ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ನಮ್ಮೂರ ಕಥೆ #ಮಲೆನಾಡು# ‌‌
ಈಗ ಹೇಳ ಹೊರಟಿರುವುದು, ಇಂದು ನಿನ್ನೆಯ ಕಥೆಯಲ್ಲ. ಬಹುಶಃ ನಾನು ೯ ನೇ ತರಗತಿಯಲ್ಲಿದ್ದಾಗ ಕಾರಂತರ ಕಾದಂಬರಿ 'ಬೆಟ್ಟದ ಜೀವ'ದ ಒಂದು ತುಣುಕು ಓದುವಾಗ ಯುಕಾಲಿಪ್ಟಸ್(ಅಕೇಶಿಯ) ಸಂತತಿಯ ಬಗೆಗೆ, ಹಾಗೂ ಅಲ್ಲಿ ಪರಿಸರವಾದಿ ನಾಗೇಶ ಹೆಗಡೆಯವರ ಕುರಿತಾಗಿ ಒದಿದ್ದೆ, ನಾನು ಕಾರಂತರ ಪರವಾಗೆ ಉತ್ತರ ಬರೆದು ಪಾಸು ಆದೆ. ಆದರೆ ಈಗ ನೈಜತೆಯ ಅರಿವು ೧೦ ವರ್ಷಗಳ ಅನುಭವದಿಂದ ಆಗಿದೆ. ಪರಿಸರವಾದಿಗಳು ಅಂದರೆ ನಮಗೆಲ್ಲಾ ಅಸಡ್ಡೆ,ಯಾವಾಗಲೂ ಏನಾದರೂ ಒಂದು ವಿಷಯ ಹಿಡಿದು ತಿಕ್ಕುತ್ತಿರುತ್ತಾರೆ ಎಂಬ ಅಭಿಪ್ರಾಯ. ಆದರೆ ಈ ಅಕೇಶಿಯ ಸಂತತಿ ನಿಷೇಧವನ್ನು ಅರಣ್ಯೀಕರಣಕ್ಕೆ ಆಗ್ರಹಿಸುತ್ತಿರುವಲ್ಲಿ ಸತ್ಯತೆ ಇದೆ.
ಮೂಲತಃ ಯುಕಾಲಿಪ್ಟಸ್ ಸಂತತಿ ಆಸ್ಟ್ರೇಲಿಯಾದ್ದು. ಬ್ರಿಟಿಷರ ಕಾಲದಲ್ಲಿ ೨೦ ನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಕಾಲಿಟ್ಟಿತು. ಖಾಲಿ ಜಾಗಗಳಲ್ಲಿ ಇದನ್ನು ಬೆಳೆಯಲಾರಂಭಿಸಿದರು. ಇದರ ಕಟ್ಟಿಗೆಯನ್ನು ರೈಲಿನ ಹಲಗೆ, ಇದ್ದಿಲು, ಇನ್ನಿತರ ಉಪಕರಣಗಳ ತಯಾರಿಕೆಯಲ್ಲಿ ಬಳಸುತ್ತಿದ್ದರು. ಕ್ರಮೇಣವಾಗಿ ಸ್ವಾತಂತ್ರಾ ನಂತರವು ಇದರ ಬಳಕೆ ಹೆಚ್ಚುತ್ತ ಹೋಯಿತು. ಈಗ ಅರಣ್ಯೀಕರಣದಲ್ಲಿ ಬಳಸುವ ಸಸ್ಯ ಸಂಕುಲದ ಬಹುದೊಡ್ಡ ಪಾಲು ಸುಮಾರು ೨೦%ಕ್ಕೂ ಹೆಚ್ಚು ಅಕೇಶಿಯ ಮರವಂತೆ. ಇದನ್ನು ವಿರೋಧಿಸುವವರಿಗೆ, 'ಇದು ಸಾರಜನಕ ಸ್ಥಿರೀಕರಣ (nitrogen fixation)ದಲ್ಲಿ ಪಾಲ್ಗೊಂಡು ನೆಲದ ಫಲವತ್ತತೆ ಹೆಚ್ಚಿಸುತ್ತದೆ' ಎಂಬ ಘೋಷಣೆ ಹೊರಡಿಸಿ, ಅರಣ್ಯ ಇಲಾಖೆ ಜನ ಸಾಮಾನ್ಯರ ಬಾಯಿ ಮುಚ್ಚಿಸುತ್ತದೆ. ಹಾಗೆ ಹೇಳುವಾಗ ಕಟು ಸತ್ಯಗಳನ್ನು ಮರೆಮಾಚುತ್ತದೆ. ಅಕೇಶಿಯಾದ ಬಹುತೇಕ ಪ್ರಭೇದಗಳು allelopathic reaction ತೋರಿಸುತ್ತವೆ, ಅಂದರೆ ಇದು ಸ್ರವಿಸುವ ರಾಸಾಯನಿಕ ಪದಾರ್ಥದಿಂದಾಗಿ, ತನ್ನ ಸುತ್ತ ಮುತ್ತ ಇನ್ಯಾವ ಗಿಡ ಮರ ಬೆಳೆಯಗೊಡುವುದಿಲ್ಲ. ಇದರಿಂದ ಅಲ್ಲಿಯ ಸಸ್ಯ ಪ್ರಭೆದ ನಿಧಾನಗತಿಯಲ್ಲಿ ನಶಿಸುತ್ತಿದೆ. ಇದರ ಕುಸುಮಗಳು ಉಸಿರಾಟದ ತೊಂದರೆಯನ್ನು ಉಂಟುಮಾಡಿರು ದಾಖಲೆಗಳಿವೆ. ಬೇರುಗಳು ಆಳಕ್ಕಿಳಿವುದರ ಜೊತೆಗೆ, ಬೆಳವಣಿಗೆಯ ದರ ಹೆಚ್ಚಿರುವ ಕಾರಣ ಅರಣ್ಯ ಇಲಾಖೆಯವರಿಗೆ ಬೆಳೆಸಲು ಸುಲಭ ಎಂಬ ಅಂಶವನ್ನು ಹೊರತುಪಡಿಸಿ, ಉಳಿದೆಲ್ಲಾ ವಿಷಯಗಳು ನಕಾರಾತ್ಮಕವಾಗಿಯೇ ಇದೆ.

ಮೊದಲು ಹಚ್ಚ-ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆನಾಡು, ಬಯಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ, ಹೆಚ್ಚಿದ ನೆಲದ ಆಮ್ಲೀಯತೆ, ಗದ್ದೆ ತೋಟಗಳ ತುಂಬ ವಾನರಸೇನೆ, ಇದೆಲ್ಲದ್ದಕ್ಕೂ ಕಾರಣ ಪರೋಕ್ಷವಾಗಿ ಅರಣ್ಯ ಇಲಾಖೆ. ಇಷ್ಟು ವರ್ಷಗಳ ಪರಿಣಾಮ ನೋಡಿಯೂ ಬುದ್ದಿ ಬಂದಿಲ್ಲ.೮೦ವರ್ಷಕ್ಕೂ ಹೆಚ್ಚಿನ ಅವಧಿಯ ಪರೀಕ್ಷಾ ವರದಿ ಸಾಕಾಗಿಲ್ಲವೋ, ಏನೋ... ಈಗಲೂ ಅದೆ ಗಿಡಗಳನ್ನು ಮನೆಬಾಗಿಲಿಗೆ ಹೊತ್ತು ತರುತ್ತಿದೆ.
ನನ್ನ ಪ್ರಕಾರ ಮಲೆನಾಡಿನಲ್ಲಿ ಅರಣ್ಯೀಕರಣಕ್ಕೆ ಮಾನವರ ಮೂಗು ತೂರುವಿಕೆಯ ಅಗತ್ಯವಿಲ್ಲ. ಕಾಡು ತನ್ನಿಂದ ತಾನೆ ಬೆಳೆಯುವುದು, ನಮ್ಮ ಅವಶ್ಯಕತೆ ಅದಕ್ಕಿಲ್ಲ. ನಾನು ಸ್ವತಃ ನೋಡಿಯೇ ಹೇಳುತ್ತಿರುವುದು, ಕಳೆದ ಕೆಲ ವರ್ಷಗಳಿಂದ ಅಕೇಶಿಯ ಮರ ಇರದ ಕಡೆಯೆಲ್ಲ ಕಾಡು ದಟ್ಟವಾಗುತ್ತಿದೆ. ಎಲ್ಲಿ ಜೀವ ವೈವಿಧ್ಯತೆ ಅಳಿಯುತ್ತಿದೆಯೋ ಅಲ್ಲಿ ಅವಶ್ಯಕತೆ ಇದೆ.
ಅರಣ್ಯದ ಬಗ್ಗೆ ಅರಣ್ಯ ಇಲಾಖೆಗೆ ಅಷ್ಟು ಕಳಕಳಿ ಇದ್ದಿದ್ದೆ ಹೌದಾದಾರೆ
*ಅರಣ್ಯ ಲೂಟಿ ತಡೆಯಲಿ
*ಅರಣ್ಯ ಮಧ್ಯೆ ತಲೆಎತ್ತುತ್ತಿರುವ ರೆಸಾರ್ಟ್‌ ಗಳನ್ನ ಮುಚ್ಚಲಿ
*ಹೂ ಹಣ್ಣು ಕೊಡುವ, ಅಲ್ಲಿಯದೇ ತಳಿಗಳ ಅಭಿವೃದ್ಧಿಗೆ ವತ್ತು ನೀಡಲಿ
#ಇನ್ನೂ ಇತ್ಯರ್ಥವಾಗದ ಹಳೆಯ ಸಂಗತಿ#
ರಾಧೆ...🎶

Comments

Popular posts from this blog