ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ಟ್ರಾಫಿಕ್ ಜಾಮ್
ಮಹಾನಗರಗಳಲ್ಲಿ ತೆರೆದು ಕೊಳ್ಳುವ ವಿಧ ವಿಧವಾದ ಬದುಕು ಬೇರೆಲ್ಲೂ ಕಾಣ ಸಿಗದೇನೊ. ನಾಲ್ಕೈದು ರಸ್ತೆ ಸೇರುವಲ್ಲಿ ಹತ್ತು ನಿಮಿಷ ನಿಂತರೆ ಅದೆಷ್ಟೋ ಜೀವಗಳು ಕಥೆ ಹಂಚ ತೊಡಗುವವು. ಅಲ್ಲೇ ರಸ್ತೆಯ ಪಕ್ಕ ನಾನು ಬೇಕರಿಯಲ್ಲಿ ಚಾಕೊಲೇಟ್ ಕೇಕ್ ತಿನ್ನುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಕುಬ್ಜ ನಡು ವಯಸ್ಸಿನವನ ಜೊತೆ ಐದಾರು ವರ್ಷದ ಪುಟ್ಟ ಹುಡುಗಿ ಹೋಗುತ್ತಿದ್ದಳು. ಒಂದು ಕೈಯಲ್ಲಿ ಐಸ್ ಕ್ರೀಮ್ ಕಪ್, ಇನ್ನೊಂದು ಕೈಯಲ್ಲಿ ಆತನ ಕೈ ಹಿಡಿದು ನಡೆಯುತ್ತಿದ್ದಳು. ಬಹುಶಃ ಮಗಳು ಇರಬಹುದು. ಆತನ ಕೈಯಲ್ಲಿ ಕೋಲಿತ್ತು. ಕುರುಡನಂತೆ ಇದ್ದ. ಸರಿಸುಮಾರು ಮಗಳಷ್ಟೆ ಎತ್ತರ, ಅವಳು ಅವನನ್ನು ನಡೆಸುತ್ತಿರುವಂತೆ ಇತ್ತು. ಮುಖದಲ್ಲಿ ಏನೋ ಖುಷಿ. ಏನೋ ಮಾತನಾಡುತ್ತ ಹೋದರು. ಕೆಲವೊಮ್ಮೆ ಯಾರು ಯಾಕೆ ಮನಃ ಪಟಲದಲ್ಲಿ ಜಾಗ ಕೇಳುವರು ಗೊತ್ತಿಲ್ಲ. ನಾನು ಕೇಕ್ ತಿಂದು ಹೊರಟೆ. ಬಸ್ ಹತ್ತಲು ನಾನು ಆ ರಸ್ತೆಗಳು ಕೂಡುವ ಸರ್ಕಲ್ ಬಳಿ ಬಂದೆ. ಒಂದು ತುದಿಯಲ್ಲಿ ಮತ್ತೆ ಇವರಿಬ್ಬರ ದರುಶನ ಆಯ್ತು. ಅದೊಂತರ ಕರುಳ ಹಿಂಡುವ ದೃಶ್ಯ. ಸೂಚನೆಗೆ ಕಾಯುತ್ತಿದ್ದ ಉದ್ದನೆಯ ಗಾಡಿಗಳ ಸಾಲು ಸುತ್ತಲೂ. ಯಾವಾಗ ಹಸಿರು ನಿಶಾನೆ ಬರುವುದೆಂದು ಕಾದು ಕಳಿತಿದ್ದವು. ಅವುಗಳ ಮಧ್ಯೆ ಇವರು. ಏನೋ ಭಯ. ಹೋಗಿ ದಾಡಿಸಿ ಬರಲೇ ಎನ್ನಿಸಿತು. ಆದರೆ ಆ ಮಗು, ಅಪ್ಪನ ಕೈ ಹಿಡಿದು ಚಲಿಸುವ ವಾಹನಗಳ ನಡುವೆಯೆ ಹೋಗುತ್ತಿದ್ದಳು. ಆ ತರಾತುರಿಯಲ್ಲೂ ವಾಹನ ಚಾಲಕರೂ ತಮ್ಮ ವೇಗ ತುಸು ಕಡಿಮೆ ಮಾಡಿ ಸಹಕರಿಸಿದಂತಿತ್ತು. ಎಲ್ಲಿಗೆ ಹೋಗಬೇಕೆಂದು ತಿಳಿದಿದೆಯೋ, ಇಲ್ಲವೋ. ಒಂದೊಂದೆ  ದಾರಿ ದಾಟುತ್ತಿದ್ದಳು. ನಾನು ಕತ್ತುದ್ದ ಮಾಡಿ ನೋಡುತ್ತಲೇ ಇದ್ದೆ. ಕೊನೆಗೆ ಅವರು ಮೊದಲು ನಿಂತಿದ್ದ ರಸ್ತೆಯ ಪಕ್ಕದ ರಸ್ತೆಗೆ ಇಡೀ ಸರ್ಕಲ್ ಸುತ್ತು ಹೊಡೆದು ಬಂದು ನಿಂತು ಬಸ್ಸಿಗಾಗಿ  ಕಾಯತೊಡಗಿದರು.
ರಾಧೆ...🎶

Comments

Popular posts from this blog