನ್ನುವಷ್ಟರಲ್ಲಿ ಒಬ್ಬೊಬ್ಬರಾಗಿ ಇಳಿಯ ತೊಡಗಿದರು. ೫.೩೦ರ ಸುಮಾರಿಗೆ ಕಲ್ಪೇಟ ತಲುಪಿದೆವು. ನಿದ್ದೆಕಣ್ಣು, ತಲುಪಬೇಕಾದ ಜಾಗವನ್ನು ಮತ್ತೆ ಮತ್ತೆ ಓದಿಕೊಂಡು ನಮಗೆ ವರದಿ ವಪ್ಪಿಸಿದ 'ಅಂಬಾಲವಯ್ಯಾಲ'.. ಅಲ್ಲಿ ನಿಂತಿರುವವರ ಬಳಿ, ಹತ್ತಬೇಕಾದ ಬಸ್ಸು ಕೇಳಿ ಬಸ್ ನಿಲ್ದಾಣದಲ್ಲಿ ನಿಂತೆವು. ಚುಮುಚುಮು ಚಳಿ, ಇಬ್ಬನಿ ಕಟ್ಟಿದ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿತ್ತು ಎ.ಸಿ. ಬಸ್. ನಾವು ತಲುಪ ಬೇಕಾದ ಜಾಗ conductorಗೆ ಹೇಳಿದೆವು. ಅವನು ಯಾವುದೋ ಸಹ ಪ್ರಯಾಣಿಕನನ್ನು ಹಿಂಬಾಲಿಸಲು ಹೇಳದ. ಅಲ್ಲಿ ಇಳಿದಾಗ ಇನ್ನು ಬೆಳಕು ಹರಿದಿರಲಿಲ್ಲ. ಕಡುಕಪ್ಪು ಡಾಂಬರು ರಸ್ತೆ, ನಿಶ್ಯಬ್ದವಾಗಿ ಮಲಗಿತ್ತು. ಅಲ್ಲಿ ನಿಂತಿದ್ದವರ ಬಳಿ ಕೈಸನ್ನೆಯ ಮೂಲಕ ಬಸ್ ಬರುವ ದಾರಿ, ಸಮಯ ತಿಳಿದು ಆ ಕಡೆ ನಿಂತೆವು, ಬಸ್ ಬರಲು ಸಮಯವಿದ್ದ ಕಾರಣ ಮುಂದಿನ ನಿಲ್ದಾಣದವರೆಗೆ ನಡೆಯೋಣ ಎಂದುಕೊಂಡು ಹಜ್ಜೆಹಾಕಿದೆವು. ಅಪ್ಪಿ ತಪ್ಪಿ ಬರುವ ಎಲೆಕ್ಷನ್ ನಲ್ಲಿ ಸರಿಯಾದ ಎಮ್ ಎಲ್ ಎ, ಎಮ್ ಪಿ ಗಳನ್ನು ಆರಿಸಿದ್ರೆ ಶಿರಸಿ-ಸಿದ್ದಾಪುರ ಹೇಗೆ ಕಾಣಬಹುದೋ ಹಾಗೆ ಇತ್ತು ಇದು. ಎಲ್ಲೂ ಹೊಂಡಕಾಣದ ಡಾಂಬರು ರಸ್ತೆ, ಅಡಿಕೆ, ಕಾಫಿ ತೋಟ, ಸುಂದರವಾದ ಮನೆಗಳು. ಅಷ್ಟರಲ್ಲೇ ಅಲ್ಲಿ ಬಂದ ಅಂಕಲ್ ಮುಗುಳ್ನಕ್ಕು ಗಾಡಿ ನಿಧಾನಿಸಿದರು, ಸ್ವಲ್ಪ English, ಕೈಸನ್ನೆ ಮೂಲಕ ಗೊತ್ತಾಯಿತು, ಮುಂದಿನ ಬಸ್ ನಿಲ್ದಾಣ ೨ಕಿ.ಮೀ. ದೂರದಲ್ಲಿದೆ ಹಾಗೂ ಈಗ ಬಸ್ ಬರುವ ಸಮಯವಾಗಿದೆ ಎಂದು. ತಿರುಗಿ ಸ್ವಸ್ಥಾನಕ್ಕೆ ಮರಳಿದೆವು. ಅಷ್ಟರಲ್ಲೇ ಬಸ್ ಬಂತು, ಅವರು ಹೇಳಿದ ಜಾಗದಲ್ಲಿ ಇಳಿದು ಸಹನಕ್ಕಾಗೆ call ಮಾಡಿದೆವು. ಎಲ್ಲಾ ಕಡೆ fish ಘಮ್ ಗುಡುತ್ತಿತ್ತು. ಎಲ್ಲೂ ವೆಜ್ ಹೋಟೆಲ್ ಕಾಣಲಿಲ್ಲ. ನಾನು ತರಕಾರಿ ಅಂಗಡಿ ಇದೆ, ನಂಗೆ ಸಾಕು, ಎಂದೆ. ಅದಕ್ಕೆ, ಇಲ್ಲಿ fish ತರಕಾರಿ ಜಾತಿನೆ, ಒಟ್ಟಿಗೆ ಮಾರುವರು ಎನ್ನುತ್ತ ಕಾಲೆಳತ ಶುರುವಿಟ್ಟುಕೊಂಡರು. ವಾಸನೆ ಸವಿಯುತ್ತ ರೂಮ ತಲುಪಿದೆವು.
ಅಲ್ಲಿ ನಮಗೆ ರೂಮ್ ಒದಗಿಸಿ ಸಹನಕ್ಕ ಡ್ಯೂಟಿಗೆ ತೆರಳಿದಳು.
ಹೋಗುವಾಗ ಒಂದುlist ,ಮಾಡಿಟ್ಟಿದ್ದಳು, ಎಲ್ಲೆಲ್ಲಿ ಹೋಗುವುದು ಎಂದು. ಡ್ರೈವರ್ ನಂಬರ್ ಕೊಟ್ಟು, ತಯಾರಾದ ಬಳಿಕ call ಮಾಡಿ ಎಂದರು. ಚಳಿಯಲ್ಲಿ ತಣ್ಣೀರ ಸ್ನಾನ ಗೌರಿಯ ಹೊಸ ರಾಗಕ್ಕೆ ನಾಂದಿಯಾಯಿತು. ಕಿಟ್ಟಿಗೆ ನಾವು ಬಿಸಿನೀರಿನ ಸ್ನಾನ ಮಾಡಿದ್ದು ಎಂದು ಉರಿಸಿದೆವು. ಆ list ರೂಮಲ್ಲೇ ಬೀಗ ಹಾಕಿ ಗಾಡಿ ಏರಿದೆವು. ಡ್ರೈವರ್ ಗೆ ಕನ್ನಡ ಸುಮಾರು ಬರುತ್ತಿತ್ತು. Pure veg hotel ಗೊತ್ತಿದ್ದರೆ ಕರ್ಕೊಂಡು ಹೋಗಿ ಎಂದೆವು. ಒಮ್ಮೆ ನಕ್ಕು, ಹೂಂ ಸರಿ ಎಂದು, ಒಂದು ಚಿಕ್ಕ canteenಗೆ ಕರೆದೊಯ್ದ. ಅಣ್ಣಾ translator ಆಗಿದ್ದ. ದೋಸೆ ಎಂದು ಕುಳಿತವು. ಲೋಟದಲ್ಲಿ ಕಂಪು ಬಣ್ಣದ ನೀರಿತ್ತು!! ನಮ್ಮ reaction ನೋಡಿ ಏನದು ಎಂದು ಕೇಳುವ ಮುನ್ನವೇ ಒಳಗಿಟ್ಟರು. ಬಳಿಕ ಸಹನಕ್ಕ ಹೇಳಿದಳು ಅದು ಯಾವುದೋ ಬೇರಿನ ನೀರು, ಎಲ್ಲರೂ ಹೆಚ್ಚಾಗಿ ಅದನ್ನೇ ಕುಡಿವರು ಎಂದು. ಬಳಿಕ ಹೋದಲ್ಲೆಲ್ಲ ಕೇಳಿ ತರಿಸಿಕೊಂಡು ಕುಡಿದೆವು. ಅಲ್ಲಿ ದೋಸೆಗೆ ನಮ್ಮ ಕಡೆಯ ತೆಂಗಿನ ಕಾಯಿ ತಂಬಳಿ, ಸಾಂಬಾರ್!! ಇದೇನು combination, ಕಾಯಿ ತುರಿ ಕಡಿಮೆ ಇತ್ತೇನೊ ಎಂದುಕೊಂಡೆವು. ಆದರೆ ರುಚಿ ಚೆನ್ನಾಗಿತ್ತು. ಹೊಟ್ಟೆ ಪೂಜೆಯ ಬಳಿಕ ನಮ್ಮ ಸವಾರಿ ಎಡಕಲ್ ಗುಹೆ ಕಡೆ ಸಾಗಿತು. ಅಣ್ಣನ ಡ್ರೈವಿಂಗ ಮಜಾ ತೆಗೆದುಕೊಳ್ಳುತ್ತ ದಾರಿ ಸಾಗಿದ್ದೆ ತಿಳಿಯಲಿಲ್ಲ. ನಮ್ಮ ಯಾಣ ನೆನಪಾಯಿತು. ಎಷ್ಟು ಹೊತ್ತು, parking area ದಿಂದ ಎಂದು ಕೇಳಿದೆವು. ೧೫ ನಿಮಿಷ ಎಂದ, ಎಲ್ಲಿಗೆ ಅವನು ಹೇಳದ್ದು ಇನ್ನೂ ಬಗೆ ಹರಿದಿಲ್ಲ. ಆ ಹತ್ತುವ ದಾರಿಯಲ್ಲಿ ಮಂಡಿ ತಲೆಗೆ ತಾಗುತ್ತಿತ್ತು. ನಾನು ನಡೆವ ರೂಢಿ ತಪ್ಪಿಸಿಕೊಂಡಿರುವುದು ಕ್ಷಣದಲ್ಲೇ ಅರಿವಾಯಿತು. ಸಾಗುವಾಗ ಅಲ್ಲಿದ್ದಲ್ಲಿಗೂ ಕನ್ನಡಿಗರೇ ಇದ್ದರು. ಅಲ್ಲಿ ಗಾರ್ಡ್ ಕೂಡ ಕನ್ನಡಿಗನಿದ್ದ. ಅರ್ಧ ದಾರಿ ಸಾಗುವ ವೇಳೆಗೆ, ನಿನ್ನೆ ರಾತ್ರಿ ನಿದ್ದೆ ಸರಿಯಾಗಿಲ್ಲಾ, ತುಂಬಾ travel ಮಾಡಿದ್ದು, ಎಲ್ಲೋ ಹೇಗೋ ತಿಂಡಿ ಮಾಡಿದ್ದು ಎಂದೆಲ್ಲಾ ನೆನಪಾಗ ತೊಡಗಿತು. ಕೆಳಗೆ ನೋಡಿದಾಗ ಸಣ್ಣದಾಗಿ ತಲೆತಿರುಗಿತು. ನಿಲ್ಲುತ್ತ breath in breath out ಮಾಡುತ್ತ, ಪುಟ್ಟಕ್ಕ ಗೌರಿಯನ್ನ ಸಂಭಾಳಿಸುತ್ತ ಮೇಲೆ ತಲುಪಿದೆವು, ಅಲ್ಲಿಯವರೆಗೂ ಮೆಟ್ಟಿಲು ಜೊತೆ ಕಬ್ಬಿಣದ ಸಲಾಕೆ ಆಸರೆಗಿತ್ತು. ಅಲ್ಲಿ ಬಂದಾಗ ಮತ್ತೆ ಇಳಿಯಬೇಕು, ಗುಹೆ ನೋಡಲು ಎಂದರು. ಒಮ್ಮೆ ಉಸಿರು ನಿಂತಿತು. ಗೌರಿ ನಾಳೆಯ trekking ಇಲ್ಲೆ ಆತು, ಸಾಕು ಎಂದಳು. ಸುತ್ತಲಿನ ಸೌಂದರ್ಯವನ್ನು ಕಣ್ಣಲ್ಲಿ cameraದಲ್ಲಿ ತುಂಬಿಕೊಂಡೆವು. ಬಳಿಕ ಗುಹೆಗಿಳಿದೆವು. ಅಲ್ಲಿ ಧೂಳಾಡದಿರಲೆಂದು ನೀರು ಚುಮುಕಿಸುತ್ತಿದ್ದರು. ಜೊತೆಗೊಬ್ಬ ಗಾರ್ಡ!!!! ಇಳಿದು ಬರುವ ದಾರಿಯೇ ಬೇರೆ ಇತ್ತು, ಇಳಿವಾಗ ಅಷ್ಟು ಕಷ್ಟವಾಗಲಿಲ್ಲ. ಎದುರಿಗೆ ಬಂದ ತಂಡ ಏನೋ comment ಒಗೆಯ ಬೇಕೆಂದಿದ್ದರು. ಅಷ್ಟರಲ್ಲಿ ನಮ್ಮ ಮಾತು ಕೇಳಿ, ಗಂಟಲಲ್ಲೇ ಉಳಿಯಿತು. ಏನೆ ಹೇಳಿ ಭಾಷೆ ಬರದ, ಗೊತ್ತಿಲ್ಲದ ಊರಲ್ಲಿ ಹದವಾಗಿ comment ಮಾಡೊದ್ರಲ್ಲಿ ಇರೋ ಮಜಾ ಎಲ್ಲೂ ಸಿಗಲ್ಲಾ, ಅದರಲ್ಲೂ ಡೈಲಾಗ ಒಗದ್ ಮೇಲೆ ಅವರು ಕನ್ನಡಿಗರೇ ಎಂದು ತಿಳಿಬೇಕು, ಮತ್ತೂ ಮಜಾ ಇರತ್ತೆ. ಅಲ್ಲಿ ಗೌರಿಯ replica ಬಂದಿದ್ದಳು(ಕೋತಿ ಅಲ್ಲಾ). Photo ತಗೋಳೆ ಎಂದು ಕಾಡಿಸಿದ್ದಷ್ಟೆ ಆಯಿತು. ಅಲ್ಲಿಯ ಅಂಗಡಿಯವರ ಔಪಚಾರಿಕತೆಗೆ ಮರುಳಾದೆವು. ಹೋಗುವಾಗ ಬನ್ನಿ ಎಂದಿದ್ದರು. Home made chocolate ತರಲು ಹೋದೆವು. ಕಳುಲೆ( tender bamboo) ಉಪ್ಪಿನಕಾಯಿ ನಂಗೆ, ಗೌರಿಗೆ free ಆಗಿ ಸವಿಯಲು ಸಿಕ್ಕಿತು. Chocolate ತಿನ್ನುತ್ತಾ ಗಾಡಿ ಏರಿದೆವು. ಸಹನಕ್ಕ ಇನ್ನೂ busy ಇದ್ದ ಕಾರಣ ನಾವು ನಾಲ್ಕು ಜನ ಕುರುವಾ ದ್ವೀಪದ ಕಡೆ ಸಾಗಿದೆವು. ಮತ್ತೆ ಪರಿಚಯ ಕಾರ್ಯಕ್ರಮ ಸಾಗಿತು. ಜೊತೆಗಿದ್ದ ಹಣ್ಣು ಹೊರಬಿತ್ತು. ದ್ರಾಕ್ಷಿ, ಸೇಬು, ಕತ್ತಳೆ ಮಾತಿಗೆ ಜೊತೆಯಾಯಿತು. ಅಷ್ಟರಲ್ಲಿ ಅಲ್ಲಿ ತಲುಪಿದೆವು. ದೊಡ್ಡದಾದ ತೆಪ್ಪ, ಹಗ್ಗ ಹಿಡಿದು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗುವುದು. ಬಿಸಿಲು ಹದವಾಗಿತ್ತು. ಸ್ವಲ್ಪ ದೂರ ನಡೆದ ಬಳಿಕ ಮತ್ತೆ ನೀರು ಸಿಕ್ಕಿತು. ಈಗ competition start ಆಗಿತ್ತು, ಯಾರು ದಾಟುವಾಗ ನೀರು ತಾಗಿಸಿಕೊಳ್ಳುವರೋ ಅವರು ರಾತ್ರಿ danceಮಾಡಬೇಕೆಂದು!! ಸರ್ಕಸ್ ಪ್ರಾರಂಭವಾಯಿತು. ಎರಡು ಕಡೆ ನೀರಲ್ಲಿ ಆಡುವಂತಿತ್ತು. ಗೌರಿ ನೀವೇನ್ ಬೆಕಾದ್ರು ಮಾಡ್ಕೊಳಿ, ನಾ ನೀರಲ್ಲೆ ಬರ್ತೀನಿ ಎಂದಳು. ಅವಳನ್ನು ದಾಟಿಸುತ್ತಾ ನಾನು ಸರ್ಕಸ್ ಮುಂದುವರಿಸಿದೆ. ಅಂತೂ ನಮ್ಮ destinationತಲುಪಿದೆವು. ಶೂ ಬಂಡೆ ಮೇಲಿಟ್ಟು ಕಾಲು ನೀರಲ್ಲಿ ಇಳಿ ಬಿಟ್ಟೆ. ಕಲ್ಲು ಚೆನ್ನಾಗಿ ಕಾದಿತ್ತು . ಕಿಟ್ಟಿ ಕಲ್ಲಿನ ಮೇಲೆ ಕಲ್ಲು ಜೋಡಿಸಲು ಪ್ರಾರಂಭಿಸಿದ. ನಾನು ಲಾಸ್ಯ ಜೊತೆಯಾದೆವು. ಅಷ್ಟರಲ್ಲಿ ಅಲ್ಲಿ ಇಬ್ಬರು ಬಂದು ಯಾವ college ಎಂದು ಕೇಳದರು. ಹೇಳಿ ಪುನಃ ಪುನಃ ಬೀಳುತ್ತಿದ್ದ ಕಲ್ಲಿಗೆ ಎಲೆ ಕಲ್ಲು ಕೊಟ್ಟು ನಿಲ್ಲಿಸಿದೆವು. ಅವರು ಕೈ ಮುಗಿದು ಹೋದರು. Photo ತೆಗೆಯ ತೊಡಗಿದೆವು. ಅಷ್ಟರಲ್ಲಿ ಗೌರಿ, ಹೆದರಿಕೆಯಿಂದ ನಮ್ಮ ಬಳಿಕ ಬಂದು ಅವರು ನಮ್ಮನ್ನ cover ಮಾಡ್ತಿದಾರೆ, ಬನ್ನಿ ಹೋಗೋಣ, ಯಾಕೊ safe ಅಲ್ಲಾ ಅನ್ನಿಸ್ತಿದೆ, ಎಂದಳು. ಒಮ್ಮೆ ಸುತ್ತ ನೋಡಿ, ಸಮಾಧಾನ ಮಾಡಿ, ಹೊರಟೆವು. ಈಗ ನಮ್ಮ ಮುಂದೆ ಆ ಗ್ಯಾಂಗ್ ಇತ್ತು. ಹೇ ಈಗಾ ನೀ ಅವರನ್ನ followಮಾಡ್ತಿದೀಯಾ ಎಂದು ಕಾಡಿಸಿದೆವು. ಸರಿಹೋದಳು. ಬಳಿಕ ಮತ್ತೆ ಮಾತು ಕತೆ, ಊರು, ಕೇರಿ, ಕನಸುಗಳ ಎಲ್ಲೆ ದಾಟಿತ್ತು. ವಾಪಸ್ ಬರುವಾಗ ಹಸಿವಾದ ನೆನಪಾಯಿತು. ಅಣ್ಣ ಅದ್ಯಾವುದೋ dosa hut pure veg ಹೋಟೆಲ್ ಗೆ ತಂದಿಟ್ಟ. ಊಟ ಪಕ್ಕಾ ಮನೆ ಊಟ!! ಹಷಿ (kind of rayata) ಪಲ್ಯ, ವಿಶಿಷ್ಠವಾದ ನುಗ್ಗೆಕಾಯಿ ಸಾಂಬಾರ್, ತಿಳಿ ಸಾರು ಇತ್ಯಾದಿ ಇತ್ಯಾದಿ!!
ಅಲ್ಲಿಂದ ಪುನಃ ನಾವು ಉಳಿದುಕೊಂಡಿದ್ದ ಜಾಗಕ್ಕೆ ತಲುಪಿದೆವು. ಸಹನಕ್ಕನನ್ನು ಕರೆದುಕೊಂಡು ಕರಪಾಳ ಡ್ಯಾಮ್ ನೋಡಲು ಹೋದೆವು. ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ನಡೆದು ಹೋಗಬೇಕಿತ್ತು. ನಾವು ದಾರಿ ತಪ್ಪಿ back water ಕಡೆ ಹೋದೆವು. ಸುಂದರವಾಗಿತ್ತು. ನಮ್ಮ ಹೊರತಾಗಿ ಬೇರೆ ಯಾರೂ ಇರಲಿಲ್ಲ. ನಮ್ಮ ಹರಟೆ, ತಂಗಾಳಿ, ಬೆಟ್ಟಗಳಿಗೆ ಹೊಂಬಣ್ಣವಿಡುತ್ತ ಮರೆಯಾಗುತ್ತಿದ್ದ ಸೂರ್ಯ, ಅಲ್ಲಲ್ಲಿ ಹಾರುವ ಪಕ್ಷಿ!!! ಇಲ್ಲಿಯೇ ಇರಬಾರದಿತ್ತೆ ನನ್ನ ಮನೆ ಎನ್ನಿಸಿತು. ಸೂರ್ಯನಿಗೆ ವಿದಾಯ ಹೇಳಿ ನಾವು ನಮ್ಮ ಗಾಡಿಯ ಕಡೆ ತಿರುಗಿದೆವು. ರಾತ್ರಿ ಊಟ super!! ಅಕ್ಕಿಯಿಂದ ಅನ್ನ ಮಾಡುವರೆಂದು practicalಆಗಿ ತೋರಿಸಿದ್ರು!! ಇಲ್ಲಿಂದ ತೆಗೆದುಕೊಂಡು ಹೋದ ಹಣ್ಣು ಮತ್ತೆ ಉಪಯೋಗಕ್ಕೆ ಬಂತು. ರಾತ್ರಿ ದಿನದ ಆಗುಹೋಗುಗಳನ್ನು ಚರ್ಚೆ ಮಾಡಿ ಮಲಗುವಾಗ ರಾತ್ರಿ ೧೨ ಆಗಿತ್ತು. ಬೆಳಗ್ಗೆ ೭ ಗಂಟೆಗೆ ಡ್ರೈವರ್ ಗೆ ಬರಲು ಹೇಳಿದ್ದರು. ಸಹನಕ್ಕ ಎದ್ದು ಸ್ನಾನ ಮುಗಿಸಿದಳು, ನಾನು ಮತ್ತೆ ಯಾರನ್ನು ಕಳಿಸುವುದು ಎಂದು ನೋಡುತ್ತ ಇದ್ದೆ, ಅಷ್ಟರಲ್ಲಿ ಲಾಸ್ಯ ಎದ್ದಳು, ಅವಳನ್ನು ಕಳುಹಿಸಿದೆ. ನನ್ನ ಸರದಿ ಬಂದಾಗ ನೀರು ಖಾಲಿ ಆಗಿತ್ತು. ಆಗ ತಾನೆ ಬಾವಿಯಿಂದ ಬಂದ ice cold water!!! ಅಬ್ಬಬ್ಬಾ!! ಈಗಲೂ ಚಳಿಯಾಗುತ್ತೆ ನೆನಪಿಸಿಕೊಂಡರೆ.. Late ಆಗಿ ಎದ್ದ ನನಗೆ, ಗೌರಿಗೆ, ಕಿಟ್ಟಿಗೆ ಟೀಚರ್ ಕೊಟ್ಟ punishment!!! ಸವಾರಿ ಹೊರಟಿತು.

ಅದೇ ಡ್ರೈವರ್! ಆ ತಿರುವು ದಾರಿಯಲ್ಲಿ ಅವನ ಗಾಡಿ ತಿರುಗುವುದು ಒಳ್ಳೆ wonderla game ಆಡಿದಂಗೆ ಇರುತ್ತೆ, ಎಲ್ಲೂ ಭಯವೆನಿಸಲಿಲ್ಲ. ಪ್ಯಾಂಥಮ್ ರಾಕ್ ಕಡೆ ಹೊರಟೆವು. ಅಲ್ಲಿ ರಾಕ್ ಗಿಂತ mining ಹೆಚ್ಚಾದಂತೆ ಭಾಸವಾಯಿತು. ನಂತರ ನಾವು ಹೊರಟಿದ್ದು ಕಾರಲ್ಯಂಡ ಲೇಕ್ ಕಡೆ. ಅಲ್ಲಿropingಇದ್ರೆ ಆಡೋಣ ಅಂತಾ ಹೋಗಿದ್ದು, ಅದರೆ ಅದು ಇರಲಿಲ್ಲ. ಹಾಗೆ ಸುತ್ತಾಡಿ, boating ಖಾಸ್ ಅನಿಸಲಿಲ್ಲ, ಉಯ್ಯಾಲೆ ಆಡಿ, ಹೊರಡಲಿದ್ದೆವು. ನಾನು ಸಹನಕ್ಕ ಸುಮ್ಮನೇ ಮೇಲ್ಭಾಗ ಹಾಗೆ ನೋಡಿ ಹೋಗೋಣ ಎಂದು ಮೇಲೆ ಹೋದೆವು. ನಕ್ಷತ್ರ ಮರ, ವಿವಿಧ ಬಗೆಯ ಮರಗಳಿದ್ದವು. ತಪಸ್ಸಿಗೆ ಸೂಕ್ತವಾಗಿತ್ತು. ನಾನು ತಪಸ್ಸಿಗೆ ಕೂತಿದ್ದೆ, ಅಷ್ಟರಲ್ಲಿ ಸಂಪಿಗೆ ಹಣ್ಣು ಕಣ್ಣಿಗೆ ಬೀಳೋದೆ!!! ನಮ್ಮ ಹಿಂಡು ಒಟ್ಟಾಯಿತು. ಪಾಪ ಆ ಮರ ನಮ್ಮ ಕಾಟ ಹೇಗೆ ಸಹಿಸಿಕೊಂಡಿತೋ!!! ಅಲ್ಲಿ ಯಾವ watchman ಇರಲಿಲ್ಲ, ನಮಗೆ ಜಾಗದ ಪರಿವೆ ಇರಲಿಲ್ಲ ಕೆಂಪು ಕೆಂಪು ಹಣ್ಣಿನ ಗೊಂಚಲ ಹೊರತಾಗಿ... ನಂತರ ಅಲ್ಲಿದ್ದ ಅಂಗಡಿಯಲ್ಲಿ ಕಾಯಿ ಕರಟದಿಂದ ಮಾಡಿದ ಕಲಾಕೃತಿಗಳನ್ನು ನೋಡಿ, ಹೊರಗಡೆ ಚಟ್ಟು ಹಾಕಿದ pineapple, ನೆಲ್ಲಿ ಕಾಯಿ ತಿಂದು ಹೊರಟೆವು. ಬಾಣಾಸುರ ಡ್ಯಾಮ್ ಗೆ ಹೊರಟೆವು. ಏಷ್ಯಾದ ೨ನೇ ದೊಡ್ಡ ಅರ್ಥ್ ಡ್ಯಾಮ್ ಅಂತೆ. ಗಾಡಿ ನಿಲ್ಲಿಸಿ ನಡೆಯ ತೊಡಗುದೆವು. ಬಿಸಿಲು ಜೋರಿತ್ತು. ಮೆಟ್ಟಲುಗಳನ್ನು ಏರಬೇಕಿತ್ತು. ನಾವು ಕಟ್ಟೆ ಏರಿದೆವು, ಮದ್ಯದಲ್ಲಿ ನಡೆಯುತ್ತಿದ್ದವರೆಲ್ಲ ನಮ್ಮ ಹಿಂಬಾಲಕರಾದರು. ಈಗ ಮತ್ತೆ ಬೆಟ್ಟಿಂಗ್, ಕೊನೆಯವರೆಗೂ ಯಾರು ಹೀಗೆ ಹೋಗುವರೆಂದು... ಎಲ್ಲೂ ಇಳಯದೆ ತಲುಪಾಯತು. ಅಲ್ಲಿ ಎಲ್ಲಾicecream ತಿಂದರು. ನಾನು ನನ್ನಿಷ್ಟದ hot hot spicy sweet cornತಿಂದೆ. Speed boating ಇತ್ತು!!! ಹೋ ಎಂದು ಓಡಿದೆವು, ಆದರೆ counter open at 2.30 !!! ಅಂತಾ ಬೋರ್ಡ್... ಸಮಯ ಇನ್ನು ೧೨... ನೋಡೋಣ, ಅಂತಾ, boating ಮಾಡೋ ಜಾಗದ ಮೇಲ್ಭಾಗದಲ್ಲಿ ಬಿದ್ದ ಮರದ ಅಕ್ಕ ಪಕ್ಕ photo shooting ಪ್ರಾರಂಭಿಸಿಕೊಂಡೆವು. ಆ boat ತಿರುಗುವ ರಭಸಕ್ಕೆ ಅಲ್ಲಿ ಕೂತವರಿಗಿಂತ ನಾವು ಕೂಗುತ್ತಿದ್ದೆವು. ಅಷ್ಟರಲ್ಲಿ ನಮಗೆ ಕಿರಿಕ್ ಪಾರ್ಟಿ movieಯ ಬೆಳಗೆದ್ದು ಯಾರ ಮುಖವ ನಾನು ನೋಡಿದೆ song ಬಂತು, ಎಲ್ಲಿತ್ತೋ energy ನಾವು ಜೋರಾಗಿ ಹೋ!!! ಅಂದಿದ್ದಕ್ಕೆ ಕ್ಯೂದಲ್ಲಿ ಇದ್ದವರು, boat ಇದ್ದವರು ಎಲ್ಲಾ ಒಮ್ಮೆ ನಮ್ಮಕಡೆ ನೋಡಿದರು. ನಾವು ಜೊತೆ ಹಾಡಿ free entertainment ಕೊಟ್ವಿ. ನಮ್ಮ ಒತ್ತಾಯದ ಮೇರೆಗೆ ಹೇ who are you song play ಆಯ್ತು... ಮುಗಿಸಿ ಮೇಲೆ garden areaಗೆ ಬಂದೆವು. ಇನ್ನೂ ೧.೩೦!! ಬಿಸಿಲ ಜಳಕ್ಕೆ ಕಣ್ಣುರಿತಾ ಇತ್ತು, goggleಕೊಡು ಅಂದ್ರೆ ಕಿಟ್ಟಿ ಕೊಡುತ್ತಿರಲಿಲ್ಲ. ಹೋಗಲಿ ಒಳ್ಳೆಯ ಹುಡುಗ್ರಾದ್ರು ಇದಾರ ಕಣ್ಣು ತಂಪು ಮಾಡಲು ಎಂದು ದೂರ ದೂರ ಕ್ಕೂ ನೋಡಿ ಕಣ್ಣು ನೋವು ಬಂತಷ್ಟೆ... Camera battery ಚಾರ್ಜ ಹಾಕಿ ಜೋಕಾಲಿ ಆಡುತ್ತ ಕೂತೆವು. ನಂತರ ಕ್ಯೂ ಆದರೆ ಎಂದು ನಾವು ಮೂವರು counterಗೆ ಬಂದೆವು. ಅಲ್ಲಿ ಒಬ್ಬ ಮುಲ್ಲಾ ೩ ಜನ ಹೆಂಗಸರು, ಮಕ್ಕಳು ಕೌಂಟ್. .... ನೀವ್ಯಾರಾದ್ರು ಮಾಡಿದ್ರೆ ತಿಳಿಸಿ. ನಂಗೆ ಲೆಕ್ಕಾ ತಪ್ಪೋಯ್ತು. Same problemಅವರಿಗು ಇದ್ಯೇನೋ!! ಅದಕ್ಕೆ same pattern same color dress kids and men sectionಲಿ XS-XXL ಶರ್ಟ ಖರೀದಿಸಿದಂತಿತ್ತು. (Kitty I covered ur xerox machine theory, ) ಇನ್ನೂexplanation ಅಲ್ಲಿ ನಮಗೆ time pass ಗಷ್ಟೆ ಮೀಸಲು...ticket ಸಿಕ್ಕ ಬಳಿಕ ನನ್ನ ಕಣ್ಣು ತಂಪಾಗಲು ಪ್ರಾರಂಭವಾಯಿತು. ಹುಡುಗok ಅನ್ನೋ ಅಷ್ಟರಲ್ಲಿ ಜೊತೆಗೆ ಹೆಂಡತಿ/gf ಪ್ರತ್ಯಕ್ಷ ಆಗೋರು. ಏನೋ ಪಾ ಈಗಿನ ಕಾಲದ ಹುಡುಗ್ರಿಗೆsincerity ಅಂದ್ರೆ ಗೊತ್ತಿಲ್ಲ.... ನಮ್ಮಂತ innocent ಹುಡುಗಿಯರಿಗೆ confusion ಮಾಡ್ತಾರೆ. ಇಬ್ರೆ ಇದಾರೆ, ೩ನೇ ,chanceಇದೆ ಎಂದು ಇವರ ಸಮಾಧನದ ಮಾತು ಬೇರೆ!!!! ಅಷ್ಟರಲ್ಲಿ ನಮ್ಮ hero, blue shirt ಹಾಕಿಕೊಂಡು, ಇಬ್ಬರು boyfriends ಜೊತೆ ಬಂದಾ!!! Love at first sight ಆಯ್ತು.. ಎಷ್ಟುromantic ಇತ್ತು ವಾತಾವರಣ!!! ನಮ್ಮ ಮಧ್ಯೆ ಇದ್ದ ಜನಸಾಗರ ಎಲ್ಲ ನಗಣ್ಯವಾಗಿತ್ತು. ಇವರು ಮಾತ್ರ ಸೋಡಾಬಡ್ಡಿ ದುಬೈ ಬಾಬುನ ಹೇಳಿ ಕಾಡಿಸ್ತಿದ್ದರು. ಅಯ್ಯೋ ಅವ ಮತ್ತೆ ಮೇಲೆ ಹೋದ... Patho song ಗಳು ತೇಲಿಬಂದವು. ಮೊದಲಿನ ಹಾಗೆ boat ಲಿ ಹಾಡು ಹೇಳಲು ಅನುವು ಮಾಡಿಕೊಡಲಿಲ್ಲ. ನಾವು ಒಟ್ಟಾಕಿದ songs ನಮ್ಮಲ್ಲೇ ಉಳಿಯಿತು.
ಈಗ ನಮ್ಮboat ಹೊರಟಿತು... ವಾಹ್!!! ತಂಪಾದ ಗಾಳಿ, ಮಸ್ತಿ ಸಮಯ ಹಸಿವು ಎಲ್ಲಾ ಮರೆಸಿತ್ತು. ಮಧ್ಯದಲ್ಲಿ ಕಿಟ್ಟಿ ನಮ್ಮನ್ನೆಲ್ಲಾ ಮುಳುಗಿಸುವ plan ಕೂಡ ಮಾಡಿ ಅಸಫಲನಾದ. ಅಲ್ಲಿಯ ಅನುಭವ ಶಬ್ದಗಳಲ್ಲಿ ಹಿಡಿಯುವುದು ಕಷ್ಟ. ನಡುವೆ ಚಿಕ್ಕ ಪುಟ್ಟ ದ್ವೀಪಗಳು. Boat ಲ್ಲಿ ಆಗಾಗ ಕೊಡುವ jerk, ನೀರೆರಚಾಟ.... ವಾಹ್!!! ೨೦ ನಿಮಿಷ ಬೇರೆ ಲೋಕಕ್ಕೆ ಹೋಗಿ ಬಂದೆವು. Superb!!!!!!
ವಾಪಸ್ ಬರುವಾಗ ಮತ್ತೆ ಕಂಡ... ಪಾಪಿಗಳು 'ಒಂದುphoto ತಗೋಳಿ, ಮನೇಲಿ ತೋರಸಿ, ಜಾತಕಾ ಕೇಳೊಣಾ ಅಂದ್ರೆ, ಸುಳ್ಳೇ ಕತೆ ಕಟ್ಟಿ ಕಾಗೆ ಹಾರಿಸಿದ್ರು. ಅದರಲ್ಲೂ ಕಿಟ್ಟಿ, ಹೇ ನಿನ್ನ ಮಾಣಿ ಮತ್ತೆ ಸಿಕ್ದಾ, congrats ಎಂದು ಅವನೆದುರೆ ಕೈ ಕುಲುಕಿದಾ... ಅವಂಗೆ ಹೇಗೆ ಆಗಿರ ಬೇಡಾ... ಏನೇ ಆಗ್ಲಿ ಅಂತಾ ಅವರು ಕೂತಿದ್ದ ಜಾಗದಲ್ಲಿ ನೀರು ತುಂಬಿಸಿಕೊಳ್ಳಲು ಹೋದೆ ಸಹನಕ್ಕನ ಸಹಾಯದಿಂದ, ಉಳಿದವರಿಗೆಲ್ಲಾ ಒಟ್ಟಿಗೆ ತೆರು ಹೋಗೋದೆ..?? ಪಾಪ ಕೆಮ್ಮು ಜೋರಾಗಿದ್ದಕ್ಕೆ ಹಾಗೆ ವಾಪಸ್ ಬಂದೆವು. ನಾನು ಕೊನೆಯ ಬಾರಿ ಕಣ್ ತಂಪು ಮಾಡಿಕೊಂಡೆ.
Friends ಸಹಾಯ ಮಾಡೋದು moviesಲಿ ಒಂದೇ, ನಿಜ ಜೀವನದಲ್ಲಿ ಯಾವ ಕೆಲಸಕ್ಕೂ ಬರಲ್ಲಾ ಅಂತ prove ಮಾಡಿದ್ರು, contact no.!! ಹೋಗ್ಲಿ ಒಂದುphoto ಕೂಡಾ ತೆಗೆದು ಕೊಡಲಿಲ್ಲ. ನಾ ವಿರಹ ವೇದನೆಯಲ್ಲಿದ್ದೆ.,.. ಅಲ್ಲೆ solar panels ಹಾಕಿ stadiumತರ ಮಾಡಿದ್ದರು.ಅಲ್ಲಿಗೆ ನಮ್ಮ ಪಯಣ ಮುಂದುವರಿಯಿತು.
ತಂಗಾಳಿಗೆ ಮುಖವೊಡ್ಡಿ ಎರ್ರಾ ಬಿರ್ರಾ ತಿರುಗಾಡ ತೊಡಗಿದೆವು. ಕಿಟ್ಟಿ ನಮ್ಮ ಮುಖ ನೋಡಿ ಬೇಸರಾಗಿಯೋ ಏನೋ ಮುಂದೆ ಓಡಿದ. ಕಾರಣ ಬಳಿಕ ತಿಳಿಯಿತು. ಅಲ್ಲಿ ೧೬೦೦೦ ಬಾಲಿಕೆಯರ ಗುಂಪಿತ್ತು. ಇವನಿಗೆ ಕನ್ನಡ ಗೊತ್ತಿಲ್ಲ ಎಂದು ಏನೇನೋ comment ಮಾಡಿದ್ರಂತೆ, build up ಕೊಡೋಣಾ ಅಂತಾ ನಮ್ಮತ್ರ ಜೋರಾಗಿ ಮಾತನಾಡುತ್ತಾ jacket ನ್ನು ಹಾಯಾಗಿ ತಿರಿಸಿ ಮೇಲಕ್ಕೆ ಹಾರಿಸಿದ, ಗಾಳಿಯ ರಭಸಕ್ಕೆ ಅದು ಕೈ ತಪ್ಪಿಸಿಕೊಂಡು ಹಾರಿ passage ಇಂದಾ ಧರೆಯಲ್ಲಿ ಸಿಕ್ಕಿಕೊಂಡಿತು. ನಮಗೆ ಅವನ ಪರದಾಟ ನೋಡಿ ನಕ್ಕು ನಕ್ಕು ಹೊಟ್ಟೆ ನೋವು ಬಂದಿತು. ಸಮಯ ೪.೩೦ ಆಗಿತ್ತು. ಆಗ ನೆನಪಾಯಿತು ಅಯ್ಯೋ ಡ್ರೈವರ್ ಪಾಪ call ಮಾಡಿ ಹೇಳು ಇಲ್ಲಾ, ಊಟ ಮಾಡಿದನೋ ಏನೋ ಎಂದು. ನಿಜಾ ನಾ ದಿನವೂ ೧೨.೩೦ ಕ್ಕೆ ಊಟ ಮಾಡುವವಳು, ನಮ್ಮ ಪಾಪು, ಚಿಕ್ಕೂಸ್ (etc) ಕೂಡಾ ಹಟ ಮಾಡಲಿಲ್ಲ ಹಸಿವೆಂದು. ಮತ್ತದೆ ಸರ್ಕಸ್ ಇಳಿವಾಗಲೂ.. ಹೋಗುವಾಗ ಇದ್ದಷ್ಟೇ ಹುರುಪು ಬರುವಾಗಲೂ ಇತ್ತು!!! ಡ್ರೈವರ್ ಗೆ call ಮಾಡಿ ಹುಡುಕಿದೆವು. ಹಣ್ಣು, ಚಿಪ್ಸ್, home made chocolate ಎಲ್ಲಾ೧ ರೌಂಡ್ ಮುಗಿಸಿದೆವು. ಅಷ್ಟರಲ್ಲಿ ಒಂದು ಹೋಟೆಲ್ ಸಿಕ್ಕಿತು. ಇದು ದೋಸಾ ಹಟ್!! ಹೊಟ್ಟೆ ಬಿರಿ ಉಂಡು ಎದ್ದಾಗ ೬ಗಂಟೆ. ವಿಥ್ರೈಯಿ ಟೀ ಎಸ್ಟೇಟ್ ಗೆ ಹೊರಟೆವು.

ಸೂರ್ಯ ಹೊರಡುವ ತಯಾರಿಯಲ್ಲಿದ್ದ. ನಾವು ಟೀ ತೋಟವನ್ನು ಏರ ತೊಡಗಿದೆವು. ನಾನು ಕೂದಲು ಚಾಚಿಕೊಂಡು ಹಿಂದಿನಿಂದ ಹಾಡು ಗುನುಗುತ್ತ ಎಲ್ಲರನ್ನು ಹಿಡಿಯಲು ಓಡುತ್ತಿದ್ದೆ. ಹೋ!! ಎಂದು ಗಿಡದಿಂದ ಕೋತಿ ನೆಗಿತು!!! ನಾನು ಒಮ್ಮೆ ಬೆಚ್ಚಿಬಿದ್ದೆ. ನಾವು ಮೇಲೆರುವಷ್ಟರಲ್ಲಿ ಚಂದ್ರ ಬಂದಾಗಿತ್ತು. Photoಗಿಂತಾ making ಚೆನ್ನಾಗಿತ್ತು. ಕತ್ತಲಾವರಿಸತೊಡಗಿತು. ಇಳದು ಮತ್ತೆ ತೋಟದ ಬುಡಕ್ಕೆ ಬಂದೆವು. ಅಲ್ಲಿ ಯೇ ಕಟ್ಟೆ ಇತ್ತು ಕೂರೋಣ ಎಂದರೆ ಬಾವಿ!! ಪುಣ್ಯ ಬೆಳಕಿತ್ತು.
ಬೆಳದಿಂಗಳಲ್ಲಿ ಎಲ್ಲಾ ತಂದ ತಿನಿಸು ಖಾಲಿಯಾಗ ತೊಡಗಿತು. ಮಾತು ಮೊದಲ ಭೇಟಿಯಿಂದ ಪ್ರಾರಂಭವಾಗಿ ವಂದನಾರ್ಪಣೆಯಲ್ಲಿ ಮುಕ್ತಾಯವಾಯಿತು. ಸಹನಕ್ಕ ನಮ್ಮನ್ನ ಕಲ್ಪೇಟಲ್ಲಿ ಬಿಟ್ಟು ರೂಮ್ ಸೇರಿದಳು. ಅಯ್ಯೋ ಇನ್ನೆರಡು ದಿನ ಇರಬಾರದಿತ್ತೆ ಎನ್ನಿಸಿತು. ಸಾವಿರ ಸವಿನೆನಪು ತುಂಬಿಕೊಂಡು ಬಸ್ಸೇರಿದೆವು. ನಿದ್ರೆಯೋ ಎಲ್ಲೋ ಓಡಿತ್ತು.ನಾವು ಬೆಂಗಳೂರಿಗೆ ಬಂದು ದಿಕ್ಕಾಪಾಲಾದೆವು. ನಾನಂತೂ ರಜೆ ಹಾಕಿ ಬಿದ್ದುಕೊಂಡೆ. ಸಹನಕ್ಕ, ಗೌರಿ, ಕಿಟ್ಟಿ officeಲಿ ಕುಳಿತು ಉರಿದುಕೊಂಡರು.
ಕೊನೆಯಲ್ಲಿ,: ಕೆಲವೊಮ್ಮೆ ಜೊತೆಗಾರರು ಸರಿ ಇದ್ದಾಗ ಜಾಗ ಹೇಗೆ ಇದ್ದರೂ ಸುಂದರವಾಗಿ ಕಾಣಿಸುತ್ತದೆ... Its all about you.....

Popular posts from this blog
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
ಕಸದ ಬುಟ್ಟಿ ಸೇರುವ ಮುನ್ನ...... ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ. ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...
Comments
Post a Comment