ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
- Get link
- X
- Other Apps
ದೂರ ತೀರದ ಮಹತಿ
ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ಸ್ವಲ್ಪಾ ಚಳಿ ಜ್ವರ ಶುರು ಆಯ್ದೆ, ಬೆಳಗಿಂದಾ,.. ದನಕ್ಕೆ ಅಕ್ಕಚ್ಚೊಂದು ಕೊಟ್ಟಿ, ಗದ್ದೆ ನೆಟ್ಟಿಗೆ ಬಯಿಂದ್ವೆ, ಹೋಪಲಾಯ್ದಿಲ್ಯೆ....ಚಳಿ ನಡ್ಕಾ... ಶ್ಯಿ... ಬ್ಯಾಡ್ದೆ ಮಗಾ ಹಿಂಗಿದ ಜೀವಾ...' ತಟ್ಟೆಂದು ಎದ್ದು ಕೂತು ಒಂದೆ ಉಸಿರಿಗೆ ಹೇಳಿಕೊಂಡು ಮರುಗಿದರು. ಎದ್ದು ಕೂರಲು ಸಹಾಯ ಮಾಡಿದೆ. 'ಆಸ್ರಿಗೆ ಎಂತಾ ಅಕ್ಕು?? ತಮ್ಮಾ, ತಂಗಿಗೆ ಕುಡ್ಯಲೆ ಮಾಡು, ಮಗಾ ಊಟ ಮಾಡ್ಕ್ಯಂಡೆ ಹೋಗು ಕಾ...' ಎಂದು ನನ್ನ ತಲೆ ಸವರಿದರು. ತುಂಬಾ ಸೋತಂತೆ ಕಾಣುತ್ತಿದ್ದರು. ಎಂತು ಬೇಡ, ಸಕ್ಕರೆ ಕಾಳು ಕೊಡು ಸಾಕು ಎಂದೆ. ಗಪ್ಪತಿ ಮಾವ ಸಕ್ಕರೆ ಡಬ್ಬ ಹಿಡಿದು ಬಂದ. 'ಸಕ್ರೆನಡಾ...! ತಮ್ಮಾ, ಖಷಾಯ ಮಾಡ'ಎಂದು ಗದರಿದರು. ನಾ ಅಲ್ಲೆ ಸನ್ನೆ ಮಾಡಿ ಬೇಡವೆಂದೆ. ನಾ ಕುಡಿದಂತೆ, ಅವರು ತಂದು ಕೊಟ್ಟಂತೆ ನಾಟಕವಾಡಿದರು. ಗದ್ದೆ ಬದುವಿನಲ್ಲಿ ನಡೆದು ಬರುತ್ತಿರೆ ಎದಿರಿರುವ ಹೊಳೆಯಂತೆ ತುಂಬಿ ಬರುವ ಬಾಲ್ಯದ ನೆನಪುಗಳು. ರೇನ್ ಕೋಟ್ ಮೇಲೆ ಉದ್ದ ದಂಟಿನ ಕೊಡೆ ಹಿಡಿದು ಗಾಳಿಯ ದಿಕ್ಕನ್ನು ನೋಡುತ್ತಾ ಹೂಳು ಎತ್ತಿಹಾಕಿದ ಗದ್ದೆಯ ಬದುವಿನ ಮೇಲೆ ನಡೆಯುವುದು ಎಂದರೆ ರೇಂಬೊ ಸರ್ಕಸ್ ಮಾಡಿದಂತೆ ಆಗುತ್ತಿತ್ತು. ಜೊತೆಗೆ ತೇಲುವ ತೂಕದ ಪಾಠಿಚೀಲ ನಾ ಮುಂದು, ತಾ ಮುಂದು ಎಂದು ಓಡುವ ತವಕ, ಎಲ್ಲವೂ ಈಗಷ್ಟೆ ರಾಚಿ ಹೋದ ತಂಪು ಗಾಳಿಯಂತೆ ಮನದ ತೆರೆಯಲ್ಲಿ. ದಿನಗಳು ಹೇಗೆ ಕಳೆದು ಹೋದವೊ, ಎಲ್ಲವೂ ಈಗ ತಾನೆ ಜರುಗಿದಂತೆ, ಹಸಿ ಹಸಿಯಗಿದೆ. ಬೆನ್ನಿಗಿದ್ದ ಒಂದು ಸಣ್ಣ ಬ್ಯಾಗ್ ಕೂಡ ಭಾರ ಎನ್ನಿಸುತ್ತಿತ್ತು. ಒಂದು ಘಟ್ಟ ಹತ್ತಿ ತಿರುವು ದಾಟುವುದರೊಳಗೆ ಬೆವರು ಏದುಸಿರು ಜೋರಗಿತ್ತು. ನಗು ಬಂತು. ದಿನಕ್ಕೆ ಹತ್ತು ಕಿಲೋಮೀಟರ್ ನಡೆದು ಓದಿದ ದಿನಗಳು ಎಲ್ಲಿ, ಈಗ ಹತ್ತು ಮಾರು ನಡೆಯದ ಸ್ತಿತಿ ಬಂತೆ ಎಂದು. ಎದುರು ಕಟ್ಟಿಗೆ ಹೊರೆ ಬರುತ್ತಿದ್ದ ಈರಿ ಪರಿಚಯದ ನಗು ಬೀರಿದಳು. 'ಆರಮನೆ ಅಪಿ, ಯಾವಾಗ ಬಂದೆ? ಎಲ್ಲದಿಯೆ ಈಗ? ಒಬ್ಳೆ ಬಂದೆ, ಅಣ್ಣಾ ಬರ್ಲಾ??' ಎಂಟು ವರ್ಷದ ಹಿಂದೆ ಇದ್ದಂತ ಅಭಿಮಾನ, ಪ್ರೀತಿ ಈಗಲೂ ಹಾಗೆಯೆ ಇತ್ತು, ಅವಳ ಮುಖದ ಸುಕ್ಕಿನ ಹೊರತಾಗಿ. 'ಹುಮ್, ಆರಾಮ್. ನೀ ಆರಾಮ?.. ಇಗಷ್ಟೆ ಬಸ್ಸಿಗೆ ಬಂದೆ. ಬೆಂಗ್ಳೂರಗೆ ಐದಿನಿ, ಅಣ್ಣಾ ಬರ್ಲಾ, ಚೌತಿ ಹಬ್ಬಕೆ ಬತ್ತನಂತೆ.' ಎಂದು ದೀರ್ಘವಾಗಿ ಉಸಿರೆಳೆದುಕೊಂಡೆ. 'ನಾ ಆರಾಮೆ ಅಪಿ, ಎಷ್ಟಲಾ ದಿನಾ ಆಗಿತ್ತೆ ನೋಡದೆ, !! ನೀ ಅಂತು ದಪ್ಪಾನೆ ಆಗಲಕೆ, ಹಂಗೆ ಐದಿಯೆ...' ಎಂದು ಮುಗುಳ್ನಕ್ಕಳು. 'ಅಮ್ಮಾ ಆರಮ ಐಯ್ದರೆ...? ನೊಡ್ದೆ ಸುಮಾರ್ ದಿನ ಆತು. ಈಗ ಹೆಂಗೆ, ಆರಾಮ ಐಯ್ದರೆ ದಾ...' ಎಂದು ಕಳಕಳಿ ತೋರಿದಳು. ಬಹುಶ್ಃ ಅವಳು ತನ್ನ ತಲೆ ಮೇಲಿದ್ದ ಹೊರೆಯನ್ನು ಮರೆತಂತಿತ್ತು. 'ಹಾ, ಈಗ ಪೂರ್ತಿ ಗುಣಾ ಆಗೈತೆ. ಬಾರೆ ನಮ್ಮನಿಗೆ' ಎಂದು ವಿದಾಯ ಕೋರಿದೆ. ಅವಳ ನಗು, ಮಾತುಗಳು, ಆದ ಸುಸ್ತನ್ನು ಕ್ಷಣ ಕಾಲ ಬದಿಗೊತ್ತಿದವು. ಶಾಲೆಗೆ ಹೋಗುವಾಗ ಅವಳು ಕರೆದು ಸೂಡಿಸುವ ಡೇರೆ ಹೂವಿನ ಪರಿಮಳ ಘಂ ಎಂದು ರಾಚಿದಂತೆ ಆಯಿತು. ಕಮಲಿ ಮನೆಯ ಕಡೆ ನೋಡಿದೆ, ಅವರ ಮನೆಯಂಗಳದಲ್ಲಿ ಮೊದಲಿನಂತೆ ಹೂವಿನ ತೋಟವು ಕಾಣಲಿಲ್ಲ. ಮನುಷ್ಯರ ಸುಳಿದಾಟವು ಕಾಣಲಿಲ್ಲ. ನಾ ಊರು ಬಿಡುವ ಸಮಯದಲ್ಲೆ ಅವಳ ಆರೋಗ್ಯ ಹದ ಗೆಟ್ಟಿತ್ತು. ಮತ್ಯಾವಗಲೊ ಮನೆಗೆ ಬಂದಾಗ ಅವಳ ನಿಧನ ವಾರ್ತೆ ಹೇಳಿದ್ದಳು. ಅಲ್ಲೆ ಗಿಡಗಳ ಮರೆಯಲ್ಲಿ ಅವಳು ಹೂ ಕೊಯ್ದು, ನಗುತ್ತ ಬರುಕಾಯುತ್ತಿರುವಂತೆ ಕಂಡಿತು. 'ಅಪಿ, ನಿಂಗೆ, ಅಮ್ಮಗೆ' ಎಂದು ಬಾಳೆ ಸುತ್ತಿ ಕೊಡುತ್ತಿದ್ದಳು. ದಿನವೂ ಶಾಲೆಗೆ ಹೋಗಿ ಬರುವಾಗ ಒಬ್ಬರಲ್ಲಾ ಒಬ್ಬರು ಹೂ ಮುಡಿಸಿ ಕಳಿಸುತ್ತಿದ್ದರು. ಕೊನೆಗೆ ಅಪ್ಪನಿಗೆ ಹೇಳುವರು, 'ನಿಮ್ಮನೆ ಕೂಸು ಎಲ್ಲರ್ನು ಯಾವಾಗ್ಲು ನಗ್ತಾನೆ ಮಾತಾಡ್ಸಕ್ಯಂಡೆ ಹೊತಿತೆ.' ಹೇಳಿ. ಯಾವಾಗಲು ಮೆಟ್ಟಿಲ ಮೇಲೇ ಕೂತಿರುವ ಕನ್ನಜ್ಜಿ ಕಾಣಲಿಲ್ಲ.
ಹೆಜ್ಜೆ ಹೆಜ್ಜೆಗು ತಳಕಾಡುವ ನೆನಪುಗಳ ಸಾಲು. ಕಮರಿ ಮನೆ ಘಟ್ಟ ಬಂತು, ಪ್ರತಿ ಬಾರಿ ಕನಸಲ್ಲಿ ಈ ಘಟ್ಟದ ಬುಡದಲ್ಲಿ ಮತ್ತು ಜಟಕಿನ ತೋಟದ ತಿರುವಲ್ಲಿ ಹುಲಿ ನಿಂತಿರುವಂತೆ ಕಾಣುತ್ತಿತ್ತು. ಒಬ್ಬಳೆ ಶಾಲೆಗೆ ಹೋಗುವ ಸಂದರ್ಭದಲ್ಲಿ, ಒಮ್ಮೆ ಇಣುಕು ಹಾಕಿ ಓಟಕ್ಕಿಟ್ಟರೆ ಮತ್ತೆ ಮನೆಗಳು ಕಾಣುವ ತನಕ ನಿಲ್ಲುತ್ತಿರಲಿಲ್ಲ. ಈಗ ಆದ ಶಬ್ದ ಎಚ್ಚರಿಸಿತು!! ಭಯದಿಂದ ಆ ಕಡೆ ನೋಡಿದೆ, ಒಹ್!! ಹಸು... ತೋಟದ ಕಂಟ್ನೆಯಿಂದ ರಸ್ತೆಗೆ ನೆಗೆಯಿತು. ದಾರಿಯುದ್ದಕ್ಕೂ ಬದಿಯಲ್ಲಿ ಸಾಗುವ ಹೊಳೆ. ಈ ಹೊಳೆಗೆ ದೊಡ್ಡ ಪೈಪ್ ಹಾಕಿ ರಸ್ತೆ ಮಾಡಿದ್ದರು, ಆ ಸಲ ಬಂದ ದೊಡ್ಡ ಮಳೆಯ ನೆಗಸು, ಪೈಪ್ ಜೊತೆ ರಸ್ತೆ ಯನ್ನು ಎತ್ತಿಕೊಂಡು ಹೋಗಿತ್ತು.ಮಳೆಗಾಲ ಮುಗಿವ ತನಕ ಸಂಕ ಹಾಕಿ ಸಂಪರ್ಕ ಒದಗಿಸಿದ್ದರು. ಶಾಲೆಗೆ ಹೋಗಿ ಎಲ್ಲರೊಡನೆ ನಮ್ಮೂರ ರೋಡೆ ಕೊಚ್ಚಿಕೊಂಡು ಹೋಗಿದೆ ಎನ್ನುವಾಗ ನಾನೇ ಮಳಯಬ್ಬರ ಹೆಚ್ಚಿಸಿದ್ದು ನಮ್ಮೂರಲ್ಲಿ ಎಂಬ ಖಷಿ. ಈಗ ಅಂತಹ ಮಳೆಗಳೆ ಇಲ್ಲ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬೆಚ್ಚೊಕುಳಿ. ಅಲ್ಲಂತು ಮಳೆಗಾಲದ ದಿನದಲ್ಲಿ ಪಚೀತಿಯನ್ನು ಅನುಭವಿಸೆ ತೀರಬೇಕು. ಆ ರಸ್ತೆಯಲ್ಲಿ ಕಾಲಿಟ್ಟ ಕಡೆಯೆಲ್ಲ ಹೂತು ಹೋಗುತ್ತಿತ್ತು. ಎಷ್ಟು ಜನ ಚಪ್ಪಲಿ ಕಳೆದುಕೊಂಡಿದ್ದರು. ಆದರೂ ನಾಟಕ ಮಾಡಲು ಹೋಗಿ ಮೈಯೆಲ್ಲಾ ರಾಡಿ ಮಾಡಿಕೊಂಡಿದ್ದು ನೆನೆದರೆ ನಗು ಬರುತ್ತದೆ. ಎದುರು ಬಂದ ಶಂಕ್ರು ಮಾತಾನಾಡಿಸಿದ. ಏನು ಒಬ್ಳೆ ನಗಕಿಡ್ದೀಯೆ, ಬಸ್ಸಿಗೆ ಬಂದಿಯನು?? ಎಂದ. ಹುಂ ಎಂದು ಮುಗುಳ್ನಕ್ಕು ಮುನ್ನಡೆದೆ.
ನಮ್ಮ ಪಕ್ಕದ ಮನೆಯ ಅತ್ತೆ ಮಾತನಾಡಿದರು, ಅವರ ಮಕ್ಕಳು ಊಟ ಮಾಡಿ ಹೋಗು ಎಂದು ರಸ್ತೆಗೆ ಅಡ್ಡ ಬಂದರು. ಪುನಃ ಬರುವೆ ಎಂದು ಹೊರಡುವಾಗ ಸಾಕಾಯಿತು. ಅಬ್ಬ ನಮ್ಮ ಮನೆ ಬಂತು. ಅಜ್ಜಿ ಹೇಳುತ್ತಿದ್ದರು, ನಮ್ಮ ಮನೆಗೆ ಬಂದ ಗುರುಗಳೂ ಹೇಳಿದ್ದರು, 'ನಿಮ್ಮ ಮನೆ ಶ್ರೀಶೈಲ ಏರಿದಂತೆ 'ಎಂದು. ಅಬ್ಬಾ ಉಸಿರು ತೆಗಿಯಲು ಹರಸಾಹಸ ಪಡುತ್ತಿದ್ದೆ. ಅಬ್ಬಾ ಮನೆ ಬಾಗಿಲು ಕಾಣುತ್ತಿದೆ. ಒಂದು ಪಕ್ಕದಲ್ಲಿ ಒಂದು ಸಣ್ಣ ಜಲಪಾತ, ದೀಪಾವಳಿವರೆಗೂ ನೀರು ಹರಿವುದು. ಇನ್ನೊಂದು ಕಡೆ ಅಡಿಕೆ ತೋಟ. ಸುತ್ತಲೂ ಗೋಡೆ ಕಟ್ಟಿರುವ ಹುಲ್ಲು ಬೇಣ,ಅದಕ್ಕೆ ತಾಗಿ ಹುಟ್ಟಿರುವ ಅರಣ್ಯ. ಕಾಂಕ್ರೀಟ ಕಾಡನ್ನ ನೋಡಿ ದಣಿದಿದ್ದ ಕಣ್ಣಿಗೆ ರಸದೌತಣ. ' ಮನೆಲಿ ಯಾರು ಇಲ್ಯನ್ರೊ' ಎನ್ನುತ್ತ ಒಳಗಡಿ ಇಟ್ಟೆ. ಅಮ್ಮ ಕೈಗೆ ಸಾಂಬಾರ ಬೀಸುತ್ತಿದ್ದ ಕೈಯಲ್ಲೆ ಮುಗುಳ್ನಗುತ್ತ ಬಂದಳು. 'ಅರೆರೆರೆ... ನೀ ಇನ್ನೂ ಬರ್ದೋದ್ದ ನೋಡಿ ಅಜ್ನ ಮನಿಗೆ ಹೋಗಿ ಬತ್ಯನ ಮತ್ತೆ ಅಂದ್ಕಂಡಿ, ಕುಡ್ಯಲೆ ಎಂತ ಅಕ್ಕು ಮಗಾ..' ಬಿಗಿದಪ್ಪಿಕೊಂಡಳು. 'ಅಪ್ಪ ಎಲ್ಲಿ, ತ್ವಾಟಕ್ಕೆ ಹೋಯ್ದ್ನ? ಈಗ ಎಂತು ಬೇಡ, ಊಟನೆ ಮಾಡ್ರಾತು' ಎನ್ನುತ್ತಾ ನನ್ನ ಬ್ಯಾಗಿರಿಸಿ, ಕೈ ಕಾಲು ಮುಖ ತೊಳೆಯಲು ಹೋದೆ.
'ಅವು ಇಲ್ಲೆ ಸೊಸೈಟಿಗೆ ಹೋಯ್ದ. ಬರದು ಸಂಜ್ಯಾಕ್ಕು'
'ಒಹೋ, ನಾ ಬರದು ಗೊತ್ತಿತ್ತಿಲ್ಯ, ಇವತ್ತೆ ಹೋಗಕಿತ್ತ..' ಮುಖ ಊದಿಸಿಕೊಂಡೆ. 'ಸಂಜೆ ಹೇಳ ತನಕಾ ಬತ್ವೆ, ನೀ ಬಾ.. ಸ್ವಲ್ಪ ಕುಡ್ಕ, ಇನ್ನೂ ಹುಳಿ ಆಯ್ದಿಲ್ಲೆ, ಇವತ್ತು ಒಂದಾನೊಂದು ಆಳಿಲ್ಲೆ, ಕೊಟ್ಗೆ ಕಲಸ ಮುಗಸಿ, ತೋಟದ ಕಡಿಗೆ ಒಂದ ಸಲಾ ಹೋಗಿ ಬಪ್ಪರೊತಿಗೆ ಟೈಮ್ ಆಗೋತಪಾ, ಮಾಡಿಹೊದ್ದು ಪಾಲಗೆ ಕೊಳೆ ಬಯಿಂದು ಹೇಳಿ ಉಮೇಶಾ ಹೇಳ್ದ, ನೋಡನ ಹೇಳಿ ಹೋಗಿದ್ದಿ.'
ಕೊಳೆ ಬಯಿಂದಾ ನಮ್ಮನೆ ತೋಟದಲ್ಲಿ?'
'ಇಲ್ಲೆ, ಆಚೆ ಮನೆ ತೋಟದಲ್ಲಿ ತೆಳುಕೆ ಬಯಿಂದು, ಅದೆ ಇಚಿಗೆ ಬಿದ್ದಿತ್ತಕು' ಅಮ್ಮ ಸಾಂಬಾರು ಕುದಿಯಲಿಟ್ಟು ನನ್ನ ಜೊತೆ ಕೂತರು. 'ಇದ್ಯಾವಂಗಿನೆ, ನೋಡಿದ್ನೆ ಇಲ್ಲೆ, ಈ ಕಲರ್ ಚೊಲೊ ಕಾಣ್ತು' ಹಳೆದೆಯೆ, ನೀ ನೋಡಿದ್ದಿಲ್ಯಾಗಿತ್ತನ.. ಈ ಸಲನು ಆಚೆ ಮನೆವು ಒಂದೆ ಸಲ ಮದ್ದೊಡ್ಸಿದ್ದ?'
'ಹು... ಅವ ಹಲ್ಬಕ್ಯೋತಿದ್ನಡೆ, ತಮ್ಮಲ್ಲಿ ಒಂದೆ ಸಲ ಮದ್ದೊಡ್ದು, ಕೊಳೆ ಬಯಿಂದು ಹೇಳಿ'. ' ಶಿ ಇಂತವ್ಕೆ ಎಂತಾ ಹೇಳ್ತ??!! ಮತ್ತೆ ಊರ ಬದಿಗೆ ಏನ ಸುದ್ದಿ... ಮಳೆಗಾಲ ಅನಿಸ್ತಾನೆ ಇಲ್ಲೆ ಅದಾ..'
ಹು ಈ ವರ್ಷಿಟ್ಟಡಿನೂ ಎಲ್ಲಾ ಕಾಲ.. ಏನಾಗೋಯ್ದನಪಾ... ಅಡಕೆ ಈಗ್ಲೆ ಸುಮಾರು ಬೆಳದೋತು ಹೇಳಿ'
ರಾಧೆ...🎶
ಮುಂದುವರಿಯುವುದು...

Popular posts from this blog
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
ಕಸದ ಬುಟ್ಟಿ ಸೇರುವ ಮುನ್ನ...... ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ. ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...

Comments
Post a Comment