ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
# ನೀ ಸ ರಿ ವ ಮು ನ್ನ#
ಕಣ್ಣಂಚಿನಾ ಭಾವ,
ಕರಗುವ ಮುನ್ನ ನೀ ನೋಡ ಬೇಕಿತ್ತು,
ನಿನ್ನಾಗಮನಕೆ ಕಾದಿಟ್ಟ ಬಿಸಿ ಉಸಿರು,
ಗಾಳಿ ಸೇರುವ ಮುನ್ನ ನೀನಿರ ಬೇಕಿತ್ತು,
ತುಟಿಯ ಮೇಲಿನ ಕಿರು ನಗು,
ಮಾಯುವ ಮುನ್ನ ನೀ ತಿರುಗ ಬೇಕಿತ್ತು,
ಗತಿಸಿದ ಆ ಒಂದು ಕ್ಷಣಕೆ ತಿರುಗಿ ನಾ ಹೋಗುವಂತಿರೆ...
ಬೇರೆಯದೆ ಭಾಷ್ಯ ಬರೆಯುತ್ತಿದ್ದೆ ಎಲ್ಲದಕೂ
ದಿಗಂತದಲಿ ಜಾರುವನಿಗೂ ಗೊತ್ತು‌‌‌‌‌‍‌,
ನಿನ್ನ ಬರುವಿಕೆಯ ತೀವ್ರತೆ,
ಮುಡುಗಟ್ಟಿದ ಪ್ರೀತಿ,
ಕಣ್ಣಂಚಿನಾ ನೀರು,
ನಿಡುಬಿಡದ ಚಡಪಡಿಕೆ,
ಸಾಕ್ಷಿಯಾಗಿದ್ದ ಗಿಡ ಮರಗಳು
ಮೂಕವಾಗಿಹೆ ನನ್ನಂತೆ
ಕಟ್ಟಿದ ಕನಸು, ಬರೆದ ನೆನಪುಗಳೇ,
ಬೆಲೆ ತೊರೆದ ಮೇಲೆ,
ಮಾತಿಗೆಲ್ಲಿಯ ಬೆಲೆ...
ರಾಧೆ...🎶

Comments

Popular posts from this blog