ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...

ನಮ್ಮದಲ್ಲದ ಊರಲ್ಲಿ, 
ನಾನು ನಮ್ಮವರೆಂದು, ಅಲೆದಾಡುತ, 
ಹುಡುಕಾಟ ಮುಗಿಸುವುದರೊಳಗೆ,
ಬರದೂರಿಗೆ ಕರೆ ಬರುವುದು, ಜೀವನ....
ಎಲ್ಲ ತಿಳಿದಿದ್ದರೂ ನಾಟಕದ ಸರಮಾಲೆ,
ಬಾಲ್ಯ ಯವ್ವನ ಮುಪ್ಪು ಚಕ್ರವ್ಯೂಹ,
ವಿಧ ವಿಧ ಬಾಣಸಿಗರ ಕೈ ಅಡುಗೆಯಂತೆ,
ಎಲ್ಲರಲ್ಲೂ ಬಗೆ ಬಗೆಯ ತಿರುವು ಪ್ರತಿ ಘಟ್ಟಕೆ...
ಇದೇ ಸರಿ ಎಂಬುದಕ್ಕೆ ಈಗಷ್ಟೆ ಸಹಮತ,
ನಾಳೆಯ ಸತ್ಯದೆಡೆಗೆ ನಿತ್ಯ ಪಯಣ, ನಿರಂತರ...

ರಾಧೆ...🎶














Show more reactions
ನೆನಪುಗಳ ಹಂದರದಿ ನಿನ್ನದೇ ಅಗ್ರ ಸ್ಥಾನ,
ನಗುವಲ್ಲು ನೀನೆ, ಅಳುವಲ್ಲು ನೀನೆ,
ಹುಚ್ಚಿಯಾಗುವ ಮುನ್ನ,
ಹಚ್ಚಿಕೊಂಡಿಹದ ಅರುಹಲೇ,
ಹುಚ್ಚಿ ನಾನು...
ದೂರ ಸರಿದಷ್ಟು ಹತ್ತಿರವಾಗುತಿಹೆ ಈ ಮನಕೆ,
ಬಾರಿ ಬಾರಿಗೂ ಕಾಡಲು ಮನಸಾದೀತು ಹೇಗೆ ನಿನಗೆ,
ತಿಳಿದು ತಿಳಿದು ಆಡುವ ಆಟಕ್ಕೆ ನಾನೇಕೆ ಆಟಿಗೆ,
ಸಾವಿರ ಪ್ರಶ್ನೆಗಳಿಗೂ ಸಾವೇ ಇಲ್ಲ,
ಕಾರಣ ಉತ್ತರವೇ ಇಲ್ಲ...
ಬಹುಶಃ ಹುಚ್ಚಿ ನಾನು...
ಭಾವನೆಯ ತೋಟದಲಿ ನಿನ್ನದೇ ಕಂಪು,
ಹೂ ಬಿರಿದಾಗಲೆಲ್ಲ ಕಾಲವೇ ನಿಲ್ಲಬಾರದಿತ್ತೇ ಎಂಬ ಸ್ವರ,
ಸಮಯದ ಜೊತೆಯಲ್ಲಿ ಬಾಡಿಹುದು ತಾನಾಗಿ,
ಗಿಡವಿನ್ನು ಹಸಿರಿಹುದು ಎಂಬುದೇ ಖುಷಿ,
ಹುಚ್ಚಿ ನಾನು...

ರಾಧೆ...🎶
ಸಾಯಬೇಕೆಂದುಕೊಂಡಾಗಲೆಲ್ಲ ಕಾಡುವ ನೆನಪುಗಳು,
ಒಂದಿಷ್ಟಾದರೆ ಹೇಗೊ ಹೊತ್ತೊಯ್ಯ ಬಹುದಿತ್ತು,
ಹೆಚ್ಚಾದ್ದನ್ನು ಮಗೆದಷ್ಟು ಹೊತ್ತು ತರುವ ಅಕ್ಷಯ ಪಾತ್ರೆ ಅದು,
ದಿನ ದಿನವೂ ಹೊಸದಾಗಿ ಹಳತರೊಂದಿಗೆ ಬೆಸೆದು,
ಹಿಮಾಲಯದ ಎತ್ತರಕೆ ಬೆಳೆದು ನಿಂತಿದೆ
ಹೇಗೆ ಹೊತ್ತೊಯ್ಯಲಿ?
ನನಗಾರು ಕಳಿಸುವರು ಸಾರೋಟು,
ಚಿತೆಯಲ್ಲಿ ನನಗೇ ಜಾಗಸಾಲದು,
ಎಲ್ಲಿ ಇರಿಸಲಿ ನಿಮ್ಮ ನೆನಪಿನ ಕಾಣಿಕೆಗಳನ್ನ,
ಅದಕ್ಕೆ ತೋರಿಕೆಯ ನೆನಪುಗಳಿಗೆ ಕಡಿವಾಣವಿರಲಿ,
ಸದಾ ಇಯುವೆ ನನ್ನ ಮನಗಳಲ್ಲಿ ಜಾಗವ,
ಖಾಯಂ ಆಗಿ!!!
ಮನತುಂಬಿ ಹರಸಿ, ಮನೆಯ ಕಪಾಟನ್ನಲ್ಲ...
ರಾಧೆ...🎶
ಎಲ್ಲ ಮರೆತು ಬಿಡುವೆ,
ನಿನ್ನ ತೆಕ್ಕೆಗೆ ಸೇರಿಸಿಕೊ ಕಾಲವೆ,
ನಾನಾರೊ, ನೀನಾರೊ ಪ್ರಶ್ನೆಗೆ,
ಉ‌‌‌ತ್ತರವೇ ನಿಲುಕದಂತೆ.
ಎಂದೋ ಗೀಚಿದ ಸಾಲು,
ಇಂದಿಗೂ ಇಟ್ಟಿಹೆ,
ಮುಂದೆ ಬರೆವ ಕವನಕ್ಕೆ,
ಭದ್ರ ಬನಾದಿಯಾದೀತೆಂದು,
ಚೆಂದ ಸಾಲುಗಳಿಗೆಲ್ಲ,
ಕತೆಯ ಹಂದರದಲ್ಲಿ ಜಾಗ ಬೇಕೆ?
ಉತ್ತರವಿಲ್ಲದ ಪ್ರಶ್ನೆಗೆ, ಪ್ರಶ್ನೆಯೇ ಉತ್ತರ.
ರಾಧೆ...🎶

Comments

Post a Comment

Popular posts from this blog