Posts

Showing posts from 2016
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ನಾ ನ ಗ ಬೇ ಕಿ ತ್ತು... ಕತ್ತಲಲ್ಲಾದರು ಬೆತ್ತಲಾಗುವ ಜೀವ ನಾನಾಗ ಬೇಕಿತ್ತು ಜಗದ ಎಲ್ಲ ಆಡಂಬರವ ಕಳಚಿಡುತ್ತಿದ್ದೆ ನನ್ನ ಜಗದ ಸುಖ ದುಃಖವನ್ನೆಲ್ಲಾ ಮುಡಿಯಲ್ಲಿ ಕಟ್ಟಿಡುತ್ತಿದ್ದೆ ನನ್ನ ಬತ್ತಿದ ದನಿಗಳಿಗೆ ಮರು ಜೀವ ಕೊಡುತ್ತಿದ್ದೆ ಕಮರಿದ ಕನಸುಗಳ ನೆನೆದು ಗೋರಿ ಕಟ್ಟುತ್ತಿದ್ದೆ ನಗು- ಅಳುವಿನ ವ್ಯತ್ಯಾಸ ಮತ್ತಷ್ಟು ಕಿರಿದಾಗಿಸುತ್ತಿದ್ದೆ ಯಾರ ನೋವಿಗೋ ನೋವಾಗಿ ಯಾರ ನಲಿವಿಗೋ ನಲಿವಾಗಿ ಯಾರಲ್ಲೋ ವಿಲೀನವಾಗುವಾಗ ನನ್ನೆಲ್ಲೆ ಮರೆಯುತ್ತಿದ್ದೆ ರಾಧೆ...🎶
Image
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ.  ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
Image
ಭೂತ ಭವಿಷ್ಯಗಳ ನಡುವೆ  ಕಾಲಕ್ಕೆ ಸಡ್ಡೊಡೆದು  ಹಿಂತಿರುಗಿ ನಡೆವಾಗ ನಾನೆಡವಿ ಬಿದ್ದೆ ಪೆಟ್ಟಿನ ಬಲ  ಲಘುವಿತ್ತು ಗಮನಕ್ಕೆ ಮತ್ತೆ ಎಡವಿದೆ ತಿರುಗಿ ಬೀಳದಂತೆ ಗಾಯದ ಆಳ ಕೆದಕಿತ್ತು ತನ್ನತನ ಪುನಃ ಎಚ್ಚರಿಸಿತು ಕನಸಿನ ಮನೆಗೆ ಸಾಗುವ ದಾರಿಯ ಬೆಳಕನ್ನ ಪಡೆದುಕೊ ಸವೆದ ಹಾದಿಯ  ಕತ್ತಲನ್ನು ಅಲ್ಲ ರಾಧೆ...
Image
 ನಾನು ರಾಧೆ ಎಲ್ಲ ಬಂಧನಗಳ ಎಲ್ಲೆ ಮೀರಿ ಬಂದೆ ನಿನ್ನ ಸಾನಿಧ್ಯಕೆ ಹೆಸರಿಡುವ ಅನಿವಾರ್ಯ  ನಮಗಿರಲಿಲ್ಲ ನಾ ಕೇಳಲಿಲ್ಲ, ನೀ ಹೇಳಲಿಲ್ಲ ಉಸಿರಾಯಿತು ಮರ-ಗಿಡ ಝರಿ-ತೊರೆ ಕೊಳಲು ಜಗದ ಸಂತೆಯಲಿ ಕಿತ್ತಾಡುವರು ಸದಾ ನಮ್ಮ ಕುರಿತೆ ಮನಬಂದಂತೆ ಹಚ್ಚುವರು ಬಂಧನದ ಬಣ್ಣ ಉತ್ತರ ಎಲ್ಲದಕ್ಕೂ ಕೊಟ್ಟೆ, ಎಲ್ಲರಿಗೂ ಕೊಟ್ಟೆ ನೀನು ನನ್ನ ಹೆಸರಿಗೆ ಮಾತ್ರ, ಒಮ್ಮೆ ಮುಗುಳ್ನಗೆ, ದೀರ್ಘ ಮೌನ ನಾ ಬಲ್ಲೆ ನಿನ್ನ ಅಂತರಂಗದಾಳ ನನಗೆ ಕಾರಣ ಎಂದೂ ಬೇಕಿಲ್ಲ ಲೋಕದ ಕಣ್ಣಿಗೆ ನಾನೆಂದೋ ಮರುಳೆಯಾಗಿಹೆ ಸವೆಸಿಬಿಡುವೆ ಜೀವ ನಿನ್ನ ಕೊಳಲದನಿಯಿಂಪಲ್ಲೆ ಯಾರಿಗೂ ಸೋಲದಿರು, ನ್ಯಾಯಕ್ಕೆ ತಲೆಬಾಗು ನನ್ನ ನೆನಪು ಎಂದೂ ಕಾಡದಿರಲಿ ಉಸಿರಿರುವ ತನಕ ಇಲ್ಲಿಯೇ ಕಾಯುವೆ ನಿನ್ನ ಭೂತದಲ್ಲೆ ನಾ ಕಾಲ ಕಳೆವೆ ಪ್ರಶ್ನೆಯೇ ಇರಲಿ ಇವರಿಗೆಲ್ಲಾ... ರಾಧೆ...
Image
ಒಮ್ಮೆ ಹೆಗಲಾಗು   ಆ ಸೂರ್ಯನಿಳಿವ ಹೊತ್ತು ಬೆಳ್ಳಿ ಬಾನಾಡಿ ಜೊತೆಗೂಡಿ,  ಬಾನೆಲ್ಲ ತಮದೆಂದು ನಲಿಯುತ್ತ ಸಾಗುವಾಗ ನಿನ್ನ ಮೊಗ ಚಂದ್ರನಿಗೆ ಮೆಲ್ಲನುಲಿವೆ ಪಿಸುಮಾತು ಇನ್ನಾರು ಕೇಳದಿರಲೆಂದು ಅಲೆಗಳಬ್ಬರ ಹೆಚ್ಚಿಸಿದೆ ಗಾಳಿಯೂ ನಿಡುಸೊಯ್ಯುತಿದೆ ಇನ್ನೇನು ಬೇಕಿನಿಯ... ಮನದ ಮೂಲೆಯಲಿರುವ  ಭಾವನೆಗೆ ಕಿವಿಯಾಗು ಅಲೆಗಳಲಿ ತೇಲಿ ಬಿಡುವೆ ಕನಸುಗಳ ದೋಣಿ ಸಾಕ್ಷಿಯಾಗಲಿ ಪಂಚಭೂತಗಳು ಇಲ್ಲಿ ನಾವಿಕನು ನೀನಾಗು ಜೊತೆಗೂಡಿ ಹುಟ್ಟಾಕುವಾ ದಡ ಸೇರೊ ತನಕಾ ಒಮ್ಮೆ ಹೆಗಲಾಗು,.. ರಾಧೆ...
Image
ಸಾವೆಂಬ ಒಂಟಿ ಮನೆ  ಹುಟ್ಟಿನೊಡನೆ ಅಂಟಿ ಬಂದ  ಸಾವೆಂಬ ಭಯದ ಭೂತ ಬೇಡವೆಂದರು ತೊರೆಯದು ನೀ ನಿನ್ನ ತೊರೆವ ತನಕ ಕಿತ್ತಿಡುವ ಪ್ರತಿ ಹೆಜ್ಜೆಗೂ ಹೆಚ್ಚು ಗಮನ ನಾಳೆಗಳ ಕನಸಬಿತ್ತಿ  ದೂರ ತಳ್ಳುವ ಹುನ್ನಾರ  ಎಲ್ಲಿ ಹೇಗೆ ಅವಿತಿಹುದೋ ಬಲ್ಲವರು ಇಲ್ಲ ಬಂದಾಗ ಇದರ ಕೈಗೊಂಬೆ ಎಲ್ಲ ಬಿಗಿದಪ್ಪಿಕೊಳ್ಳುವರು ತಿರುಗಿ ಬಾರದಂತೆ ರಾಧೆ...
Image
 ಅಯತ ಮೌನ ಆಡದ ಮಾತಿಗೆ ಎಷ್ಟೊಂದು ರೂಪ ಹುಣ್ಣಿಮೆಯ ಬಾನು, ನಕ್ಷತ್ರ ಸಾಲು ಸೂತಕದ ಛಾಯೆ, ಮನೆಯೊಳಗೆ ಮಡುಗಟ್ಟಿದ ನೋವು, ಹೇಳಲಾರದ ರೋಷ ಯಾರ ಮೇಲೊ.. ಸೆರಗು ಬಾಯ್ಗಿಟ್ಟು, ಬಿಕ್ಕುದರ ತಡೆದರೂ ಕಣ್ಣೆಲ್ಲಿ ಸಮ್ಮನಾದೀತು ಕೇಳಿದ್ದು ನಿಜವೇ, ಕಣ್ಣಲ್ಲೆ ಮಾತಾನಾಡುತ್ತಿತ್ತು ಕರುಳ ಕುಡಿ ನೋಟ ದಿನಗಳುರುಳಿ, ಮರ ಹಸಿರಾಗಿತ್ತು ರೋಗ ಗ್ರಸ್ತ ಬೇರು ಅಂಟಿತ್ತು ಹಾಗೆ ದಿನದಿಂದ ದಿನಕೂ ವ್ಯಾಪಿಸಿದ ಜಾಡ್ಯ ನೆಲ ಕಂಡಿತು, ಸಣ್ಣ ಸುಳಿಗಾಳಿಗೆ ರಾಧೆ... 🎶
Image
# ನೀ ಸ ರಿ ವ ಮು ನ್ನ# ಕಣ್ಣಂಚಿನಾ ಭಾವ, ಕರಗುವ ಮುನ್ನ ನೀ ನೋಡ ಬೇಕಿತ್ತು, ನಿನ್ನಾಗಮನಕೆ ಕಾದಿಟ್ಟ ಬಿಸಿ ಉಸಿರು, ಗಾಳಿ ಸೇರುವ ಮುನ್ನ ನೀನಿರ ಬೇಕಿತ್ತು, ತುಟಿಯ ಮೇಲಿನ ಕಿರು ನಗು, ಮಾಯುವ ಮುನ್ನ ನೀ ತಿರುಗ ಬೇಕಿತ್ತು, ಗತಿಸಿದ ಆ ಒಂದು ಕ್ಷಣಕೆ ತಿರುಗಿ ನಾ ಹೋಗುವಂತಿರೆ... ಬೇರೆಯದೆ ಭಾಷ್ಯ ಬರೆಯುತ್ತಿದ್ದೆ ಎಲ್ಲದಕೂ ದಿಗಂತದಲಿ ಜಾರುವನಿಗೂ ಗೊತ್ತು‌‌‌‌‌‍‌, ನಿನ್ನ ಬರುವಿಕೆಯ ತೀವ್ರತೆ, ಮುಡುಗಟ್ಟಿದ ಪ್ರೀತಿ, ಕಣ್ಣಂಚಿನಾ ನೀರು, ನಿಡುಬಿಡದ ಚಡಪಡಿಕೆ, ಸಾಕ್ಷಿಯಾಗಿದ್ದ ಗಿಡ ಮರಗಳು ಮೂಕವಾಗಿಹೆ ನನ್ನಂತೆ ಕಟ್ಟಿದ ಕನಸು, ಬರೆದ ನೆನಪುಗಳೇ, ಬೆಲೆ ತೊರೆದ ಮೇಲೆ, ಮಾತಿಗೆಲ್ಲಿಯ ಬೆಲೆ... ರಾಧೆ... 🎶
Image
ನಮ್ಮೂರ ಕಥೆ  # ಮಲೆನಾಡು # ‌‌ ಈಗ ಹೇಳ ಹೊರಟಿರುವುದು, ಇಂದು ನಿನ್ನೆಯ ಕಥೆಯಲ್ಲ. ಬಹುಶಃ ನಾನು ೯ ನೇ ತರಗತಿಯಲ್ಲಿದ್ದಾಗ ಕಾರಂತರ ಕಾದಂಬರಿ 'ಬೆಟ್ಟದ ಜೀವ'ದ ಒಂದು ತುಣುಕು ಓದುವಾಗ ಯುಕಾಲಿಪ್ಟಸ್(ಅಕೇಶಿಯ) ಸಂತತಿಯ ಬಗೆಗೆ, ಹಾಗೂ ಅಲ್ಲಿ ಪರಿಸರವಾದಿ ನಾಗೇಶ ಹೆಗಡೆಯವರ ಕುರಿತಾಗಿ ಒದಿದ್ದೆ, ನಾನು ಕಾರಂತರ ಪರವಾಗೆ ಉತ್ತರ ಬರೆದು ಪಾಸು ಆದೆ. ಆದರೆ ಈಗ ನೈಜತೆಯ ಅರಿವು ೧೦ ವರ್ಷಗಳ ಅನುಭವದಿಂದ ಆಗಿದೆ. ಪರಿಸರವಾದಿಗಳು ಅಂದರೆ ನಮಗೆಲ್ಲಾ ಅಸಡ್ಡೆ,ಯಾವಾಗಲೂ ಏನಾದರೂ ಒಂದು ವಿಷಯ ಹಿಡಿದು ತಿಕ್ಕುತ್ತಿರುತ್ತಾರೆ ಎಂಬ ಅಭಿಪ್ರಾಯ. ಆದರೆ ಈ ಅಕೇಶಿಯ ಸಂತತಿ ನಿಷೇಧವನ್ನು ಅರಣ್ಯೀಕರಣಕ್ಕೆ ಆಗ್ರಹಿಸುತ್ತಿ ರುವಲ್ಲಿ ಸತ್ಯತೆ ಇದೆ. ಮೂಲತಃ ಯುಕಾಲಿಪ್ಟಸ್ ಸಂತತಿ ಆಸ್ಟ್ರೇಲಿಯಾದ್ದು. ಬ್ರಿಟಿಷರ ಕಾಲದಲ್ಲಿ ೨೦ ನೇ ಶತಮಾನದ ಆರಂಭದಲ್ಲಿ ಭಾರತಕ್ಕೆ ಕಾಲಿಟ್ಟಿತು. ಖಾಲಿ ಜಾಗಗಳಲ್ಲಿ ಇದನ್ನು ಬೆಳೆಯಲಾರಂಭಿಸಿದರು. ಇದರ ಕಟ್ಟಿಗೆಯನ್ನು ರೈಲಿನ ಹಲಗೆ, ಇದ್ದಿಲು, ಇನ್ನಿತರ ಉಪಕರಣಗಳ ತಯಾರಿಕೆಯಲ್ಲಿ ಬಳಸುತ್ತಿದ್ದರು. ಕ್ರಮೇಣವಾಗಿ ಸ್ವಾತಂತ್ರಾ ನಂತರವು ಇದರ ಬಳಕೆ ಹೆಚ್ಚುತ್ತ ಹೋಯಿತು. ಈಗ ಅರಣ್ಯೀಕರಣದಲ್ಲಿ ಬಳಸುವ ಸಸ್ಯ ಸಂಕುಲದ ಬಹುದೊಡ್ಡ ಪಾಲು ಸುಮಾರು ೨೦%ಕ್ಕೂ ಹೆಚ್ಚು ಅಕೇಶಿಯ ಮರವಂತೆ. ಇದನ್ನು ವಿರೋಧಿಸುವವರಿಗೆ, 'ಇದು ಸಾರಜನಕ ಸ್ಥಿರೀಕರಣ (nitrogen fixation)ದಲ್ಲಿ ಪಾಲ್ಗೊಂಡು ನೆಲದ ಫಲವತ್ತತೆ ಹೆಚ್ಚಿಸುತ್ತದೆ...
Image
ಸಾವಿರದ ನೆನಪು.. ಕಿಟಕಿಯಿಂದಾಚೆ, ಮುಖವಿಟ್ಟಾಗಲೆಲ್ಲ ಬೆನ್ನಟ್ಟಿ ಬರುವೆ ನೀನು, ಗೊತ್ತಿಲ್ಲದೆ ಹೊತ್ತು ತರುವೆ, ಸಾವಿರದ ನೆನಪು ಉಸಿರಾದೆ ಅಮ್ಮನಿಗೆ ಅಭಿಮಾನವಾದೆ ಅಪ್ಪನಿಗೆ ಕೂಸುಮರಿಯಾದೆ ಅಣ್ಣನಿಗೆ ಅಪ್ಪಣ್ಣಿಮಗ ಶುಬ್ಬಕ್ಕಿ ಮಾವನಿಗೆ ನೆನಪಾದೆ ನನಗೆ... ಎಲ್ಲಿಯೋ ಅವಿತು, ಊರೆಲ್ಲ ಅಲೆಸಿದ್ದೆ, ತಪ್ಪು ನನ್ನದಲ್ಲಮ್ಮ ಹಾಳಾದ ನಿದ್ದೆ, ಕ್ಷಮೆಯಿರಲಿ,.. ಅಂಗಳ ಅಗೆವಾಗ ಸಿಕ್ಕ ನಾಣ್ಯಕ್ಕೆ ನಾನಲ್ಲವಮ್ಮ ಹೊಣೆ, ನೀನೇ ಹೇಳಿದ ಕತೆ, ನೆನಪಿಸಿಕೊ,.. ಕೋಪದಲ್ಲಿ ಹೊಡೆಯ ಬಂದ ಅಪ್ಪನಿಗೆ ನಗುತರಿಸಿದ್ದು.....ನಾನೇ,.. ನೋವಿಂದ ಅಳುವಾಗ, ನಿನ್ನಪ್ಪ ಇಲ್ಲಲ್ಲಮ್ಮ ಎಂದು ಸಂತೈಸಿದ್ದು ನಾನೇ,.. ಏದುಸಿರು ಬಂದರೂ ಒಂದಿಂಚು ನಡೆಸದೆ ಹೊತ್ತುಕೊಂಡೆ ಸಾಗಿದ್ದ ಮಾವ, ನಿಮ್ಮರಮನೆಯ ರಾಜಕುಮಾರಿಯಾಗಿದ್ದೆನಲ್ಲಾ ನಾನು,.. ನೆನಪಾದೆ ನನಗೆ ಸುಂದರವಾದ ಸುಂದರಿ ಊರಿಗೆ ಮತ್ತೆ ಹೋಗಬಹುದಿದ್ದರೆ,... ಇಣುಕಿ ಬಂದೆ ಇನ್ನೂ ಇದೆ ಸಾಮ್ರಾಜ್ಯ ನೆನಪಿದೆ ನನಗೆ... ರಾಧೆ...  🎶
Image
ಬಾಲ್ಯದ ಅಂಬಾರಿ   ಓಡುವ ಮೇಘದಲಿ ಅಂಬಾರಿ ಹೊರಟಿದ್ದೆ ಹಿಂದೆ ಮುಂದೆ ನನ್ನ ಭಟರು ನನ್ನ ಸಾರೋಟಿಗೆ ಸೂರ್ಯನ ರಂಗಿನಂಚು ಕ್ಷಣ ಕ್ಷಣಕೂ ಹೊಸ ಮೆರುಗು  ಅಂಬಾರಿ ಇಳಿವಾಗ, ವಿರಹ ವೇದನೆ ಅವಕೆ ಕೆಂಪಾದ ಕೆನ್ನೆ ಕಪ್ಪಿಟ್ಟಿತ್ತು ನಾಳೆ ಸಿಗುವೆಯೆಂದು ಗಾಳಿಗೆ ಮುತ್ತಿಡಲು ನನ್ನಿಯ ನಗುತಿದ್ದ ಬಾಚಿಕೊಂಡು ಸ್ಪರ್ಧೆಯೇ ಏರ್ಪಟ್ಟತ್ತು ನಮ್ಮ ನಡುವೆ ಅವನ ಬಳಗದ ಪ್ರದರ್ಶನ ಸಾಗಿತ್ತು ಒಬ್ಬೊಬ್ಬರಾಗಿ ಇಣುಕುತ್ತಿದ್ದರು ನನ್ನ ನೋಡಲು ಪಾಪ ಅವನಿಗೇನು ಗೊತ್ತು, ಆದರೂ ನಗುತ್ತಿದ್ದ ಪಕ್ಷಿಗಳ ಸಂಗೀತ ನವಿಲ ನರ್ತನ ಮರಗಿಡಗಳ ಧಿವ್ಯ ಸಾನಿಧ್ಯ ಕಲ್ಲು-ಬಂಡೆಗಳ ಸರ್ಪಗಾವಲು ಸೌಗಂಧ ಹೊತ್ತು ತಂದ ತಂಬೆಲರು ನನ್ನ ಸಭೆಗೆ ಅವಗೆ ನನ್ನ ಬಳಗ ತೋರಿಸಿ, ಅಣುಕಿಸಲಿದ್ದೆ ಅಮ್ಮ ಕರೆದಳು, ಕತ್ತಲಾಯಿತು ಹುಳು-ಹುಪ್ಪಟ ಮೆಟ್ಟೀತು ಬಂದೆ, ಅಮ್ಮಾ... ಅಯ್ಯೋ ದಾರಿ ಮಸುಕಾಗಿದೆ ನಾಳೆ ಬರುವೆ ಮತ್ತೆ, ನಗಬೇಡ ಹೀಗೆ ನನ್ನ ಹುಸಿ ಕೋಪಕ್ಕೆ ಮತ್ತಷ್ಟು ಹೊಳಪಾದ ಸಿಂಹಾಸನವಿಳಿದು ಗುಡಿಸಲಿಗೆ ಹೊರಟೆ ಮಿಣುಕು ದೀಪ ಉರಿಯುತ್ತಿತ್ತು... ರಾಧೆ... 🎶
Image
ಕಾರಣ ಹುಡುಕ ಬೇಡ.... ಎಂದೋ ಹುಟ್ಟಿಹೆ, ಕಾರಣ ನಾನಲ್ಲ, ಎಂದೋ ಸಾಯುವೆ ಕೂಡ, ಕಾರಣ ತಿಳಿದಿಲ್ಲ, ನಿಮ್ಮ ಹರಕೆ, ಹಾರೈಕೆ ಎಲ್ಲಾ ನನಗೆ, ಕಾರಣ ಗೊತ್ತಿಲ್ಲ ನಿಮ್ಮ ಸೈರಣೆ, ತಿರಸ್ಕಾರ ಎಲ್ಲಾ ನನಗೆ, ಕಾರಣ ಗೊತ್ತಿಲ್ಲ. ಕಂಡಾಗ ಮುಗುಳ್ನಗುವೆ, ಕಾರಣವಿಲ್ಲದೆ, ಮಾತನಾಡಿಸಿದರೆ, ಮಾತನಾಡುವೆ, ಕಾರಣ ಬೇಕಿಲ್ಲದೆ, ಒದ್ದೆ ಚಾದರ ಹೊದ್ದೂ ನಗುವ ತಿರುಕನಿಗೆ ಕಣ್ಣೀರಿಡುವೆ, ಕಾರಣವಿಲ್ಲದೆ, ನಿತ್ಯ ಬಾಲವಾಡಿಸಿ ಬರುವ ಮುದ್ದು ಮರಿಗೆ, ಹಲ್ಲು ಕಿರಿವೆ, ಕಾರಣ ಗೊತ್ತಿಲ್ಲ ಬಿಟ್ಟಿಹೆ ಎಲ್ಲ ಹುಡುಕಾಟ, ಮಾಡುವ ಮಾಟಕ್ಕೆ, ನೋಡುವ ನೋಟಕ್ಕೆ, ಕಾರಣ ಬೇಕಿಲ್ಲ.... ಖುಷಿಯ ಹೊರತಾಗಿ... ರಾಧೆ... 🎶
Image
ನಮ್ಮದಲ್ಲದ ಊರಲ್ಲಿ,   ನಾನು ನಮ್ಮವರೆಂದು, ಅಲೆದಾಡುತ,  ಹುಡುಕಾಟ ಮುಗಿಸುವುದರೊಳಗೆ, ಬರದೂರಿಗೆ ಕರೆ ಬರುವುದು, ಜೀವನ.... ಎಲ್ಲ ತಿಳಿದಿದ್ದರೂ ನಾಟಕದ ಸರಮಾಲೆ, ಬಾಲ್ಯ ಯವ್ವನ ಮುಪ್ಪು ಚಕ್ರವ್ಯೂಹ, ವಿಧ ವಿಧ ಬಾಣಸಿಗರ ಕೈ ಅಡುಗೆಯಂತೆ, ಎಲ್ಲರಲ್ಲೂ ಬಗೆ ಬಗೆಯ ತಿರುವು ಪ್ರತಿ ಘಟ್ಟಕೆ... ಇದೇ ಸರಿ ಎಂಬುದಕ್ಕೆ ಈಗಷ್ಟೆ ಸಹಮತ, ನಾಳೆಯ ಸತ್ಯದೆಡೆಗೆ ನಿತ್ಯ ಪಯಣ, ನಿರಂತರ... ರಾಧೆ... 🎶 Show more reactions ನೆನಪುಗಳ ಹಂದರದಿ ನಿನ್ನದೇ ಅಗ್ರ ಸ್ಥಾನ, ನಗುವಲ್ಲು ನೀನೆ, ಅಳುವಲ್ಲು ನೀನೆ, ಹುಚ್ಚಿಯಾಗುವ ಮುನ್ನ, ಹಚ್ಚಿಕೊಂಡಿಹದ ಅರುಹಲೇ, ಹುಚ್ಚಿ ನಾನು... ದೂರ ಸರಿದಷ್ಟು ಹತ್ತಿರವಾಗುತಿಹೆ ಈ ಮನಕೆ, ಬಾರಿ ಬಾರಿಗೂ ಕಾಡಲು ಮನಸಾದೀತು ಹೇಗೆ ನಿನಗೆ, ತಿಳಿದು ತಿಳಿದು ಆಡುವ ಆಟಕ್ಕೆ ನಾನೇಕೆ ಆಟಿಗೆ, ಸಾವಿರ ಪ್ರಶ್ನೆಗಳಿಗೂ ಸಾವೇ ಇಲ್ಲ, ಕಾರಣ ಉತ್ತರವೇ ಇಲ್ಲ... ಬಹುಶಃ ಹುಚ್ಚಿ ನಾನು... ಭಾವನೆಯ ತೋಟದಲಿ ನಿನ್ನದೇ ಕಂಪು, ಹೂ ಬಿರಿದಾಗಲೆಲ್ಲ ಕಾಲವೇ ನಿಲ್ಲಬಾರದಿತ್ತೇ ಎಂಬ ಸ್ವರ, ಸಮಯದ ಜೊತೆಯಲ್ಲಿ ಬಾಡಿಹುದು ತಾನಾಗಿ, ಗಿಡವಿನ್ನು ಹಸಿರಿಹುದು ಎಂಬುದೇ ಖುಷಿ, ಹುಚ್ಚಿ ನಾನು... ರಾಧೆ... 🎶 ಸಾಯಬೇಕೆಂದುಕೊಂಡಾಗಲೆಲ್ಲ ಕಾಡುವ ನೆನಪುಗಳು, ಒಂದಿಷ್ಟಾದರೆ ಹೇಗೊ ಹೊತ್ತೊಯ್ಯ ಬಹುದಿತ್ತು, ಹೆಚ್ಚಾದ್ದನ್ನು ಮಗೆದಷ್ಟು...
Image
ಹೀಗೊಂದು ಯೋಚನೆ     ನಿನ್ನೆ ಬಸ್ಸಲ್ಲಿ ಕೂತಿದ್ದೆ, ಹೊರಗೆ ಮಳೆ ಜಿಟಿ ಜಿಟಿ ಸುರಿಯುತ್ತಿತ್ತು. ಮಳೆಗಾಲದ ಸಮಯದಲ್ಲಿ ಕಿಟಕಿ ಪಕ್ಕ ಕೂರುವುದೆಂದರೆ ಏನೋ ಅಲರ್ಜಿ, ಅದಕ್ಕೆ ಬಳಿಕ ಬಂದವಳಿಗೆ ಕಿಟಕಿಯ ಬಳಿ ಬಿಟ್ಟು ನಾ ಆರಾಮವಾಗಿ ಕುಳಿತೆ. ಕಿಟಕಿಯ ಗಾಜು ತೆರದಿದ್ದ ಕಾರಣ ಮಳೆಯ ಜುಮುರು ಮುಖಕ್ಕೆ ರಾಚುತ್ತಿತ್ತು. ಒಮ್ಮೆ ಎದ್ದು ಮುಚ್ಚುವ ಮನಸಾಯಿತು. ಆದರೆ ಕೆಲವೇ ಕ್ಷಣಕ್ಕೆ ನಾ ತಲುಪುವ ಜಾಗ ಬರಲಿದ್ದ ಕಾರಣ ಹಾಗೇ ಕುಳಿತೆ. ಅಲ್ಲಿ ತಲುಪುವ ತನಕವೂ ಇವಳು ಯಾಕೆ ಹಾಕುತ್ತಿಲ್ಲ, ಮುಂದೆ ಪ್ರಯಾಣಿಸ ಬೇಕಿರುವುದು ಇವಳೇ ಅಲ್ಲವೇ, ಬೇಕಿದ್ದರೆ ಹಾಕಿಕೊಳ್ಳಲಿ, ಎಂದುಕೊಂಡು ಚಡಪಡಿಸುತ್ತ ಕೂತಿದ್ದೆ. ಏನೋ ಬೇಡವೆಂದರು ಅದರ ಬಗೆ ಗೆ ಗಮನ... ಅಷ್ಟರಲ್ಲಿ ನಾ ಬಸ್ಸಿಳಿವ ಜಾಗ ಬಂತು. ಮತ್ತೊಂದು ಬಸ್ಸನ್ನು ಏರಿದೆ. ಕೂರಲು ಜಾಗವಿರಲಿಲ್ಲ, ಹಾಗೆ ತೂಗಾಡುತ್ತಾ ಸಾಗಿತ್ತು ಪಯಣ. ಹತ್ತು-ಹದಿನೈದು ನಿಮಿಷಗಳ ಬಳಿಕ ಯಾರೊ ಇಳಿದರು, ಅಂತೂ ಕೂತೆ. ಅಬ್ಬ!! ಎಂದು ಉಸಿರುಬಿಟ್ಟೆ, ಯಾಕೋ ಚಾಲಕ ಜಟಕಾ ಬಂಡಿ ತರ ಬಸ್ಸನ್ನ ಓಡಿಸುತ್ತಿದ್ದ. ಅಷ್ಟರಲ್ಲಿ ಒಬ್ಬ ಅರವತ್ತರ ಆಸುಪಾಸಿನ ಹೆಂಗಸು ಬಸ್ಸನ್ನೇರಿದರು. ಮುಖ ದಣಿದಂತೆ ಇತ್ತು, ಕೂತ್ಕೊಳಿ ಎಂದು, ನಾನು ಎದ್ದೆ. ಕೂರುವಾಗ ಅವರು ಬೇಡವೆಂದರು ನನ್ನ ಕೈಲಿದ್ದ ಚೀಲವನ್ನ ಹಿಡಿದುಕೊಂಡರು, ಧನ್ಯವಾದ ಅರ್ಪಿಸಿದರು. ಬಳಿಕ ಆಂಟಿ ಒಬ್ಬರು ಕೆಮ್ಮುತ್ತದ್ದರು, ನೀರು ಕೊಡಲು ಏನೋ ಹಿಂಜರಿತ, ಸ್ವಲ್ಪ ...
Image
ಖುಷಿಯನರಸಿ ಹೊರಟಿತ್ತಾಗ ಮನ ನೆರೆಮನೆಯ ಇಣುಕಿ ಉಪ್ಪರಿಗೆ ಮನೆ, ಕಾಲಿಗೆ ನಾಲ್ಕಾಳು ಸ್ವರ್ಗದಾ ಬಾಗಿಲೇ ಬೀದಿಗೆಲ್ಲಾ ದಾಟುವ ದಾರಿಯಲಿ ಕೋಳೆತ್ತರಕೆ ಹೊಲಸು ಚಿಂದಿ ಆಯುವಾ ಹೆಂಗಸು ಬಿಸಿಲಲ್ಲಿ ಅರಳಿದ ತಾವರೆಯಂತೆ ನಗುವ ಬೀರುವ ಕಂಕುಳಲಿಹ ಕಂದ ಪ್ರಶ್ನೆಗಳ ಸುಳಿಯಲ್ಲೆ ಸಾಗಿತ್ತು ಹಾದಿ ಹಿಂದಿಟ್ಟೆ ಅಡಿ ಭಯಭೀತಳಾಗಿ ಮುಗಿಲ ಮುಟ್ಟಿದ ಅಟ್ಟಹಾಸದ ನಗುವಿಗೆ ಅಪ್ಯಾಯಮಾನವೆನಿಸಿತು ತಿರುಕನ ಮಂದಹಾಸ... ರಾಧೆ... 🎶
ನೀ  ಬರೆವ ಮುನ್ನ .....  ಖಾಲಿ ಹಾಳೆಯಲಿ ಗೀಚು ನಾ ಓದಬೇಕು ಷಾಯಿ ತುಂಬಿದ ಹಾಳೆಯಲಿ  ನಿನ್ನ ನೋಡಿದರೂ ಓದಲಾರೆ ಭಾವನೆಗಳು ಛಿದ್ರವಾಗಿ, ಭದ್ರವಾಗ ಬಿಡವು ಅದಕೆಂದೆ ನೀ ತರಬೇಕಿಲ್ಲ ಹೊಸ ಲೇಖನಿ, ಹಾಳೆ, ಹಳತಾದರು, ಭಾವದ ತಾಜಾತನ ನಿತ್ಯ ನೂತನ ಜಗದ ಭಾಷೆಯ ಪರವೆಯೂ ಅನಗತ್ಯ  ನನಗಷ್ಟೇ ಓದಬಂದರೆ ಸಾಕು ಗಮನ ಪ್ರಚಾರಕ್ಕಲ್ಲ, ಕೇವಲ ನನಗಾಗಿ ಗಮಕಗಳ ಆಡಂಭರಕ್ಕಿಂತ ನೈಜತೆಯ ಸೊಗಡೆ ಸುಂದರ ಒಪ್ಪುವ ದೂರುವ ಗೊಂದಲ ಬೇಡ ನನಗಾಗಿ ಬರೆದದ್ದು ಎಂದಿಗಿದ್ದರೂ ನಂದೆ ರಾಧೆ .... 🎶  
    ಕಸದ ಬುಟ್ಟಿ ಸೇರುವ ಮುನ್ನ......   ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ.  ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
                                                            ದಿನಕ್ಕೊಂದು ಕಥೆ ನಾನು  ಹಾಗೆ ಸುಮ್ಮನೆ  ಕುಳಿತಿದ್ದೆ. ಮೇಜಿನ ಮೇಲಿದ್ದ ಪತ್ರಕೆಯಲ್ಲಿ ಪ್ರಕಟವಾದ ಕತೆಯ ಶೀರ್ಷಿಕೆ ಗಮನ ಸೆಳೆಯಿತು 'ಹೀಗೊಂದು ಕಥೆ'. ಎತ್ತಿಕೊಂಡೆ, ಅದರಲ್ಲಿ ಇದ್ದಿದ್ದು ಇಷ್ಟೆ; ಕತೆಗಾರ ಕುರ್ಚಿಯ ಮೇಲೆ  ಕುಳಿತು ಬರೆಯುತ್ತಿದ್ದ. ವಿಪರೀತ ಬಾಯಾರಿಕೆ ಉಂಟಾಯಿತು. ಅಲ್ಲಿಯೇ ಇದ್ದ ಬಾಟಲಿ ಎತ್ತಿಕೊಂಡ, ಕ್ಷಣ ಮಾತ್ರದಲ್ಲಿ ನೀರು ಖಾಲಿಯಾಯಿತೇ ವಿನಃ ಬಾಯಾರಿಕೆ ನೀಗಲಿಲ್ಲ. ಅಲ್ಲೆ ಪಕ್ಕದ ಟೀಪಾಯಿಯ ಮೇಲಿದ್ದ ಹೂಜಿಯನ್ನು ತಡವುತ್ತ ಎತ್ತಿದ. ಅದೂ ಖಾಲಿಯಾಯಿತು. ಆದರೆ ದಾಹ ನೀಗಿರಲಿಲ್ಲ...ಅಡುಗೆ ಮನೆಗೆ ಹೋಗಿ ಬೆಲ್ಲ- ನೀರು ಕುಡಿದರೆ ಸರಿಹೋಗುವುದು ಎಂದುಕೊಂಡ.  ಆದರೆ ಏಳಲು ಮನಸಾಗದೆ ಅಲ್ಲೆ ಚಡಪಡಿಸುತ್ತಿದ್ದ. ಕತೆ ಮುಗಿದಿತ್ತು. ಅರೆ ಏನು ಬರೆಯುತ್ತಾರೆ,  ಅದು ಹೇಗೆ...
Image
ಭಾವನಾ - ಲಹರಿ ಅಕ್ಷರ ರೂಪ ಪಡೆದಾಗ;   ನಾ ಕೊಟ್ಟ ಕನಸುಗಳಿಗೆ ಕಾವಲಾಗ ಬಯಸಿದ್ದೆ , ಚಿಗುರಾಗುವ ಮುನ್ನ ಕಿತ್ತೆಸೆದೆ,   ಕೊಸರಾಡುವ ಮುನ್ನ ಉಸಿರಡಗಿಸಿದೆ, ಕಾರಣ ಕೇಳುವ ತವಕ ನಿನಗಿರಲಿಲ್ಲ,   ಹೇಳುವ ಅನಿವಾರ್ಯ ನಾ ತೋರಲಿಲ್ಲ , ಶೋಕದ ಸಮ ಪಾಲು ನನ್ನಲ್ಲೂ ಇತ್ತು, ಮುಖ ಕಾಣದ ಮಾತು ಎದೆಯಲ್ಲೆ ಬೆಂದಿತ್ತು, ದನಿಯ ಶಬ್ದಕ್ಕೆ ಮನಸು ಕಾದಿತ್ತು , ಒಳಿತಾಗಲೆಂದರಸಿ ಎದೆ ಕಲ್ಲಾಗಿತ್ತು. ಸರಿ ತಪ್ಪುಗಳ ಲೆಕ್ಕಾಚಾರವೆ ಬುಡಮೇಲಾಗಿದೆ,   ಕಾರಣ ನಾ ಹೇಳಲಾರೆ.... ರಾಧೆ ... 🎶 ಕಾರಣವಿಲ್ಲದೆ ನಿನ್ನ ಬಳಿ ಬರಲು ಹಲವಾರು ಕಾರಣವಿತ್ತು, ಎಲ್ಲಿಯೋ ಹೇಳ ಬಯಸಿದ್ದ ಮಾತೇ, ಎಂದೋ ಕಾಡಿದ ನೆನಪೇ, ಏನೋ ಕೇಳಬೇಕೆಂದಿದ್ದ ಪ್ರಶ್ನೆಯೇ, ಯಾವುದಕ್ಕೂ ಉತ್ತರ ಬೇಕಿಲ್ಲ, ನಿನ್ನ ಸಾನಿಧ್ಯದ ಹೊರತು.... ರಾಧೆ...  ಪದಗಳ ಜೊತೆ ಪದ ಸೇರುವಾಗ ನನಗೂ ತಿಳಿದಿರಲಿಲ್ಲ ನಿನ್ನ ಜನನ ಕೊನೆಗೆ ತಿರುಗಿ ನೋಡಿದರೆ, ನನಗೂ ಸೌಜುಗ ನೀನ್ಯಾರು? ? ನಾನ್ಯಾರು??? ರಾಧೆ...  ನೆನಪುಗಳ ಹಾದಿಯಲಿ ಬರಿಗೈ ನಂದು ಚೀಲ ತುಂಬಲು ಏನೋ ಹಿಂಜರಿತ ತಡಕಾಡುವ ಕೈಗೆ ಚುಚ್ಚುವ ಮೊನೆ ಅಳಿಸಲಾಗದ ನಿನ್ನೆ ಬರೆಯಲಾಗದ ನಾಳೆ ಕಾಡದಿರೆಂದರೆ ಕೇಳೀತೆ ನನ್ನ....... ರಾಧೆ...  ಮೊದಲ ಮಳೆ ಮನಕೆ, ಧರೆಗೆ, ತಂಪು ಎಲ್ಲಿಂದಲ...
ಕಾಲಚಕ್ರ ಹಬ್ಬದ ಸಂಭ್ರಮದಿ ಸಜ್ಜಾಗಿತ್ತು ನಗರಿಯೆಲ್ಲಾ ಊರ ದಾರಿಯಲಿ ಮಾತ್ರ ಬಣ - ಬಣ ಮುದಿ ಜೀವವೆರಡು ಉಸಿರಿಡಿದು ಕೂತಿತ್ತು ಕರುಳು - ಕುಡಿಗಳ ಆಗಮನಕೆಂದು ಇನಿಯನ ಗಟ್ಟಿಕರೆ ಕೇಳದಾ ಕಿವಿಗೆ, ಬಾರಿ-ಬಾರಿಗೂ ಕೇಳುವ ಗಾಡಿಯ ನಗಾರಿ ನಿಲ್ಲಲಾಗದ ಸೊಂಟ, ದೂರ ಹಾಯದ ದೃಷ್ಟಿ ಆದರೂ ಸುಳಿಯುತಿದೆ, ಹೊಸಿಲಿಂದ ಕೋಣೆಗೆ ಹುರುಪಲ್ಲಿ ಕಟ್ಟಿಟ್ಟ ಹೋಳಿಗೆ -ಲಾಡು, ಸೈನಿಕನಂತೆ ಕಾದಿರಿಸಿಹ ಹಬೆಯಾಡುವ ಹುಗ್ಗಿ, ಮರಿ - ಜೀವಗಳಿಗೆ ಉಪಚರಿಸುವ ಹಂಬಲದಿ, ಸೋತ ಕೈ, ಎಳೆವ ಕಾಲು ಗೌಣ್ಯವಾಗಿತ್ತು ಏನೋ ಬಡ - ಬಡಿಸುತ್ತ,  ತಿರುಗಾಡುತ್ತಿರೆ ಈ ಜೀವ  'ನಿನಗೆಲ್ಲೊ ಮರುಳು' ಎಂದು ಮುಸಿನಗುತ್ತಿದ್ದ ಒಡೆಯ 'ಅವನ್ಹೋಗಲಿ, ಅವಳಾರು ಬರಬಾರದಿತ್ತೆ' ಎಂಬ ಬೊಚ್ಚುಬಾಯಿಗೆ, ಗೊತ್ತಿಲ್ಲದೆ ನುಗ್ಗಿದ್ದಳು ಗಂಗಾ ಮಾತೆ ರೋಧಿಸುವ ಕಂಗಳಿಗೆ, ನಡುಗುವಾ ಕೈಯ ಸಾಂತ್ವನ 'ನನಗೆ - ನೀನು, ನಿನಗೆ ನಾನು, ಬರುವಾಗ ಬರುವರು, ಬಿಡು ಬೇಡದ ಚಿಂತೆ, ಬಿರಿ ನಿನ್ನ ಚೆಂದುಟಿ, ಹಗುರಾಗಲಿ ಮನ' ಎಲ್ಲಕ್ಕೂ ಮೂಖ ಸಾಕ್ಷಿಯಾದ ಗೋಡೆ - ಕಂಬಗಳು.                                                                     ...