ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
- Get link
- X
- Other Apps
ವಯ್ನಾಡ ಯಾನ:೧
ಅಂದು ಬುಧವಾರ, ಮಧ್ಯಾಹ್ನ ಊಟ ಮುಗಿಸಿ ಎನೋ ಮಾಡುತ್ತ ಕೂತಿದ್ದೆ. ಅಷ್ಟರಲ್ಲಿ WhatsApp ಸಂದೇಶ ಸಹನಕ್ಕಾ ಕಳುಹಿಸಿದಳು, '೧೧, ೧೨ free ಇದ್ಯನೆ ಕೂಸೆ' ಅಂತಾ, ಏನು ಹೇಳ್ಲಿ?? Bangalore ಬರ್ತಾ ಇರ್ಬೋದಾ? ನನ್ನ official birthday, DBT exam ಗೆ ಓದಬೇಕು..... ಏನೆ ಇರ್ಲಿ, ಅಂದುಕೊಂಡು, 'not for you' ಅಂದೆ. 'ವಯ್ನಾಡ' ಬರ್ತೀಯಾ ಕೇಳಿದಳು. ನಂಗೆ ಎಲ್ಲಾ ಮರ್ತೋಯ್ತು. ಇದು ೨ನೇ ಸಲ ಹೋಗೋಕೆ ಕೇಳ್ತಿರೊದು. ಜನವರಿಯಲ್ಲಿ ಹೀಗೆ ಒಮ್ಮೆ ಪ್ಲಾನ ಮಾಡಿ ಗಾಳಿಗೆ ಹಾರಿಸಿದ್ವಿ. 'ಈ ಬಾರಿ ಯಾರೂ ಬರಲು ಸಿದ್ದವಾಗದಿದ್ದರೆ ನಾವಿಬ್ಬರೆ ಹೋಗೋಣಾ ಪಕ್ಕಾ' ಪದೆ ಪದೇ ಹೇಳಿಕೊಂಡು ಜೊತೆಗೆ ಯಾರು ಯಾರು ಬರಬಹುದು ಎಂದು ಇಬ್ಬರೂ ಶುರು ಹಚ್ಚಿಕೊಂಡೆವು. ನನ್ನ ಅಣ್ಣ, relatives, close friends, ಎಲ್ಲರಿಗೂ ಒಂದೊಂದು ಸಂದೇಶ ಎಸೆದಿದ್ದಾಯಿತು. ಎಲ್ಲರಿಂದ ಒಂದೆ ಪ್ರಶ್ನೆ, ಉತ್ತರ,' ಯಾರ್ ಯಾರು ಹೋಗ್ತಿದೀರಾ? ಹೇಗೆ ಹೋಗೋದು, ನಾನು ಸ್ವಲ್ಪ busy, may be next time!!!!'. ನಾನು ಮತ್ತು ಕೆಲವು fb frnds ಕೇಳಿದೆ, ಹುಡುಗರು ಇದ್ದರು. ಬಹುಶಃ ವಿಚಿತ್ರ ಎನಿಸಿರ ಬಹುದು!! ಮೊದಲು ಮುಜುಗರ ಎನಿಸಿದ್ದು ನಿಜ. ಏನೆ ಆಗಲಿ ಎಂದು ಸಹನಕ್ಕನ ಒಮ್ಮೆ ಕೇಳಿದೆ. 'Ok, ಆದ್ರೆ, ಹುಡುಗಿಯರ ಜೊತೆ ಬರಲು ಒಪ್ಪುವುದು ಏನೋ,' ಎಂದಳು. ಸರಿ-ತಪ್ಪು ಯೋಚಿಸಲು ಸಮಯ ಇರಲಿಲ್ಲ. ನಾ ಕೇಳಿದ ಕೆಲವರಲ್ಲಿ 'ಕಿಟ್ಟಿ' ಹೂಂ ಅಂದ. ಲಾಸ್ಯ ರಾತ್ರಿ ತಿಳಿಸುವೆ ಎಂದಳು. ರಾತ್ರಿ ೮.೩೦ ಆದರೂ ಯಾರ ಸುಳಿವಿರಲಿಲ್ಲ. ಅಷ್ಟರಲ್ಲಿ ನಾನು ಸಹನಕ್ಕ ಪ್ಲಾನ discuss ಮಾಡಿದ್ವಿ, ಇದಕ್ಕಾದರೂ attract ಆಗ್ಲಿ ಅಂತಾ. ಮತ್ತೆ ಕಿಟ್ಟಿಗೆ ಹೇಳಿದಾಗ ಹೇ just kidded, ನಾ ಒಬ್ನೆ ಬರಲ್ಲಾ, ಅದು ಇನ್ನೂ ಒಮ್ಮೆ meet ಆಗಿಲ್ಲಾ!! Bengaluru ಲೆ ಒಮ್ಮೆ ಸಿಗೋಣ, may be next time, ಅಂದಾ!!. 'No way, ಬರೋದಿದ್ರೆ ಬಾ' ಎಂದೆ. ಹೌದು... ನಾನು ಒತ್ತಾಯ ಮಾಡಲು ಸರಿ ಎನಿಸಲಿಲ್ಲ. Company ಸರಿ ಎನಿಸದಿದ್ದರೆ?? ಹುಂ ಸರಿ, ನಿನ್ನಿಷ್ಟ! ಎಂದು phoneಇಟ್ಟೆ. ಒಮ್ಮ guilty feel ಆಯ್ತು. ಹುಡುಗಿಯರು ಹಾಗೆ ಕೇಳೊದು ತಪ್ಪಾಗುತ್ತಾ!!! ಲಾಸ್ಯಳಿಂದ ಉತ್ತರ ಸಕಾರಾತ್ಮಕ ಇತ್ತು. ಅಷ್ಟರಲ್ಲಿ ಸಹನಕ್ಕ ತಂಗಿ ಬರ್ತಾಳೆ ಎಂದಳು. ನಮ್ಮ ಸಂಖ್ಯೆ ೪ ಕ್ಕೆ ಏರಿತು. ಕಿಟ್ಟಿ plan ಕೇಳಿದ. ನಿಂಗೇನಕ್ಕೆ ಎಂದೆ. ಹೇಳು ಬರ್ತೀನಿ ಅಂದಾ. ಹೇಳ್ದೆ , Advertising implement ಆಯ್ತು. ಸಹನಕ್ಕನತ್ರ ಮಾತನಾಡಿಸಿದೆ, ಅವನ doubts all most clear ಆಗಿತ್ತು. ಈಗ ಅಚ್ಚರಿ ಪಡುವುದು ನಮ್ಮ ಸರಧಿ!! ೪+೧, ಕಿಟ್ಟಿಗೆ ಎಲ್ಲಾದರೂ ಯಾಕಾದರೂ ಒಪ್ಪಿಕೊಂಡೆ ಎನ್ನಿಸಿದರೆ...ಎಂದು. ಬಳಿಕ ಸಹನಕ್ಕ ಆ ಕಡೆ, ನಾನು ಈ ಕಡೆ ಕೆಲಸ ಶುರುವಿಟ್ಟು ಕೊಂಡೆವು. ಬಸ್ direct ಇರುವುದರ ಸಮಯ ಸರಿ ಹೋಗ್ತಿರಲಿಲ್ಲ. ಎಲ್ಲಾ ಸರಿಮಾಡಿ ಮಲಗುವ ವೇಳೆಗೆ ೧.೩೦ ಆಗಿತ್ತು. WhatsApp group ಹುಟ್ಟಿತ್ತು. Recent updates ಬರ್ತಾ ಇತ್ತು. ಅಂತು Friday ಬಂತು. ನಾನು ಲಾಸ್ಯ ಮಾತ್ರ ಪರಿಚಿತರು. ಕಿಟ್ಟಿ, ಶ್ರೀ ಗೌರಿಗೆ ಎಲ್ಲರೂ ಹೊಸಬರು. ನನ್ನ pick ಮಾಡಲು ಬಂದಾಗ ನನ್ನ ಅಣ್ಣ ಕಿಟ್ಟಿ ಗೆ ಹುಷಾರು ಕಣೋ ಅಂದ. ಅವನು ವಿನಮ್ರನಾಗಿ ya sure ಅಂದಾ. ಬಳಿಕ ಅಣ್ಣ ' ನಾ ಹೇಳದ್ದು ನಿನ್ನ ತಲೆ ಕುರಿತಾಗಿ' ಅಂದ. ಅದು ನಮ್ಮ ಪರಿಚಯದ ರೀತಿಯಾಗಿತ್ತು!!! ಅಮ್ಮ callಮಾಡಿ ವಿಚಾರಿಸಿದಳು, ಯಾರೆ ಅವನು? ಸದ್ಯ frnd, ನೋಡೋಣ, ಎಲ್ಲಾದರೂ ಸುತ್ತುಬಳಸಿ ನಮ್ಮ ದೂರದ ನೆಂಟನೊ ಏನೋ ಈಗಷ್ಟೇ ಪರಿಚಯ ಕಾರ್ಯಕ್ರಮ ಶುರುವಾಗಿದೆ ಎಂದೆ. ಸರಿ ಹುಷಾರು, call ಮಾಡ್ತಿರು ಎಲ್ಲರಿಗೂ good night ಹೇಳಿ phone ಇಟ್ಟಳು. ಎಲ್ಲರ contact numberಮನೆಗೆ, ಅಣ್ಣಂಗೆ ಕಳುಹಿಸಿದೆ. Love my family without asking any extra questions you trusted me. I can understand your untold many questions!!!

ನಂತರ ಪ್ರಾರಂಭವಾಯಿತು. ಒಬ್ಬರಿಗೊಬ್ಬರ ಕಾಲೆಳೆವ ಕೆಲಸ. ಯಾರಿಗೂ ಎಲ್ಲಿಯೂ ಮೊದಲ ಬಾರಿಗೆ ಸಿಕ್ಕಿದ್ದೇವೆ ಎಂಬುದೇ ನೆನಪಿರಲಿಲ್ಲ. ಸಹನಕ್ಕಳ ಆತಿಥ್ಯ, ಕಿಟ್ಟಿಯ ಯಾರನ್ನು ನೋಯಿಸದ ಹಾಸ್ಯ, ಲಾಸ್ಯಾಳ ಜೊತೆ, ಶ್ರೀ ಗೌರಾಳ ಮುಗ್ದತೆಯಲ್ಲಿ ಎರಡು ದಿನ ಹೇಗೆ ಕಳೆಯಿತೊ ಖಂಡಿತ ಗೊತ್ತಿಲ್ಲ. ನಿನ್ನೆ, ೬ ಗಂಟೆಗೆ ಮಧ್ಯಾಹ್ನದ ಊಟ ಮುಗಿಸಿದ್ದು!!! ಸಮಯದ ಪರಿವು, ಹಸಿವು ಎಲ್ಲ ಮಾಯವಾಗಿತ್ತು. ಎಲ್ಲಲ್ಲಿ ಹೋಗಿದ್ರಿ ಎನ್ನುವ ಅಮ್ಮನ ಪ್ರಶ್ನೆಗೆ, ಮಾತ್ರ ಉತ್ತರಿಸದಾದೆ... ಅಮ್ಮ ಸಹನಕ್ಕlist ಕಳುಹಿಸಿದ ಮೇಲೆ ಗಟ್ಟಾಕಿ ಹೇಳುವೆ, ಎಲ್ಲಾ ಕ** ಲೇಕ್, ದ್ವೀಪ, ಬೆಟ್ಟ, ಡ್ಯಾಮ್ ಎಂದೆ.
ವರ್ಷಕ್ಕಾಗುವಷ್ಟು ನಕ್ಕಿದ್ದೇವೆ. ಎಲ್ಲಿಯೂ ಯಾರಿಗೂ ನೋವಾಗಿಲ್ಲ ಎಂದು ಭಾವಿಸಿರುವೆ. ಡ್ರೈವರ್ ಚೇಟ್ಟಾ ಮಸ್ತ!!!
ಎಲ್ಲಿ ಯಾರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ, Love you dears., if you not bored get ready for another one, but plz don't plan!! Sudden arrangements really exciting, thanks tonnnnn!!!!

Popular posts from this blog
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
ಕಸದ ಬುಟ್ಟಿ ಸೇರುವ ಮುನ್ನ...... ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ. ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...
Comments
Post a Comment