ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Posts
Showing posts from November, 2016
- Get link
- X
- Other Apps
# ನೀ ಸ ರಿ ವ ಮು ನ್ನ# ಕಣ್ಣಂಚಿನಾ ಭಾವ, ಕರಗುವ ಮುನ್ನ ನೀ ನೋಡ ಬೇಕಿತ್ತು, ನಿನ್ನಾಗಮನಕೆ ಕಾದಿಟ್ಟ ಬಿಸಿ ಉಸಿರು, ಗಾಳಿ ಸೇರುವ ಮುನ್ನ ನೀನಿರ ಬೇಕಿತ್ತು, ತುಟಿಯ ಮೇಲಿನ ಕಿರು ನಗು, ಮಾಯುವ ಮುನ್ನ ನೀ ತಿರುಗ ಬೇಕಿತ್ತು, ಗತಿಸಿದ ಆ ಒಂದು ಕ್ಷಣಕೆ ತಿರುಗಿ ನಾ ಹೋಗುವಂತಿರೆ... ಬೇರೆಯದೆ ಭಾಷ್ಯ ಬರೆಯುತ್ತಿದ್ದೆ ಎಲ್ಲದಕೂ ದಿಗಂತದಲಿ ಜಾರುವನಿಗೂ ಗೊತ್ತು, ನಿನ್ನ ಬರುವಿಕೆಯ ತೀವ್ರತೆ, ಮುಡುಗಟ್ಟಿದ ಪ್ರೀತಿ, ಕಣ್ಣಂಚಿನಾ ನೀರು, ನಿಡುಬಿಡದ ಚಡಪಡಿಕೆ, ಸಾಕ್ಷಿಯಾಗಿದ್ದ ಗಿಡ ಮರಗಳು ಮೂಕವಾಗಿಹೆ ನನ್ನಂತೆ ಕಟ್ಟಿದ ಕನಸು, ಬರೆದ ನೆನಪುಗಳೇ, ಬೆಲೆ ತೊರೆದ ಮೇಲೆ, ಮಾತಿಗೆಲ್ಲಿಯ ಬೆಲೆ... ರಾಧೆ... 🎶
- Get link
- X
- Other Apps
ನಮ್ಮೂರ ಕಥೆ # ಮಲೆನಾಡು # ಈಗ ಹೇಳ ಹೊರಟಿರುವುದು, ಇಂದು ನಿನ್ನೆಯ ಕಥೆಯಲ್ಲ. ಬಹುಶಃ ನಾನು ೯ ನೇ ತರಗತಿಯಲ್ಲಿದ್ದಾಗ ಕಾರಂತರ ಕಾದಂಬರಿ 'ಬೆಟ್ಟದ ಜೀವ'ದ ಒಂದು ತುಣುಕು ಓದುವಾಗ ಯುಕಾಲಿಪ್ಟಸ್(ಅಕೇಶಿಯ) ಸಂತತಿಯ ಬಗೆಗೆ, ಹಾಗೂ ಅಲ್ಲಿ ಪರಿಸರವಾದಿ ನಾಗೇಶ ಹೆಗಡೆಯವರ ಕುರಿತಾಗಿ ಒದಿದ್ದೆ, ನಾನು ಕಾರಂತರ ಪರವಾಗೆ ಉತ್ತರ ಬರೆದು ಪಾಸು ಆದೆ. ಆದರೆ ಈಗ ನೈಜತೆಯ ಅರಿವು ೧೦ ವರ್ಷಗಳ ಅನುಭವದಿಂದ ಆಗಿದೆ. ಪರಿಸರವಾದಿಗಳು ಅಂದರೆ ನಮಗೆಲ್ಲಾ ಅಸಡ್ಡೆ,ಯಾವಾಗಲೂ ಏನಾದರೂ ಒಂದು ವಿಷಯ ಹಿಡಿದು ತಿಕ್ಕುತ್ತಿರುತ್ತಾರೆ ಎಂಬ ಅಭಿಪ್ರಾಯ. ಆದರೆ ಈ ಅಕೇಶಿಯ ಸಂತತಿ ನಿಷೇಧವನ್ನು ಅರಣ್ಯೀಕರಣಕ್ಕೆ ಆಗ್ರಹಿಸುತ್ತಿ ರುವಲ್ಲಿ ಸತ್ಯತೆ ಇದೆ. ಮೂಲತಃ ಯುಕಾಲಿಪ್ಟಸ್ ಸಂತತಿ ಆಸ್ಟ್ರೇಲಿಯಾದ್ದು. ಬ್ರಿಟಿಷರ ಕಾಲದಲ್ಲಿ ೨೦ ನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಕಾಲಿಟ್ಟಿತು. ಖಾಲಿ ಜಾಗಗಳಲ್ಲಿ ಇದನ್ನು ಬೆಳೆಯಲಾರಂಭಿಸಿದರು. ಇದರ ಕಟ್ಟಿಗೆಯನ್ನು ರೈಲಿನ ಹಲಗೆ, ಇದ್ದಿಲು, ಇನ್ನಿತರ ಉಪಕರಣಗಳ ತಯಾರಿಕೆಯಲ್ಲಿ ಬಳಸುತ್ತಿದ್ದರು. ಕ್ರಮೇಣವಾಗಿ ಸ್ವಾತಂತ್ರಾ ನಂತರವು ಇದರ ಬಳಕೆ ಹೆಚ್ಚುತ್ತ ಹೋಯಿತು. ಈಗ ಅರಣ್ಯೀಕರಣದಲ್ಲಿ ಬಳಸುವ ಸಸ್ಯ ಸಂಕುಲದ ಬಹುದೊಡ್ಡ ಪಾಲು ಸುಮಾರು ೨೦%ಕ್ಕೂ ಹೆಚ್ಚು ಅಕೇಶಿಯ ಮರವಂತೆ. ಇದನ್ನು ವಿರೋಧಿಸುವವರಿಗೆ, 'ಇದು ಸಾರಜನಕ ಸ್ಥಿರೀಕರಣ (nitrogen fixation)ದಲ್ಲಿ ಪಾಲ್ಗೊಂಡು ನೆಲದ ಫಲವತ್ತತೆ ಹೆಚ್ಚಿಸುತ್ತದೆ...
- Get link
- X
- Other Apps
ಸಾವಿರದ ನೆನಪು.. ಕಿಟಕಿಯಿಂದಾಚೆ, ಮುಖವಿಟ್ಟಾಗಲೆಲ್ಲ ಬೆನ್ನಟ್ಟಿ ಬರುವೆ ನೀನು, ಗೊತ್ತಿಲ್ಲದೆ ಹೊತ್ತು ತರುವೆ, ಸಾವಿರದ ನೆನಪು ಉಸಿರಾದೆ ಅಮ್ಮನಿಗೆ ಅಭಿಮಾನವಾದೆ ಅಪ್ಪನಿಗೆ ಕೂಸುಮರಿಯಾದೆ ಅಣ್ಣನಿಗೆ ಅಪ್ಪಣ್ಣಿಮಗ ಶುಬ್ಬಕ್ಕಿ ಮಾವನಿಗೆ ನೆನಪಾದೆ ನನಗೆ... ಎಲ್ಲಿಯೋ ಅವಿತು, ಊರೆಲ್ಲ ಅಲೆಸಿದ್ದೆ, ತಪ್ಪು ನನ್ನದಲ್ಲಮ್ಮ ಹಾಳಾದ ನಿದ್ದೆ, ಕ್ಷಮೆಯಿರಲಿ,.. ಅಂಗಳ ಅಗೆವಾಗ ಸಿಕ್ಕ ನಾಣ್ಯಕ್ಕೆ ನಾನಲ್ಲವಮ್ಮ ಹೊಣೆ, ನೀನೇ ಹೇಳಿದ ಕತೆ, ನೆನಪಿಸಿಕೊ,.. ಕೋಪದಲ್ಲಿ ಹೊಡೆಯ ಬಂದ ಅಪ್ಪನಿಗೆ ನಗುತರಿಸಿದ್ದು.....ನಾನೇ,.. ನೋವಿಂದ ಅಳುವಾಗ, ನಿನ್ನಪ್ಪ ಇಲ್ಲಲ್ಲಮ್ಮ ಎಂದು ಸಂತೈಸಿದ್ದು ನಾನೇ,.. ಏದುಸಿರು ಬಂದರೂ ಒಂದಿಂಚು ನಡೆಸದೆ ಹೊತ್ತುಕೊಂಡೆ ಸಾಗಿದ್ದ ಮಾವ, ನಿಮ್ಮರಮನೆಯ ರಾಜಕುಮಾರಿಯಾಗಿದ್ದೆನಲ್ಲಾ ನಾನು,.. ನೆನಪಾದೆ ನನಗೆ ಸುಂದರವಾದ ಸುಂದರಿ ಊರಿಗೆ ಮತ್ತೆ ಹೋಗಬಹುದಿದ್ದರೆ,... ಇಣುಕಿ ಬಂದೆ ಇನ್ನೂ ಇದೆ ಸಾಮ್ರಾಜ್ಯ ನೆನಪಿದೆ ನನಗೆ... ರಾಧೆ... 🎶
- Get link
- X
- Other Apps
ಬಾಲ್ಯದ ಅಂಬಾರಿ ಓಡುವ ಮೇಘದಲಿ ಅಂಬಾರಿ ಹೊರಟಿದ್ದೆ ಹಿಂದೆ ಮುಂದೆ ನನ್ನ ಭಟರು ನನ್ನ ಸಾರೋಟಿಗೆ ಸೂರ್ಯನ ರಂಗಿನಂಚು ಕ್ಷಣ ಕ್ಷಣಕೂ ಹೊಸ ಮೆರುಗು ಅಂಬಾರಿ ಇಳಿವಾಗ, ವಿರಹ ವೇದನೆ ಅವಕೆ ಕೆಂಪಾದ ಕೆನ್ನೆ ಕಪ್ಪಿಟ್ಟಿತ್ತು ನಾಳೆ ಸಿಗುವೆಯೆಂದು ಗಾಳಿಗೆ ಮುತ್ತಿಡಲು ನನ್ನಿಯ ನಗುತಿದ್ದ ಬಾಚಿಕೊಂಡು ಸ್ಪರ್ಧೆಯೇ ಏರ್ಪಟ್ಟತ್ತು ನಮ್ಮ ನಡುವೆ ಅವನ ಬಳಗದ ಪ್ರದರ್ಶನ ಸಾಗಿತ್ತು ಒಬ್ಬೊಬ್ಬರಾಗಿ ಇಣುಕುತ್ತಿದ್ದರು ನನ್ನ ನೋಡಲು ಪಾಪ ಅವನಿಗೇನು ಗೊತ್ತು, ಆದರೂ ನಗುತ್ತಿದ್ದ ಪಕ್ಷಿಗಳ ಸಂಗೀತ ನವಿಲ ನರ್ತನ ಮರಗಿಡಗಳ ಧಿವ್ಯ ಸಾನಿಧ್ಯ ಕಲ್ಲು-ಬಂಡೆಗಳ ಸರ್ಪಗಾವಲು ಸೌಗಂಧ ಹೊತ್ತು ತಂದ ತಂಬೆಲರು ನನ್ನ ಸಭೆಗೆ ಅವಗೆ ನನ್ನ ಬಳಗ ತೋರಿಸಿ, ಅಣುಕಿಸಲಿದ್ದೆ ಅಮ್ಮ ಕರೆದಳು, ಕತ್ತಲಾಯಿತು ಹುಳು-ಹುಪ್ಪಟ ಮೆಟ್ಟೀತು ಬಂದೆ, ಅಮ್ಮಾ... ಅಯ್ಯೋ ದಾರಿ ಮಸುಕಾಗಿದೆ ನಾಳೆ ಬರುವೆ ಮತ್ತೆ, ನಗಬೇಡ ಹೀಗೆ ನನ್ನ ಹುಸಿ ಕೋಪಕ್ಕೆ ಮತ್ತಷ್ಟು ಹೊಳಪಾದ ಸಿಂಹಾಸನವಿಳಿದು ಗುಡಿಸಲಿಗೆ ಹೊರಟೆ ಮಿಣುಕು ದೀಪ ಉರಿಯುತ್ತಿತ್ತು... ರಾಧೆ... 🎶