ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
- Get link
- X
- Other Apps
ಸುಪ್ತ ಮನಸಿನ ಕನವರಿಕೆಗಳು
ಅಮ್ಮ ಇನ್ನೂ ನಾಲ್ಕು ದಿನ ಹಾಯಾಗಿ ಇರಬಹುದು ನೋಡು, ಅಮ್ಮ ಕೊಟ್ಟ ಕಾಫಿ ಹಿಡಿದು ವರಾಂಡದಲ್ಲಿ ಕಾಲು ಚಾಚಿ ಕುಳಿತೆ. 'ಹಾ' ಎನ್ನುತ್ತಾ ಕೆಲಸದಲ್ಲಿ ಮಗ್ನಳಾದಳು. ಅಣ್ಣ, 'ಏನು ಅರಾಮ, ನಿನ್ನ ಮದುವೆ ಇದೆ, ಮರ್ತೋಯ್ತಾ??. ' 'ಹೌದೌದು! ಮದ್ವೆ... ಮಕ್ಕಳಾಗೋದಲ್ವಾ.'
' ಹೆಯ್ not kidding, we are serious!! '
'ಏನು? ನಂಗೆ ಮದ್ವೆನಾ? ಹುಡುಗ ಯಾರು? '
'ಅಪ್ಪಾ ಹತ್ರ ವಿಚಾರಸು'. ' ಸುಮ್ನೆ ಹೇಳೊ, ಯಾಕೆ ತಲೆ ತಿಂತಿಯಾ?'. 'ನಿಜಾ ಅಪ್ಪಂಗೆ ಕೇಳು.ನಂಗೇನು ಗೊತ್ತಿಲ್ಲಾ..' ಅಷ್ಟರಲ್ಲಿ ಅಲ್ಲಿಗೆ ಅಪ್ಪ ಬಂದರು. 'ಅಪ್ಪಾ ಏನಿದೆಲ್ಲಾ? '. ' ನಿನ್ನ ಮದುವೆ ತಯಾರಿ' 'ಎಲ್ಲಾ ಯಾಕೆ ಈ ತರ ಜೋಕ್ ಮಾಡ್ತಿದಿರಾ?' 'ಹುಡುಗಾ ಯಾರು?!! ' 'ಅಣ್ಣ ಫೋಟೋ ತೋರ್ಸೊ' ಎಂದು ಅಪ್ಪ ಬೇರೆಲ್ಲೋ ಹೋದ. ನಂಗೆ ಸಿಟ್ಟು ಬಂತು. ಏನ ಬೇಕಾದ್ರು ಮಾಡ್ಕೋಳ್ಳಿ, ಎಂದು, ಎದ್ದು ಹೋಗಿ ಮಲಗಿದೆ. ಯಾಕೆ ಸುಮ್ಮನೆ ತಲೆ ತಿಂತಾರೊ ಎಲ್ಲಾ.. ನಾನಂತು ಮಲಗುವೆ ಎಂದು ಮಲಗಿದೆ. ಅದೆಷ್ಟು ಸುದೀರ್ಘ ನಿದ್ದೆ, ಯಾರು ಎಚ್ಚರಿಸಲು ಇಲ್ಲಾ, ಏನಾಗಿದೆ ಎಲ್ಲರಿಗೂ.. ಊಟಾ ಆಯ್ತು. ನನ್ನ ಫ್ರೆಂಡ್ ಗೆ call ಮಾಡಿದೆ, ನೊ ಸಿಗ್ನಲ್... ' ನಿನ್ನ ಸಾರಿ ಐರನ್ ಮಾಡ್ಕೋ' 'ಯಾವುದು?'. ' ನಿನ್ನ ರೇಷ್ಮೆ ಸೀರೆ ಇದೆಲ್ಲಾ ಅದೆ,' 'ಅದನ್ನಾ'?!! '. 'ಹೌದು ಎಲ್ಲಿ ಹುಡುಗ? ಏನು! ಯಾಕೆ ಯಾರೂ ಸರಿ ಹೇಳ್ತಿಲ್ಲಾ? ನಿಮಗೆಲ್ಲಾ ಏನಾಗಿದೆ? ನಾನಷ್ಟು ಭಾರ ಆದ್ನಾ ನಿಮಗೆ' ' ನಿನ್ನಪ್ಪ ಫಿಕ್ಸ ಮಾಡ್ಸಿದ್ದು, ದೊಡ್ಮನೆ ಕಡೆ ಯಾರೋ. ಮೊನ್ನೆ ಇಲೆಕ್ಷನ್ ಪ್ರಚಾರಕ್ಕೆ ಹೋದವರು, ವಿಚಾರ ತಂದರು, ಹುಡುಗ ವಿದೇಶದಲ್ಲಿ ಇರೋವನು, ಸದ್ಯ ಊರಲ್ಲಿ ಇದಾನೆ, ಮತ್ತೆ ಬರೋದು ಯಾವಾಗ ಗೊತ್ತಿಲ್ಲಾ.. ಅದಕ್ಕೆ ನಾಳೆನೆ ಒಳ್ಳೆ ಮುಹೂರ್ತ ಇದೆ ಅಂದರು, ಹೇಗು ನೀ ಬರ್ತಾ ಇದ್ಯಲ್ಲಾ, ಅದಕ್ಕೆ ಈಗಲೇ ಫಿಕ್ಸ ಮಾಡಿದ್ರು' ' ವಾಹ್ ಸೋ ಗ್ರೇಟ್ ಮಮ್ಮಾ!! ಯಾವ ಕಂಟ್ರಿಲಿ ಇರೋದು ಅವನು?'. ' ಯುಎಸ್ ನಲ್ಲಿ ಅಂತೆ' 'ಒಹೋ ಸರಿ, ನಂಗೆ ನಿದ್ದೆ ಬರ್ತಿದೆ' 'ಹಾ, ಬೆಳಗ್ಗೆ ಬೇಗ ಏಳು'. ' ಒಕೆ, ಎಷ್ಟಕ್ಕೆ ಮುಹೂರ್ತ!!?' '೧೧ ಗಂಟೆ' 'ಸರಿ' ಎಂದು ಮಲಗಿದೆ
ಬೆಳಗೆ ಎದ್ದು ಸ್ನಾನ ಮಾಡಿ, ಸೀರೆ ಉಡ ತೊಡಗಿದೆ... 'ಅಮ್ಮ ಈ ಬ್ಲೌಸ್ ಬರ್ತಿಲ್ಲಾ ನಂಗೆ' ' ಮತ್ತೊಂದು ಇದೆಯಲ್ಲಾ ಅದು ಹಾಕ್ಕೊಳೆ' ' ಹು ಸರಿ' ಎಂದು ಮೊಬೈಲ್ ಹಿಡಿದು ಕೂತು. ಗ್ರುಪ್ ಲಿ 'ESCN&KC' ನೋಡಿ ದಸ್ !! ಆಯಿತು... ಅಯ್ಯೋ ಅವಳು ಎಂಗೇಜಮೆಂಟಗೆ ಕರಿಲಿಲ್ಲಾ ಎಂದು ಇಷ್ಟು ಕಾಡ್ತಿದಾರೆ, ನಾ ಇಲ್ಲಿ ನಂಗು ಗೊತ್ತಿಲ್ದೆ ಮದ್ವೆ ಆಗೋದಾ?? No way... 'ಅಮ್ಮಾ ಅದ್ಯಾರೆ ಮೂತಿನು ನೋಡಿಲ್ಲಾ ಅವನತ್ರ ತಾಳಿ ಕಟ್ಟಿಸ್ಕೋಳದಾ!! Chance ಇಲ್ಲಾ... ನೋಡು ನನ್ನ ಮದುವೆ ಹೀಗೆಲ್ಲಾ ಆಗತ್ತಾ?? ನೋಡು ಹೌದು ನಾ ಒಂದು shoppingಕೂಡ ಮಾಡಿಲ್ಲಾ.. ಫ್ರೆಂಡ್ಸ್ ಯಾರಿಗೂ ಹೇಳಿಲ್ಲಾ... ನಾ ಓಡೋಗಿ ಮದುವೆ ಆದ್ರೂ ಇನ್ನೊಂದಿಷ್ಟ ಜನ ಬರ್ತಾರೆ., ಇದೇನು ಮದ್ವೇನಾ?? ನೀಮಗ್ಯಾರಿಗು ನಾ ಸಂಬಂಧ ಇಲ್ವಾ? ಯಾಕೆ ಸುಮ್ನಿದೀರಾ? ನಾ ಓಡಿ ಹೋಗ್ತೀನಿ, ನೀವು ಏನು ಬೇಕಾದರು ಮಾಡ್ಕೊಳ್ಳಿ.. ಅಲ್ಲಾ ನಾ ಏನು ಗೊಂಬೆನಾ? ಒಟ್ಟು ನನ್ನನ್ನ ಇಲ್ಲಿಂದ ಓಡಿಸೋದೆ ಗುರಿನಾ?..' ಎಷ್ಟು ಬಾಯಿ ಬಡಿದು ಕೊಂಡರು ಏನು ಮಾತಾಡುತ್ತಿಲ್ಲಾ. ಅಯ್ಯೋ ಈ ಸಹನಿಗೂ call ಹೋಗ್ತಿಲ್ಲಾ, ಏನು ಮಾಡ್ಲಿ??? 'ಅಣ್ಣಾ ನೀನು ಏನು ಹೇಳ್ತಿಲ್ಲಾ, ನಂಗೊತ್ತು, ನಿಂಗು ನಾ ಭಾರ ಆಗಿದಿನಿ, ನಿಮ್ಮತ್ರ ಹೇಳ್ಕೊಂಡು ಏನು ಆಗತ್ತೆ, ನನ್ನ ದಾರಿ ನಾ ನೋಡ್ಕೋತೀನಿ' ' ನಿನಗೆ ತಿಕ್ಕಲಾ? ನಿನ್ನೆ ಅಷ್ಟೇ ಹಾ ಅಂದೆ, ಈಗ ಏನಾಯ್ತು' ' 'ನಾ ಹು ಅಂದನಾ? ಎಲ್ಲಿ!! ಸುಮ್ಮನೆ ನನ್ನ ಮೂಡ್ ಹಾಳು ಮಾಡಬೇಡ. ಮಾಡಸ್ತೀನಿ ಇರಿ, ಮಂಟಪದಲ್ಲಿ ಎಲ್ಲರಿಗೂ ಪೂರ್ತಿ ಮಾಡ್ತೀನಿ' ' ಮಗ ಅಲ್ಲೆಲ್ಲಾ scene createಮಾಡಬೇಡ.. ನಿನ್ನ ಹೆಸರೆ ಹಾಳಾಗೊದು.. ಅವರು ದೊಡ್ಡ ಮನೆತನ' 'ನಮ್ಮದೇನು ಕಿತ್ತೋದ ಮನೆತನನಾ?!!! ಜೀವನಾನೆ ಎಕ್ಕುಟ್ಟೋವಾಗ ಹೆಸರಂತೆ!! ನಂಗೇನು ಬೇಕಾಗಿಲ್ಲಾ, ಅವರ ದುಡ್ಡು ದೌಲತ್ತು ಅವರಿಗೆ ಇಟ್ಕೋಳಕ್ಕೆ ಹೇಳು.., ನಂಗೆ ಬೇಕಷ್ಟು ನಾ ದುಡ್ಕೋ ಬಲ್ಲೆ, ಇನ್ನೆರಡು ವರ್ಷ ಆಗ್ಲಿ...' ನಾ ಮೊದಲು ದೇವಸ್ಥಾನ ಹೋಗ್ತೀನಿ, ನೀವು ಬನ್ನಿ ಎಂದು, ನನ್ನ ಬ್ಯಾಗ ಹೊತ್ತು ಗಾಡಿಗೆ ಹಾಕಿದೆ. ಅಣ್ಣಾ'car ಲಿ ಹೊಗುವಂತೆ ಪುಟ್ಟಾ' ಎಂದ, ಬೇಡ ಎಂದು ಡ್ರೈವರ್ ಗೆ ಹೊರಡಲು ಹೇಳಿದೆ.
ನಾನು ಹಾಕಿದ್ದ ಒಡವೆ ತೆಗೆದು ಬ್ಯಾಗ ಗೆ ಬಟ್ಟೆ ಸುತ್ತಿ ಇಟ್ಟೆ. ಹೌದು ಎಲ್ಲಿಗೆ ಹೋಗಲಿ, ಅಪ್ಪನ್ನ ಎದುರು ಹಾಕ್ಕೊಂಡರೆ ನನ್ನ ಓದು?? ಎಲ್ಲಿಗೆ ಹೋಗಲಿ, ದೇವಸ್ಥಾನಕ್ಕೆ ಹೋಗಿ ಆ ಫಾರಿನ್ ರಿಟರ್ನ್ ಪೂಜೆ ಮಾಡಿ ಹೋಗಲಾ? ಬೇಡ, ಹೋಗೊ ಮಾರಿ ಮೈಮೇಲೆ ಎಳ್ಕೊಳೊದು ಬೇಡ. ಬಸ್ ನಿಲ್ದಾಣದಲ್ಲೆ ಇಳಿದೆ, ದೇವಸ್ಥಾನದೊರೆಗೆ ಬಿಡುವೆನೆಂದ. ನಾ ಅಲ್ಲೆ ಸಾಕೆಂದು ಇಳಿದು ದೇವಸ್ಥಾನದ ಕಡೆ ಹೆಜ್ಜೆ ಹಾಕಿದೆ. ಗಾಡಿ ಹೋಯಿತು, ಪುಣ್ಯKSRTC bus ಬಂತು. ' ಸಿದ್ದಾಪುರ' ಎಂದೆ. ವಿಚಿತ್ರವಾಗಿ ನೋಡಿದ. ನಾ ನೆಟ್ವರ್ಕ್ ಗೆ ತಡಕಾಡ ತೊಡಗಿದೆ. ಇನ್ನು ಯಾರಿಗೆ ಹೇಳಲಿ, ಹಾಸ್ಟೆಲ್ ಗು ಹೋಗುವ ಹಾಗಿಲ್ಲ... ಬೇರೆsim ತಗೋ ಬೇಕಾ?! ತಥ್ ಇದು ಮೂವಿ ನಾ, ನನ್ನ ಟ್ರಾಕ್ ಮಾಡಕ್ಕೆ.. ಮನೇಲಿ ಅಮ್ಮ ಹೇಗಿರಬಹುದು, ಅಪ್ಪಾ ಏನೆಲ್ಲಾ ಹೇಳುವನೋ, ವಾಪಸ್ ಹೋಗಿ ಬಿಡಲಾ, ಮತ್ಯಾವಗಾದರು ನಾ ಈ ಊರಿಗೆ ಮರಳ ಬಹುದೆ... ದಾರಿಯುದ್ದಕ್ಕೂ ಯೋಚನೆಯೆ.... ವಾಟ್ಸಾಪ್ ಮೆಸೇಜ್ ಬಂತು. ಅಬ್ಬಾ ಸಿಗ್ನಲ್ ಸಿಕ್ಕಿತು. 'ಗುಡ್ ಮಾರ್ನಿಂಗ್ ಮೆಸೇಜ್, ' ಏನೂ ಯೋಚಿಸಲಿಲ್ಲ. Call ಮಾಡಿದೆ. ' 'ಎಲ್ಲಿದಿಯಾ, ಆಫೀಸ್ ಗೆ ರಜೆ ಹಾಕು, ನನ್ನ ಲೈವ್ ಲೋಕೆಶನ ಕಳಸ್ತೀನಿ, ಬೈಕ್ ತಗೋ ಬಾ plz, ಆಮೇಲೆ ಎಲ್ಲಾexplain ಮಾಡ್ತೀನಿ plz ' ಒಂದೇ ಉಸಿರಿಗೆ ಹೇಳಿದೆ. ' ಹಾ ಸರಿ ಎಂದ. ಮನೆಯಿಂದcall ಗಳ ಹಾವಳಿ...ಹೌದು ಮಾದು calling, ಕಟ್ ಮಾಡಿದೆ. ಮತ್ತೆscreen ನೋಡಿದೆ, ೭.೩೦!!! ಅಮ್ಮಾ ನಿಜಾ calling.....ಅಂದರೆ ಇದೆಲ್ಲಾ ಕನಸ!!! ಬೆಳಗ್ಗೆ ಕನಸು ನನಸಾಗುತ್ತದೆ... ಅಮ್ಮಂಗೆ call ಮಾಡಿದೆ, ಇವತ್ತು ಓಡಿ ಹೋದೆ ;-P ಅಂದೆ, ಬೇಕಾ ನಿಂಗೆ, ಬೇರೆ ಏನಾರು ಇದ್ರೆ ಹೇಳು, ಇಲ್ಲಾ ಫೋನ್ ಇಡು ಎಂದಳು. ಯೆಸ್ ಇದು ನಾಲ್ಕನೆ ಬಾರಿ...
ರಾಧೆ...
🎶
- Get link
- X
- Other Apps
Popular posts from this blog
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
ಕಸದ ಬುಟ್ಟಿ ಸೇರುವ ಮುನ್ನ...... ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ. ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...

Comments
Post a Comment