Posts

Showing posts from April, 2016
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
    ಕಸದ ಬುಟ್ಟಿ ಸೇರುವ ಮುನ್ನ......   ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ.  ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
                                                            ದಿನಕ್ಕೊಂದು ಕಥೆ ನಾನು  ಹಾಗೆ ಸುಮ್ಮನೆ  ಕುಳಿತಿದ್ದೆ. ಮೇಜಿನ ಮೇಲಿದ್ದ ಪತ್ರಕೆಯಲ್ಲಿ ಪ್ರಕಟವಾದ ಕತೆಯ ಶೀರ್ಷಿಕೆ ಗಮನ ಸೆಳೆಯಿತು 'ಹೀಗೊಂದು ಕಥೆ'. ಎತ್ತಿಕೊಂಡೆ, ಅದರಲ್ಲಿ ಇದ್ದಿದ್ದು ಇಷ್ಟೆ; ಕತೆಗಾರ ಕುರ್ಚಿಯ ಮೇಲೆ  ಕುಳಿತು ಬರೆಯುತ್ತಿದ್ದ. ವಿಪರೀತ ಬಾಯಾರಿಕೆ ಉಂಟಾಯಿತು. ಅಲ್ಲಿಯೇ ಇದ್ದ ಬಾಟಲಿ ಎತ್ತಿಕೊಂಡ, ಕ್ಷಣ ಮಾತ್ರದಲ್ಲಿ ನೀರು ಖಾಲಿಯಾಯಿತೇ ವಿನಃ ಬಾಯಾರಿಕೆ ನೀಗಲಿಲ್ಲ. ಅಲ್ಲೆ ಪಕ್ಕದ ಟೀಪಾಯಿಯ ಮೇಲಿದ್ದ ಹೂಜಿಯನ್ನು ತಡವುತ್ತ ಎತ್ತಿದ. ಅದೂ ಖಾಲಿಯಾಯಿತು. ಆದರೆ ದಾಹ ನೀಗಿರಲಿಲ್ಲ...ಅಡುಗೆ ಮನೆಗೆ ಹೋಗಿ ಬೆಲ್ಲ- ನೀರು ಕುಡಿದರೆ ಸರಿಹೋಗುವುದು ಎಂದುಕೊಂಡ.  ಆದರೆ ಏಳಲು ಮನಸಾಗದೆ ಅಲ್ಲೆ ಚಡಪಡಿಸುತ್ತಿದ್ದ. ಕತೆ ಮುಗಿದಿತ್ತು. ಅರೆ ಏನು ಬರೆಯುತ್ತಾರೆ,  ಅದು ಹೇಗೆ...
Image
ಭಾವನಾ - ಲಹರಿ ಅಕ್ಷರ ರೂಪ ಪಡೆದಾಗ;   ನಾ ಕೊಟ್ಟ ಕನಸುಗಳಿಗೆ ಕಾವಲಾಗ ಬಯಸಿದ್ದೆ , ಚಿಗುರಾಗುವ ಮುನ್ನ ಕಿತ್ತೆಸೆದೆ,   ಕೊಸರಾಡುವ ಮುನ್ನ ಉಸಿರಡಗಿಸಿದೆ, ಕಾರಣ ಕೇಳುವ ತವಕ ನಿನಗಿರಲಿಲ್ಲ,   ಹೇಳುವ ಅನಿವಾರ್ಯ ನಾ ತೋರಲಿಲ್ಲ , ಶೋಕದ ಸಮ ಪಾಲು ನನ್ನಲ್ಲೂ ಇತ್ತು, ಮುಖ ಕಾಣದ ಮಾತು ಎದೆಯಲ್ಲೆ ಬೆಂದಿತ್ತು, ದನಿಯ ಶಬ್ದಕ್ಕೆ ಮನಸು ಕಾದಿತ್ತು , ಒಳಿತಾಗಲೆಂದರಸಿ ಎದೆ ಕಲ್ಲಾಗಿತ್ತು. ಸರಿ ತಪ್ಪುಗಳ ಲೆಕ್ಕಾಚಾರವೆ ಬುಡಮೇಲಾಗಿದೆ,   ಕಾರಣ ನಾ ಹೇಳಲಾರೆ.... ರಾಧೆ ... 🎶 ಕಾರಣವಿಲ್ಲದೆ ನಿನ್ನ ಬಳಿ ಬರಲು ಹಲವಾರು ಕಾರಣವಿತ್ತು, ಎಲ್ಲಿಯೋ ಹೇಳ ಬಯಸಿದ್ದ ಮಾತೇ, ಎಂದೋ ಕಾಡಿದ ನೆನಪೇ, ಏನೋ ಕೇಳಬೇಕೆಂದಿದ್ದ ಪ್ರಶ್ನೆಯೇ, ಯಾವುದಕ್ಕೂ ಉತ್ತರ ಬೇಕಿಲ್ಲ, ನಿನ್ನ ಸಾನಿಧ್ಯದ ಹೊರತು.... ರಾಧೆ...  ಪದಗಳ ಜೊತೆ ಪದ ಸೇರುವಾಗ ನನಗೂ ತಿಳಿದಿರಲಿಲ್ಲ ನಿನ್ನ ಜನನ ಕೊನೆಗೆ ತಿರುಗಿ ನೋಡಿದರೆ, ನನಗೂ ಸೌಜುಗ ನೀನ್ಯಾರು? ? ನಾನ್ಯಾರು??? ರಾಧೆ...  ನೆನಪುಗಳ ಹಾದಿಯಲಿ ಬರಿಗೈ ನಂದು ಚೀಲ ತುಂಬಲು ಏನೋ ಹಿಂಜರಿತ ತಡಕಾಡುವ ಕೈಗೆ ಚುಚ್ಚುವ ಮೊನೆ ಅಳಿಸಲಾಗದ ನಿನ್ನೆ ಬರೆಯಲಾಗದ ನಾಳೆ ಕಾಡದಿರೆಂದರೆ ಕೇಳೀತೆ ನನ್ನ....... ರಾಧೆ...  ಮೊದಲ ಮಳೆ ಮನಕೆ, ಧರೆಗೆ, ತಂಪು ಎಲ್ಲಿಂದಲ...
ಕಾಲಚಕ್ರ ಹಬ್ಬದ ಸಂಭ್ರಮದಿ ಸಜ್ಜಾಗಿತ್ತು ನಗರಿಯೆಲ್ಲಾ ಊರ ದಾರಿಯಲಿ ಮಾತ್ರ ಬಣ - ಬಣ ಮುದಿ ಜೀವವೆರಡು ಉಸಿರಿಡಿದು ಕೂತಿತ್ತು ಕರುಳು - ಕುಡಿಗಳ ಆಗಮನಕೆಂದು ಇನಿಯನ ಗಟ್ಟಿಕರೆ ಕೇಳದಾ ಕಿವಿಗೆ, ಬಾರಿ-ಬಾರಿಗೂ ಕೇಳುವ ಗಾಡಿಯ ನಗಾರಿ ನಿಲ್ಲಲಾಗದ ಸೊಂಟ, ದೂರ ಹಾಯದ ದೃಷ್ಟಿ ಆದರೂ ಸುಳಿಯುತಿದೆ, ಹೊಸಿಲಿಂದ ಕೋಣೆಗೆ ಹುರುಪಲ್ಲಿ ಕಟ್ಟಿಟ್ಟ ಹೋಳಿಗೆ -ಲಾಡು, ಸೈನಿಕನಂತೆ ಕಾದಿರಿಸಿಹ ಹಬೆಯಾಡುವ ಹುಗ್ಗಿ, ಮರಿ - ಜೀವಗಳಿಗೆ ಉಪಚರಿಸುವ ಹಂಬಲದಿ, ಸೋತ ಕೈ, ಎಳೆವ ಕಾಲು ಗೌಣ್ಯವಾಗಿತ್ತು ಏನೋ ಬಡ - ಬಡಿಸುತ್ತ,  ತಿರುಗಾಡುತ್ತಿರೆ ಈ ಜೀವ  'ನಿನಗೆಲ್ಲೊ ಮರುಳು' ಎಂದು ಮುಸಿನಗುತ್ತಿದ್ದ ಒಡೆಯ 'ಅವನ್ಹೋಗಲಿ, ಅವಳಾರು ಬರಬಾರದಿತ್ತೆ' ಎಂಬ ಬೊಚ್ಚುಬಾಯಿಗೆ, ಗೊತ್ತಿಲ್ಲದೆ ನುಗ್ಗಿದ್ದಳು ಗಂಗಾ ಮಾತೆ ರೋಧಿಸುವ ಕಂಗಳಿಗೆ, ನಡುಗುವಾ ಕೈಯ ಸಾಂತ್ವನ 'ನನಗೆ - ನೀನು, ನಿನಗೆ ನಾನು, ಬರುವಾಗ ಬರುವರು, ಬಿಡು ಬೇಡದ ಚಿಂತೆ, ಬಿರಿ ನಿನ್ನ ಚೆಂದುಟಿ, ಹಗುರಾಗಲಿ ಮನ' ಎಲ್ಲಕ್ಕೂ ಮೂಖ ಸಾಕ್ಷಿಯಾದ ಗೋಡೆ - ಕಂಬಗಳು.                                                                     ...