ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ಮೌನಿ ನಾನು..


ನಿನ್ನ ಒಡಲಲ್ಲಿ ಇಂದಿಗೂ ಮಗುವೆ. ಎಷ್ಟೋ ಬಾರಿ ನೈಜತೆಗಿಂತ ಕಲ್ಪನೆಯೇ ಸುಂದರವಾಗಿರುತ್ತದೆ, ಆದರೆ ನಿನ್ನ ರೂಪವೇ ಬೇರೆ, ಯಾವುದೇ ಬೆಡಗು ಬಿನ್ನಾಣಗಳಿಂದ ಬಲು ದೂರ. ನಿನ್ನ ಭೇಟಿಗೆ ಯಾವುದೇ ಪೂರ್ವ ತಯಾರಿ ಬೇಡ, ಪ್ರತಿ ಬಾರಿ ಬೆಟ್ಟಿಯಾದಾಗಲು, ಹೊಸ ಉತ್ಸಾಹ, ಹೊಸತನ ತುಂಬಿ ಕಳಿಸುವೆ. ನನ್ನ ಹುಚ್ಚುತನ ನಿನಗಷ್ಟೆ ಪರಿಚಯ, ನಿನ್ನ ಮಡಿಲಲ್ಲಿ ಕೂತು ಏನೇನೊ ಗೀಚುತ್ತಿದ್ದೆ, ಗುನುಗಿಕೊಳ್ಳುತ್ತಿದ್ದೆ, ಮೈ ಮೇಲೆ ಬಂದಂತೆ ಕವನ ಬರೆಯದೆ ನಿನಗಷ್ಟೆ ವಾಚಿಸುತ್ತಿದ್ದೆ. ಈಗ ಮನೆಗೆ ಬಂದಾಗ ನಿನ್ನ ಮಾತನಾಡಿಸದೆ ಹೋದರೆ, ಏನೋ ಕಳೆದು ಕೊಂಡಂತೆ. ತಿಳಿದೂ ಕೆಲವೊಮ್ಮೆ ತಪ್ಪಿಸಿಕೊಳ್ಳಲು ನೆಪ ಹುಡುಕುವುದಿದೆ, ಆದರೆ ನಿನ್ನ ಪ್ರೀತಿ ಎಲ್ಲವನ್ನು ಮೀರಿದ್ದು. ಒಮ್ಮೆ ನಿನ್ನ ಮನೆಯಂಗಳದಲ್ಲಿ ಕುಣಿದು ಕುಪ್ಪಳಿಸಿ ನೆನಪುಗಳ ಮನೆಯಲ್ಲಿ ತೊಯ್ದಂತು ಮನ ತಣಿಯದು. ನೀನೊಂತರಾ ಮೈಲಿಗಲ್ಲು, ನನ್ನಿಂದ ನಾನು ಎಷ್ಟು ದೂರವಾದೆ ಎಂದು ಆಗಾಗ ನೆನಪಿಸುವೆ. ಕಾಲದ ಜೊತೆ ಎಲ್ಲಾ ಅನಿವಾರ್ಯ, ನನ್ನ ಪ್ರೀತಿ ತೋರಿಕೆ,  ಕಪಟ ಎಂಬ ಅನುಮಾನ ನನಗೆ ಕಾಡಿದೆ. ನೀನು ಮಾತ್ರ ನಿಶ್ಚಲ, ಅದನ್ನು ನೋಡಿ ಮತ್ತೆ ಮಗುವಾಗುವೆ, ಎಲ್ಲ ಮರೆವೆ.  ನಿನ್ನ ಹೃದಯದಲ್ಲಿ ಕಾಯಂ ಸದಸ್ಯೆ, ನಾ ಮರೆತರು ನೀ ಮರೆಯಬೇಡ. ಶಬ್ದಗಳ ಹರವು ಮನಸ್ಸಲ್ಲೆ ಸುಂದರ, ಧ್ವನಿ, ಪದಗಳು ರೂಪ ಕಳೆದಾವು. ಮೌನಿ ನಾನು.‌.. ನಿನ್ನ ಮಡಿಲಲ್ಲಿ........

ರಾಧೆ...🎶


Comments

Popular posts from this blog