ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...



ಯಾರದೊ ಹರಕೆಗೆ ಜೀವ ತಳೆವಾಗ
ಒಂದಾಗುವ ಕೈಗೆ ಮೆತ್ತುವ ಎಲ್ಲಿಯದೋ ಮಣ್ಣು
ಹದವಾಗಿ ಬಂದ ಒಂದೊಂದು ಆಕೃತಿಗೂ ಬೇರೆಯದೆ ಹೆಸರು
ಒಡಮೂಡಿದಾಗೆಲ್ಲ ತೇಲಿ ಬರುವ ಮುದವಾದ ನಿಟ್ಟುಸಿರು

ಒಂದೇ ಸೂರಡಿ ಕಲೆತು ಸಾಲಾಗಿ ಕೂತಿರಲು
ಪಯಣ ಸಾಗುವುದು ಹೆಜ್ಜೆ ಹೊರಟೆಡೆ
ಮಸಣಕ್ಕೊ ಮಂಟಪಕ್ಕೋ ಕರೆಯೋಲೆ ಬಂದಂತೆ
ಮತ್ತೆ ಹಿಂತಿರುಗಿ ನೋಡದಂತೆ

ಯಾರದೋ ಅಬ್ಬರಕೆ ಮುಕ್ಕಾದ ಮೈ ಕೈ
ಬದಿಗೊತ್ತಿ ತಳ್ಳುತಿರೆ ಕಳೆಬರದ ಛಾಯೆ
ಎದುರಿನಾ ಸಾಲು ಭಾಸವಾಗುವುದು ಹಲ್ಕಿರಿದು ನಕ್ಕಂತೆ
ಮೂಲೆಗುಂಪಲಿ ರೋಷಾಗ್ನಿ ಚುಚ್ಚುವುದು ಮೊನಚಾಗಿ

ಮಳೆಯಲ್ಲಿ ಮಿಂದು ಮತ್ತೆ ಜೀವ ಪಡೆವಾಗ
ಮತ್ತೆ ಯವ್ವನ ಮೈ ಮನದ ತುಂಬು
ಆಗ ಕೇಳಿ ಬರುವ ಆರ್ತನಾದ ಯಾವುದೋ ಚರಂಡಿಯಲಿ
ದಿಕ್ಕು ದೆಸೆ ಇಲ್ಲದೆಲೆ...

ಮುಕ್ಕಾಗಿ ಅಳಲೆ, ದೂರಾಗಿ ಕೊರಗಲೆ, ಕೊಂಚ ದಿನ ಆಳಲೆ..
ಪಯಣ ಹೊರಟಾಗಿತ್ತು ಕವಲೊಡೆದ ಹಾದಿಯಲಿ...

ರಾಧೆ...🎶
ಚಿತ್ರ ಕೃಪೆ: Vinay Hegde

Comments

Popular posts from this blog