ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Posts
Showing posts from June, 2018
- Get link
- X
- Other Apps
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...
- Get link
- X
- Other Apps
ಮಾತೇ ಮರೆತು ಸುಳ್ಳಾಡದ ಅಧರಗಳು ತಡಬಡಿಸಿದಾಗೆಲ್ಲ ಸುಮ್ಮನಿದ್ದು ಬಿಡು ನನಗೇನು ಸತ್ಯದ ಹುಚ್ಚಿಲ್ಲ ಅದೊಂತರ ಕೆಸರ ಪಕ್ಕ ನಿಂತು ಕಲ್ಲೆರಚಿದಂತೆ ಇಬ್ಬರ ಮನಸ್ಸು ರಾಡಿ ತೊಳೆಯಲು ಸಂವತ್ಸರಗಳೇ ಬರಬೇಕು ಸುಮ್ಮನಿದ್ದುಬಿಡು ಕಣ್ಣ ಕನ್ನಡಿಯಲ್ಲಿ ಎಲ್ಲ ಬರೆದಿಹುದು ತಲೆಯೆತ್ತ ಬೇಡ ದೃಷ್ಟಿ ಸಂಧಿಸಿದಾಗೆಲ್ಲ ಓದುವಾ ಹುಚ್ಚು ನನಗೆ ನಿನಗೆ ನೋವಾದೀತು ಸುಮ್ಮನಿದ್ದುಬಿಡು ರಾಧೆ...🎶
- Get link
- X
- Other Apps
ಟ್ರಾಫಿಕ್ ಜಾಮ್ ಮಹಾನಗರಗಳಲ್ಲಿ ತೆರೆದು ಕೊಳ್ಳುವ ವಿಧ ವಿಧವಾದ ಬದುಕು ಬೇರೆಲ್ಲೂ ಕಾಣ ಸಿಗದೇನೊ. ನಾಲ್ಕೈದು ರಸ್ತೆ ಸೇರುವಲ್ಲಿ ಹತ್ತು ನಿಮಿಷ ನಿಂತರೆ ಅದೆಷ್ಟೋ ಜೀವಗಳು ಕಥೆ ಹಂಚ ತೊಡಗುವವು. ಅಲ್ಲೇ ರಸ್ತೆಯ ಪಕ್ಕ ನಾನು ಬೇಕರಿಯಲ್ಲಿ ಚಾಕೊಲೇಟ್ ಕೇಕ್ ತಿನ್ನುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಕುಬ್ಜ ನಡು ವಯಸ್ಸಿನವನ ಜೊತೆ ಐದಾರು ವರ್ಷದ ಪುಟ್ಟ ಹುಡುಗಿ ಹೋಗುತ್ತಿದ್ದಳು. ಒಂದು ಕೈಯಲ್ಲಿ ಐಸ್ ಕ್ರೀಮ್ ಕಪ್, ಇನ್ನೊಂದು ಕೈಯಲ್ಲಿ ಆತನ ಕೈ ಹಿಡಿದು ನಡೆಯುತ್ತಿದ್ದಳು. ಬಹುಶಃ ಮಗಳು ಇರಬಹುದು. ಆತನ ಕೈಯಲ್ಲಿ ಕೋಲಿತ್ತು. ಕುರುಡನಂತೆ ಇದ್ದ. ಸರಿಸುಮಾರು ಮಗಳಷ್ಟೆ ಎತ್ತರ, ಅವಳು ಅವನನ್ನು ನಡೆಸುತ್ತಿರುವಂತೆ ಇತ್ತು. ಮುಖದಲ್ಲಿ ಏನೋ ಖುಷಿ. ಏನೋ ಮಾತನಾಡುತ್ತ ಹೋದರು. ಕೆಲವೊಮ್ಮೆ ಯಾರು ಯಾಕೆ ಮನಃ ಪಟಲದಲ್ಲಿ ಜಾಗ ಕೇಳುವರು ಗೊತ್ತಿಲ್ಲ. ನಾನು ಕೇಕ್ ತಿಂದು ಹೊರಟೆ. ಬಸ್ ಹತ್ತಲು ನಾನು ಆ ರಸ್ತೆಗಳು ಕೂಡುವ ಸರ್ಕಲ್ ಬಳಿ ಬಂದೆ. ಒಂದು ತುದಿಯಲ್ಲಿ ಮತ್ತೆ ಇವರಿಬ್ಬರ ದರುಶನ ಆಯ್ತು. ಅದೊಂತರ ಕರುಳ ಹಿಂಡುವ ದೃಶ್ಯ. ಸೂಚನೆಗೆ ಕಾಯುತ್ತಿದ್ದ ಉದ್ದನೆಯ ಗಾಡಿಗಳ ಸಾಲು ಸುತ್ತಲೂ. ಯಾವಾಗ ಹಸಿರು ನಿಶಾನೆ ಬರುವುದೆಂದು ಕಾದು ಕಳಿತಿದ್ದವು. ಅವುಗಳ ಮಧ್ಯೆ ಇವರು. ಏನೋ ಭಯ. ಹೋಗಿ ದಾಡಿಸಿ ಬರಲೇ ಎನ್ನಿಸಿತು. ಆದರೆ ಆ ಮಗು, ಅಪ್ಪನ ಕೈ ಹಿಡಿದು ಚಲಿಸುವ ವಾಹನಗಳ ನಡುವೆಯೆ ಹೋಗುತ್ತಿದ್ದಳು. ಆ ತರಾತುರಿಯಲ್ಲೂ ವಾಹನ ಚಾಲಕರೂ ತಮ್ಮ ವೇಗ ತುಸು ಕ...
- Get link
- X
- Other Apps
(ಚಿತ್ರ ಕೃಪೆ:ಸಹನಾ ಹೆಗಡೆ) ಸಂಸಾರದ ಜಂಜಾಟಕೆ ಸಿಲುಕಿ ಮನ ನಲುಗಿದಾಗೆಲ್ಲ ಗುಳೆ ಹೋಗ ಬೇಕು ನಾ ಹೀಗೆ ಪ್ರತಿ ಬಾರಿಯೂ ಸುತ್ತಲೂ ಹಿಮಗಟ್ಟಿ ಚಳಿ ಕೊರೆಯುತಿದ್ದರೂ, ತೂರಿ ಬರುತ್ತಿರುವ ಜಲಪಾತ ನನ್ನ ನೋಡಲೆಂದೆಯೋ ಬಹುಕಾಲದ ವಿರಹಕ್ಕೆ ಬಂಡೆಗಳ ತಡೆಯಿಲ್ಲ ಕುಣಿಯುತ್ತ ನೆಗೆಯುತ್ತ ನನ್ನೆಡೆಯೇ ನುಗ್ಗುತಿದೆ ನನ್ನೆಲ್ಲ ನೋವುಗಳ ಅಲ್ಲೆಯೇ ಧಾರೆ ಎರೆಯ ಬೇಕೆಂದಿದ್ದೆ ಮನಬಿಚ್ಚಿ ಹರಟಬೇಕೆಂದಿದ್ದೆ ಬಹುಶಃ ಬೀಸುವ ಚಳಿಗಾಳಿ ಹೊತ್ತೊಯ್ದಿತ್ತು ನನ್ನ ಎಲ್ಲಾ ಭಾರ.... ಮೌನವಾಗಿ ಕೇಳಿಸಿಕೊಳ್ಳುತ್ತಿದ್ದೆ, ಹಳೆಯ ಸಂಬಂಧ ಗುನುಗುತ್ತಿತ್ತೆ, ನನ್ನಿರುವ ಪ್ರಶ್ನಿಸುತ್ತಿತ್ತೆ, ನನ್ನ ಗೋಜಲಿ ನೋಡಿ ಮುಂದೆ ಸಾಗುತ್ತಿತ್ತು... ಕಳೆದೇ ಹೋಗಿದ್ದೆ ಕುಹಕವಿಲ್ಲದ ಸುಂದರ ತಾಣದಲಿ ಮನಸಿಗಂಟಿದ್ದ ಮಲಿನ ಕರಗಿತ್ತು ಸ್ಪಟಿಕದಂತ ನೀರಲ್ಲಿ ಮತ್ತೆ ಗುಳೆ ಹೋಗ ಬೇಕು ಯಾರು ಕಾಣದಾ ಜಾಗಕೆ ನನ್ನ ಏಕಾಂತಕೆ ನನ್ನ ನಾ ಹುಡುಕಲು ಹೊಸ ಅನುಬಂಧ ಅರಿಯಲು.... ರಾಧೆ...🎶