Posts

Showing posts from 2018
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Image
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ.  ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ.  'ಅರೆ!!,  ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...
Image
ಮಾತೇ ಮರೆತು ಸುಳ್ಳಾಡದ ಅಧರಗಳು ತಡಬಡಿಸಿದಾಗೆಲ್ಲ ಸುಮ್ಮನಿದ್ದು ಬಿಡು ನನಗೇನು ಸತ್ಯದ ಹುಚ್ಚಿಲ್ಲ ಅದೊಂತರ ಕೆಸರ ಪಕ್ಕ ನಿಂತು ಕಲ್ಲೆರಚಿದಂತೆ ಇಬ್ಬರ ಮನಸ್ಸು ರಾಡಿ ತೊಳೆಯಲು ಸಂವತ್ಸರಗಳೇ ಬರಬೇಕು ಸುಮ್ಮನಿದ್ದುಬಿಡು ಕಣ್ಣ ಕನ್ನಡಿಯಲ್ಲಿ ಎಲ್ಲ ಬರೆದಿಹುದು ತಲೆಯೆತ್ತ ಬೇಡ  ದೃಷ್ಟಿ ಸಂಧಿಸಿದಾಗೆಲ್ಲ ಓದುವಾ ಹುಚ್ಚು ನನಗೆ ನಿನಗೆ ನೋವಾದೀತು ಸುಮ್ಮನಿದ್ದುಬಿಡು ರಾಧೆ...🎶
Image
ಟ್ರಾಫಿಕ್ ಜಾಮ್ ಮಹಾನಗರಗಳಲ್ಲಿ ತೆರೆದು ಕೊಳ್ಳುವ ವಿಧ ವಿಧವಾದ ಬದುಕು ಬೇರೆಲ್ಲೂ ಕಾಣ ಸಿಗದೇನೊ. ನಾಲ್ಕೈದು ರಸ್ತೆ ಸೇರುವಲ್ಲಿ ಹತ್ತು ನಿಮಿಷ ನಿಂತರೆ ಅದೆಷ್ಟೋ ಜೀವಗಳು ಕಥೆ ಹಂಚ ತೊಡಗುವವು. ಅಲ್ಲೇ ರಸ್ತೆಯ ಪಕ್ಕ ನಾನು ಬೇಕರಿಯಲ್ಲಿ ಚಾಕೊಲೇಟ್ ಕೇಕ್ ತಿನ್ನುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಕುಬ್ಜ ನಡು ವಯಸ್ಸಿನವನ ಜೊತೆ ಐದಾರು ವರ್ಷದ ಪುಟ್ಟ ಹುಡುಗಿ ಹೋಗುತ್ತಿದ್ದಳು. ಒಂದು ಕೈಯಲ್ಲಿ ಐಸ್ ಕ್ರೀಮ್ ಕಪ್, ಇನ್ನೊಂದು ಕೈಯಲ್ಲಿ ಆತನ ಕೈ ಹಿಡಿದು ನಡೆಯುತ್ತಿದ್ದಳು. ಬಹುಶಃ ಮಗಳು ಇರಬಹುದು. ಆತನ ಕೈಯಲ್ಲಿ ಕೋಲಿತ್ತು. ಕುರುಡನಂತೆ ಇದ್ದ. ಸರಿಸುಮಾರು ಮಗಳಷ್ಟೆ ಎತ್ತರ, ಅವಳು ಅವನನ್ನು ನಡೆಸುತ್ತಿರುವಂತೆ ಇತ್ತು. ಮುಖದಲ್ಲಿ ಏನೋ ಖುಷಿ. ಏನೋ ಮಾತನಾಡುತ್ತ ಹೋದರು. ಕೆಲವೊಮ್ಮೆ ಯಾರು ಯಾಕೆ ಮನಃ ಪಟಲದಲ್ಲಿ ಜಾಗ ಕೇಳುವರು ಗೊತ್ತಿಲ್ಲ. ನಾನು ಕೇಕ್ ತಿಂದು ಹೊರಟೆ. ಬಸ್ ಹತ್ತಲು ನಾನು ಆ ರಸ್ತೆಗಳು ಕೂಡುವ ಸರ್ಕಲ್ ಬಳಿ ಬಂದೆ. ಒಂದು ತುದಿಯಲ್ಲಿ ಮತ್ತೆ ಇವರಿಬ್ಬರ ದರುಶನ ಆಯ್ತು. ಅದೊಂತರ ಕರುಳ ಹಿಂಡುವ ದೃಶ್ಯ. ಸೂಚನೆಗೆ ಕಾಯುತ್ತಿದ್ದ ಉದ್ದನೆಯ ಗಾಡಿಗಳ ಸಾಲು ಸುತ್ತಲೂ. ಯಾವಾಗ ಹಸಿರು ನಿಶಾನೆ ಬರುವುದೆಂದು ಕಾದು ಕಳಿತಿದ್ದವು. ಅವುಗಳ ಮಧ್ಯೆ ಇವರು. ಏನೋ ಭಯ. ಹೋಗಿ ದಾಡಿಸಿ ಬರಲೇ ಎನ್ನಿಸಿತು. ಆದರೆ ಆ ಮಗು, ಅಪ್ಪನ ಕೈ ಹಿಡಿದು ಚಲಿಸುವ ವಾಹನಗಳ ನಡುವೆಯೆ ಹೋಗುತ್ತಿದ್ದಳು. ಆ ತರಾತುರಿಯಲ್ಲೂ ವಾಹನ ಚಾಲಕರೂ ತಮ್ಮ ವೇಗ ತುಸು ಕ...
Image
(ಚಿತ್ರ ಕೃಪೆ:ಸಹನಾ ಹೆಗಡೆ) ಸಂಸಾರದ ಜಂಜಾಟಕೆ ಸಿಲುಕಿ ಮನ ನಲುಗಿದಾಗೆಲ್ಲ ಗುಳೆ ಹೋಗ ಬೇಕು ನಾ ಹೀಗೆ ಪ್ರತಿ ಬಾರಿಯೂ ಸುತ್ತಲೂ ಹಿಮಗಟ್ಟಿ ಚಳಿ ಕೊರೆಯುತಿದ್ದರೂ, ತೂರಿ ಬರುತ್ತಿರುವ ಜಲಪಾತ ನನ್ನ ನೋಡಲೆಂದೆಯೋ ಬಹುಕಾಲದ ವಿರಹಕ್ಕೆ ಬಂಡೆಗಳ ತಡೆಯಿಲ್ಲ ಕುಣಿಯುತ್ತ ನೆಗೆಯುತ್ತ ನನ್ನೆಡೆಯೇ ನುಗ್ಗುತಿದೆ ನನ್ನೆಲ್ಲ ನೋವುಗಳ ಅಲ್ಲೆಯೇ ಧಾರೆ ಎರೆಯ ಬೇಕೆಂದಿದ್ದೆ ಮನಬಿಚ್ಚಿ ಹರಟಬೇಕೆಂದಿದ್ದೆ ಬಹುಶಃ ಬೀಸುವ ಚಳಿಗಾಳಿ ಹೊತ್ತೊಯ್ದಿತ್ತು ನನ್ನ ಎಲ್ಲಾ ಭಾರ.... ಮೌನವಾಗಿ ಕೇಳಿಸಿಕೊಳ್ಳುತ್ತಿದ್ದೆ, ಹಳೆಯ ಸಂಬಂಧ ಗುನುಗುತ್ತಿತ್ತೆ, ನನ್ನಿರುವ ಪ್ರಶ್ನಿಸುತ್ತಿತ್ತೆ, ನನ್ನ ಗೋಜಲಿ ನೋಡಿ ಮುಂದೆ ಸಾಗುತ್ತಿತ್ತು... ಕಳೆದೇ ಹೋಗಿದ್ದೆ ಕುಹಕವಿಲ್ಲದ ಸುಂದರ ತಾಣದಲಿ ಮನಸಿಗಂಟಿದ್ದ ಮಲಿನ ಕರಗಿತ್ತು ಸ್ಪಟಿಕದಂತ ನೀರಲ್ಲಿ ಮತ್ತೆ ಗುಳೆ ಹೋಗ ಬೇಕು ಯಾರು ಕಾಣದಾ ಜಾಗಕೆ ನನ್ನ ಏಕಾಂತಕೆ ನನ್ನ ನಾ ಹುಡುಕಲು ಹೊಸ ಅನುಬಂಧ ಅರಿಯಲು.... ರಾಧೆ...🎶
Image
ಹರುಕು ಮುರುಕು ರಾತ್ರಿಗಳು ರಾತ್ರಿ ಹನ್ನೊಂದು ಆಗಿತ್ತು. ಮಲಗಲು ಆಗದೇ, ಕೂರಲು ಆಗದೆ ತಳಮಳಿಸುತ್ತಿದ್ದೆ. ಹಳೆಯ ನೆನಪುಗಳು ಕೆಣಕುತ್ತಿದ್ದವೇ, ಹೊಸ ಅಲೆಗೆ ಹೊಂದಲಾಗದೆ ಚಡಪಡಿಸುತ್ತಿದ್ದೆನೆ, ಗೊತ್ತಿಲ್ಲಾ. ಆದರೆ ಎಲ್ಲದಕ್ಕೂ ಒಂದು ಅಂತಿಮ ವಿರಾಮ ಇಡ ಬಯಸಿದ್ದೆ. ಡೈರಿ ಓದಿದರೆ ಕೊಲ್ಲುವ ನೆನಪಿಗೆ ಸ್ವಲ್ಪ ಸಾಂತ್ವನ ಸಿಗಬಹುದೇ ಎಂದು ಕೊಂಡೆ. ಆದರೆ ಆ ಪುಟಗಳನ್ನು ಮುಟ್ಟಲು ಮನಸ್ಸಾಗಲಿಲ್ಲ. ಪ್ರವಾಸಿ ಕಥನ ಹಿಡಿದು ಕೂತೆ. ಮತ್ತೊಮ್ಮೆ ಗತ ಕಾಲಕ್ಕೆ ಹೋಗಿ ಬಂದಂತಾಯಿತು. ನಂತರ ಇದ್ದಕ್ಕಿದ್ದಂತೆ ಎಷ್ಟೋ ಹಳೆಯ ದುಃಖವೆಲ್ಲ ದುಮ್ಮುಕ್ಕಿ ಬರುವಂತೆ ಅಳ ತೊಡಗಿದೆ. ನೆನಪುಗಳಿಗೆ ತಿಲಾಂಜಲಿ ಇಡುತ್ತಿದ್ದೆನೋ, ನನ್ನ ಮಬ್ಬು ತನಕ್ಕೆ ಮರುಗುತ್ತಿದ್ದೆನೋ ತಿಳಿಯದೆ, ನನ್ನನ್ನು ನಾನೇ ಮಗುವಂತೆ ಸಂತೈಸ ತೊಡಗಿದೆ. ಗೊಂದಲ ಶುರುವಾಗಿದ್ದು ಆಗ. ನಮಗೆ ಎರಡು ಮನಸ್ಸಿರುವುದೇ? ಒಂದು ಮನಸ್ಸು ಸರಿ ತಪ್ಪು ಗ್ರಹಿಸದೇ, ಇಷ್ಟ ಪಟ್ಟಿದ್ದು ಬೇಕೆಂದು ರಚ್ಚೆ ಹಿಡುವುದು( ಮಗುವಂತೆ) ಇನ್ನೊಂದು ಪ್ರಭುದ್ದವಾಗಿ ಯೋಚಿಸಿ, ಅದರಲ್ಲಿ ತಪ್ಪು ಕಂಡು ಹಿಡಿದು, ಸಮಾಧಾನಿಸುವುದು(ಅಮ್ಮನಂತೆ). ಇಲ್ಲಿ ಅಮ್ಮ ಬುದ್ದಿ ಹೇಳಿ ಹೇಳಿ ಸುಸ್ತಾಗಿ ಸುಮ್ಮನಾಯಿತು. ಆ ಮಗು ಅಳುತ್ತಲೇ ಇತ್ತು. ರಾತ್ರಿ ಎರಡಾಗಿರಬೇಕು. ಎಷ್ಟೊತ್ತಿಗೆ ನಿದ್ದೆ ಹತ್ತಿತೋ ದೆವರಿಗೆ ಗೊತ್ತು. ಬೆಳಗು ಯಾವಾಗಲೂ ಅಚ್ಚರಿಗಳ ಸಂಚು. ನಾವೇನೋ ಬಗೆವೆವು, ಆಗುವುದು ಇನ್ನೇನೊ. ಬೆಳಗ್ಗೆ ಎದ್ದಾಗ ನಿದ್...
Image
ಕೊರೆವ ಚಳಿ ಮೈ ಕೊರೆವಾಗ ಸಿಗುವ ಮುದವೆ ಬೇರೆ. ಮನೆಯಲ್ಲಿ ಇರಬೇಕಿತ್ತು... ಸಂಜೆ ಸಂಡಿಗೆ  ಮೆಣಸು ಕಚ್ಚಿಕೊಂಡು ಹಾಗೆ ನಡುಗುತ್ತಾ ಮೊಸರು ಅನ್ನಾ ತಿನ್ನುತ್ತಾ ಬಿಸಿ ನೀರು ಕುಡಿಯುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು. ತುದಿ ಕೈಲಿ ಕೈ ತೊಳೆದು ಯಾವಾಗ ಹಾಸಿಗೆಯೆಂಬ ಗುಹೆ ಸೇರುವೆನೊ ಎಂಬ ತವಕ. ಹಂಡೆ ತುಂಬಾ ಬಿಸಿ ನೀರಿದ್ದರೆ ಮಾತ್ರ ನೀರೆಂದರೆ ತುಸು ಜಾಸ್ತಿ ಪ್ರೀತಿ. ಅಮ್ಮ ಹಾಸಿಗೆ ಹಾಸಿ ಕರೆಯಲಿ ಎಂಬ ಮೊಂಡು ಬಯಕೆ. ಅಲ್ಲಿಯವರೆಗು ಅಡಿಕೆ ಬೇಯಿಸುವ ಒಲೆಯೆ ಸಂಗಾತಿ. ಅಪ್ಪಾ ಅಡಿಕೆ ಮಗೆಯುತ್ತಿದ್ದರೆ ಹುರಿದ ಶೇಂಗಾ ಬೆಂಕಿಯನ್ನು ಜೀವಂತ ಇಡುತ್ತಿತ್ತು. ಒಂದು ಕಿವಿ ಸದಾ ಅಮ್ಮನ ಕರೆಗೆ ಕಾಯುತ್ತಿರುತ್ತಿತ್ತು. ಕರೆದಾಕ್ಷಣ ಒಂದೆ ನೆಗೆತಕ್ಕೆ ಹಾರಿ ಮುಸುಕಲು ಎಳೆದುಕೊಂಡು ಮಲಗಿದರೆ ಬೆಳಗ್ಗೆ ಅಪ್ಪನ ತಂಡಿ ಕೈ ಕೆನ್ನೆ ಹಿಂಡಿದಾಗಲೇ ಬೆಳಗಾಗಿದ್ದು ತಿಳಿವುದು. ನಡುಗವ ಮೊಗ ನೋಡಿ ಮತ್ತೆರಡು ಕಂಬಳಿ ಹೊದಿಸಿ ಹೋದರೆ, ಎತ್ತಿ ಏಳಿಸಲು ಅವರ್ಯಾರಾದರು ಬರಲೇ ಬೇಕು. ಅಷ್ಟು ಭಾರ! ಬೆಚ್ಚಗೆ.. ನಾ ಕನಸಲ್ಲಿ ಒಮ್ಮೆ ಹೋಗಿ ಬರುವೆ...😍😘 ಮುಂಜಾನೆ ಮುಸುಕು ಹೊದ್ದು ಮಲಗುವ ಮುಗ್ದ ಮನಗಳಿಗೆ ನೆನಪಿನ ಕಚಗುಳಿ 
Image
ಭಯ ಇರಬೇಕು ಭಯ ಇರಬೇಕು ನನಗೆ ನಿನ್ನ ಮೇಲೆ ನಿನಗೆ ನನ್ನ ಮೇಲೆ ಅದೆಷ್ಟೆಂದರೆ, ಕಣ್ಣು ರೆಪ್ಪೆಗೆ ಆತು ಕುಳಿತು  ಉಸಿರಿಗೆ ಉಸಿರು ಬೆರೆಸಿ ಕಣ್ಣಾಲಿಗು ತಪ್ಪದಂತೆ ಕಾದು ಕೂರ ಬೇಕು' 'ನೀ ಕಣ್ಣಲ್ಲೇ ಬರವ ಕವನಗಳ ನಾನೋದುವಾಗ ಮುಂಗುರುಳ ನೀ ಎಣಿಸಬೇಕು ನಿನ್ನ ಕಂಗಳ ಉತ್ತರವ ನನ್ನಾಲೆಗಳಲಿ ಹುಡುಕುವಾಗ ಕಣ್ಣು ಮುಚ್ಚಿ ನಾ ಕಾಡ ಬೇಕು' 'ಮುಚ್ಚಿದ ಕಣ್ಗಳು ಪದ ಕಮಲದಂತೆ ಕಾಡಿವೆ ಅದರಗಳ ಕಚಗುಳಿಯನಿಡಲು ಹಾಗೆಯೇ ಇರು ತುಸು ಕೆಂಪು ಮಾಡುವೆ ನಿನ್ನ ಕಾಡಿಗೆಯ ಬಣ್ಣ' ' ಈ ಆಲೆಗಳಲಿ ನೀನೇ ಅವಿತಿರುವಾಗ ಆಗಲೇ ರಂಗೇರಿದೆ, ಮತ್ತಿನ್ನೇನು ಸುಮ್ಮನೆ ಕಾಡಬೇಡ, ನೋಡು ಆಚೆ' 'ಹುಸಿ ಮುನಿಸಿಗೆ, ಸಿಂಗಾರಿ ನೀನು ನಿನ್ನೆದುರು ಅಸ್ತಮಿಪ ಸೂರ್ಯನಿಗೂ ಮುಪ್ಪು ಒಮ್ಮೆ ತಲೆ ಎತ್ತಿ ನೋಡು, ಜೀವನ ಪಾವನ' 'ಹುಚ್ಚು ನಿನಗೆ, ಈ ಹೃದಯ ತಾಳ ತಪ್ಪಿದರೆ, ನನಗಾರು ಗತಿ, ಬಿಡಲಾರೆ ನಾನು' 'ಉಸಿರೇ ಕಟ್ಟಿದೆ, ಇನ್ನು ತಾಳ ತಪ್ಪಲೆಷ್ಟು,' ' ನುಡಿಯದಿರು ಅಪಶಕುನ, ಮುಸ್ಸಂಜೆ ವೇಳೆ, ಆ ತಾಳಕ್ಕೆ ಬಂದಿಯಾದ ಸ್ವರ ನಾನು ಮರೆಯದಿರು' ಸೂರ್ಯ ಕೆಂಪಾದ ಮತ್ತಷ್ಟು.... - ರಾಧೆ...
Image
 ಸುಪ್ತ ಮನಸಿನ ಕನವರಿಕೆಗಳು  ಅಮ್ಮ ಇನ್ನೂ ನಾಲ್ಕು ದಿನ ಹಾಯಾಗಿ ಇರಬಹುದು ನೋಡು, ಅಮ್ಮ ಕೊಟ್ಟ ಕಾಫಿ ಹಿಡಿದು ವರಾಂಡದಲ್ಲಿ ಕಾಲು ಚಾಚಿ ಕುಳಿತೆ. 'ಹಾ' ಎನ್ನುತ್ತಾ ಕೆಲಸದಲ್ಲಿ ಮಗ್ನಳಾದಳು. ಅಣ್ಣ, 'ಏನು ಅರಾಮ, ನಿನ್ನ ಮದುವೆ ಇದೆ, ಮರ್ತೋಯ್ತಾ??. ' 'ಹೌದೌದು! ಮದ್ವೆ... ಮಕ್ಕಳಾಗೋದಲ್ವಾ.' ' ಹೆಯ್ not kidding, we are serious!! ' 'ಏನು? ನಂಗೆ ಮದ್ವೆನಾ? ಹುಡುಗ ಯಾರು? ' 'ಅಪ್ಪಾ ಹತ್ರ ವಿಚಾರಸು'. ' ಸುಮ್ನೆ ಹೇಳೊ, ಯಾಕೆ ತಲೆ ತಿಂತಿಯಾ?'. 'ನಿಜಾ ಅಪ್ಪಂಗೆ ಕೇಳು.ನಂಗೇನು ಗೊತ್ತಿಲ್ಲಾ..' ಅಷ್ಟರಲ್ಲಿ ಅಲ್ಲಿಗೆ ಅಪ್ಪ ಬಂದರು. 'ಅಪ್ಪಾ ಏನಿದೆಲ್ಲಾ? '. ' ನಿನ್ನ ಮದುವೆ ತಯಾರಿ' 'ಎಲ್ಲಾ ಯಾಕೆ ಈ ತರ ಜೋಕ್ ಮಾಡ್ತಿದಿರಾ?' 'ಹುಡುಗಾ ಯಾರು?!! ' 'ಅಣ್ಣ ಫೋಟೋ ತೋರ್ಸೊ' ಎಂದು ಅಪ್ಪ ಬೇರೆಲ್ಲೋ ಹೋದ. ನಂಗೆ ಸಿಟ್ಟು ಬಂತು. ಏನ ಬೇಕಾದ್ರು ಮಾಡ್ಕೋಳ್ಳಿ, ಎಂದು, ಎದ್ದು ಹೋಗಿ ಮಲಗಿದೆ. ಯಾಕೆ ಸುಮ್ಮನೆ ತಲೆ ತಿಂತಾರೊ ಎಲ್ಲಾ..‌ ನಾನಂತು ಮಲಗುವೆ ಎಂದು ಮಲಗಿದೆ. ಅದೆಷ್ಟು ಸುದೀರ್ಘ ನಿದ್ದೆ, ಯಾರು ಎಚ್ಚರಿಸಲು ಇಲ್ಲಾ, ಏನಾಗಿದೆ ಎಲ್ಲರಿಗೂ.. ಊಟಾ ಆಯ್ತು. ನನ್ನ ಫ್ರೆಂಡ್ ಗೆ call ಮಾಡಿದೆ, ನೊ ಸಿಗ್ನಲ್... ' ನಿನ್ನ ಸಾರಿ ಐರನ್ ಮಾಡ್ಕೋ' 'ಯಾವುದು?'. ...
Image
(ಸಾಂದರ್ಭಿಕ ಚಿತ್ರ ) ವಾಸ್ತವಕ್ಕೆ ಹತ್ತಿರವಾದ ಕಥೆ: ಅಮ್ಮ ತಿಂಡಿ ತಯಾರಿಸಿ, ಮೆಲುವಾಗಿ ಕರೆದಳು. ನಾನು ಬಾರಿ ಬಾರಿಗು ಸಿಹಿನಿದ್ದೆಗೆ ಜಾರುತ್ತಿದ್ದೆ. ಪ್ರತಿ ಸಲ ಎಚ್ಚರವಾದಾಗಲು ಈಗಷ್ಟೇ ಮಲಗುತ್ತಿರುವಂತೆ ಯಾವುದೇ ಹಿಂಸೆ ಇಲ್ಲದೆ ನಿದ್ದೆ ಬರುವುದು. ಅಲ್ಲಿಯ ಜಾಗದ ಮಹಿಮೆಯೇ ಸರಿ. ಅಮ್ಮ ಕರೆದುದ್ದಕ್ಕೆ ಚಾದರ ಹೊದ್ದೆ ಎದ್ದು ಕುಳಿತೆ. 'ಏಳೆ ಬಂಗಾರಿ' ಎಂದು ಲೈಟ್ ಹೊತ್ತಿಸಿ, ಕೆನ್ನೆಗೆ ಮುದ್ದಿಸಿದಳು. ಇನ್ನೆಂತ ಬೆಳಗು ಬೇಕು.. ಅವಳ ಕತ್ತಿಗೆ ಜೋತು ಬಿದ್ದು ಎದ್ದು ಬಂದೆ. ಬ್ರಷ್ ಹಿಡಿದು ಸೂರ್ಯ ಎಲ್ಲಾದರು ಕೃಪೆ ತೋರಿದ್ದಾನಾ ಎಂದು ಇಣುಕಿದೆ. ಅಂಗಳದ ತುತ್ತುದಿಯಲ್ಲಿ ಸ್ವಲ್ಪ ರಂಗು ಚೆಲ್ಲಿದ್ದ. ಅರಾಮಾಗಿ ಬಿದ್ದಿದ್ದ ಮೊಬೈಲ್ ಹಿಡಿದು ಅಡಿಕೆ ರಾಶಿಯ ಮೇಲೆ ನಡೆಯುತ್ತ ಎಳೆಬಿಸಿಲಲ್ಲಿ ಕುಳಿತೆ. ಮೊಬೈಲ್ ಅಲ್ಲೆ ಅಡಿಕೆ ರಾಶಿಯ ಮೇಲೆ ಇಟ್ಟು, ಹಲ್ಲುಜ್ಜುತ್ತಾ, ಅಯ್ಯೋ ಇನ್ನೆರಡೆ ದಿನ, ಯಾವ ಸ್ವಾರ್ಥಕ್ಕೆ ಆ ಮಾಯಾ ನಗರಿಯೋ, ಹಾಳಾದ ಜೀವನ. ಇಲ್ಲೇ ದನಮೇಯಿಸಿಕೊಂಡು ಇದ್ದರು ಎಷ್ಟು ಚೆಂದ ಎಂದು ನನ್ನ ಪ್ರೀತಿಯ ಗುಡ್ಡ-ಬೆಟ್ಟ ನೋಡುತ್ತ ಕೂತಿದ್ದೆ. ಅಮ್ಮ ಮತ್ತೆ ಕರೆದಳು, 'ದೋಸೆ ಕಾವಲಿ ಇಟ್ಟೆ, ರಂಗೋಲಿ ಹಾಕಿ ಬಾ'. ವಾಸ್ತವಕ್ಕೆ ಬಂದೆ. 'ಹಾ ಬಂದೆ' ಎಂದು ಅಡಿಕೆ ರಾಶಿ ಮೇಲೆ ಕುಣಿಯುತ್ತಾ ಒಳ ಸೇರಿದೆ. ಅಮ್ಮ ಬಾಗಿಲಲ್ಲೇ ರಂಗೋಲಿ ಬಟ್ಟಲಿಟ್ಟಿದ್ದಳು. ಮೊದಲ ಹಾಗೆ ಪಟ್ಟಿ ನೋಡಿ ಚುಕ್ಕೆ ಇಟ್ಟು...