ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Posts
Showing posts from 2017
- Get link
- X
- Other Apps
ಯಾರದೊ ಹರಕೆಗೆ ಜೀವ ತಳೆವಾಗ ಒಂದಾಗುವ ಕೈಗೆ ಮೆತ್ತುವ ಎಲ್ಲಿಯದೋ ಮಣ್ಣು ಹದವಾಗಿ ಬಂದ ಒಂದೊಂದು ಆಕೃತಿಗೂ ಬೇರೆಯದೆ ಹೆಸರು ಒಡಮೂಡಿದಾಗೆಲ್ಲ ತೇಲಿ ಬರುವ ಮುದವಾದ ನಿಟ್ಟುಸಿರು ಒಂದೇ ಸೂರಡಿ ಕಲೆತು ಸಾಲಾಗಿ ಕೂತಿರಲು ಪಯಣ ಸಾಗುವುದು ಹೆಜ್ಜೆ ಹೊರಟೆಡೆ ಮಸಣಕ್ಕೊ ಮಂಟಪಕ್ಕೋ ಕರೆಯೋಲೆ ಬಂದಂತೆ ಮತ್ತೆ ಹಿಂತಿರುಗಿ ನೋಡದಂತೆ ಯಾರದೋ ಅಬ್ಬರಕೆ ಮುಕ್ಕಾದ ಮೈ ಕೈ ಬದಿಗೊತ್ತಿ ತಳ್ಳುತಿರೆ ಕಳೆಬರದ ಛಾಯೆ ಎದುರಿನಾ ಸಾಲು ಭಾಸವಾಗುವುದು ಹಲ್ಕಿರಿದು ನಕ್ಕಂತೆ ಮೂಲೆಗುಂಪಲಿ ರೋಷಾಗ್ನಿ ಚುಚ್ಚುವುದು ಮೊನಚಾಗಿ ಮಳೆಯಲ್ಲಿ ಮಿಂದು ಮತ್ತೆ ಜೀವ ಪಡೆವಾಗ ಮತ್ತೆ ಯವ್ವನ ಮೈ ಮನದ ತುಂಬು ಆಗ ಕೇಳಿ ಬರುವ ಆರ್ತನಾದ ಯಾವುದೋ ಚರಂಡಿಯಲಿ ದಿಕ್ಕು ದೆಸೆ ಇಲ್ಲದೆಲೆ... ಮುಕ್ಕಾಗಿ ಅಳಲೆ, ದೂರಾಗಿ ಕೊರಗಲೆ, ಕೊಂಚ ದಿನ ಆಳಲೆ.. ಪಯಣ ಹೊರಟಾಗಿತ್ತು ಕವಲೊಡೆದ ಹಾದಿಯಲಿ... ರಾಧೆ...🎶 ಚಿತ್ರ ಕೃಪೆ: Vinay Hegde
- Get link
- X
- Other Apps
ನಿನ್ನ ಬಿಂಬ ... ಯಾಕೊ ತುಂಬಾನೇ ನೆನಪು ಆಗ್ತಿದೀಯ. ಒಮ್ಮೆ ಅಮ್ಮನ ಮಾತು ಕೇಳಿ ಎದೆ ಬಡಿತ ನಿಂತಂತಾಯಿತು. ಅಮ್ಮ ಫೋನ್ ಲಿ ಹೇಳಿದ್ದಕ್ಕೆ ಬಚಾವ್! ಎದುರೇ ಇದ್ದರೆ ನನ್ನ ವರ್ತನೆ ಅವಳಿಗೆ ಅವಳ ಹಳೆಯ ಪ್ರಶ್ನೆಗಳಿಗೆ ಮರುಜೀವ ಬಂದು ಹುಬ್ಬುಗಳ ಮಧ್ಯೆ ನಿಲ್ಲುತ್ತಿತ್ತು. ಅಮ್ಮ ಮತ್ತಿನ್ನೇನೋ ಹೇಳುತ್ತಿದ್ದಳು. ನಾನು ನೆಪ ಮಾತ್ರಕೆ ಹಾಹುಂ ಎನ್ನುತ್ತಿದ್ದೆ. ಒಮ್ಮೆ ಮೈ ಎಲ್ಲಾ ಬೆವರಿತು. ಕಣ್ಣಂಚು ಒದ್ದೆಯಾಯಿತು. ನಾನು ಅಷ್ಟೊಂದು ಅವನನ್ನು ಹಚ್ಚಿ ಕೊಂಡಿದ್ದೆನೆ.. ನನಗೆ ಅಚ್ಚರಿ, ಎಲ್ಲಾ ಕಳೆದುಕೊಂಡ ಅನುಭವ. ಮೊನ್ನೆ ಅವನು ಹೇಳಿದ್ದು ತಮಾಷೆಯಲ್ಲಾ ಹಾಗಾದರೆ... 'ಮಳೆ ಜೋರು ಸುರಿತಿದೆ, ನೀರಿನ ಶಬ್ದ, ನೀ ಹೇಳೊದು ಏನು ಕೇಳಿಸ್ತಿಲ್ಲಾ, ಗುಡ್ ನೈಟ್', ಎಂದು ಅಮ್ಮ ಫೋನಿಟ್ಟರು. ನಾನು ಅದಕ್ಕೇ ಕಾದಿದ್ದೆ.ನಾನು ನೆನಪುಗಳ ಮೊರೆತಕ್ಕೆ ಸಿಕ್ಕಿದ್ದೆ, ಏನೂ ಕೇಳದಾಗಿತ್ತು. ನಮ್ಮದು ಅದು ಮೊದಲ ಹಾಗೂ ಕೊನೆಯ ಮುಖತಃ ಭೇಟಿ ಅಲ್ಲವಾ?? ನಾನಾಗ ಚಿಕ್ಕ ಮಗುವೇನಾಗಿರಲಿಲ್ಲ. ಹದಿನೆಂಟರಲ್ಲಿದ್ದೆ. ಜಗತ್ತೇ ಬಲು ಸುಂದರವಾಗಿ ಕಾಣುವ ಕಾಲ. ಜೊತೆಗೆ ಯಾವಾಗಲೂ ಕಾಡುವ ಅತ್ತೆಯ ಮಾತು ನನ್ನನ್ನು ಸ್ವಪ್ನ ನಗರಿಯಲ್ಲಿ ಸುತ್ತುವಂತೆ ಮಾಡಿತು. ನೀ ನನ್ನನ್ನ ಮೊದಲ ಬಾರಿಗೆ ನೋಡಿದ ನೋಟ ಇನ್ನೂ ಎದೆಯಲ್ಲಿ ಲಘು ಕಂಪನ ಹುಟ್ಟಿಸುತ್ತದೆ. ಅಲ್ಲಿ ನಡೆದ ಪ್ರತಿ ಘಟನೆ ಕಾಕತಾಳೀಯವೋ ನನ್ನ ಕಲ್ಪನೆಯೋ ಇನ್ನೂ ಉತ್ತರ ಸಿಗಲಿಲ್ಲ. ನೀ ನನ್ನನ್ನೇ cameraದಲ್ಲಿ ಸ...
- Get link
- X
- Other Apps
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...
- Get link
- X
- Other Apps
ಮೌನಿ ನಾನು.. ನಿನ್ನ ಒಡಲಲ್ಲಿ ಇಂದಿಗೂ ಮಗುವೆ. ಎಷ್ಟೋ ಬಾರಿ ನೈಜತೆಗಿಂತ ಕಲ್ಪನೆಯೇ ಸುಂದರವಾಗಿರುತ್ತದೆ, ಆದರೆ ನಿನ್ನ ರೂಪವೇ ಬೇರೆ, ಯಾವುದೇ ಬೆಡಗು ಬಿನ್ನಾಣಗಳಿಂದ ಬಲು ದೂರ. ನಿನ್ನ ಭೇಟಿಗೆ ಯಾವುದೇ ಪೂರ್ವ ತಯಾರಿ ಬೇಡ, ಪ್ರತಿ ಬಾರಿ ಬೆಟ್ಟಿಯಾದಾಗಲು, ಹೊಸ ಉತ್ಸಾಹ, ಹೊಸತನ ತುಂಬಿ ಕಳಿಸುವೆ. ನನ್ನ ಹುಚ್ಚುತನ ನಿನಗಷ್ಟೆ ಪರಿಚಯ, ನಿನ್ನ ಮಡಿಲಲ್ಲಿ ಕೂತು ಏನೇನೊ ಗೀಚುತ್ತಿದ್ದೆ, ಗುನುಗಿಕೊಳ್ಳುತ್ತಿದ್ದೆ, ಮೈ ಮೇಲೆ ಬಂದಂತೆ ಕವನ ಬರೆಯದೆ ನಿನಗಷ್ಟೆ ವಾಚಿಸುತ್ತಿದ್ದೆ. ಈಗ ಮನೆಗೆ ಬಂದಾಗ ನಿನ್ನ ಮಾತನಾಡಿಸದೆ ಹೋದರೆ, ಏನೋ ಕಳೆದು ಕೊಂಡಂತೆ. ತಿಳಿದೂ ಕೆಲವೊಮ್ಮೆ ತಪ್ಪಿಸಿಕೊಳ್ಳಲು ನೆಪ ಹುಡುಕುವುದಿದೆ, ಆದರೆ ನಿನ್ನ ಪ್ರೀತಿ ಎಲ್ಲವನ್ನು ಮೀರಿದ್ದು. ಒಮ್ಮೆ ನಿನ್ನ ಮನೆಯಂಗಳದಲ್ಲಿ ಕುಣಿದು ಕುಪ್ಪಳಿಸಿ ನೆನಪುಗಳ ಮನೆಯಲ್ಲಿ ತೊಯ್ದಂತು ಮನ ತಣಿಯದು. ನೀನೊಂತರಾ ಮೈಲಿಗಲ್ಲು, ನನ್ನಿಂದ ನಾನು ಎಷ್ಟು ದೂರವಾದೆ ಎಂದು ಆಗಾಗ ನೆನಪಿಸುವೆ. ಕಾಲದ ಜೊತೆ ಎಲ್ಲಾ ಅನಿವಾರ್ಯ, ನನ್ನ ಪ್ರೀತಿ ತೋರಿಕೆ, ಕಪಟ ಎಂಬ ಅನುಮಾನ ನನಗೆ ಕಾಡಿದೆ. ನೀನು ಮಾತ್ರ ನಿಶ್ಚಲ, ಅದನ್ನು ನೋಡಿ ಮತ್ತೆ ಮಗುವಾಗುವೆ, ಎಲ್ಲ ಮರೆವೆ. ನಿನ್ನ ಹೃದಯದಲ್ಲಿ ಕಾಯಂ ಸದಸ್ಯೆ, ನಾ ಮರೆತರು ನೀ ಮರೆಯಬೇಡ. ಶಬ್ದಗಳ ಹರವು ಮನಸ್ಸಲ್ಲೆ ಸುಂದರ, ಧ್ವನಿ, ಪದಗಳು ರೂಪ ಕಳೆದಾವು. ಮೌನಿ ನಾನು... ನಿನ್ನ ಮಡಿಲಲ್ಲಿ........ ರಾಧೆ...🎶
- Get link
- X
- Other Apps
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
- Get link
- X
- Other Apps
ಅವಳೊಂತರಾ ... ಚೈತ್ರ ಮಾಸ ಕಾಲಿಟ್ಟು ತಿಂಗಳು ಕಳೆದಿತ್ತು. ಪ್ರತಿ ಬಾರಿ ಮಕ್ಕಳಿಗೆ ರಜೆ ಇದ್ದರೂ ರಜೆಯಲ್ಲ. ಆ class ಈ class ಅಂತಾ ಬಾಲ್ಯದ ನೆನಪುಗಳನ್ನೆಲ್ಲಾ ಈ ಹೊಗೆ ಚಕ್ರಕ್ಕೆ ಹಾಕಿ ತಿರುಗಿಸುತ್ತಾರೆ. ಈ ಬಾರಿ ರಜೆಯಲ್ಲಿ ಮಕ್ಕಳನ್ನ ಊರಿಗೆ ಕೊಂಡೊಯ್ಯುವ ಉಪಾಯವೇನೋ ಹಾಕಿಕೊಂಡೆ, ಇವರಪ್ಪ ಒಪ್ಪಬೇಕು, ಶಶಿ ಕಂಪ್ಯೂಟರ್ ಬಿಟ್ಟು ಕದಲಬೇಕು!! ಅಮ್ಮಳಿಂದ ನೂರು ಬಾರಿ ಕರೆ ಬಂದಿತ್ತು. ಎಂದು ಬರುವೆ, ಹೇಗೆ ಬರುವೆ??.. ಆದಿಯನ್ನ ಒಪ್ಪಿಸಿದೆ. ಅವನಿ ತುದಿಗಾಲಲ್ಲಿ ಇದ್ದಳು ಅಲ್ಲಿ ಮಣ್ಣಿನ ಅಡುಗೆ ಮನೆ ಆಡಲು, ಬೆಟ್ಟ, ಗುಡ್ಡ, ತೋಟ ತಿರುಗಲು. ಊರ ಮಕ್ಕಳ ಹೆಸರನ್ನ, ಅವರು ಯಾವ class ಲಿ ಓದುತ್ತಿದ್ದಾರೆ ಎನ್ನುವುದನ್ನ ಅಜ್ಜಿ ಹತ್ತಿರ ಕೇಳಿ, ಕೇಳಿ ಉರು ಹಾಕುತ್ತಿದ್ದಾಳೆ. ಶಶಿಗೆ ಬಸ್ ಬುಕ್ ಮಾಡುವಾಗ ಕೊನೆಯದಾಗಿ ಕೇಳಿದೆ. 'ನೋಡು ನಾವು ಹೋಗ್ತಿರೊದು ಪಕ್ಕಾ.. ಬರೊದಿದ್ರೆ ಬಾ ಇಲ್ಲಾ ರಜಾ ಪೂರ್ತಿ ನಿನ್ನ ಕಂಪ್ಯೂಟರ್ ಮುಂದೆ ಇರು, ಹಸಿವಾದಾಗ ಏನ್ ಬೇಕೊ ಮಾಡಿಕೊಂಡು ತಿನ್ನು. ನಾವು ಅಜ್ಜಿ ಕೈ ರುಚಿಯನ್ನ ಸವಿತಿವಿ.' ಸುಮಾರು ಹೊಟ್ಟೆ ಉರಿಸಿ ಬಸ್ ಬುಕ್ ಮಾಡಿ ಬ್ಯಾಗ ಪ್ಯಾಕ್ ಮಾಡತೊಡಗಿದೆ. ಈ ಅವನಿಯ ಸಾಮಾನುಗಳು ಸುಮಾರಿಗೆ ಸಾಕಾಗಲ್ಲ. 'ಅಮ್ಮ ಇದು ಶ್ರೀ ಗೆ, ಇದು ಇಶಾಗೆ,....' ಅವಳ ಉಡುಗೊರೆ ಸಾಮಾನು ಉದ್ದಕೆ ಬೆಳೆಯುತ್ತಲೆ ಇತ್ತು. ಸಾಕು ಮಾರಾಯ್ತಿ ಅಂದರೂ ಇಲ್ಲಾ, ಕಳೆದ ಬಾರಿ ಸಿಕ್ಕಾಗ ಅವಳ ಗ್ಯಾಂಗ್ ನವ...
- Get link
- X
- Other Apps
ವಯ್ನಾಡ ಯಾನ: ೨ ರಾತ್ರಿ ನಾವು ಬಸ್ ಏರಿದಾಗ ೧೧ ದಾಟಿತ್ತು, ನನಗೆ ಸುಮಾರಾಗಿ ಬಸ್ ಪ್ರಯಾಣ ಮಾಡುವಾಗ ನಿದ್ದೆ ದೂರ, ಅಂತಹುದರಲ್ಲಿ ಈ ಪ್ರಾಣಿಗಳ ಕಾಟಕ್ಕೆ ನಿದ್ರಾದೇವಿ ಓಡಿಹೋಗಿದ್ದಳು. ಇನ್ನೇನು ನಿದ್ರಿಸಬೇಕೆನ್ನುವಷ್ಟರಲ್ಲಿ ಒಬ್ಬೊಬ್ಬರಾಗಿ ಇಳಿಯ ತೊಡಗಿದರು. ೫.೩೦ರ ಸುಮಾರಿಗೆ ಕಲ್ಪೇಟ ತಲುಪಿದೆವು. ನಿದ್ದೆಕಣ್ಣು, ತಲುಪಬೇಕಾದ ಜಾಗವನ್ನು ಮತ್ತೆ ಮತ್ತೆ ಓದಿಕೊಂಡು ನಮಗೆ ವರದಿ ವಪ್ಪಿಸಿದ 'ಅಂಬಾಲವಯ್ಯಾಲ'.. ಅಲ್ಲಿ ನಿಂತಿರುವವರ ಬಳಿ, ಹತ್ತಬೇಕಾದ ಬಸ್ಸು ಕೇಳಿ ಬಸ್ ನಿಲ್ದಾಣದಲ್ಲಿ ನಿಂತೆವು. ಚುಮುಚುಮು ಚಳಿ, ಇಬ್ಬನಿ ಕಟ್ಟಿದ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿತ್ತು ಎ.ಸಿ. ಬಸ್. ನಾವು ತಲುಪ ಬೇಕಾದ ಜಾಗ conductorಗೆ ಹೇಳಿದೆವು. ಅವನು ಯಾವುದೋ ಸಹ ಪ್ರಯಾಣಿಕನನ್ನು ಹಿಂಬಾಲಿಸಲು ಹೇಳದ. ಅಲ್ಲಿ ಇಳಿದಾಗ ಇನ್ನು ಬೆಳಕು ಹರಿದಿರಲಿಲ್ಲ. ಕಡುಕಪ್ಪು ಡಾಂಬರು ರಸ್ತೆ, ನಿಶ್ಯಬ್ದವಾಗಿ ಮಲಗಿತ್ತು. ಅಲ್ಲಿ ನಿಂತಿದ್ದವರ ಬಳಿ ಕೈಸನ್ನೆಯ ಮೂಲಕ ಬಸ್ ಬರುವ ದಾರಿ, ಸಮಯ ತಿಳಿದು ಆ ಕಡೆ ನಿಂತೆವು, ಬಸ್ ಬರಲು ಸಮಯವಿದ್ದ ಕಾರಣ ಮುಂದಿನ ನಿಲ್ದಾಣದವರೆಗೆ ನಡೆಯೋಣ ಎಂದುಕೊಂಡು ಹಜ್ಜೆಹಾಕಿದೆವು. ಅಪ್ಪಿ ತಪ್ಪಿ ಬರುವ ಎಲೆಕ್ಷನ್ ನಲ್ಲಿ ಸರಿಯಾದ ಎಮ್ ಎಲ್ ಎ, ಎಮ್ ಪಿ ಗಳನ್ನು ಆರಿಸಿದ್ರೆ ಶಿರಸಿ-ಸಿದ್ದಾಪುರ ಹೇಗೆ ಕಾಣಬಹುದೋ ಹಾಗೆ ಇತ್ತು ಇದು. ಎಲ್ಲೂ ಹೊಂಡಕಾಣದ ಡಾಂಬರು ರಸ್ತೆ, ಅಡಿಕೆ, ಕಾಫಿ ತೋಟ, ಸುಂದರವಾದ ಮನೆಗಳು. ಅಷ್ಟರಲ್ಲೇ ...
- Get link
- X
- Other Apps
ವಯ್ನಾಡ ಯಾನ:೧ ಅಂದು ಬುಧವಾರ, ಮಧ್ಯಾಹ್ನ ಊಟ ಮುಗಿಸಿ ಎನೋ ಮಾಡುತ್ತ ಕೂತಿದ್ದೆ. ಅಷ್ಟರಲ್ಲಿ WhatsApp ಸಂದೇಶ ಸಹನಕ್ಕಾ ಕಳುಹಿಸಿದಳು, '೧೧, ೧೨ free ಇದ್ಯನೆ ಕೂಸೆ' ಅಂತಾ, ಏನು ಹೇಳ್ಲಿ?? Bangalore ಬರ್ತಾ ಇರ್ಬೋದಾ? ನನ್ನ official birthday, DBT exam ಗೆ ಓದಬೇಕು..... ಏನೆ ಇರ್ಲಿ, ಅಂದುಕೊಂಡು, 'not for you' ಅಂದೆ. 'ವಯ್ನಾಡ' ಬರ್ತೀಯಾ ಕೇಳಿದಳು. ನಂಗೆ ಎಲ್ಲಾ ಮರ್ತೋಯ್ತು. ಇದು ೨ನೇ ಸಲ ಹೋಗೋಕೆ ಕೇಳ್ತಿರೊದು. ಜನವರಿಯಲ್ಲಿ ಹೀಗೆ ಒಮ್ಮೆ ಪ್ಲಾನ ಮಾಡಿ ಗಾಳಿಗೆ ಹಾರಿಸಿದ್ವಿ. 'ಈ ಬಾರಿ ಯಾರೂ ಬರಲು ಸಿದ್ದವಾಗದಿದ್ದರೆ ನಾವಿಬ್ಬರೆ ಹೋಗೋಣಾ ಪಕ್ಕಾ' ಪದೆ ಪದೇ ಹೇಳಿಕೊಂಡು ಜೊತೆಗೆ ಯಾರು ಯಾರು ಬರಬಹುದು ಎಂದು ಇಬ್ಬರೂ ಶುರು ಹಚ್ಚಿಕೊಂಡೆವು. ನನ್ನ ಅಣ್ಣ, relatives, close friends, ಎಲ್ಲರಿಗೂ ಒಂದೊಂದು ಸಂದೇಶ ಎಸೆದಿದ್ದಾಯಿತು. ಎಲ್ಲರಿಂದ ಒಂದೆ ಪ್ರಶ್ನೆ, ಉತ್ತರ,' ಯಾರ್ ಯಾರು ಹೋಗ್ತಿದೀರಾ? ಹೇಗೆ ಹೋಗೋದು, ನಾನು ಸ್ವಲ್ಪ busy, may be next time!!!!'. ನಾನು ಮತ್ತು ಕೆಲವು fb frnds ಕೇಳಿದೆ, ಹುಡುಗರು ಇದ್ದರು. ಬಹುಶಃ ವಿಚಿತ್ರ ಎನಿಸಿರ ಬಹುದು!! ಮೊದಲು ಮುಜುಗರ ಎನಿಸಿದ್ದು ನಿಜ. ಏನೆ ಆಗಲಿ ಎಂದು ಸಹನಕ್ಕನ ಒಮ್ಮೆ ಕೇಳಿದೆ. 'Ok, ಆದ್ರೆ, ಹುಡುಗಿಯರ ಜೊತೆ ಬರಲು ಒಪ್ಪುವುದು ಏನೋ,' ಎಂದಳು. ಸರಿ-ತಪ್ಪು ಯೋಚಿಸಲು ಸಮಯ ಇರಲಿಲ್ಲ. ನಾ ಕೇಳ...